Site icon Vistara News

Amrit Mahotsav | ಕತಾರ್‌ನ ಇಂಡಿಯನ್ ಕಲ್ಚರಲ್ ಸೆಂಟರ್‌ನಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ

ಆಜಾದಿ ಕಾ ಅಮೃತ್ ಮಹೋತ್ಸವ

ದೋಹಾ (ಕತಾರ್): ಇಂಡಿಯನ್ ಕಲ್ಚರಲ್ ಸೆಂಟರ್‌ನ ಮೆಗಾ ಕಲ್ಚರಲ್ ಕಾರ್ನಿವಲ್ ಇವೆಂಟ್‌ಗಳು ಭಾರತ ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವದ ಸ್ಮರಣಾರ್ಥ “ಆಜಾದಿ ಕಾ ಅಮೃತ್ ಮಹೋತ್ಸವʼದ ಭಾಗವಾಗಿ ನಡೆಯುತ್ತಿವೆ.

ಆಚರಣೆಯ 5ನೇ ದಿನದಂದು ಭವ್ಯ ಸಾಂಸ್ಕೃತಿಕ ಕಾರ್ಯಕ್ರಮ ನಡೆದಿದೆ. ಕಾರ್ಯಕ್ರಮಕ್ಕೆ ಸಚಿನ್ ದಿನಕರ್ ಸಂಕ್ಪಾಲ್ ಉದ್ಘಾಟನೆ ನೆರವೇರಿಸಿದರು. ಸ್ವಾತಂತ್ರ್ಯ ಹೋರಾಟದ ಮಹತ್ವ, ಇತಿಹಾಸ ಮತ್ತು ನಾಯಕರ ತ್ಯಾಗದ ಕುರಿತು ವಿವರಿಸಿದರು. ಇಂಡಿಯನ್ ಕಲ್ಚರಲ್ ಸೆಂಟರ್ ಅಧ್ಯಕ್ಷ ಪಿ.ಎನ್. ಬಾಬುರಾಜನ್, INCAS ಕತಾರ್ ಅಧ್ಯಕ್ಷ ಹೈದರ್ ಚುಂಗತಾರ ಹಾಜರಿದ್ದರು.

ಈ ಸಂದರ್ಭದಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವ ಆಚರಣೆಗಳ ಅಧ್ಯಕ್ಷರಾದ ಎ ಪಿ ಮಣಿಕಂಠನ್, ಕರ್ನಾಟಕ ಸಂಘ ಕತಾರ್ ಅಧ್ಯಕ್ಷರಾದ ಮಹೇಶ್ ಗೌಡ ಮತ್ತು ಇತರ ಸಂಘ ಸಂಸ್ಥೆಗಳ ಮುಖ್ಯಸ್ಥರು ಹಾಜರಿದ್ದರು.

ಸಮಾರಂಭದಲ್ಲಿ ಭಾರತದ ಅನನ್ಯ ಪರಂಪರೆಯನ್ನು ಪ್ರದರ್ಶಿಸಲು ವಾದ್ಯಗಳ ಫ್ಯೂಷನ್ ಸಂಗೀತ, ಶಾಸ್ತ್ರೀಯ ನೃತ್ಯ, ಸಮೂಹ ನೃತ್ಯ, ಟ್ಯಾಬ್ಲೋ ಮತ್ತು ಅನೇಕ ಪ್ರದರ್ಶನಗಳು ನಡೆದವು. ಮಕ್ಕಳ ನೃತ್ಯ ಪ್ರದರ್ಶನವು ಭಾರತದ ತ್ರಿವರ್ಣವನ್ನು ಹಾರಿಸುವ ಮೂಲಕ ವಿಶಿಷ್ಟವಾಗಿ ನಡೆಯಿತು.

ಇದನ್ನೂ ಓದಿ| Har Ghar Tiranga | ಪ್ರಧಾನಿ ಮೋದಿ ಕರೆಕೊಟ್ಟ ಹರ್​ ಘರ್​ ತಿರಂಗಾಕ್ಕೆ ಭರ್ಜರಿ ಟ್ವಿಸ್ಟ್​ ಕೊಟ್ಟ ಕಾಂಗ್ರೆಸ್​

Exit mobile version