Amrit Mahotsav | ಕತಾರ್‌ನ ಇಂಡಿಯನ್ ಕಲ್ಚರಲ್ ಸೆಂಟರ್‌ನಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ - Vistara News

ವಿದೇಶ

Amrit Mahotsav | ಕತಾರ್‌ನ ಇಂಡಿಯನ್ ಕಲ್ಚರಲ್ ಸೆಂಟರ್‌ನಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ

ಭಾರತ ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವದ ಸ್ಮರಣಾರ್ಥವಾಗಿ ಕತಾರ್‌ನಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

VISTARANEWS.COM


on

ಆಜಾದಿ ಕಾ ಅಮೃತ್ ಮಹೋತ್ಸವ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ದೋಹಾ (ಕತಾರ್): ಇಂಡಿಯನ್ ಕಲ್ಚರಲ್ ಸೆಂಟರ್‌ನ ಮೆಗಾ ಕಲ್ಚರಲ್ ಕಾರ್ನಿವಲ್ ಇವೆಂಟ್‌ಗಳು ಭಾರತ ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವದ ಸ್ಮರಣಾರ್ಥ “ಆಜಾದಿ ಕಾ ಅಮೃತ್ ಮಹೋತ್ಸವʼದ ಭಾಗವಾಗಿ ನಡೆಯುತ್ತಿವೆ.

ಆಚರಣೆಯ 5ನೇ ದಿನದಂದು ಭವ್ಯ ಸಾಂಸ್ಕೃತಿಕ ಕಾರ್ಯಕ್ರಮ ನಡೆದಿದೆ. ಕಾರ್ಯಕ್ರಮಕ್ಕೆ ಸಚಿನ್ ದಿನಕರ್ ಸಂಕ್ಪಾಲ್ ಉದ್ಘಾಟನೆ ನೆರವೇರಿಸಿದರು. ಸ್ವಾತಂತ್ರ್ಯ ಹೋರಾಟದ ಮಹತ್ವ, ಇತಿಹಾಸ ಮತ್ತು ನಾಯಕರ ತ್ಯಾಗದ ಕುರಿತು ವಿವರಿಸಿದರು. ಇಂಡಿಯನ್ ಕಲ್ಚರಲ್ ಸೆಂಟರ್ ಅಧ್ಯಕ್ಷ ಪಿ.ಎನ್. ಬಾಬುರಾಜನ್, INCAS ಕತಾರ್ ಅಧ್ಯಕ್ಷ ಹೈದರ್ ಚುಂಗತಾರ ಹಾಜರಿದ್ದರು.

ಆಜಾದಿ ಕಾ ಅಮೃತ್ ಮಹೋತ್ಸವ

ಈ ಸಂದರ್ಭದಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವ ಆಚರಣೆಗಳ ಅಧ್ಯಕ್ಷರಾದ ಎ ಪಿ ಮಣಿಕಂಠನ್, ಕರ್ನಾಟಕ ಸಂಘ ಕತಾರ್ ಅಧ್ಯಕ್ಷರಾದ ಮಹೇಶ್ ಗೌಡ ಮತ್ತು ಇತರ ಸಂಘ ಸಂಸ್ಥೆಗಳ ಮುಖ್ಯಸ್ಥರು ಹಾಜರಿದ್ದರು.

ಆಜಾದಿ ಕಾ ಅಮೃತ್ ಮಹೋತ್ಸವ

ಸಮಾರಂಭದಲ್ಲಿ ಭಾರತದ ಅನನ್ಯ ಪರಂಪರೆಯನ್ನು ಪ್ರದರ್ಶಿಸಲು ವಾದ್ಯಗಳ ಫ್ಯೂಷನ್ ಸಂಗೀತ, ಶಾಸ್ತ್ರೀಯ ನೃತ್ಯ, ಸಮೂಹ ನೃತ್ಯ, ಟ್ಯಾಬ್ಲೋ ಮತ್ತು ಅನೇಕ ಪ್ರದರ್ಶನಗಳು ನಡೆದವು. ಮಕ್ಕಳ ನೃತ್ಯ ಪ್ರದರ್ಶನವು ಭಾರತದ ತ್ರಿವರ್ಣವನ್ನು ಹಾರಿಸುವ ಮೂಲಕ ವಿಶಿಷ್ಟವಾಗಿ ನಡೆಯಿತು.

ಇದನ್ನೂ ಓದಿ| Har Ghar Tiranga | ಪ್ರಧಾನಿ ಮೋದಿ ಕರೆಕೊಟ್ಟ ಹರ್​ ಘರ್​ ತಿರಂಗಾಕ್ಕೆ ಭರ್ಜರಿ ಟ್ವಿಸ್ಟ್​ ಕೊಟ್ಟ ಕಾಂಗ್ರೆಸ್​

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ದೇಶ

Narendra Modi: ಪಾಕ್‌ ʼಬಂಡವಾಳʼ ಏನೆಂದು ಅಲ್ಲಿಗೇ ಹೋಗಿ ನೋಡಿ ಬಂದಿರುವೆ; ಕಾಂಗ್ರೆಸ್‌ ‘ಬಾಂಬ್’‌ ಹೇಳಿಕೆಗೆ ಮೋದಿ ಟಾಂಗ್!

Narendra Modi: “ಲಾಹೋರ್‌ನಲ್ಲಿ ಅಣುಬಾಂಬ್‌ ಸ್ಫೋಟಿಸಿದರೆ ಅದರ ಪರಿಣಾಮ ನಮ್ಮ ದೇಶದ ಭಾಗವಾಗಿರುವ ಅಮೃತಸರದ ಮೇಲೂ ಆಗುತ್ತದೆ. ಹೀಗಾಗಿ ನಾನು ಅವರನ್ನು ಗೌರವಿಸಲು ಪ್ರಾರಂಭಿಸಿದರೆ ಅವರು ಬಾಂಬ್‌ ಬಗ್ಗೆ ಯೋಚನೆ ಮಾಡುವುದೇ ಇಲ್ಲ” ಎಂಬುದಾಗಿ ಮಣಿಶಂಕರ್‌ ಅಯ್ಯರ್‌ ನೀಡಿದ ಹೇಳಿಕೆಗೆ ನರೇಂದ್ರ ಮೋದಿ ವ್ಯಂಗ್ಯವಾಗಿ ಉತ್ತರ ನೀಡಿದ್ದಾರೆ.

VISTARANEWS.COM


on

Narendra Modi
Koo

ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಪಾಕಿಸ್ತಾನ, ಜಮ್ಮು-ಕಾಶ್ಮೀರ, ಅಣುಬಾಂಬ್‌ ಸೇರಿ ಹಲವು ವಿಷಯಗಳು ಮುನ್ನೆಲೆಗೆ ಬರುತ್ತಿವೆ. ಅದರಲ್ಲೂ, “ಪಾಕಿಸ್ತಾನದ ಬಳಿ ಅಣುಬಾಂಬ್‌ ಇವೆ. ಭಾರತವು ಪಾಕಿಸ್ತಾನಕ್ಕೆ ಗೌರವ ಕೊಡಬೇಕು” ಎಂಬುದಾಗಿ ಕಾಂಗ್ರೆಸ್‌ ನಾಯಕ ಮಣಿಶಂಕರ್‌ ಅಯ್ಯರ್‌ (Mani Shankar Aiyar) ಅವರು ನೀಡಿದ ಹೇಳಿಕೆಗೆ ಖುದ್ದು ಕಾಂಗ್ರೆಸ್‌ ಅಂತರ ಕಾಯ್ದುಕೊಂಡಿದೆ. ಮಣಿಶಂಕರ್‌ ಅಯ್ಯರ್‌ ಹೇಳಿಕೆಗೆ ಬಿಜೆಪಿ ನಾಯಕರು ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ, ಮಣಿಶಂಕರ್‌ ಅಯ್ಯರ್‌ ‘ಅಣುಬಾಂಬ್‌’ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಪ್ರತಿಕ್ರಿಯಿಸಿದ್ದು, “ನಾನೇ ಪಾಕಿಸ್ತಾನಕ್ಕೆ (Pakistan) ಹೋಗಿ, ಆ ದೇಶದ ಶಕ್ತಿ ಎಷ್ಟಿದೆ ಎಂಬುದನ್ನು ನೋಡಿಕೊಂಡು ಬಂದಿದ್ದೇನೆ” ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.

ಇಂಡಿಯಾ ಟಿವಿ ಚಾನೆಲ್‌ ಜತೆ ಸಂವಾದ ನಡೆಸುವ ವೇಳೆ, ಮಣಿಶಂಕರ್‌ ಅಯ್ಯರ್‌ ಹೇಳಿಕೆ ಕುರಿತು ಸಂದರ್ಶಕ ಕೇಳಿದ ಪ್ರಶ್ನೆಗೆ ನರೇಂದ್ರ ಮೋದಿ ಅವರು ಮಾರ್ಮಿಕವಾಗಿ ಉತ್ತರ ನೀಡಿದರು. “ನಾನೇ ಲಾಹೋರ್‌ಗೆ ತೆರಳಿ ಆ ಪಾಕಿಸ್ತಾನದ ಶಕ್ತಿ ಎಷ್ಟಿದೆ ಎಂಬುದನ್ನು ನೋಡಿಕೊಂಡು ಬಂದಿದ್ದೇನೆ. ನನ್ನನ್ನು ನೋಡಿ, ಪಾಕಿಸ್ತಾನದ ಒಬ್ಬ ಪತ್ರಕರ್ತ ಆಶ್ಚರ್ಯದಿಂದ ಕೇಳಿದ. ‘ವೀಸಾ ಇಲ್ಲದೆ ನೀವೇಗೆ ಇಲ್ಲಿಗೆ ಬಂದಿದ್ದೀರಿ’ ಎಂದ. ಅದಕ್ಕೆ ನಾನು, ‘ಪಾಕಿಸ್ತಾನ ಒಂದು ಕಾಲಕ್ಕೆ ನಮ್ಮದೇ ದೇಶದ ಭಾಗವಾಗಿತ್ತು’ ಎಂಬುದಾಗಿ ಉತ್ತರಿಸಿದೆ” ಎಂಬುದಾಗಿ ನರೇಂದ್ರ ಮೋದಿ ಹೇಳಿದ್ದಾರೆ. ಆ ಮೂಲಕ ಮಣಿಶಂಕರ್‌ ಅಯ್ಯರ್‌ ಹೇಳಿಕೆಗೆ ವ್ಯಂಗ್ಯವಾಗಿಯೇ ಉತ್ತರ ಕೊಟ್ಟಿದ್ದಾರೆ.

ಕೆಲ ದಿನಗಳ ಹಿಂದೆಯೂ ಮಣಿಶಂಕರ್‌ ಅಯ್ಯರ್‌ ಹೇಳಿಕೆ ವಿರುದ್ಧ ನರೇಂದ್ರ ಮೋದಿ ಆಕ್ರೋಶ ವ್ಯಕ್ತಪಡಿಸಿದ್ದರು. “ಪಾಕಿಸ್ತಾನದ ಕುರಿತು ಕಾಂಗ್ರೆಸ್‌ ನಾಯಕರು ಹೆಚ್ಚು ಚಿಂತಿತರಾಗಿದ್ದಾರೆ. ನೆರೆಯ ರಾಷ್ಟ್ರದ ಬಳಿ ಅಣು ಬಾಂಬ್‌ಗಳಿವೆ ಎಂಬುದಾಗಿ ಅವರು ಹೆದರಿಸುತ್ತಾರೆ. ಆದರೆ, ಪಾಕಿಸ್ತಾನದ ಬಳಿ ಪರಮಾಣು ಬಾಂಬ್‌ಗಳಿವೆ ಹಾಗೂ ಅವುಗಳನ್ನು ನಿರ್ವಹಣೆ ಮಾಡಲು ಆಗದಂತಹ, ಅದಕ್ಕೆ ಹಣವೇ ಇಲ್ಲದಂತಹ ಪರಿಸ್ಥಿತಿ ಪಾಕಿಸ್ತಾನಕ್ಕೆ ಎದುರಾಗಿದೆ ಎಂಬುದನ್ನು ಕಾಂಗ್ರೆಸ್‌ ಅರ್ಥ ಮಾಡಿಕೊಳ್ಳುತ್ತಿಲ್ಲ” ಎಂಬುದಾಗಿ ಚುನಾವಣೆ ರ‍್ಯಾಲಿಯಲ್ಲಿ ಹೇಳಿದ್ದರು.

ಮಣಿಶಂಕರ್‌ ಅಯ್ಯರ್‌ ಹೇಳಿದ್ದೇನು?

“ಪಾಕಿಸ್ತಾನದ ಬಳಿ ಅಣುಬಾಂಬ್‌ಗಳಿವೆ. ಭಾರತ ಕೇವಲ ವಿಶ್ವಗುರು ಎಂದು ಹೇಳುತ್ತಾ ಇದ್ದರೆ ಸಾಲದು ನೆರೆಯ ರಾಷ್ಟ್ರ ಪಾಕಿಸ್ತಾನದ ಜತೆ ಮೊದಲು ಶಾಂತಿಯುತ ಮಾತುಕತೆ ನಡೆಸಬೇಕು. ಯಾವಾಗಲೂ ಕೈಯಲ್ಲಿ ಬಂದೂಕು ಹಿಡಿದು ಸುತ್ತಾಡಿದರೆ ಯಾವ ಕೆಲಸವೂ ಆಗಲ್ಲ, ಯಾವ ಪರಿಹಾರವೂ ಸಿಗಲ್ಲ. ಅದು ಕೇವಲ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಅಷ್ಟೇ. ಪಾಕಿಸ್ತಾನ ಕೂಡ ಸಾರ್ವಭೌಮ ರಾಷ್ಟ್ರ ಮತ್ತು ಅದಕ್ಕೆ ಅದರದ್ದೇ ಆದ ಗೌರವ ಇದೆ. ಒಂದು ವೇಳೆ ಅಲ್ಲಿ ತಲೆಕೆಟ್ಟ ಮನುಷ್ಯ ಅಧಿಕಾರಕ್ಕೆ ಬಂದರೆ, ಲಾಹೋರ್‌ನಲ್ಲಿ ಅಣುಬಾಂಬ್‌ ಸ್ಫೋಟಿಸಿದರೆ ಅದರ ಪರಿಣಾಮ ನಮ್ಮ ದೇಶದ ಭಾಗವಾಗಿರುವ ಅಮೃತಸರದ ಮೇಲೂ ಆಗುತ್ತದೆ. ಹೀಗಾಗಿ ನಾನು ಅವರನ್ನು ಗೌರವಿಸಲು ಪ್ರಾರಂಭಿಸಿದರೆ ಅವರು ಬಾಂಬ್‌ ಬಗ್ಗೆ ಯೋಚನೆ ಮಾಡುವುದೇ ಇಲ್ಲ” ಎಂದು ಅಯ್ಯರ್‌ ಹೇಳಿದ್ದರು.

ಇದನ್ನೂ ಓದಿ: PM Narendra Modi: ಪ್ರಧಾನಿ ಮೋದಿ ರ್‍ಯಾಲಿಯಲ್ಲಿ ಜನವೋ…ಜನ! ಅದ್ಭುತ ದೃಶ್ಯ ಕ್ಯಾಮೆರಾದಲ್ಲಿ ಸೆರೆ-ವಿಡಿಯೋ ವೈರಲ್‌

Continue Reading

ವೈರಲ್ ನ್ಯೂಸ್

Viral Video: ರಣ ಭೀಕರ ಬಿರುಗಾಳಿ..! ಆಘಾತಕಾರಿ ವಿಡಿಯೋ ಎಲ್ಲೆಡೆ ವೈರಲ್‌

Viral Video: ಲೋವಾ ಸಾರ್ವಜನಿಕ ಸುರಕ್ಷತಾ ವಿಭಾಗದ ಅಧಿಕಾರಿಗಳು ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದು, ಬಿರುಗಾಳಿಗೆ ನಾಲ್ವರು ಗ್ರೀನ್‌ಫೀಲ್ಡ್‌ನಲ್ಲೇ ಮೃತಪಟ್ಟಿದ್ದಾರೆ. ಮತ್ತೊರ್ವ ಮಹಿಳೆ ಕಾರು ಸಮೇತ ಬಿರುಗಾಳಿ ರಭಸಕ್ಕೆ 25ಮೈಲು ದೂರ ಹಾರಿ ಹೋಗಿ ಬಿದಿದ್ದು, ಕಾರಿನೊಳಗೇ ಮೃತಪಟ್ಟಿದ್ದಾಳೆ. ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾದ ಪರಿಣಾಮ 46 ವರ್ಷದ ಮೊನಿಕಾ ಎಂಬ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

VISTARANEWS.COM


on

Viral Video
Koo

ಅಮೆರಿಕ: ಭೀಕರ ಬಿರುಗಾಳಿ(Tornadoes)ಯ ರಭಸಕ್ಕೆ ಐವರು ಬಲಿಯಾಗಿದ್ದು, 35ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿರುವ ಘಟನೆ ಅಮೆರಿಕ(America)ದ ಲೋವಾ ನಗರದದ ಗ್ರೀನ್‌ಫೀಲ್ಡ್‌(Greenfield)ನಲ್ಲಿ ನಡೆದಿದೆ. ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಈ ಭೀಕರ ಬಿರುಗಾಳಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral Video) ಆಗಿದ್ದು, ಗಾಯಾಳುಗಳ ಸಂಖ್ಯೆ ಏರಿಕೆ ಆಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿದ್ದಾರೆ.

ಲೋವಾ ಸಾರ್ವಜನಿಕ ಸುರಕ್ಷತಾ ವಿಭಾಗದ ಅಧಿಕಾರಿಗಳು ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದು, ಬಿರುಗಾಳಿಗೆ ನಾಲ್ವರು ಗ್ರೀನ್‌ಫೀಲ್ಡ್‌ನಲ್ಲೇ ಮೃತಪಟ್ಟಿದ್ದಾರೆ. ಮತ್ತೊರ್ವ ಮಹಿಳೆ ಕಾರು ಸಮೇತ ಬಿರುಗಾಳಿ ರಭಸಕ್ಕೆ 25ಮೈಲು ದೂರ ಹಾರಿ ಹೋಗಿ ಬಿದಿದ್ದು, ಕಾರಿನೊಳಗೇ ಮೃತಪಟ್ಟಿದ್ದಾಳೆ. ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾದ ಪರಿಣಾಮ 46ವರ್ಷದ ಮೊನಿಕಾ ಎಂಬ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಗ್ರೀನ್‌ ಫೀಲ್ಡ್‌ ನಗರದಲ್ಲಿ ಸುಮಾರು 55 ಮೈಲುಗಳವರೆಗೆ ಈ ಬಿರುಗಾಳಿ ಬೀಸಿದ್ದು, ಅನೇಕ ಮನೆ, ಕಟ್ಟಡಗಳು ಹಾನಿಗೊಳಗಾಗಿವೆ. ಸಾವಿರಾರು ಜನ ಬಿರುಗಾಳಿ ರಭಸಕ್ಕೆ ಆತಂಕ ವ್ಯಕ್ತಪಡಿಸಿದ್ದಾರೆ. ಈ ನಡುವೆ ಡಲ್ಲಾಸ್‌ ಸೇರಿದಂತೆ ಟೆಕ್ಸಾಸ್‌ನ ಕೆಲವು ಭಾಗಗಳಲ್ಲಿ ಭೀಕರ ಪ್ರವಾಹವಾಗುವ ಎಚ್ಚರಿಕೆಯನ್ನು ರಾಷ್ಟ್ರೀಯ ಹವಾಮಾನ ಇಲಾಖೆ ನೀಡಿದೆ.

ಹವಾಮಾನ ಬದಲಾವಣೆಯು ಪ್ರಪಂಚದಾದ್ಯಂತ ಚಂಡಮಾರುತಗಳ ತೀವ್ರತೆಯನ್ನು ಹೆಚ್ಚಿಸುತ್ತದೆ. ಅಮೆರಿಕದಲ್ಲಿ ಆಗಾಗ ಸುಂಟರಗಾಳಿ ಸಂಭವಿಸುತ್ತಿರುತ್ತದೆ. ಏಪ್ರಿಲ್‌ನಲ್ಲಿ ಅಮೆರಿಕದಲ್ಲಿ ಎರಡನೇ ಅತಿ ದೊಡ್ಡ ಸುಂಟರಗಾಳಿ ಇದಾಗಿದೆ. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಕಳೆದ ವಾರ ಮುಂಬೈನಲ್ಲೂ ಭಾರೀ ಗಾಳಿ ಸಹಿತ ಮಳೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಮಧ್ಯಾಹ್ನ 3 ಗಂಟೆ ಹೊತ್ತಿಗೇ ವಾತಾವರಣದಲ್ಲಿ ಉಂಟಾದ ದಿಢೀರ್ ಬದಲಾವಣೆ ಉಂಟಾಗಿತ್ತು. ದ್ವಿಚಕ್ರ ವಾಹನಗಳಲ್ಲಿ ಕುಳಿತು ಸಾಗುತ್ತಿದ್ದ ಜನರು ಭಾರೀ ಗಾಳಿ, ಮಳೆಯಿಂದಾಗಿ ತಮ್ಮ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿ ರಕ್ಷಣೆಗಾಗಿ ಅಂಗಡಿ ಮುಂಗಟ್ಟುಗಳತ್ತ ಓಡಿದರು. ಮುಂಬೈ ನಗರದ ಘಾಟ್‌ಕೋಪರ್, ಬಾಂದ್ರಾ, ಕುರ್ಲಾ, ಧಾರಾವಿ ಪ್ರದೇಶಗಳಲ್ಲಿ ಭಾರೀ ಮಳೆ ಆಗಿದೆ. ಕ್ಷಣಾರ್ಧದಲ್ಲಿ ಸಂಚಾರದಲ್ಲಿ ಭಾರೀ ಅವ್ಯವಸ್ಥೆ ಉಂಟಾಗಿತ್ತು.

ಇದನ್ನೂ ಓದಿ:bomb Hoax: ಶಾಲೆ, ದೇವಸ್ಥಾನದ ಬಳಿಕ ರಾಜಧಾನಿಯ ಪ್ರತಿಷ್ಠಿತ ಹೋಟೆಲ್‌ಗೂ ಬಾಂಬ್‌ ಬೆದರಿಕೆ

ಮುಂಬೈ ವಿಮಾನ ನಿಲ್ದಾಣಗಳಲ್ಲಿ ವಿಮಾನಗಳ ಲ್ಯಾಂಡಿಂಗ್ ಹಾಗೂ ಟೇಕಾಫ್‌ಗೆ ಭಾರೀ ಅಡ್ಡಿ ಉಂಟಾಗಿತ್ತು. ದೇಶದ ಅತ್ಯಂತ ಹೆಚ್ಚು ಚಟುವಟಿಕೆಯಿಂದ ಕೂಡಿರುವ ಈ ವಿಮಾನ ನಿಲ್ದಾಣದಲ್ಲಿ ವಿಮಾನಯಾನವನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಯ್ತು. ಮುಂಬೈ ಮಹಾ ನಗರಕ್ಕೆ ಆಗಮಿಸುವ ಹಾಗೂ ನಿರ್ಗಮಿಸುವ ವಿಮಾನಗಳ ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಗಿತ್ತು.

Continue Reading

ವಿದೇಶ

ಎಲ್ಲೆ ಮೀರಿದ ಹಮಾಸ್‌ ಉಗ್ರರ ಅಟ್ಟಹಾಸ; ಗಾಯಗೊಂಡ ಇಸ್ರೇಲಿ ಮಹಿಳಾ ಸೈನಿಕರ ಮೇಲೆ ಲೈಂಗಿಕ ದೌರ್ಜನ್ಯ: ಭಯಾನಕ ವಿಡಿಯೊ ಇಲ್ಲಿದೆ

Hamas Terrorists: 2023ರ ಅಕ್ಟೋಬರ್‌ 7ರಂದು ಹಮಾಸ್‌ ಉಗ್ರರು ನಡೆಸಿದ ದಾಳಿಗೆ ತೀವ್ರ ಪ್ರಮಾಣದಲ್ಲಿ ಪ್ರತಿದಾಳಿ ನಡೆಸುತ್ತಿರುವ ಇಸ್ರೇಲ್‌ ಸೈನಿಕರು ಇಂದಿಗೂ ಕದನ ವಿರಾಮ ಘೋಷಿಸಿಲ್ಲ. ಈ ಮಧ್ಯೆ ಹಮಾಸ್‌ ಉಗ್ರರ ದೌರ್ಜನ್ಯವನ್ನು ಬಹಿರಂಗಪಡಿಸುವ ಇನ್ನೊಂದು ಭಯಾನಕ ವಿಡಿಯೊ ಹೊರ ಬಂದಿದ್ದು, ವೈರಲ್‌ ಆಗಿದೆ. ಗಾಯಗೊಂಡ ಇಸ್ರೇಲಿ ಮಹಿಳಾ ಸೈನಿಕರ ಮೇಲೆ ಹಮಾಸ್‌ ಉಗ್ರರು ಲೈಂಗಿಕ ದೌರ್ಜನ್ಯ ನಡೆಸುವ ವಿಡಿಯೊ ಇದಾಗಿದ್ದು, ಅವರ ಕ್ರೂರತೆಗೆ ಜಗತ್ತೇ ಬೆಚ್ಚಿ ಬಿದ್ದಿದೆ.

VISTARANEWS.COM


on

Hamas Terrorists
Koo

ಗಾಜಾ: 2023ರ ಅಕ್ಟೋಬರ್‌ 7ರಂದು ಹಮಾಸ್‌ ಉಗ್ರರು (Hamas Terrorists) ನಡೆಸಿದ ದಾಳಿಗೆ ತೀವ್ರ ಪ್ರಮಾಣದಲ್ಲಿ ಪ್ರತಿದಾಳಿ (Israel Hamas War) ನಡೆಸುತ್ತಿರುವ ಇಸ್ರೇಲ್‌ ಸೈನಿಕರು ಇಂದಿಗೂ ಕದನ ವಿರಾಮ ಘೋಷಿಸಿಲ್ಲ. ಈ ಮಧ್ಯೆ ಹಮಾಸ್‌ ಉಗ್ರರ ದೌರ್ಜನ್ಯವನ್ನು ಬಹಿರಂಗಪಡಿಸುವ ಇನ್ನೊಂದು ಭಯಾನಕ ವಿಡಿಯೊ ಹೊರ ಬಂದಿದ್ದು, ವೈರಲ್‌ ಆಗಿದೆ. ಗಾಯಗೊಂಡ ಇಸ್ರೇಲಿ ಮಹಿಳಾ ಸೈನಿಕರ ಮೇಲೆ ಹಮಾಸ್‌ ಉಗ್ರರು ಲೈಂಗಿಕ ದೌರ್ಜನ್ಯ ನಡೆಸುವ ವಿಡಿಯೊ ಇದಾಗಿದ್ದು, ಅವರ ಕ್ರೂರತೆಗೆ ಜಗತ್ತೇ ಬೆಚ್ಚಿ ಬಿದ್ದಿದೆ (Viral Video)

ಒತ್ತೆಯಾಳುಗಳು ಮತ್ತು ಕಾಣೆಯಾದವರ ಕುಟುಂಬ ವೇದಿಕೆ ಬಿಡುಗಡೆ ಮಾಡಿದ ವಿಡಿಯೊದಲ್ಲಿ ಈ ಆಘಾತಕಾರಿ ದೃಶ್ಯ ಕಂಡು ಬಂದಿದೆ. ಅಕ್ಟೋಬರ್‌ 7ರಂದು ನಡೆದ ದಾಳಿಯ ವೇಳೆ ಹಮಾಸ್‌ ಉಗ್ರರು ಸೆರೆಸಿಕ್ಕ ಇಸ್ರೇಲ್‌ನ 5 ಮಹಿಳಾ ಸೈನಿಕರಿಗೆ ಕೈಕೋಳ ತೊಡಿಸಿ ಗೋಡೆಗೆ ಒತ್ತಿ ಹಿಡಿದಿರುವುದು ಕಂಡು ಬರುತ್ತಿದೆ. ಹತರಾದ ಇತರ ಸೈನಿಕರ ಶವವೂ ಪಕ್ಕದಲ್ಲೇ ಕಂಡು ಬರುತ್ತಿದೆ. ಬಂಧಿತ ಮಹಿಳಾ ಸೈನಿಕರು ಗಾಯಗೊಂಡಿದ್ದು, ಅವರ ಮುಖದ ಮೇಲೆ ರಕ್ತ ಹರಿಯುತ್ತಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಸಾರಿ ಹೇಳುತ್ತಿದೆ.

ಗಾಜಾ ಪಟ್ಟಿಯ ಹೊರಗಿನ ನಹಾಲ್ ಓಜ್ ನೆಲೆಯಲ್ಲಿ ಈ ಯೋಧರು ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಬಂಧಿತರನ್ನು ಲಿರಿ ಅಲ್ಬಾಗ್, ಕರೀನಾ ಆರೀವ್, ಅಗಮ್ ಬರ್ಗರ್, ಡೇನಿಯೆಲ್ಲಾ ಗಿಲ್ಬೋವಾ ಮತ್ತು ನಾಮಾ ಲೆವಿ ಎಂದು ಗುರುತಿಸಲಾಗಿದೆ.

ಭಯಾನಕ ವಿಡಿಯೊದಲ್ಲಿ ಏನಿದೆ?

ಬಂದೂಕುಧಾರಿ ಭಯೋತ್ಪಾದಕನೊಬ್ಬ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ತಮ್ಮ ಯೋಜನೆಯನ್ನು ಘೋಷಿಸುವುದು ಕೂಡ ವಿಡಿಯೊದಲ್ಲಿ ಸೆರೆಯಾಗಿದೆ. ʼʼಗರ್ಭಿಣಿಯಾಗಬಹುದಾದ ಕೆಲವು ಮಹಿಳೆಯರು ಇಲ್ಲಿದ್ದಾರೆʼʼ ಒಂದು ಓರ್ವ ಹೇಳಿದರೆ, ಇನ್ನೋರ್ವ ಸೆರೆ ಸಿಕ್ಕ ಮಹಿಳೆಯ ಸೌಂದರ್ಯವನ್ನು ಹೊಗಳುತ್ತಿರುವುದೂ ಕಂಡು ಬಂದಿದೆ.

ನಹಾಲ್ ಓಜ್‌ನ ಬಾಂಬ್‌ ಶೆಲ್ಟರ್‌ನಲ್ಲಿ ಸೆರೆ ಹಿಡಿಯಲಾದ ಈ ವಿಡಿಯೊದಲ್ಲಿ ಉಗ್ರರು ಸೆರೆಸಿಕ್ಕವರು ನಾಯಿಗಳೆಂದು ನಿಂದಿಸುತ್ತಿರುವುದೂ ಸೆರೆಯಾಗಿದೆ. ಜತೆಗೆ ಫೋಟೊಗಳಿಗೆ ಪೋಸ್‌ ನೀಡುವಂತೆಯೂ ಮಹಿಳೆಯರಿಗೆ ಹಿಂಸೆ ನೀಡುತ್ತಾರೆ. ಈ ಪೈಕಿ ಒಬ್ಬಾಕೆಯ ಮುಖದಲ್ಲಿ ರಕ್ತ ಸೋರುತ್ತಿದ್ದರೆ, ಇನ್ನೋರ್ವ ಮಹಿಳೆಯ ಬಾಯಿಯಿಂದ ರಕ್ತ ಜಿನುಗುತ್ತಿದೆ. ಮಹಿಳೆಯರ ಪೈಕಿ ಒಬ್ಬಾಕೆ ಇಂಗ್ಲಿಷ್‌ ಗೊತ್ತಿರುವವರನ್ನು ಕರೆತನ್ನಿ ಎಂದು ಮನವಿ ಮಾಡುತ್ತಾರೆ. ಜತೆಗೆ ಇನ್ನೊಬ್ಬರು ತಮಗೆ ಗಾಜಾದಲ್ಲಿ ಸ್ನೇಹಿತರೊಬ್ಬರಿದ್ದು, ಅವರನ್ನು ಭೇಟಿ ಮಾಡಿಸುವಂತೆ ಆಗ್ರಹಿಸುತ್ತಾರೆ. ಆದರೆ ಬಂಧೂಕುದಾರಿಗಳು ಇದ್ಯಾವುದನ್ನೂ ಲೆಕ್ಕಿಸುವುದಿಲ್ಲ. ಕಿರುಚಿ ಸುಮ್ಮನೆ ಕುಳಿತುಕೊಳ್ಳುವಂತೆ ಬೆದರಿಸುತ್ತಾರೆ. ತಮ್ಮ ಸಂಗಾತಿಗಳ ಸಾವಿಗೆ ಇವರೇ ಕಾರಣ ಎಂದು ಆರೋಪಿಸುತ್ತಾರೆ.

ಇದನ್ನೂ ಓದಿ: Al Jazeera: ಹಮಾಸ್‌ ಉಗ್ರರ ಪರ ನಿಲುವು; ಇಸ್ರೇಲ್‌ನಲ್ಲಿ ಅಲ್‌ಜಜೀರಾ ಚಾನೆಲ್‌ ಬಂದ್‌ ಮಾಡಿದ ನೆತನ್ಯಾಹು!

ಸ್ವಲ್ಪ ಸಮಯದ ಬಳಿಕ ಉಗ್ರರು ಪ್ರಾರ್ಥನೆಗಾಗಿ ಕೆಲ ಕಾಲ ಸುಮ್ಮನಾಗುತ್ತಾರೆ. ಬಳಿಕ ಮಹಿಳೆಯರನ್ನು ತಳ್ಳಿಕೊಂಡು ಹೊರಗೆ ಕರೆತಂದು ಕಾರಿಗೆ ಹತ್ತಿಸುತ್ತಾರೆ. ಕಾಲಿಗೆ ಗಾಯಗೊಂಡ ಕೆಲವು ಮಹಿಳೆಯರು ನಡೆಯಲೂ ಕಷ್ಟಪಡುತ್ತಾರೆ. ಹಿನ್ನೆಲೆಯಲ್ಲಿ ಗುಂಡಿನ ಸದ್ದು ಕೂಡ ಕೇಳಿಸುತ್ತದೆ. ಮಹಿಳೆಯರನ್ನು ಹತ್ತಿಸಿಕೊಂಡ ಕಾರು ಅಲ್ಲಿಂದ ಮುಂದೆಕ್ಕೆ ಚಲಿಸುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಸದ್ಯ ವಿಡಿಯೊ ಬಗ್ಗೆ ವಿಶ್ವಾದ್ಯಂತ ವ್ಯಾಪಕ ಚರ್ಚೆ ನಡೆಯುತ್ತಿದೆ. ಹಲವರು ಕಳವಳ ವ್ಯಕ್ತಪಡಿಸಿದ್ದಾರೆ.

Continue Reading

ವಿದೇಶ

Singapore Airlines: ಟರ್ಬುಲೆನ್ಸ್‌ಗೆ ತುತ್ತಾದ ವಿಮಾನ: ಇಲ್ಲಿದೆ ನೋಡಿ ಭೀಕರತೆಯನ್ನು ಸಾರುವ ಫೋಟೊಗಳು

Singapore Airlines: ಲಂಡನ್‌ನಿಂದ ಸಿಂಗಾಪುರಕ್ಕೆ ತೆರಳುತ್ತಿದ್ದ ವಿಮಾನದಲ್ಲಿ ಪ್ರಕ್ಷುಬ್ಧತೆ ಉಂಟಾಗಿ ಒಬ್ಬರು ಮೃತಪಟ್ಟು 30 ಜನ ಗಾಯಗೊಂಡಿರುವ ಘಟನೆ ಮಂಗಳವಾರ (ಮೇ 21) ನಡೆದಿದೆ. ಸದ್ಯ ವಿಮಾನದೊಳಗಿನ ಫೋಟೊಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಘಟನೆಯ ಭೀಕರತೆಗೆ ಸಾಕ್ಷಿಯಾಗಿವೆ.

VISTARANEWS.COM


on

Turbulence
Koo

ಲಂಡನ್‌: ಬ್ರಿಟನ್‌ ರಾಜಧಾನಿ ಲಂಡನ್‌ನಿಂದ ಸಿಂಗಾಪುರಕ್ಕೆ ತೆರಳುತ್ತಿದ್ದ ವಿಮಾನದಲ್ಲಿ ಪ್ರಕ್ಷುಬ್ಧತೆ (Turbulence) ಉಂಟಾಗಿ ಒಬ್ಬರು ಮೃತಪಟ್ಟು 30 ಜನ ಗಾಯಗೊಂಡಿರುವ ಘಟನೆ ಮಂಗಳವಾರ (ಮೇ 21) ನಡೆದಿದೆ. ಬಳಿಕ ಈ ಸಿಂಗಾಪುರ ಏರ್‌ಲೈನ್ಸ್‌ (Singapore Airlines) ವಿಮಾನವನ್ನು ಬ್ಯಾಂಕಾಕ್‌ನ ಸುವರ್ಣಭೂಮಿ ಏರ್‌ಪೋರ್ಟ್‌ನಲ್ಲಿ ತುರ್ತು ಲ್ಯಾಂಡ್‌ ಮಾಡಲಾಯಿತು. ಕೂಡಲೇ ವೈದ್ಯರು ಧಾವಿಸಿ ಪ್ರಯಾಣಿಕರಿಗೆ ಅಗತ್ಯ ನೆರವು ನೀಡಿದ್ದಾರೆ. ಸದ್ಯ ವಿಮಾನದೊಳಗಿನ ಫೋಟೊಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಘಟನೆಯ ಭೀಕರತೆಗೆ ಸಾಕ್ಷಿಯಾಗಿವೆ.

ವಿಮಾನವು ಹಾರಾಟ ನಡೆಸುವಾಗ ಹವಾಮಾನ ವೈಪರೀತ್ಯದಿಂದಾಗಿ ಗಾಳಿಯ ಒತ್ತಡದಲ್ಲಿ ದಿಢೀರನೆ ಏರುಪೇರಾಗುತ್ತದೆ. ಇದರ ತೀವ್ರತೆಗೆ ವಿಮಾನವು ಹಾರಾಟ ನಡೆಸುವಾಗಲೇ ಏಕಾಏಕಿ ಅಲುಗಾಡುತ್ತದೆ. ಹೀಗೆ ದಿಢೀರನೆ ಅಲುಗಾಡುವುದನ್ನೇ ಟರ್ಬುಲೆನ್ಸ್‌ ಅಥವಾ ಪ್ರಕ್ಷುಬ್ಧತೆ ಎಂದು ಕರೆಯುತ್ತಾರೆ. ಸಣ್ಣಪುಟ್ಟ ಪ್ರಕ್ಷುಬ್ಧತೆ ಉಂಟಾದರೆ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಆದರೆ, ತೀವ್ರ ಪ್ರಮಾಣದಲ್ಲಿ ಉಂಟಾದರೆ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ. ಲಗೇಜ್‌ಗಳು ಪ್ರಯಾಣಿಕರ ಮೈಮೇಲೆ ಬೀಳುತ್ತವೆ. ಮಂಗಳವಾರ ತೀವ್ರತರವಾದ ಟರ್ಬುಲೆನ್ಸ್‌ಗೆ ಒಳಗಾದ ಸಿಂಗಾಪುರ ಏರ್‌ಲೈನ್ಸ್‌ನಲ್ಲಿನ ಪರಿಸ್ಥಿತಿ ಭೀಕರವಾಗಿತ್ತು.

ಇಲ್ಲಿದೆ ಆ ಭೀಕರ ಫೋಟೊಗಳು

ಗಾಳಿಯಲ್ಲಿ ನೇತಾಡುತ್ತಿರುವ ಬಾಕ್ಸ್‌: ಹೌದು, ವಿಮಾನ ಏಕಾಏಕಿ ಅಲುಗಾಡಿದ ಕಾರಣ ಮೇಲೆ ಪೇರಿಸಿಟ್ಟಿದ್ದ ಬಾಕ್ಸ್‌ಗಳ ಪೈಕಿ ಕೆಲವು ಉರುಳಿ ಬಿದ್ದರೆ ಇನ್ನು ಕೆಲವು ನೇತಾಡುತ್ತಿದ್ದವು.

ಬಿರುಕುಬಿಟ್ಟ ಓವರ್‌ಹೆಡ್‌ ಬಿನ್‌: ಇನ್ನು ಓವರ್‌ಹೆಡ್‌ ಬಿನ್‌ನಲ್ಲಿ ಬಿರುಕು ಬಿಟ್ಟು, ತುಂಡಾದ ವೈರ್‌, ಮಾಸ್ಕ್‌ ಇತ್ಯಾದಿ ಪ್ರಯಾಣಿಕರ ತಲೆ ಮೇಲೆ ಜೋತು ಬಿದ್ದಿದ್ದವು.

ಚೆಲ್ಲಾಪಿಲ್ಲಿಯಾಗಿ ಬಿದ್ದ ಸಾಮಾಗ್ರಿಗಳು: ನೀರಿನ ಬಾಟಲಿ, ಕಾಫಿ ಮಗ್‌, ಮದ್ಯದ ಗ್ಲಾಸ್‌ ಸೇರಿದಂತೆ ಆಹಾರ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ದೃಶ್ಯ ಘಟನೆಯ ಗಂಭೀರತೆಯನ್ನು ಸಾರಿ ಹೇಳುವಂತಿತ್ತು.

ಛಾವಣಿ ತುಂಡು: ಅಲುಗಾಟದ ತೀವ್ರತೆಗೆ ವಿಮಾನದ ಛಾವಣಿಯ ಭಾಗ ತುಂಡಾಗಿ ಬಿದ್ದು, ಒಳಗಿನ ಪಾರ್ಟ್‌ಗಳೆಲ್ಲ ಕಾಣಿಸಿಕೊಂಡಿದ್ದವು.

ಗಾಯಗೊಂಡ ಪ್ರಯಾಣಿಕರು: ಮುಖ, ಕೈಗಳಿಗೆ ಗಾಯಗಳಾಗಿ, ಭಯಭೀತರಾಗಿ ಕುಳಿತಿರುವ ಪ್ರಯಾಣಿಕರ ಫೋಟೊ ಕೂಡ ವೈರಲ್‌ ಅಗಿದೆ.

ಇದನ್ನೂ ಓದಿ: Emirates Flight: ವಿಮಾನ ಡಿಕ್ಕಿ ಹೊಡೆದು 36 ಫ್ಲೆಮಿಂಗೊ ಪಕ್ಷಿಗಳಿಗೆ ದಾರುಣ ಅಂತ್ಯ

ಅನುಭವ ಹಂಚಿಕೊಂಡ ಪ್ರಯಾಣಿಕರು

ಇನ್ನು ಈ ವಿಮಾನದಲ್ಲಿದ್ದ ಪ್ರಯಾಣಿಕರು ತಮ್ಮ ಅನುಭವವನ್ನು ಸುದ್ದಿ ಸಂಸ್ಥೆ ರಾಯಿಟರ್ಸ್‌ ಜತೆ ಹಂಚಿಕೊಂಡಿದ್ದಾರೆ. ʼʼಇದ್ದಕ್ಕಿದ್ದಂತೆ ನಾವಿದ್ದ ವಿಮಾನ ಅಲುಗಾಡಲು ಆರಂಭಿಸಿತು. ಯಾರಿಗೆ ಏನಾಗುತ್ತದೆ ಎನ್ನುವುದೇ ತೋಚದ ಪರಿಸ್ಥಿತಿ ನಿರ್ಮಾಣವಾಗಿತ್ತು. ಸೀಟ್ ಬೆಲ್ಟ್ ಧರಿಸದವರು ಬಿದ್ದು ಬಿಟ್ಟರು. ಕೆಲವರ ತಲೆ ಬ್ಯಾಗೇಜ್ ಕ್ಯಾಬಿನ್ ಡಿಕ್ಕಿ ಹೊಡೆಯಿತು. ಘಟನೆಯಲ್ಲಿ ಹಲವರು ಗಾಯಗೊಂಡರುʼʼ ಎಂದು ತಿಳಿಸಿದ್ದಾರೆ.

ಇನ್ನೊಬ್ಬರು ತಮ್ಮ ಅನುಭವವನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. “ನಾನು ಸಾಧ್ಯವಾದಷ್ಟು ಇತರರಿಗೆ ಸಹಾಯ ಮಾಡಿದೆ. ನಾನು ಸೇರಿದಂತೆ ಗಾಯಗೊಂಡಿಲ್ಲದವರು ಬ್ಯಾಂಕಾಕ್ ವಿಮಾನ ನಿಲ್ದಾಣದ ಹೋಲ್ಡಿಂಗ್ ಪ್ರದೇಶದಲ್ಲಿದ್ದೇವೆ. ಇದೊಂದು ಮರೆಯಲಾರದ ಭಯಾನಕ ಅನುಭವ. ಬ್ಯಾಂಕಾಕ್‌ನ ತುರ್ತು ಸೇವೆ ತ್ವರಿತವಾಗಿ ಸ್ಪಂದಿಸಿ ಅಗತ್ಯ ನೆರವು ನೀಡಿದೆʼʼ ಎಂದು ಅವರು ಹೇಳಿದ್ದಾರೆ.

Continue Reading
Advertisement
IPL 2024
ಪ್ರಮುಖ ಸುದ್ದಿ18 mins ago

IPL 2024 : ಮಾಜಿ ನಾಯಕ ಶೇನ್​ ವಾರ್ನ್​ ದಾಖಲೆ ಸರಿಗಟ್ಟಿದ ಸಂಜು ಸ್ಯಾಮ್ಸನ್​

IPL 2024
ಕ್ರೀಡೆ40 mins ago

IPL 2024 : ಮುಂದಿನ ವರ್ಷವೂ ಧೋನಿ ಐಪಿಎಲ್​ ಆಡ್ತಾರೆ; ಸಿಎಸ್​ಕೆ ಸಿಇಒ ಸ್ಪಷ್ಟನೆ

Golden Star Ganesh Krishnam Pranaya Sakhi movie first song release on May 25 in Mysore
ಸಿನಿಮಾ48 mins ago

Golden Star Ganesh: ಮೈಸೂರಿನಲ್ಲಿ ಮೇ 25ರಂದು ʼಕೃಷ್ಣಂ ಪ್ರಣಯ ಸಖಿʼ ಚಿತ್ರದ ಫಸ್ಟ್‌ ಸಾಂಗ್‌ ರಿಲೀಸ್‌

Prashant Kishor
ದೇಶ1 hour ago

Prashant Kishor: ಜೂನ್‌ 4ರಂದು ಪ್ರತಿಪಕ್ಷಗಳು ನೀರು ಕುಡಿಯಲಿವೆ; ಪ್ರಶಾಂತ್‌ ಕಿಶೋರ್‌ ಮಾತಿನ ಮರ್ಮವೇನು?

Virat Kohli
ಕ್ರೀಡೆ1 hour ago

Virat Kohli : ಕೊಹ್ಲಿಗೆ ಗೌರವ ಸಲ್ಲಿಸಲೇಬೇಕು ಎಂದು ಹೇಳಿದ ಆಸ್ಟ್ರೇಲಿಯಾದ ಮಾಜಿ ಬ್ಯಾಟರ್​​

Karnataka rain
ಮಳೆ2 hours ago

Karnataka Rain : ಮಳೆ ಅವಘಡಕ್ಕೆ ಜನರು ತತ್ತರ; ಧರೆಗುರುಳಿದ ಮರಗಳು, ಕುಸಿದು ಬಿದ್ದ ಮನೆಗಳು

Shivasharane Hemaraddi Mallamma Jayanti celebration in Srisailam
ಯಾದಗಿರಿ2 hours ago

Yadgiri News: ಶ್ರೀಶೈಲಂನಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ

union minister Pralhad Joshi latest statement in bidar
ಕರ್ನಾಟಕ2 hours ago

Pralhad Joshi: ಅಮಾಯಕ ಹೆಣ್ಣುಮಕ್ಕಳ ಹತ್ಯೆಯಾದರೂ ಪೊಲೀಸರ ಮೌನ; ಪ್ರಲ್ಹಾದ ಜೋಶಿ ಆರೋಪ

Rave party 86 people including Hema and Ashi consumed drugs in the rave party Blood report positive
ಕ್ರೈಂ2 hours ago

Rave party: ರೇವ್‌ ಪಾರ್ಟಿಯಲ್ಲಿ ಹೇಮಾ, ಆಶಿ ಸೇರಿ 86 ಮಂದಿಯಿಂದ ಮಾದಕ ವಸ್ತು ಸೇವನೆ; ಬ್ಲಡ್‌ ರಿಪೋರ್ಟ್‌ ಪಾಸಿಟಿವ್‌

Remedies For SadeSati
ಧಾರ್ಮಿಕ2 hours ago

Remedies For SadeSati: ಶನಿಯ ವಕ್ರದೃಷ್ಟಿ ಕಡಿಮೆ ಮಾಡಲು ಇಲ್ಲಿದೆ ಸುಲಭ ಪರಿಹಾರ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for May 23 2024
ಭವಿಷ್ಯ16 hours ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ2 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು2 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು2 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ3 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ4 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ4 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ4 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ6 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

ಟ್ರೆಂಡಿಂಗ್‌