ಢಾಕಾ: ಬಾಂಗ್ಲಾದೇಶದಲ್ಲಿ ಅಲ್ಲಿನ ಸರ್ಕಾರದ ವಿರುದ್ಧ ನಡೆಯುತ್ತಿದ್ದ (Bangladesh Unrest) ಪ್ರತಿಭಟನೆ ಪ್ರತಿಭಟನೆ ಸೇನಾ ದಂಗೆಯಾಗಿ ಮಾರ್ಪಟ್ಟಿದೆ. ಇದರ ಬೆನ್ನಲ್ಲೇ ಶೇಖ್ ಹಸೀನಾ (Sheikh Hasina) ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ದೇಶವನ್ನು ತೊರೆದಿದ್ದರು. ಇದೀಗ ಬಾಂಗ್ಲಾದೇಶ ರಾಷ್ಟ್ರಪತಿ ಮೊಹಮ್ಮದ್ ಶಹಬುದ್ದೀನ್ ಇಂದು ಸಂಸತ್ತನ್ನು ವಿಸರ್ಜಿಸಿದ್ದಾರೆ.
ಮೂರು ಸೇನೆಯ ಮುಖ್ಯಸ್ಥರು, ವಿವಿಧ ಪಕ್ಷಗಳ ಮುಖಂಡರು, ನಾಗರಿಕ ಸಮಾಜದ ಮುಖಂಡರು ಹಾಗೂ ತಾರತಮ್ಯ ವಿರೋಧಿ ವಿದ್ಯಾರ್ಥಿಗಳ ಸಂಘಟನೆ ಮುಖಂಡರ ಜೊತೆ ಚರ್ಚೆ ನಡೆಸಿದ ಬಳಿಕ ರಾಷ್ಟ್ರಪತಿಯವರು ಈ ನಿರ್ಧಾರವನ್ನು ಘೋಷಿಸಿದ್ದಾರೆ. ಈ ಬಗ್ಗೆ ಅಧಿಕೃತ ಪ್ರಕಟಣೆಯನ್ನೂ ಹೊರಹಾಕಿದ್ದಾರೆ.
ಖಲೀದಾ ಜಿಯಾ ರಿಲೀಸ್
ಮತ್ತೊಂದೆಡೆ ಶೇಖ್ ಹಸೀನಾ ಅವರ ಬದ್ಧ ವಿರೋಧಿ ಜೈಲಿನಲ್ಲಿದ್ದ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರನ್ನೂ ಇಂದು ಬಿಡುಗಡೆಗೊಳಿಸಲಾಗಿದೆ. ಜಿಯಾರನ್ನು 2018ರಲ್ಲಿ ಭ್ರಷ್ಟಾಚಾರ ಪ್ರಕರಣದಲ್ಲಿ ಅರೆಸ್ಟ್ ಮಾಡಲಾಗಿತ್ತು. ಶಹಾಬುದ್ದೀನ್ ನೇತೃತ್ವದ ಸಭೆಯಲ್ಲಿ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (ಬಿಎನ್‌ಪಿ) ಅಧ್ಯಕ್ಷೆ ಬೇಗಂ ಖಲೀದಾ ಜಿಯಾ ಅವರನ್ನು ತಕ್ಷಣವೇ ಬಿಡುಗಡೆ ಮಾಡಲು ಸರ್ವಾನುಮತದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅಧ್ಯಕ್ಷರ ಪತ್ರಿಕಾ ತಂಡವು ಹೇಳಿಕೆಯಲ್ಲಿ ತಿಳಿಸಿದೆ. ಸಭೆಯಲ್ಲಿ ಸೇನಾ ಮುಖ್ಯಸ್ಥ ಜನರಲ್ ವಕಾರ್ ಉಜ್ ಜಮಾನ್, ನೌಕಾಪಡೆ ಮತ್ತು ವಾಯುಪಡೆ ಮುಖ್ಯಸ್ಥರು ಮತ್ತು ಬಿಎನ್‌ಪಿ, ಜಮಾತ್-ಎ-ಇಸ್ಲಾಮಿ ಪಾರ್ಟಿ ಸೇರಿದಂತೆ ಹಲವು ವಿರೋಧ ಪಕ್ಷಗಳ ಉನ್ನತ ನಾಯಕರು ಉಪಸ್ಥಿತರಿದ್ದರು.
ಇನ್ನು ದಂಗೆ ಪ್ರಾರಂಭವಾದಗಿನಿಂದ ಆ.5ರವರೆಗೆ ಅರೆಸ್ಟ್ ಮಾಡಿರುವ ಜನರನ್ನು ಬಿಡುಗಡೆಗೊಳಿಸಲಾಗಿದೆ. ಮತ್ತೊಂದೆಡೆ ಜಮಾತ್ ಎ ಇಸ್ಲಾಮಿ ಮುಖ್ಯಸ್ಥ ಡಾ. ಶಾಫಿಖರ್ ರೆಹ್ಮಾನ್ ಪತ್ರಿಕಾಗೋಷ್ಠಿ ಕರೆದು ಬಾಂಗ್ಲಾದ ಪ್ರಸ್ತುತ ಸ್ಥಿತಿಗತಿ ಬಗ್ಗೆ ವಿವರಿಸಿದ್ದಾರೆ.
#সংবাদ_সম্মেলন
— Bangladesh Jamaat-e-Islami (@BJI_Official) August 6, 2024
দেশের চলমান পরিস্থিতি নিয়ে আমীরে জামায়াত ডা. শফিকুর রহমান-এর সংবাদ সম্মেলন pic.twitter.com/sme8d4SQJC
ಶೇಖ್ ಹಸೀನಾ (Sheikh Hasina) ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ದೇಶವನ್ನು ತೊರೆದಿದ್ದರು. ಹಸೀನಾ ಬಾಂಗ್ಲಾದೇಶದಿಂದ ಮಿಲಿಟರಿ ವಿಮಾನದಲ್ಲಿ ಪಲಾಯನ ಮಾಡಿದ್ದಾರೆ ಎಂಬ ಸುದ್ದಿ ಹರಡುತ್ತಿದ್ದಂತೆ, ಪ್ರತಿಭಟನಾಕಾರರು ಮಾಜಿ ಪ್ರಧಾನಿಯ ನಿವಾಸಕ್ಕೆ ನುಗ್ಗಿ ಮಾಜಿ ಅವರ ಬ್ರಾಗಳನ್ನೂ ಬಿಡಿದೇ ದೋಚಿದ್ದಾರೆ. ಇದರ ವಿಡಿಯೊ ಹಾಗೂ ಚಿತ್ರಗಳು ವೈರಲ್ ಆಗಿವೆ. ಅಲ್ಲಿನ ಪ್ರತಿಭಟನಾಕಾರರ ಮನಸ್ಥಿತಿಯ ಬಗ್ಗೆ ಜಾಗತಿಕವಾಗಿ ಟೀಕೆಗಳು ಕೇಳಿ ಬಂದಿವೆ.
ಪ್ರತಿಭಟನಾಕಾರರು ಸೀರೆಗಳು ಸೇರಿದಂತೆ ತಮ್ಮಿಂದ ಸಾಧ್ಯವಾದದ್ದನ್ನು ನಿರಂತರವಾಗಿ ಲೂಟಿ ಮಾಡಿದ್ದರು. ವೈರಲ್ ವೀಡಿಯೊಗಳು ಮತ್ತು ಚಿತ್ರಗಳು ಪ್ರತಿಭಟನಾಕಾರರೊಬ್ಬರು ನಾಚಿಕೆಯಿಲ್ಲದೆ ಕೈಯಲ್ಲಿ ಬ್ರಾಗಳನ್ನು ಹಿಡಿದುಕೊಂಡು ಮಾಜಿ ಪ್ರಧಾನಿಯ ಅಧಿಕೃತ ನಿವಾಸದಿಂದ ಲೂಟಿ ಮಾಡಿರುವುದನ್ನು ತೋರಿಸಿದೆ. ಇದು ಪ್ರತಿಭಟನೆಯಲ್ಲ ಕೇವಲ ದೊಂಬಿ ಎಂಬುದನ್ನು ಸಾಬೀತು ಮಾಡಿದೆ.
ಇದನ್ನೂ ಓದಿ: Bangladesh Protest: ಬಾಂಗ್ಲಾದೇಶದಲ್ಲಿನ ಹಿಂಸಾಚಾರದ ಹಿಂದೆ ಬೇರೆ ದೇಶಗಳ ಕೈವಾಡವಿದೆಯೇ?; ರಾಹುಲ್ ಗಾಂಧಿ ಪ್ರಶ್ನೆ