Site icon Vistara News

Bangladesh Unrest: ಬಾಂಗ್ಲಾ ದಂಗೆ ಹಿಂದೆ ಇದ್ಯಾ ಪಾಕ್‌ ISI ಕೈವಾಡ? ಶೇಖ್‌ ಹಸೀನಾ ಪುತ್ರ ಹೇಳಿದಿಷ್ಟು!

Bangladesh Unrest

ನವದೆಹಲಿ: ಬಾಂಗ್ಲಾದೇಶದಲ್ಲಿ ಅಶಾಂತಿ, ದಂಗೆ(Bangladesh Unrest) ಭುಗಿಲೆದ್ದಿರುವ ಹಿಂದೆ ಪಾಕಿಸ್ತಾನ(Pakistan)ದ ಕೈವಾಡ ಇದೆ ಎಂದು ನಿರ್ಗಮಿತ ಪ್ರಧಾನಿ ಶೇಖ್‌ ಹಸೀನಾ(Sheikh Hasina) ಪುತ್ರ ಸಜೀಬ್‌ ವಾಝೇದ್‌ ಹೇಳಿದ್ದಾರೆ. ಬಾಂಗ್ಲಾದೇಶದಲ್ಲಿ ತಲೆದೋರಿರುವ ಹಿಂಸಾಚಾರದ ಹಿಂದೆ ವಿದೇಶಿಗರ ಹಸ್ತಕ್ಷೇಪ ಮತ್ತು ಪಾಕ್‌ ಗುಪ್ತಚರ ಇಲಾಖೆ(ISI)ದ ಕೈವಾಡ ಇರುವುದಕ್ಕೆ ಪುರಾವೆಗಳಿವೆ ಎಂದು ಅವರು ತಿಳಿಸಿದ್ದಾರೆ.

“ಸಾಂದರ್ಭಿಕ ಪುರಾವೆಗಳಿಂದ ನನಗೆ ಕೆಲವೊಂದು ವಿಚಾರಗಳು ಖಚಿತವಾಗಿದ್ದು, ಈ ದುರ್ಘಟನೆಯಲ್ಲಿ ಪಾಕಿಸ್ತಾನದ ಐಎಸ್‌ಐ ಭಾಗಿಯಾಗಿದೆ ಎಂದು ನಾನು ಶಂಕಿಸುತ್ತೇನೆ. ದಾಳಿಗಳು ಮತ್ತು ಪ್ರತಿಭಟನೆಗಳು ಬಹಳ ಸಂಘಟಿತವಾಗಿವೆ. ಇದೊಂದು ಸಂಘಟಿತ ದಾಳಿ. ಸರ್ಕಾರ ಎಷ್ಟೇ ಪರಿಸ್ತಿತಿ ಸುಧಾರಿಸಲು ಪ್ರಯತ್ನಿಸಿದರೂ ಅದನ್ನು ಹಾಳುಗೆಡವುವ ಪ್ರಯತ್ನ ನಡೆಯುತ್ತಲೇ ಇತ್ತು ಎಂದು ಅವರು ಪಾಕಿಸ್ತಾನದ ವಿರುದ್ಧ ಬೆರಳು ಮಾಡಿ ತೋರಿಸಿದ್ದಾರೆ.

ಇನ್ನು ದಂಗೆಕೋರರು ಬಂದೂಕು ಹಿಡಿದು ದಾಳಿ ನಡೆಸುತ್ತಿದ್ದಾರೆ ಎಂದಾದರೆ ಖಂಡಿತವಾಗಿ ಅವರಿಗೆ ಉಗ್ರರಿಂದಲೇ ಬಂದೂಕು ಪೂರೈಕೆ ಆಗುತ್ತಿದೆ ಎಂದರ್ಥ ಎಂದು ಹೇಳಿದ್ದಾರೆ. ಇನ್ನು ಶೇಖ್‌ ಹಸೀನಾ ಶೀಘ್ರವೇ ದೇಶಕ್ಕೆ ಮರಳುವುದಾಗಿ ಹೇಳಿಕೆ ನೀಡಿರುವ ವಾಝೇದ್‌, ಹೌದು ಶೇಖ್‌ ಹಸೀನಾ ಅವರು ವಾಪಾಸ್‌ ಹೋಗುವುದಿಲ್ಲ ಎಂದು ನಾನು ಹೇಳಿದ್ದೆ. ಆದರೆ ಎರಡು ದಿನಗಳ ಆಗಿರುವ ಸಾಕಷ್ಟು ಬೆಳವಣಿಗೆಗಳಿಂದಾಗಿ ಅವರು ಸ್ವದೇಶಕ್ಕೆ ಮರರಳು ಚಿಂತನೆ ನಡೆಸುತ್ತಿದ್ದಾರೆ. ನಮ್ಮ ಪಕ್ಷದ ನಾಯಕರ ಮೇಲೆ ಎಗ್ಗಿಲ್ಲದೇ ದಾಳಿ ನಡೆಯುತ್ತಿವೆ. ಹೀಗಿರುವಾಗಿ ಅವರ ರಕ್ಷಣೆಗಾಗಿ ಅಲ್ಲೇ ನಿಂತು ಎಷ್ಟು ಸಾಧ್ಯವೋ ಅಂತ ಪ್ರಯತ್ನವನ್ನು ನಾವು ಮಾಡುತ್ತೇವೆ ಎಂದಿದ್ದಾರೆ.

ಪ್ರಧಾನಿ ಮೋದಿಗೆ ಧನ್ಯವಾದ

ವಾಝೇದ್‌ ಅವರು ತಮ್ಮ ತಾಯಿಯನ್ನು ರಕ್ಷಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದರು ಮತ್ತು ಬಾಂಗ್ಲಾದೇಶದಲ್ಲಿ ಪ್ರಜಾಪ್ರಭುತ್ವವನ್ನು ಪುನಃಸ್ಥಾಪಿಸಲು ಅಂತರರಾಷ್ಟ್ರೀಯ ಅಭಿಪ್ರಾಯವನ್ನು ನಿರ್ಮಿಸಲು ಮತ್ತು ಒತ್ತಡವನ್ನು ಹೇರಲು ಸಹಾಯ ಮಾಡಲು ಭಾರತಕ್ಕೆ ಮನವಿ ಮಾಡಿದರು. ನೊಬೆಲ್ ಪ್ರಶಸ್ತಿ ವಿಜೇತ ಮೊಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರವು ಕಾನೂನು ಮತ್ತು ಸುವ್ಯವಸ್ಥೆಯನ್ನು ಪುನಃಸ್ಥಾಪಿಸಲು ಜಾಯ್ ಒತ್ತಾಯಿಸಿದರು, “ದೇಶವು ಅರಾಜಕತೆಯ ಸ್ಥಿತಿಗೆ ತಿರುಗುತ್ತಿದೆ ಮತ್ತು ಈ ಪ್ರದೇಶದಲ್ಲಿ ಎರಡನೇ ಅಫ್ಘಾನಿಸ್ತಾನವಾಗುತ್ತಿದೆ ಎಂದರು.

Muhammad Yunus: ಹಿಂದುಗಳನ್ನು ಮೊದಲು ರಕ್ಷಿಸಿ; ಬಾಂಗ್ಲಾದೇಶದ ಮೊಹಮ್ಮದ್‌ ಯೂನಸ್‌ಗೆ ಮೋದಿ ಆಗ್ರಹ

Exit mobile version