Bangladesh Unrest: ಬಾಂಗ್ಲಾ ದಂಗೆ ಹಿಂದೆ ಇದ್ಯಾ ಪಾಕ್‌ ISI ಕೈವಾಡ? ಶೇಖ್‌ ಹಸೀನಾ ಪುತ್ರ ಹೇಳಿದಿಷ್ಟು! - Vistara News

ವಿದೇಶ

Bangladesh Unrest: ಬಾಂಗ್ಲಾ ದಂಗೆ ಹಿಂದೆ ಇದ್ಯಾ ಪಾಕ್‌ ISI ಕೈವಾಡ? ಶೇಖ್‌ ಹಸೀನಾ ಪುತ್ರ ಹೇಳಿದಿಷ್ಟು!

Bangladesh Unrest: ಸಾಂದರ್ಭಿಕ ಪುರಾವೆಗಳಿಂದ ನನಗೆ ಕೆಲವೊಂದು ವಿಚಾರಗಳು ಖಚಿತವಾಗಿದ್ದು, ಈ ದುರ್ಘಟನೆಯಲ್ಲಿ ಪಾಕಿಸ್ತಾನದ ಐಎಸ್‌ಐ ಭಾಗಿಯಾಗಿದೆ ಎಂದು ನಾನು ಶಂಕಿಸುತ್ತೇನೆ. ದಾಳಿಗಳು ಮತ್ತು ಪ್ರತಿಭಟನೆಗಳು ಬಹಳ ಸಂಘಟಿತವಾಗಿವೆ. ಇದೊಂದು ಸಂಘಟಿತ ದಾಳಿ. ಸರ್ಕಾರ ಎಷ್ಟೇ ಪರಿಸ್ಥಿತಿ ಸುಧಾರಿಸಲು ಪ್ರಯತ್ನಿಸಿದರೂ ಅದನ್ನು ಹಾಳುಗೆಡವುವ ಪ್ರಯತ್ನ ನಡೆಯುತ್ತಲೇ ಇತ್ತು ಎಂದು ಅವರು ಪಾಕಿಸ್ತಾನದ ವಿರುದ್ಧ ಬೆರಳು ಮಾಡಿ ತೋರಿಸಿದ್ದಾರೆ.

VISTARANEWS.COM


on

Bangladesh Unrest
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಬಾಂಗ್ಲಾದೇಶದಲ್ಲಿ ಅಶಾಂತಿ, ದಂಗೆ(Bangladesh Unrest) ಭುಗಿಲೆದ್ದಿರುವ ಹಿಂದೆ ಪಾಕಿಸ್ತಾನ(Pakistan)ದ ಕೈವಾಡ ಇದೆ ಎಂದು ನಿರ್ಗಮಿತ ಪ್ರಧಾನಿ ಶೇಖ್‌ ಹಸೀನಾ(Sheikh Hasina) ಪುತ್ರ ಸಜೀಬ್‌ ವಾಝೇದ್‌ ಹೇಳಿದ್ದಾರೆ. ಬಾಂಗ್ಲಾದೇಶದಲ್ಲಿ ತಲೆದೋರಿರುವ ಹಿಂಸಾಚಾರದ ಹಿಂದೆ ವಿದೇಶಿಗರ ಹಸ್ತಕ್ಷೇಪ ಮತ್ತು ಪಾಕ್‌ ಗುಪ್ತಚರ ಇಲಾಖೆ(ISI)ದ ಕೈವಾಡ ಇರುವುದಕ್ಕೆ ಪುರಾವೆಗಳಿವೆ ಎಂದು ಅವರು ತಿಳಿಸಿದ್ದಾರೆ.

“ಸಾಂದರ್ಭಿಕ ಪುರಾವೆಗಳಿಂದ ನನಗೆ ಕೆಲವೊಂದು ವಿಚಾರಗಳು ಖಚಿತವಾಗಿದ್ದು, ಈ ದುರ್ಘಟನೆಯಲ್ಲಿ ಪಾಕಿಸ್ತಾನದ ಐಎಸ್‌ಐ ಭಾಗಿಯಾಗಿದೆ ಎಂದು ನಾನು ಶಂಕಿಸುತ್ತೇನೆ. ದಾಳಿಗಳು ಮತ್ತು ಪ್ರತಿಭಟನೆಗಳು ಬಹಳ ಸಂಘಟಿತವಾಗಿವೆ. ಇದೊಂದು ಸಂಘಟಿತ ದಾಳಿ. ಸರ್ಕಾರ ಎಷ್ಟೇ ಪರಿಸ್ತಿತಿ ಸುಧಾರಿಸಲು ಪ್ರಯತ್ನಿಸಿದರೂ ಅದನ್ನು ಹಾಳುಗೆಡವುವ ಪ್ರಯತ್ನ ನಡೆಯುತ್ತಲೇ ಇತ್ತು ಎಂದು ಅವರು ಪಾಕಿಸ್ತಾನದ ವಿರುದ್ಧ ಬೆರಳು ಮಾಡಿ ತೋರಿಸಿದ್ದಾರೆ.

ಇನ್ನು ದಂಗೆಕೋರರು ಬಂದೂಕು ಹಿಡಿದು ದಾಳಿ ನಡೆಸುತ್ತಿದ್ದಾರೆ ಎಂದಾದರೆ ಖಂಡಿತವಾಗಿ ಅವರಿಗೆ ಉಗ್ರರಿಂದಲೇ ಬಂದೂಕು ಪೂರೈಕೆ ಆಗುತ್ತಿದೆ ಎಂದರ್ಥ ಎಂದು ಹೇಳಿದ್ದಾರೆ. ಇನ್ನು ಶೇಖ್‌ ಹಸೀನಾ ಶೀಘ್ರವೇ ದೇಶಕ್ಕೆ ಮರಳುವುದಾಗಿ ಹೇಳಿಕೆ ನೀಡಿರುವ ವಾಝೇದ್‌, ಹೌದು ಶೇಖ್‌ ಹಸೀನಾ ಅವರು ವಾಪಾಸ್‌ ಹೋಗುವುದಿಲ್ಲ ಎಂದು ನಾನು ಹೇಳಿದ್ದೆ. ಆದರೆ ಎರಡು ದಿನಗಳ ಆಗಿರುವ ಸಾಕಷ್ಟು ಬೆಳವಣಿಗೆಗಳಿಂದಾಗಿ ಅವರು ಸ್ವದೇಶಕ್ಕೆ ಮರರಳು ಚಿಂತನೆ ನಡೆಸುತ್ತಿದ್ದಾರೆ. ನಮ್ಮ ಪಕ್ಷದ ನಾಯಕರ ಮೇಲೆ ಎಗ್ಗಿಲ್ಲದೇ ದಾಳಿ ನಡೆಯುತ್ತಿವೆ. ಹೀಗಿರುವಾಗಿ ಅವರ ರಕ್ಷಣೆಗಾಗಿ ಅಲ್ಲೇ ನಿಂತು ಎಷ್ಟು ಸಾಧ್ಯವೋ ಅಂತ ಪ್ರಯತ್ನವನ್ನು ನಾವು ಮಾಡುತ್ತೇವೆ ಎಂದಿದ್ದಾರೆ.

ಪ್ರಧಾನಿ ಮೋದಿಗೆ ಧನ್ಯವಾದ

ವಾಝೇದ್‌ ಅವರು ತಮ್ಮ ತಾಯಿಯನ್ನು ರಕ್ಷಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದರು ಮತ್ತು ಬಾಂಗ್ಲಾದೇಶದಲ್ಲಿ ಪ್ರಜಾಪ್ರಭುತ್ವವನ್ನು ಪುನಃಸ್ಥಾಪಿಸಲು ಅಂತರರಾಷ್ಟ್ರೀಯ ಅಭಿಪ್ರಾಯವನ್ನು ನಿರ್ಮಿಸಲು ಮತ್ತು ಒತ್ತಡವನ್ನು ಹೇರಲು ಸಹಾಯ ಮಾಡಲು ಭಾರತಕ್ಕೆ ಮನವಿ ಮಾಡಿದರು. ನೊಬೆಲ್ ಪ್ರಶಸ್ತಿ ವಿಜೇತ ಮೊಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರವು ಕಾನೂನು ಮತ್ತು ಸುವ್ಯವಸ್ಥೆಯನ್ನು ಪುನಃಸ್ಥಾಪಿಸಲು ಜಾಯ್ ಒತ್ತಾಯಿಸಿದರು, “ದೇಶವು ಅರಾಜಕತೆಯ ಸ್ಥಿತಿಗೆ ತಿರುಗುತ್ತಿದೆ ಮತ್ತು ಈ ಪ್ರದೇಶದಲ್ಲಿ ಎರಡನೇ ಅಫ್ಘಾನಿಸ್ತಾನವಾಗುತ್ತಿದೆ ಎಂದರು.

Muhammad Yunus: ಹಿಂದುಗಳನ್ನು ಮೊದಲು ರಕ್ಷಿಸಿ; ಬಾಂಗ್ಲಾದೇಶದ ಮೊಹಮ್ಮದ್‌ ಯೂನಸ್‌ಗೆ ಮೋದಿ ಆಗ್ರಹ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿದೇಶ

Trump Assassination Bid: ಟ್ರಂಪ್‌ ಹತ್ಯೆ ಯತ್ನಕ್ಕೆ ಸಂಬಂಧ ಮತ್ತೊಂದು ವಿಡಿಯೋ ರಿಲೀಸ್‌; ಕೆಲವೇ ಕ್ಷಣಗಳಿಗೂ ಮುನ್ನ ನಡೆದಿದ್ದೇನು?

Trump Assassination Bid: ಘಟನೆ ನಡೆಯುವ ಕೆಲವೇ ಕೆಲವು ಕ್ಷಣಗಳಿಗೆ ಮುನ್ನ ನಡೆದ ಘಟನೆಯ ದೃಶ್ಯವನ್ನು ಪೆನ್ಸಿಲ್ವೇನಿಯಾದ ಪೊಲೀಸರು ಬಿಡುಗಡೆ ಮಾಡಿದ್ದು, ಗುರುವಾರ ಬಿಡುಗಡೆಯಾದ ತುಣುಕಿನಲ್ಲಿ, ಬಟ್ಲರ್ ಟೌನ್‌ಶಿಪ್ ಪೊಲೀಸ್ ಅಧಿಕಾರಿಗಳು ಡಿಪಿಎಂಎಸ್ ಎಆರ್ -15 ರೈಫಲ್‌ನೊಂದಿಗೆ ಶಸ್ತ್ರಸಜ್ಜಿತರಾಗಿದ್ದ ಆರೋಪಿ ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ನನ್ನು ತಡೆಯಲು ಪ್ರಯತ್ನಿಸಿದಾಗ ಅವರ ಹತಾಶ ಪ್ರಯತ್ನಗಳನ್ನು ಸೆರೆಹಿಡಿಯಲಾಗಿದೆ ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ.

VISTARANEWS.COM


on

trump assassination bid
Koo

ವಾಷಿಂಗ್ಟನ್:‌ ಕಳೆದ ತಿಂಗಳು ಚುನಾವಣಾ ಪ್ರಚಾರ(US Presidential Election)ದ ವೇಳೆ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌(Trump Assassination Bid) ಮೇಲೆ ನಡೆದ ಹತ್ಯೆ ಯತ್ನಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೊಂದು ವಿಡಿಯೋ ರಿಲೀಸ್‌ ಮಾಡಿದ್ದಾರೆ. ಟ್ರಂಪ್‌ ಹತ್ಯೆ ಯತ್ನವನ್ನು ಪೊಲೀಸರು ತಡೆಯುತ್ತಿರುವ ದೃಶ್ಯ ಇದಾಗಿದ್ದು, ಪೊಲೀಸರ ಮೈಮೇಲಿದ್ದ ಬಾಡಿಕ್ಯಾಮ್‌ನಲ್ಲಿ ರೆಕಾರ್ಡ್‌ ಆಗಿದೆ.

ಘಟನೆ ನಡೆಯುವ ಕೆಲವೇ ಕೆಲವು ಕ್ಷಣಗಳಿಗೆ ಮುನ್ನ ನಡೆದ ಘಟನೆಯ ದೃಶ್ಯವನ್ನು ಪೆನ್ಸಿಲ್ವೇನಿಯಾದ ಪೊಲೀಸರು ಬಿಡುಗಡೆ ಮಾಡಿದ್ದು, ಗುರುವಾರ ಬಿಡುಗಡೆಯಾದ ತುಣುಕಿನಲ್ಲಿ, ಬಟ್ಲರ್ ಟೌನ್‌ಶಿಪ್ ಪೊಲೀಸ್ ಅಧಿಕಾರಿಗಳು ಡಿಪಿಎಂಎಸ್ ಎಆರ್ -15 ರೈಫಲ್‌ನೊಂದಿಗೆ ಶಸ್ತ್ರಸಜ್ಜಿತರಾಗಿದ್ದ ಆರೋಪಿ ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ನನ್ನು ತಡೆಯಲು ಪ್ರಯತ್ನಿಸಿದಾಗ ಅವರ ಹತಾಶ ಪ್ರಯತ್ನಗಳನ್ನು ಸೆರೆಹಿಡಿಯಲಾಗಿದೆ ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ.

ಪೆನ್ಸಿಲ್ವೇನಿಯಾದ ಬೆಥೆಲ್ ಪಾರ್ಕ್‌ನಿಂದ ಕ್ರೂಕ್ಸ್, ಬಟ್ಲರ್‌ನಲ್ಲಿ ಹೊರಾಂಗಣ ರ್ಯಾಲಿಯಲ್ಲಿ ಟ್ರಂಪ್ ಮೇಲೆ ಗುಂಡು ಹಾರಿಸಿದ್ದಾನೆ. ಅದರಲ್ಲಿ ಒಂದು ಬುಲೆಟ್ ಟ್ರಂಪ್ ಕಿವಿಗೆ ತಾಗಿತು. ಬಟ್ಲರ್ ಫಾರ್ಮ್ ಶೋ ಮೈದಾನದಲ್ಲಿ ವೇದಿಕೆಯಿಂದ 130 ಗಜಗಳಷ್ಟು ದೂರದಲ್ಲಿರುವ ಉತ್ಪಾದನಾ ಘಟಕದ ಛಾವಣಿಯ ಮೇಲೆ ಕ್ರೂಕ್ಸ್ ಗನ್‌ ಸಮೇತ ಇದ್ದ ಎನ್ನಲಾಗಿದೆ. ಪೆನ್ಸಿಲ್ವೇನಿಯಾದ ಬಟ್ಲರ್ನ್‌ನಲ್ಲಿ ಶನಿವಾರ ಸಂಜೆ ನಡೆದ ರ್ಯಾಲಿ ಆಯೋಜಿಸಲಾಗಿತ್ತು. ಈ ವೇಳೆ ಈ ಗುಂಡಿನ ದಾಳಿ ನಡೆದಿದ್ದು, ಟ್ರಂಪ್ ಅವರ ಕಿವಿ ಮತ್ತು ಮುಖದ ಮೇಲೆ ರಕ್ತ ಬಂದಿದ್ದು, ಕೂಡಲೇ ಅವರನ್ನು ವೇದಿಕೆಯಿಂದ ಸ್ಥಳಾಂತರಿಸಲಾಯಿತು. ಕ್ರೂಕ್‌ನನ್ನು ಸೀಕ್ರೆಟ್‌ ಸರ್ವಿಸ್‌ ಏಜೆಂಟ್‌ ಹೊಡೆದುರುಳಿಸಿತ್ತು.

ಇನ್ನು ಕ್ರೂಕ್‌ನ ಕಾರಿನಲ್ಲಿ ಅನುಮಾನಾಸ್ಪದ ಸಾಧನ ಪತ್ತೆಯಾಗಿದೆ. ಇದು ಮೇಲ್ನೋಟಕ್ಕೆ ಸ್ಫೋಟಕ ವಸ್ತುವಿನಂತೆ ಕಾಣುತ್ತಿದ್ದು, ಬಾಂಬ್‌ ನಿಷ್ಕ್ರೀಯ ದಳ ಅದನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದೆ. ಇನ್ನು ಆತನ ಫೋನ್‌ ಅನ್ನು ಕೂಡ ವಶಕ್ಕೆ ಪಡೆಯಲಾಗಿದೆ. ಇನ್ನು ಟ್ರಂಪ್‌ ಮೇಲಿನ ದಾಳಿಗೆ ಕ್ರೂಕ್‌ ಬಳಸಿದ್ದ ಬಂದೂಕು AR ಸೆಮಿ ಅಟೋಮ್ಯಾಟಿಕ್‌ ಬಂದೂಕ್‌ ಆಗಿದ್ದು, ಇದನ್ನು ಕ್ರೂಕ್‌ನ ತಂದೆ ಕಾನೂನು ಪ್ರಕಾರ ಖರೀದಿಸಿದ್ದ ಎನ್ನಲಾಗಿದೆ.

ಪೆನ್ಸಿಲ್ವೇನಿಯಾದ ಬಟ್ಲರ್ನ್‌ನಲ್ಲಿ ಶನಿವಾರ ಸಂಜೆ ನಡೆದ ರ್ಯಾಲಿ ಆಯೋಜಿಸಲಾಗಿತ್ತು. ಈ ವೇಳೆ ಈ ಗುಂಡಿನ ದಾಳಿ ನಡೆದಿದ್ದು, ಟ್ರಂಪ್ ಅವರ ಕಿವಿ ಮತ್ತು ಮುಖದ ಮೇಲೆ ರಕ್ತ ಬಂದಿದ್ದು, ಕೂಡಲೇ ಅವರನ್ನು ವೇದಿಕೆಯಿಂದ ಸ್ಥಳಾಂತರಿಸಲಾಯಿತು. ಅಂತರರಾಷ್ಟ್ರೀಯ ಮಾಧ್ಯಮ ವರದಿಗಳ ಪ್ರಕಾರ, ಆರಂಭಿಕ ದೊಡ್ಡ ಸ್ಫೋಟದ ನಂತರ ಟ್ರಂಪ್ ಗಾಯಗೊಂಡಂತೆ ನೆಲಕ್ಕೆ ಬಿದ್ದರು. ಇನ್ನು ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.
ಇನ್ನು ತಕ್ಷಣ ಅವರನ್ನು ಭದ್ರತಾ ಸಿಬ್ಬಂದಿ ರಕ್ಷಿಸಿ ವೇದಿಕೆಯಿಂದ ಹೊರಗೆ ಕರೆದೊಯ್ಯುತ್ತಿದ್ದರು. ಇನ್ನು ಅಲ್ಲಿ ನೆರೆದಿದ್ದ ಅನೇಕ ಜನ ಗಾಬರಿಯಲ್ಲಿ ಕಿರುಚಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಟ್ರಂಪ್ ಜನಸಮೂಹದ ಕಡೆಗೆ ಕೂಗುತ್ತಿರುವಂತೆ ತೋರಿತು ಮತ್ತು ಅವರು ಆತುರದಿಂದ ಹೊರಟಾಗ ತಮ್ಮ ಮುಷ್ಟಿಯನ್ನು ಪಂಪ್ ಮಾಡುತ್ತಿರುವುದು ಕಂಡುಬಂದಿದೆ. ಟ್ರಂಪ್ ಸುರಕ್ಷಿತವಾಗಿದ್ದಾರೆ ಮತ್ತು ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿದೆ.

ಇದನ್ನೂ ಓದಿ: Asif Merchant: ಡೊನಾಲ್ಡ್‌ ಟ್ರಂಪ್‌ ಹತ್ಯೆಗೆ ಸಂಚು ರೂಪಿಸಿದ್ದ ಪಾಕಿಸ್ತಾನಿ ಪ್ರಜೆ ಅರೆಸ್ಟ್‌

Continue Reading

ಕ್ರೀಡೆ

Neeraj Chopra: ನೀರಜ್‌ ಚೋಪ್ರಾ ಜಾವೆಲಿನ್‌ ಎಸೆತದಲ್ಲಿ ಭಾರತಕ್ಕೆ ಚಿನ್ನ ಮಿಸ್‌ ಆದದ್ದು ಹೇಗೆ? ಕೋಚ್‌ ಏನ್‌ ಹೇಳ್ತಾರೆ ನೋಡಿ

Neeraj Chopra: ಭಾರತೀಯ ಸೇನೆಯಲ್ಲಿ ನಾಯ್ಕ್ ಸುಬೇದಾರ್ ಆಗಿ ಕಾರ್ಯನಿರ್ವಹಿಸುತ್ತಿರುವ ಕಾಶೀನಾಥ್ ನಾಯ್ಕ್, ಮೂಲತಃ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬೆಂಗಳೆ ಮೂಲದವರು. 2010ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಜಾವೆಲಿನ್‌ ಎಸೆತದಲ್ಲಿ ಕಾಶೀನಾಥ್ ನಾಯ್ಕ್ ಕಂಚಿನ ಪದಕ ಗೆದ್ದವರು.

VISTARANEWS.COM


on

neeraj chopra kashinath naik 1
ಕೋಚ್‌ ಕಾಶಿನಾಥ್‌ ನಾಯ್ಕ್‌ ಜೊತೆಗೆ ನೀರಜ್‌ ಚೋಪ್ರಾ
Koo

ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ (Paris Olympics) ನಿನ್ನೆ ರಾತ್ರಿ ನಡೆದ ಜಾವೆಲಿನ್‌ ಎಸೆತ (Javelin throw) ಪಂದ್ಯದಲ್ಲಿ ಭಾರತಕ್ಕೆ ಬೆಳ್ಳಿಯ ಪದಕ (Silver medal) ಗೆದ್ದುಕೊಟ್ಟಿದ್ದಾರೆ ಬಂಗಾರದ ಹುಡುಗ ನೀರಜ್ ಚೋಪ್ರಾ (Neeraj Chopra). ಚಿನ್ನದ ಪದಕವನ್ನೇ ಗೆದ್ದು ತರುತ್ತಾರೆ ಎಂಬ ನಿರೀಕ್ಷೆಯಿತ್ತು. ಆದರೆ ಅದು ಕೈತಪ್ಪಿತು. ಯಾಕೆ ಹೀಗಾಯ್ತು? ಇದಕ್ಕೆ ನೀರಜ್ ಚೋಪ್ರಾ ಅವರ ಕೋಚ್‌ (Coach) ಕಾಶೀನಾಥ್ ನಾಯ್ಕ್ (Kashinath Naik) ನೀಡಿದ ಕಾರಣ ಇಲ್ಲಿದೆ.

ಭಾರತೀಯ ಸೇನೆಯಲ್ಲಿ ನಾಯ್ಕ್ ಸುಬೇದಾರ್ ಆಗಿ ಕಾರ್ಯನಿರ್ವಹಿಸುತ್ತಿರುವ ಕಾಶೀನಾಥ್ ನಾಯ್ಕ್, ಮೂಲತಃ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬೆಂಗಳೆ ಮೂಲದವರು. 2010ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಜಾವೆಲಿನ್‌ ಎಸೆತದಲ್ಲಿ ಕಾಶೀನಾಥ್ ನಾಯ್ಕ್ ಕಂಚಿನ ಪದಕ ಗೆದ್ದವರು.

ʼನೀರಜ್ ಚೋಪ್ರಾ ಸತತ ಎರಡನೇ ಬಾರಿ ಒಲಿಂಪಿಕ್ಸ್ ಪದಕ ಗೆಲ್ಲುತ್ತಿರೋದಕ್ಕೆ ಸಂತಸವಾಗಿದೆ. ಆದರೆ ಈ ಬಾರಿ ಚಿನ್ನ ಗೆಲ್ಲೋದಕ್ಕೆ ಸಾಧ್ಯವಾಗಿಲ್ಲ ಅನ್ನೋ ಬೇಸರವೂ ಇದೆ. ನೀರಜ್ ಚೋಪ್ರಾ ಅತ್ಯುತ್ತಮ ಎಸೆತವನ್ನೇ ಎಸೆದಿದ್ದಾರೆ. ಆದರೆ ಪಾಕಿಸ್ತಾನದ ಅರ್ಷದ್ ನದೀಮ್ ಇನ್ನಷ್ಟು ಅತ್ಯುತ್ತಮ ಎಸೆತವನ್ನು ಎಸೆದಿದ್ದಾರೆ. ನೀರಜ್‌ ತನ್ನ ಮೊದಲ ಎಸೆತದಲ್ಲಿ ಪೌಲ್‌ ಆಗಿದ್ದು ಬೆಳ್ಳಿ ಪದಕ ಬರುವುದಕ್ಕೆ ಕಾರಣವಾಯಿತುʼ ಎಂದು ಕಾಶೀನಾಥ್‌ ವಿವರಿಸಿದ್ದಾರೆ.

ಕೋಚ್‌ ಕಾಶಿನಾಥ ನಾಯ್ಕ್‌

2022ರ ಕಾಮನ್ ವೇಲ್ತ್ ಗೇಮ್ಸ್ ಬಳಿಕ ಅರ್ಷದ್ ನದೀಮ್ ಗಾಯದ ಸಮಸ್ಯೆಗೊಳಗಾಗಿದ್ದರು. ಗಾಯದಿಂದ ವಾಪಸಾದ ಬಳಿಕವೂ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ. ಪ್ಯಾರಿಸ್ ಒಲಿಂಪಿಕ್ಸ್ ಅರ್ಹತಾ ಸುತ್ತಿನಲ್ಲಿಯೂ 88 ಮೀಟರ್ ಎಸೆದಿದ್ರು. ಆದ್ರೆ ನೀರಜ್ ತನ್ನ ಮೊದಲ ಎಸೆತದಲ್ಲಿ ಪೌಲ್ ಆಗಿದ್ದು ಅವರಿಗೆ ಧೈರ್ಯ ತುಂಬಿತು. ಒಂದು ವೇಳೆ ನೀರಜ್ ತನ್ನ ಮೊದಲ ಎಸೆತದಲ್ಲಿ 88, 89 ಮೀಟರ್ ಎಸೆದಿದ್ರೆ ಆತ ನರ್ವಸ್ ಆಗಿಬಿಡುತ್ತಿದ್ದ. ನೀರಜ್ ಮೊದಲ ಎಸೆತ ಫೌಲ್ ಆಗಿದ್ರಿಂದಲೇ ಆತನ ಆತ್ಮವಿಶ್ವಾಸ ಹೆಚ್ಚಾಯ್ತು ಎಂದು ಕಾಶೀನಾಥ್‌ ಹೇಳಿದ್ದಾರೆ.

ಯಾವಾಗಲೂ ನೀರಜ್ ತನ್ನ ಮೊದಲ ಎಸೆತದಲ್ಲಿ 88, 89 ಮೀಟರ್ ಎಸೆಯುತ್ತಿದ್ದ. ಆದರೆ ಈ ಬಾರಿ ಪೌಲ್ ಆಗಿದ್ದು ಅರ್ಷದ್ ನದೀಮ್‌ಗೆ ವರವಾಯ್ತು. ನದೀಮ್ ಒಲಿಂಪಿಕ್ಸ್ ರೆಕಾರ್ಡ್ಸ್ ಮಾಡುತ್ತಿದ್ದಂತೆ ನೀರಜ್ ನರ್ವಸ್ ಆಗಿಬಿಟ್ಟ. ಆದರೂ ನೀರಜ್ ತನ್ನ ಸಾಮರ್ಥ್ಯ ಮೀರಿ ಪ್ರಯತ್ನ ಮಾಡಿದ್ದಾನೆ. ಅಥ್ಲೆಟಿಕ್ಸ್‌ನಲ್ಲಿ ಸತತ ಎರಡನೇ ಪದಕ ಗೆದ್ದು ಸಾಧನೆ ಮಾಡಿದ್ದಾನೆ. ಇದು ನಿಜಕ್ಕೂ ದೊಡ್ಡ ಸಾಧನೆ ಎಂದು ತಮ್ಮ ಶಿಷ್ಯನನ್ನು ಕಾಶೀನಾಥ್ ನಾಯ್ಕ ಶ್ಲಾಘಿಸಿದ್ದಾರೆ.

ಪೌಲ್‌ ಮಾಡಿದ ನೀರಜ್

ನೀರಜ್​ ಚೋಪ್ರಾ ಅವರ ಮೊದಲ ಎಸೆತವೇ ಪೌಲ್​. ಹೀಗಾಗಿ ನಿರಾಸೆಯ ಆರಂಭವಾಯಿತು. ನಂತರದ ಎಸೆತದಲ್ಲಿ 89.45 ಮೀಟರ್ ದೂರ ಎಸೆದರು. ಅಲ್ಲದೆ ಆ ಬಳಿಕದ ನಾಲ್ಕು ಎಸೆತಗಳು ಪೌಲ್​ ಆದವು. ತಮ್ಮ ಎಸೆತಗಳು ನಿರೀಕ್ಷೆಯಷ್ಟು ದೂರ ಹೋಗದ ಕಾರಣ ನಂತರದ ಮೂರು ಬಾರಿ ಅವರು ಅಂತಿಮ ಲೈನ್ ಮೆಟ್ಟಿ ಸ್ವತಃ ಪೌಲ್ ಮಾಡಿದರು. ಅರ್ಷದ್​ 92. ಮೀಟರ್​ಗಿಂತಲೂ ದೂರ ಎಸೆದ ತಕ್ಷಣವೇ ಒತ್ತಡಕ್ಕೆ ಬಿದ್ದ ನೀರಜ್​ಗೆ ಚೇತರಿಸಿಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ. ಆದರೆ, ಅರ್ಷದ್​ ತಮ್ಮ ಕೊನೇ ಎಸೆತವನ್ನೂ 91. 79 ಮೀಟರ್ ದೂರ ಎಸೆದರು. ಅಂದ ಹಾಗೆ ಪಾಕಿಸ್ತಾನಕ್ಕೆ 32 ವರ್ಷಗಳ ಬಳಿಕ ಒಲಿಂಪಿಕ್ಸ್​ನಲ್ಲಿ ಪದಕವೊಂದು ದೊರಕಿತು. ಅದೂ ಚಿನ್ನ!

ಇದನ್ನೂ ಓದಿ: Neeraj Chopra : ನೀರಜ್​ ಚೋಪ್ರಾಗೆ ರಜತ ಪದಕ; ಪಾಕಿಸ್ತಾನದ ನದೀಮ್​ಗೆ ಒಲಿಂಪಿಕ್​ ದಾಖಲೆಯ ಬಂಗಾರ

Continue Reading

ದೇಶ

Muhammad Yunus: ಹಿಂದುಗಳನ್ನು ಮೊದಲು ರಕ್ಷಿಸಿ; ಬಾಂಗ್ಲಾದೇಶದ ಮೊಹಮ್ಮದ್‌ ಯೂನಸ್‌ಗೆ ಮೋದಿ ಆಗ್ರಹ

Muhammad Yunus: ಬಾಂಗ್ಲಾದೇಶದಲ್ಲಿ ಹಿಂಸಾಚಾರ ಆರಂಭವಾದ ಬಳಿಕ ದೇವಾಲಯಗಳು ಸೇರಿ 97ಕ್ಕೂ ಹಿಂದು ಸ್ಥಳಗಳ ಮೇಲೆ ದಾಳಿ ಇಸ್ಲಾಮಿಕ್‌ ಮೂಲಭೂತವಾದಿಗಳು ದಾಳಿ ನಡೆಸಿದ್ದಾರೆ. ಹಿಂದುಗಳನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಳ್ಳುವುದು, ಹಿಂದು ಮಹಿಳೆಯರ ಮೇಲೆ ದೌರ್ಜನ್ಯ ಎಸಗುವುದು ಸೇರಿ ಹಲವು ರೀತಿಯಲ್ಲಿ ದಾಳಿ ನಡೆಸಲಾಗಿದೆ. ಹಾಗಾಗಿ, ಮೋದಿ ಅವರು ಹಿಂದುಗಳನ್ನು ರಕ್ಷಿಸಿ ಎಂದು ಮೊಹಮ್ಮದ್‌ ಯೂನಸ್‌ ಅವರಿಗೆ ಮೋದಿ ಮನವಿ ಮಾಡಿದ್ದಾರೆ.

VISTARANEWS.COM


on

Muhammad Yunus
Koo

ಢಾಕಾ: ಆಂತರಿಕ ದಂಗೆ, ಪ್ರತಿಭಟನೆ ಹಾಗೂ ಹಿಂಸಾಚಾರದ ಹಿನ್ನೆಲೆಯಲ್ಲಿ ಶೇಖ್‌ ಹಸೀನಾ (Sheikh Hasina) ಅವರು ರಾಜೀನಾಮೆ ನೀಡಿ, ದೇಶ ತೊರೆದ ಬೆನ್ನಲ್ಲೇ ಬಾಂಗ್ಲಾದೇಶದಲ್ಲಿ (Bangladesh) ಹಂಗಾಮಿ ಸರ್ಕಾರ ರಚನೆಯಾಗಿದೆ. ಹಂಗಾಮಿ ಸರ್ಕಾರದ ಮುಖ್ಯಸ್ಥರಾಗಿ ನೊಬೆಲ್‌ ಶಾಂತಿ ಪುರಸ್ಕೃತ ಮೊಹಮ್ಮದ್‌ ಯೂನಸ್‌ (Muhammad Yunus) ಅವರು ಪದಗ್ರಹಣ ಮಾಡಿದ್ದಾರೆ. ಇನ್ನು, ಮೊಹಮ್ಮದ್‌ ಯೂನಸ್‌ ಅವರಿಗೆ ಅಭಿನಂದನೆ ಸಲ್ಲಿಸಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು, ದೇಶದಲ್ಲಿ ಹಿಂದುಗಳನ್ನು ರಕ್ಷಿಸಿ ಎಂದು ಕೂಡ ಮನವಿ ಮಾಡಿದ್ದಾರೆ.

“ನೂತನ ಜವಾಬ್ದಾರಿ ವಹಿಸಿಕೊಂಡಿರುವ ಪ್ರೊಫೆಸರ್‌ ಮೊಹಮ್ಮದ್‌ ಯೂನಸ್‌ ಅವರಿಗೆ ಶುಭಾಶಯಗಳು. ಬಾಂಗ್ಲಾದೇಶದಲ್ಲಿ ಎಲ್ಲವೂ ಸಹಜಸ್ಥಿತಿಗೆ ಬರಲಿದೆ ಎಂಬ ವಿಶ್ವಾಸವಿದೆ. ಹಾಗೆಯೇ, ಹಿಂದುಗಳು ಸೇರಿ ಎಲ್ಲ ಅಲ್ಪಸಂಖ್ಯಾತರಿಗೆ ರಕ್ಷಣೆ ಒದಗಿಸುತ್ತೀರಿ ಎಂಬ ನಂಭಿಕೆ ಇದೆ. ಉಭಯ ದೇಶಗಳ ಶಾಂತಿ, ಭದ್ರತೆ ಹಾಗೂ ಅಭಿವೃದ್ಧಿಯ ಕುರಿತು ಮುಂದಿನ ದಿನಗಳಲ್ಲೂ ಭಾರತದ ಸಹಕಾರ ಇರಲಿದೆ” ಎಂಬುದಾಗಿ ನರೇಂದ್ರ ಮೋದಿ ಪೋಸ್ಟ್‌ ಮಾಡಿದ್ದಾರೆ.

ಬಾಂಗ್ಲಾದೇಶದಲ್ಲಿ ಹಿಂಸಾಚಾರ ಆರಂಭವಾದ ಬಳಿಕ ದೇವಾಲಯಗಳು ಸೇರಿ 97ಕ್ಕೂ ಹಿಂದು ಸ್ಥಳಗಳ ಮೇಲೆ ದಾಳಿ ಇಸ್ಲಾಮಿಕ್‌ ಮೂಲಭೂತವಾದಿಗಳು ದಾಳಿ ನಡೆಸಿದ್ದಾರೆ. ಹಿಂದುಗಳನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಳ್ಳುವುದು, ಹಿಂದು ಮಹಿಳೆಯರ ಮೇಲೆ ದೌರ್ಜನ್ಯ ಎಸಗುವುದು ಸೇರಿ ಹಲವು ರೀತಿಯಲ್ಲಿ ದಾಳಿ ನಡೆಸಲಾಗಿದೆ. ಇದಕ್ಕೆಲ್ಲ ಗಲ್ಫ್‌ ದೇಶಗಳು ಬಾಂಗ್ಲಾದೇಶದ ಮೂಲಭೂತವಾದಿಗಳು ನೀಡುತ್ತಿರುವ ಹಣವೇ ಕಾರಣ ಎಂದು ಗುಪ್ತಚರ ಮೂಲಗಳು ತಿಳಿಸಿವೆ. ಹಾಗಾಗಿ, ಮೋದಿ ಅವರು ಹಿಂದುಗಳ ರಕ್ಷಣೆಗೆ ಆದ್ಯತೆ ನೀಡಿ ಎಂದು ಕೋರಿದ್ದಾರೆ.

ಮೊಹಮ್ಮದ್‌ ಯೂನಸ್‌ ಅವರೊಂದಿಗೆ 15 ಸಲಹೆಗಾರರು ಕೂಡ ಪ್ರಮಾಣವಚನ ಸ್ವೀಕರಿಸಿದ್ದಾರೆ ಎಂದು ತಿಳಿದುಬಂದಿದೆ. ಇನ್ನು, ಬಾಂಗ್ಲಾದೇಶದಲ್ಲಿ ಹೊಸದಾಗಿ ಚುನಾವಣೆ ನಡೆದು, ನೂತನ ಸರ್ಕಾರ ಅಸ್ತಿತ್ವಕ್ಕೆ ಬರುವವರೆಗೆ ಮೊಹಮ್ಮದ್‌ ಯೂನಸ್‌ ಅವರೇ ಹಂಗಾಮಿ ಪ್ರಧಾನಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಇವರಿಗೆ ಬಾಂಗ್ಲಾದೇಶ ನ್ಯಾಷನಲ್‌ ಪಾರ್ಟಿ (BNP) ಬೆಂಬಲವಿದೆ. ಇದರೊಂದಿಗೆ ಬಾಂಗ್ಲಾದೇಶದಲ್ಲಿ ಶೇಖ್‌ ಹಸೀನಾ ಅವರ ಆಡಳಿತ ಅಂತ್ಯವಾಗಿ, ಮೊಹಮ್ಮದ್‌ ಯೂನಸ್‌ ಅವರ ಆಡಳಿತ ಜಾರಿಗೆ ಬಂದಿದೆ. ಶೇಖ್‌ ಹಸೀನಾ ಅವರು 15 ವರ್ಷ ಪ್ರಧಾನಿಯಾಗಿದ್ದರು. ಸದ್ಯ ಅವರು ಭಾರತದಲ್ಲಿ ಆಶ್ರಯ ಪಡೆದಿದ್ದಾರೆ.

83 ವರ್ಷದ ಮುಹಮ್ಮದ್ ಯೂನಸ್ ಅವರು ಶೇಖ್‌ ಹಸೀನಾ ಅವರ ಪ್ರಮುಖ ಟೀಕಾಕಾರರು ಮತ್ತು ರಾಜಕೀಯ ವಿರೋಧಿಯೂ ಆಗಿದ್ದಾರೆ. ಅರ್ಥಶಾಸ್ತ್ರಜ್ಞರು ಆಗಿರುವ ಯೂನಸ್ 2006ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಬಡ ವ್ಯಕ್ತಿಗಳಿಗೆ, ವಿಶೇಷವಾಗಿ ಮಹಿಳೆಯರಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿರುವ ಮೈಕ್ರೋಕ್ರೆಡಿಟ್‌ನೊಂದಿಗೆ ಅವರ ಅದ್ಭುತ ಕೆಲಸಕ್ಕಾಗಿ ನೊಬೆಲ್ ಸಮಿತಿಯು ಯೂನಸ್ ಮತ್ತು ಅವರ ಗ್ರಾಮೀಣ ಬ್ಯಾಂಕ್ ಅನ್ನು ಗುರುತಿಸಿದೆ. ತಳಮಟ್ಟದಿಂದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯನ್ನು ಉತ್ತೇಜಿಸುವ ಅವರ ಕಾರ್ಯವನ್ನು ಗೌರವಿಸುವ ಸಲುವಾಗಿ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಇದನ್ನೂ ಓದಿ: Muhammad Yunus: ಬಾಂಗ್ಲಾ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಮೊಹಮ್ಮದ್‌ ಯೂನಸ್‌ ಪದಗ್ರಹಣ!

Continue Reading

ಪ್ರಮುಖ ಸುದ್ದಿ

Muhammad Yunus: ಬಾಂಗ್ಲಾ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಮೊಹಮ್ಮದ್‌ ಯೂನಸ್‌ ಪದಗ್ರಹಣ!

Muhammad Yunus: ಬಾಂಗ್ಲಾದಲ್ಲಿ ಹೊಸದಾಗಿ ಚುನಾವಣೆ ಆಯೋಜಿಸುವವರೆಗೆ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಮೊಹಮ್ಮದ್ ಯೂನಸ್ ಹಂಗಾಮಿ ಪ್ರಧಾನಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. 83 ವರ್ಷದ ಮೊಹಮ್ಮದ್ ಯೂನಸ್ ಅವರು ಶೇಖ್‌ ಹಸೀನಾ ಅವರ ಪ್ರಮುಖ ಟೀಕಾಕಾರರು ಮತ್ತು ರಾಜಕೀಯ ವಿರೋಧಿಯೂ ಆಗಿದ್ದಾರೆ. ಅರ್ಥಶಾಸ್ತ್ರಜ್ಞರು ಆಗಿರುವ ಯೂನಸ್ 2006ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಇವರು ಇಂದು ಬಾಂಗ್ಲಾದೇಶದ ಹಂಗಾಮಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

VISTARANEWS.COM


on

Muhammad Yunus
Koo

ಢಾಕಾ: ಮೀಸಲಾತಿ ವಿವಾದದ ಹಿನ್ನೆಲೆಯಲ್ಲಿ ಶೇಖ್‌ ಹಸೀನಾ (Sheikh Hasina) ವಿರುದ್ಧ ಬಾಂಗ್ಲಾದೇಶದಲ್ಲಿ ನಿರಂತರ (Bangladesh Unrest) ಪ್ರತಿಭಟನೆ, ಹಿಂಸಾಚಾರದ ಬಳಿಕ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ, ಶೇಖ್‌ ಹಸೀನಾ ದೇಶ ತೊರೆದ ಬೆನ್ನಲ್ಲೇ, ನೊಬೆಲ್‌ ಶಾಂತಿ ಪುರಸ್ಕೃತ ಮೊಹಮ್ಮದ್‌ ಯೂನಸ್‌ (Muhammad Yunus ) ಅವರು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಪ್ಯಾರಿಸ್‌ನಿಂದ ಗುರುವಾರ (ಆಗಸ್ಟ್‌ 8) ಢಾಕಾಗೆ ಆಗಮಿಸಿದ ಅವರು ಸರ್ಕಾರದ ಹಂಗಾಮಿ ಮುಖ್ಯಸ್ಥರಾಗಿ ಪ್ರಮಾಣವಚನ ಸ್ವೀಕರಿಸಿದರು.

ಮೊಹಮ್ಮದ್‌ ಯೂನಸ್‌ ಅವರೊಂದಿಗೆ 15 ಸಲಹೆಗಾರರು ಕೂಡ ಪ್ರಮಾಣವಚನ ಸ್ವೀಕರಿಸಿದ್ದಾರೆ ಎಂದು ತಿಳಿದುಬಂದಿದೆ. ಇನ್ನು, ಬಾಂಗ್ಲಾದೇಶದಲ್ಲಿ ಹೊಸದಾಗಿ ಚುನಾವಣೆ ನಡೆದು, ನೂತನ ಸರ್ಕಾರ ಅಸ್ತಿತ್ವಕ್ಕೆ ಬರುವವರೆಗೆ ಮೊಹಮ್ಮದ್‌ ಯೂನಸ್‌ ಅವರೇ ಹಂಗಾಮಿ ಪ್ರಧಾನಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಇವರಿಗೆ ಬಾಂಗ್ಲಾದೇಶ ನ್ಯಾಷನಲ್‌ ಪಾರ್ಟಿ (BNP) ಬೆಂಬಲವಿದೆ. ಇದರೊಂದಿಗೆ ಬಾಂಗ್ಲಾದೇಶದಲ್ಲಿ ಶೇಖ್‌ ಹಸೀನಾ ಅವರ ಆಡಳಿತ ಅಂತ್ಯವಾಗಿ, ಮೊಹಮ್ಮದ್‌ ಯೂನಸ್‌ ಅವರ ಆಡಳಿತ ಜಾರಿಗೆ ಬಂದಿದೆ. ಶೇಖ್‌ ಹಸೀನಾ ಅವರು 15 ವರ್ಷ ಪ್ರಧಾನಿಯಾಗಿದ್ದರು. ಸದ್ಯ ಅವರು ಭಾರತದಲ್ಲಿ ಆಶ್ರಯ ಪಡೆದಿದ್ದಾರೆ.

ಮಹಮ್ಮದ್ ಯೂನಸ್ ಹಿನ್ನೆಲೆ ಏನು?

83 ವರ್ಷದ ಮುಹಮ್ಮದ್ ಯೂನಸ್ ಅವರು ಶೇಖ್‌ ಹಸೀನಾ ಅವರ ಪ್ರಮುಖ ಟೀಕಾಕಾರರು ಮತ್ತು ರಾಜಕೀಯ ವಿರೋಧಿಯೂ ಆಗಿದ್ದಾರೆ. ಅರ್ಥಶಾಸ್ತ್ರಜ್ಞರು ಆಗಿರುವ ಯೂನಸ್ 2006ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಬಡ ವ್ಯಕ್ತಿಗಳಿಗೆ, ವಿಶೇಷವಾಗಿ ಮಹಿಳೆಯರಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿರುವ ಮೈಕ್ರೋಕ್ರೆಡಿಟ್‌ನೊಂದಿಗೆ ಅವರ ಅದ್ಭುತ ಕೆಲಸಕ್ಕಾಗಿ ನೊಬೆಲ್ ಸಮಿತಿಯು ಯೂನಸ್ ಮತ್ತು ಅವರ ಗ್ರಾಮೀಣ ಬ್ಯಾಂಕ್ ಅನ್ನು ಗುರುತಿಸಿದೆ. ತಳಮಟ್ಟದಿಂದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯನ್ನು ಉತ್ತೇಜಿಸುವ ಅವರ ಕಾರ್ಯವನ್ನು ಗೌರವಿಸುವ ಸಲುವಾಗಿ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಮೋದಿ ಅಭಿನಂದನೆ

ಸಾಂಪ್ರದಾಯಿಕ ಸಾಲಕ್ಕೆ ಸಾಮಾನ್ಯವಾಗಿ ಅನರ್ಹರಾಗಿರುವ ಉದ್ಯಮಿಗಳಿಗೆ ಕಿರು ಸಾಲಗಳನ್ನು ನೀಡಲು ಯೂನಸ್ 1983ರಲ್ಲಿ ಗ್ರಾಮೀಣ ಬ್ಯಾಂಕ್ ಅನ್ನು ಸ್ಥಾಪಿಸಿದರು. ಬಡತನವನ್ನು ನಿವಾರಿಸುವಲ್ಲಿ ಬ್ಯಾಂಕಿನ ಯಶಸ್ಸು ಜಾಗತಿಕವಾಗಿ ಇದೇ ರೀತಿಯ ಕಿರುಬಂಡವಾಳ ಉಪಕ್ರಮಗಳನ್ನು ಪ್ರೇರೇಪಿಸಿತು.

1940ರಲ್ಲಿ ಬಾಂಗ್ಲಾದೇಶದ ಬಂದರು ನಗರವಾದ ಚಿತ್ತಗಾಂಗ್‌ನಲ್ಲಿ ಜನಿಸಿದ ಯೂನಸ್ ಅವರು ಅಮೆರಿಕದ ವಂಡೆರ್‌ಬಿಲ್ಟ್ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಗಳಿಸಿದ್ದಾರೆ. ಅನಂತರ ಅವರು ಬಾಂಗ್ಲಾದೇಶಕ್ಕೆ ಮರಳಿದರು. ಬಿದಿರಿನ ಕುರ್ಚಿ ನೇಯುತ್ತಿದ್ದ ಬಡ ಮಹಿಳೆಯೊಬ್ಬರು ಪಡೆದ ಸಾಲವನ್ನು ಮರುಪಾವತಿಸಲು ಹೆಣಗಾಡುತ್ತಿದ್ದುದು ಯುನಸ್‌ ಅವರ ಗಮನ ಸೆಳೆದು ಅದು ಅವರಿಗೆ ಕಿರು ಸಾಲ ಯೋಜನೆ ರೂಪಿಸಲು ಪ್ರೇರೇಪಿಸಿತು. ಮುಂದೆ ಇದು ಗ್ರಾಮೀಣ ಬ್ಯಾಂಕ್ ಸ್ಥಾಪಿಸಬೇಕು ಎನ್ನುವ ಚಿಂತನೆ ಮೂಡಿಸಿತು ಎಂದು ಯೂನಸ್ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಇದನ್ನೂ ಓದಿ: Bangladesh Unrest: ಬಾಂಗ್ಲಾ ಹಿಂಸಾಚಾರ; ಬಹುರಾಷ್ಟ್ರೀಯ ಕಂಪನಿಗಳು ತತ್ತರ; ಭಾರತದ ಉದ್ಯಮಗಳ ಮೇಲೇನು ಪರಿಣಾಮ?

Continue Reading
Advertisement
Actor Yash called the actor that if you grow beyond all of us dance karnataka dance
ಸ್ಯಾಂಡಲ್ ವುಡ್3 mins ago

Actor Yash: ನಮ್ಮನ್ನೆಲ್ಲ ಮೀರಿಸಿ ನೀವು ಬೆಳೆದರೆ ಅದೇ ನಮಗೆ ನೀವು ಕೊಡುವ ಗೌರವ ಎಂದು ನಟನಿಗೆ ಕರೆ ಮಾಡಿದ ‘ರಾಕಿಂಗ್ ಸ್ಟಾರ್’ ಯಶ್!

bangalore traffic signal
ಪ್ರಮುಖ ಸುದ್ದಿ5 mins ago

Bangalore Traffic: ಬೆಂಗಳೂರಿನ ಟ್ರಾಫಿಕ್‌ ಸಿಗ್ನಲ್‌ನಲ್ಲಿ 15 ನಿಮಿಷ ನಿಲ್ಲೋ ಪರಿಸ್ಥಿತಿ ಬರಲಿದೆ, ಎಚ್ಚರ!

Vinesh Phogat
ಕ್ರೀಡೆ23 mins ago

Vinesh Phogat: ಕೆಲವೇ ಗಂಟೆಗಳಲ್ಲಿ ವಿನೇಶ್ ಫೋಗಟ್​ ಬೆಳ್ಳಿ ಪದಕದ ತೀರ್ಪು ಪ್ರಕಟ

Manish Sisodia
ದೇಶ33 mins ago

Manish Sisodia: ದೆಹಲಿ ಅಬಕಾರಿ ನೀತಿ ಅಕ್ರಮ: ಮನೀಶ್‌ ಸಿಸೋಡಿಯಾಗೆ ಜಾಮೀನು

Antim Panghal
ಕ್ರೀಡೆ58 mins ago

Antim Panghal: 3 ವರ್ಷ ನಿಷೇಧ ಶಿಕ್ಷೆಯಿಂದ ಪಾರಾದ ಕುಸ್ತಿಪಟು ಅಂತಿಮ್‌ ಪಂಘಲ್‌

train service
ಹಾಸನ59 mins ago

Train services: ಎಡಕುಮೇರಿಯಲ್ಲಿ ದುರಸ್ಥಿ ಪೂರ್ಣ; ರೈಲುಗಳ ಪುನರ್‌ ಆರಂಭವಾದರೂ ವೇಗದ ಮಿತಿಗೆ ನಿರ್ಬಂಧ

ದೇಶ59 mins ago

Kangana v/s Rahul Gandhi: ರಾಹುಲ್‌ ಗಾಂಧಿಯ ತಿರುಚಿದ ಫೊಟೋ ಶೇರ್‌; ಕಂಗನಾ ವಿರುದ್ಧ ಮಾನನಷ್ಟ ಮೊಕದ್ದಮೆ

ಪ್ರಮುಖ ಸುದ್ದಿ2 hours ago

CM Siddaramaiah: ಮೈಸೂರು ಜನಾಂದೋಲನ ಸಮಾವೇಶ ಸ್ಥಳಕ್ಕೆ ಆಗಮಿಸುತ್ತಿರುವ ಕಾಂಗ್ರೆಸ್‌ ಪಡೆ; ಲೈವ್‌ ಇಲ್ಲಿದೆ ವೀಕ್ಷಿಸಿ

Laapataa Ladies to be screened in Supreme Court
ಬಾಲಿವುಡ್2 hours ago

Laapataa Ladies: ಇಂದು ಸುಪ್ರೀಂ ಕೋರ್ಟ್‌ನಲ್ಲಿ ಪ್ರದರ್ಶನಗೊಳ್ಳುತ್ತಿದೆ ‘ಲಾಪತಾ ಲೇಡೀಸ್’!

Vinesh Phogat
ಕ್ರೀಡೆ2 hours ago

Vinesh Phogat: ಒಲಿಂಪಿಕ್ಸ್​ ಆರಂಭಕ್ಕೂ ಮುನ್ನವೇ ಪಿತೂರಿಯ ಬಗ್ಗೆ ಗಂಭೀರ ಆರೋಪ ಮಾಡಿದ್ದ ವಿನೇಶ್​; ವೈರಲ್​ ಟ್ವೀಟ್​ ಇಲ್ಲಿದೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ19 hours ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ21 hours ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ22 hours ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು3 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ3 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ5 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ6 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ1 week ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 week ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 week ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌