ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರುಗತಿಯಲ್ಲಿರುವುದರಿಂದ ಬರೀ ಭಾರತದಲ್ಲಿ ಅಷ್ಟೇ ಅಲ್ಲ, ಯುಎಸ್ ಸೇರಿ ಬಹುತೇಕ ರಾಷ್ಟ್ರಗಳಲ್ಲಿ ಪೆಟ್ರೋಲ್-ಡೀಸೆಲ್-ಗ್ಯಾಸ್ ಬೆಲೆ ಸಹಜವಾಗಿಯೇ ಹೆಚ್ಚಿದೆ. ಇಂಧನಗಳ ಏರಿಕೆ ಬಗ್ಗೆ ಅಲವತ್ತುಕೊಳ್ಳುತ್ತಲೇ ವಾಹನ ಸವಾರರು ತಮ್ಮ ವಾಹನಗಳನ್ನು ಓಡಿಸುತ್ತಿದ್ದಾರೆ. ಇನ್ನು ತೀರ ಹೊರೆಯಾಗುತ್ತಿದೆ ಎನ್ನಿಸಿದವರಷ್ಟೇ ಸ್ವಂತ ವಾಹನವನ್ನು ಬದಿಗಿಟ್ಟು, ಬಸ್-ಮೆಟ್ರೋದಂಥ ಸರ್ಕಾರಿ ವಾಹನಗಳ ಮೊರೆ ಹೋಗಿದ್ದಾರೆ. ಆದರೆ ಯುಎಸ್ನಲ್ಲಿ ಒಬ್ಬ ಯುವಕ ಒಂದು ವಿಭಿನ್ನ ಹೆಜ್ಜೆ ಇಟ್ಟಿದ್ದಾನೆ. ಬಿಯರ್ ಚಾಲಿತ ಬೈಕ್ ನ್ನು (Beer Powered Motorcycle) ಅಭಿವೃದ್ಧಿ ಪಡಿಸಿದ್ದಾನೆ. ಇದು ಆತನ ಅಸಹಜ ಸಂಶೋಧನೆ ಎನ್ನಿಸಿದೆ.
ಅಮೆರಿಕದ ಈ ಯುವಕನ ಹೆಸರು ಕೆ.ವೈ. ಮೈಕೆಲ್ಸನ್. ಹಿಂದೆಯೂ ಕೂಡ ಕೆಲವ ವಿಚಿತ್ರ ಅನ್ವೇಷಣೆಗಳಿಂದ ಹೆಸರು ಮಾಡಿದ್ದಾನೆ. ಆದರೆ ಸದ್ಯಕ್ಕಂತೂ ಆತನ ಬಿಯರ್ ಚಾಲಿತ ಬೈಕ್ನ ವಿಡಿಯೊ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಬೈಕ್ನಲ್ಲಿ ಅನಿಲ ಚಾಲಿತ ಎಂಜಿನ್ ಇಲ್ಲ. ಅದರ ಬದಲಿಗೆ ಉಷ್ಣತಾ ಕಾಯ್ಲ್ (ಹೀಟಿಂಗ್ ಕಾಯ್ಲ್) ಇದೆ. ಬಿಯರ್ನ್ನ ಬೈಕ್ಗೆ ಹಾಕಿದಾಗ ಈ ಕಾಯ್ಲ್ ಅದನ್ನು ಬಿಸಿ ಮಾಡುತ್ತದೆ. ಸುಮಾರು 300 ಡಿಗ್ರಿವರೆಗೂ ಬಿಯರ್ ಬಿಸಿಯಾಗುತ್ತದೆ. ಬೈಕ್ ಚಲಿಸಲು ಇದು ಸಹಕಾರಿಯಾಗಿದೆ. ಕೆ.ವೈ. ಮೈಕೆಲ್ಸನ್ ತನ್ನ ಬ್ಲೂಮಿಂಗ್ಟನ್ನಲ್ಲಿರುವ ಗ್ಯಾರೇಜ್ನಲ್ಲಿ ಈ ಬೈಕ್ನ್ನು ಅಭಿವೃದ್ಧಿ ಪಡಿಸಿದ್ದು ವಿಡಿಯೋದಲ್ಲಿ ನೋಡಬಹುದು. ಆ ಬೈಕ್ ಮುಂಭಾಗದಲ್ಲಿ ದೊಡ್ಡ ಡ್ರಮ್ನಂಥದ್ದನ್ನು ಅಳವಡಿಸಲಾಗಿದೆ.
ಇದನ್ನೂ ಓದಿ: Viral Video: ಹಾರುವ ಸೋಫಾದ ವಿಡಿಯೊ ನೋಡಿ ಅಲ್ಲಾವುದ್ದೀನ್ ಮ್ಯಾಜಿಕ್ ಕಾರ್ಪೆಟ್ ನೆನಪಿಸಿಕೊಂಡ ಜನರು
ಕೆ.ವೈ.ಮೈಕೆಲ್ಸನ್ ಅಂತೂ ತನ್ನ ಅನ್ವೇಷಣೆ ಬಗ್ಗೆ ಫುಲ್ ಖುಷಿ ವ್ಯಕ್ತಪಡಿಸಿದ್ದಾನೆ. ಹಿಂದೆಂದೂ ಯಾರೂ ಈ ಪ್ರಯೋಗ ಮಾಡಿರಲಿಲ್ಲ ಎಂದಿದ್ದಾನೆ. ಪೆಟ್ರೋಲ್, ಗ್ಯಾಸ್ ಬೆಲೆ ಏರಿಕೆಯಾಗಿದೆ. ಹೀಗಾಗಿ ಇಂಥದ್ದೊಂದು ಪ್ರಯೋಘ ಮಾಡಿದೆ. ನಾನು ಮದ್ಯಪಾನ ಮಾಡುವುದಿಲ್ಲ. ಆದರೆ ನನ್ನ ಬೈಕ್ಗಾಗಿ ಮದ್ಯ ಖರೀದಿಸುತ್ತೇನೆ. ಇದೀಗ ಅಭಿವೃದ್ಧಿಪಡಿಸಲಾಗಿರುವ ನನ್ನ ಹೊಸ ಬೈಕ್ ಗಂಟೆಗೆ 150 ಮೈಲುಗಳು (240 ಕಿಮೀ)ವೇಗದಲ್ಲಿ ಚಲಿಸುತ್ತದೆ ಎಂದು ಹೇಳಿದ್ದಾನೆ. ಸದ್ಯಕ್ಕಂತೂ ಇದು ಜನರನ್ನು ಆಕರ್ಷಿಸಿದೆ.
ಈ ಬೈಕ್ನ್ನು ವಿಡಿಯೊದಲ್ಲಿ ನೋಡಿ..