Video: ಬಿಯರ್​ ಕುಡಿಸಿದ್ರೆ ಮಾತ್ರ ಓಡತ್ತೆ ಈ ಬೈಕ್​; ಗಂಟೆಗೆ 240 ಕಿಮೀ ವೇಗವನ್ನೂ ಪಡೆಯಬಲ್ಲದು! Vistara News
Connect with us

ವಿದೇಶ

Video: ಬಿಯರ್​ ಕುಡಿಸಿದ್ರೆ ಮಾತ್ರ ಓಡತ್ತೆ ಈ ಬೈಕ್​; ಗಂಟೆಗೆ 240 ಕಿಮೀ ವೇಗವನ್ನೂ ಪಡೆಯಬಲ್ಲದು!

ಕೆ.ವೈ.ಮೈಕೆಲ್ಸನ್​ ಅಂತೂ ತನ್ನ ಅನ್ವೇಷಣೆ ಬಗ್ಗೆ ಫುಲ್ ಖುಷಿ ವ್ಯಕ್ತಪಡಿಸಿದ್ದಾನೆ. ಹಿಂದೆಂದೂ ಯಾರೂ ಈ ಪ್ರಯೋಗ ಮಾಡಿರಲಿಲ್ಲ ಎಂದಿದ್ದಾನೆ.

VISTARANEWS.COM


on

Beer Powered Motorcycle in US
Koo

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರುಗತಿಯಲ್ಲಿರುವುದರಿಂದ ಬರೀ ಭಾರತದಲ್ಲಿ ಅಷ್ಟೇ ಅಲ್ಲ, ಯುಎಸ್ ಸೇರಿ ಬಹುತೇಕ ರಾಷ್ಟ್ರಗಳಲ್ಲಿ ಪೆಟ್ರೋಲ್​-ಡೀಸೆಲ್-ಗ್ಯಾಸ್​ ಬೆಲೆ ಸಹಜವಾಗಿಯೇ ಹೆಚ್ಚಿದೆ. ಇಂಧನಗಳ ​ ಏರಿಕೆ ಬಗ್ಗೆ ಅಲವತ್ತುಕೊಳ್ಳುತ್ತಲೇ ವಾಹನ ಸವಾರರು ತಮ್ಮ ವಾಹನಗಳನ್ನು ಓಡಿಸುತ್ತಿದ್ದಾರೆ. ಇನ್ನು ತೀರ ಹೊರೆಯಾಗುತ್ತಿದೆ ಎನ್ನಿಸಿದವರಷ್ಟೇ ಸ್ವಂತ ವಾಹನವನ್ನು ಬದಿಗಿಟ್ಟು, ಬಸ್​-ಮೆಟ್ರೋದಂಥ ಸರ್ಕಾರಿ ವಾಹನಗಳ ಮೊರೆ ಹೋಗಿದ್ದಾರೆ. ಆದರೆ ಯುಎಸ್​​ನಲ್ಲಿ ಒಬ್ಬ ಯುವಕ ಒಂದು ವಿಭಿನ್ನ ಹೆಜ್ಜೆ ಇಟ್ಟಿದ್ದಾನೆ. ಬಿಯರ್​ ಚಾಲಿತ ಬೈಕ್ ​​ನ್ನು (Beer Powered Motorcycle) ಅಭಿವೃದ್ಧಿ ಪಡಿಸಿದ್ದಾನೆ. ಇದು ಆತನ ಅಸಹಜ ಸಂಶೋಧನೆ ಎನ್ನಿಸಿದೆ.

ಅಮೆರಿಕದ ಈ ಯುವಕನ ಹೆಸರು ಕೆ.ವೈ. ಮೈಕೆಲ್ಸನ್. ಹಿಂದೆಯೂ ಕೂಡ ಕೆಲವ ವಿಚಿತ್ರ ಅನ್ವೇಷಣೆಗಳಿಂದ ಹೆಸರು ಮಾಡಿದ್ದಾನೆ. ಆದರೆ ಸದ್ಯಕ್ಕಂತೂ ಆತನ ಬಿಯರ್​ ಚಾಲಿತ ಬೈಕ್​​ನ ವಿಡಿಯೊ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಬೈಕ್​ನಲ್ಲಿ ಅನಿಲ ಚಾಲಿತ ಎಂಜಿನ್​ ಇಲ್ಲ. ಅದರ ಬದಲಿಗೆ ಉಷ್ಣತಾ ಕಾಯ್ಲ್​ (ಹೀಟಿಂಗ್ ಕಾಯ್ಲ್​) ಇದೆ. ಬಿಯರ್​ನ್ನ ಬೈಕ್​ಗೆ ಹಾಕಿದಾಗ ಈ ಕಾಯ್ಲ್​ ಅದನ್ನು ಬಿಸಿ ಮಾಡುತ್ತದೆ. ಸುಮಾರು 300 ಡಿಗ್ರಿವರೆಗೂ ಬಿಯರ್​ ಬಿಸಿಯಾಗುತ್ತದೆ. ಬೈಕ್​ ಚಲಿಸಲು ಇದು ಸಹಕಾರಿಯಾಗಿದೆ. ಕೆ.ವೈ. ಮೈಕೆಲ್ಸನ್ ತನ್ನ ಬ್ಲೂಮಿಂಗ್ಟನ್​ನಲ್ಲಿರುವ ಗ್ಯಾರೇಜ್​ನಲ್ಲಿ ಈ ಬೈಕ್​ನ್ನು ಅಭಿವೃದ್ಧಿ ಪಡಿಸಿದ್ದು ವಿಡಿಯೋದಲ್ಲಿ ನೋಡಬಹುದು. ಆ ಬೈಕ್​ ಮುಂಭಾಗದಲ್ಲಿ ದೊಡ್ಡ ಡ್ರಮ್​ನಂಥದ್ದನ್ನು ಅಳವಡಿಸಲಾಗಿದೆ.

ಇದನ್ನೂ ಓದಿ: Viral Video: ಹಾರುವ ಸೋಫಾದ ವಿಡಿಯೊ ನೋಡಿ ಅಲ್ಲಾವುದ್ದೀನ್​ ಮ್ಯಾಜಿಕ್ ಕಾರ್ಪೆಟ್​ ನೆನಪಿಸಿಕೊಂಡ ಜನರು

ಕೆ.ವೈ.ಮೈಕೆಲ್ಸನ್​ ಅಂತೂ ತನ್ನ ಅನ್ವೇಷಣೆ ಬಗ್ಗೆ ಫುಲ್ ಖುಷಿ ವ್ಯಕ್ತಪಡಿಸಿದ್ದಾನೆ. ಹಿಂದೆಂದೂ ಯಾರೂ ಈ ಪ್ರಯೋಗ ಮಾಡಿರಲಿಲ್ಲ ಎಂದಿದ್ದಾನೆ. ಪೆಟ್ರೋಲ್​, ಗ್ಯಾಸ್ ಬೆಲೆ ಏರಿಕೆಯಾಗಿದೆ. ಹೀಗಾಗಿ ಇಂಥದ್ದೊಂದು ಪ್ರಯೋಘ ಮಾಡಿದೆ. ನಾನು ಮದ್ಯಪಾನ ಮಾಡುವುದಿಲ್ಲ. ಆದರೆ ನನ್ನ ಬೈಕ್​ಗಾಗಿ ಮದ್ಯ ಖರೀದಿಸುತ್ತೇನೆ. ಇದೀಗ ಅಭಿವೃದ್ಧಿಪಡಿಸಲಾಗಿರುವ ನನ್ನ ಹೊಸ ಬೈಕ್​ ಗಂಟೆಗೆ 150 ಮೈಲುಗಳು (240 ಕಿಮೀ)ವೇಗದಲ್ಲಿ ಚಲಿಸುತ್ತದೆ ಎಂದು ಹೇಳಿದ್ದಾನೆ. ಸದ್ಯಕ್ಕಂತೂ ಇದು ಜನರನ್ನು ಆಕರ್ಷಿಸಿದೆ.

ಈ ಬೈಕ್​​ನ್ನು ವಿಡಿಯೊದಲ್ಲಿ ನೋಡಿ..

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ

ಪ್ರಮುಖ ಸುದ್ದಿ

New Country: ಕೇವಲ 15 ಲಕ್ಷ ರೂ.ನಲ್ಲಿ ರೆಡಿ ಆಯ್ತು ಹೊಸ ದೇಶ, ಹೆಸರು ಸ್ಲೋಜಾಮ್‌ಸ್ತಾನ!

New Country: ಅಮೆರಿಕದ ಪ್ರವಾಸಿಗ ತನ್ನದೇ ಆದ ಸ್ವಂತ ರಾಷ್ಟ್ರ ನಿರ್ಮಾಣ ಮಾಡಿದ್ದಾನೆ. ಅದು ಕೇವಲ ಹದಿನೈದು ಲಕ್ಷ ರೂಪಾಯಿ ವೆಚ್ಚ ಮಾಡಿದ್ದಾನಷ್ಟೇ.

VISTARANEWS.COM


on

Edited by

A new country is ready in just Rs 15 lakh and the name is Slowjamastan
Koo

ನವದೆಹಲಿ: ರೇಪ್ ಆರೋಪ ಹೊತ್ತು ದೇಶ ಪಲಾಯನ ಮಾಡಿದ ನಿತ್ಯಾನಂದ ಸ್ವಾಮಿ ಈಕ್ವೆಡಾರ್ ಕರಾವಳಿಯಲ್ಲಿ ಕೈಲಾಸ ಎಂಬ ತನ್ನದೇ ಆದ ಸ್ವಂತ ದೇಶ ನಿರ್ಮಾಣ ಮಾಡಿದ್ದು ಭಾರತೀಯರಿಗೆ ಗೊತ್ತೇ ಇರುತ್ತದೆ. ಅದೇ ರೀತಿ, ಅಮೆರಿಕ ವ್ಯಕ್ತಿಯೊಬ್ಬ ಸ್ವಂತ ದೇಶವನ್ನು (New Country) ಸೃಷ್ಟಿಸಿಕೊಂಡಿದ್ದಾನೆ. ವೃತ್ತಿಯಿಂದ ಡಿಜೆ ಆಗಿರುವ ಆರ್ ಡಬ್ ವಿಲಿಯಮ್ಸ್(R Dub Williams), ತಮ್ಮ ಪ್ರದರ್ಶನಕ್ಕೆ ಸ್ಲೋ ಜಾಮ್ಸ್ ಎಂದು ಹೆಸರಿಟ್ಟಿದ್ದಾರೆ. ಈಗ ಅದೇ ಹೆಸರನ್ನು ತಮ್ಮ ದೇಶಕ್ಕೆ ಇಟ್ಟಿದ್ದಾರೆ(Viral News). ಅಂದರೆ, ವಿಲಿಯಮ್ಸ್ ಅವರ ದೇಶದ ಹೆಸರು ಸ್ಲೋಜಾಮ್‌ಸ್ತಾನ (Slowjamastan).

ಸಿಎನ್ಎನ್ ಟ್ರಾವೆಲ್ಲರ್ ಜತೆ ಮಾತನಾಡಿರುವ ವಿಲಿಯಮ್ಸ್, ನನಗೆ ಪ್ರವಾಸ ಮಾಡಲು ಈಗ ದೇಶಗಳೇ ಉಳಿದಿಲ್ಲ. ಹಾಗಾಗಿ, ನನ್ನದೇ ಆದ ಸ್ವಂತ ನಿರ್ಮಾಣ ಮಾಡಿದ್ದೇನೆ ಎಂದು ತಿಳಿಸಿದ್ದಾರೆ. ವಿಶ್ವಸಂಸ್ಥೆ ಗುರುತಿಸಿರುವ 193 ರಾಷ್ಟ್ರಗಳ ಪೈಕಿ 192 ರಾಷ್ಟ್ರಗಳನ್ನು ಈ ಮಿಲಿಯಮ್ಸ್ ಭೇಟಿ ನೀಡಿದ್ದಾರೆ. ತಮ್ಮ ಈ ಪ್ರವಾಸದ ಪಟ್ಟಿಯಲ್ಲಿ ತುರ್ಕಮೇನಿಸ್ತಾನ ಕೊನೆಯ ರಾಷ್ಟ್ರವಾಗಿದ್ದು, ಶೀಘ್ರವೇ ಆ ರಾಷ್ಟ್ರಕ್ಕೂ ಅವರ ಭೇಟಿ ನೀಡಲಿದ್ದಾರೆ. ಈ ಕಾರಣಕ್ಕಾಗಿಯೇ ಅವರು 194ನೇ ರಾಷ್ಟ್ರವಾಗಿ ತಮ್ಮದೇ ಸ್ವಂತ ದೇಶವನ್ನು ನಿರ್ಮಾಣ ಮಾಡಿದ್ದಾರೆಂದು ಸಿಎನ್ಎನ್ ವರದಿ ಮಾಡಿದೆ.

ಅಮೆರಿಕದ ಕ್ಯಾಲಿಫೋರ್ನಿಯಾದ ಮರಳುಗಾಡಿನಲ್ಲಿ 11.07 ಎಕರೆ ಭೂಮಿಯನ್ನು ಖರೀದಿಸಿ ವಿಲಿಯಮ್ಸ್ ಅದಕ್ಕೆ ತಾವು ನಡೆಸಿಕೊಡುವ ಶೋ ಹೆಸರನ್ನೇ ಇಟ್ಟಿದ್ದಾರೆ. ಸ್ಲೋಜಾಮ್‌ಸ್ತಾನ್ ಸುಲ್ತಾನ್ ಆಗಿರುವ ವಿಲಿಯಮ್ಸ್, 2021 ಡಿಸೆಂಬರ್ 1ರಂದ ಅಮೆರಿಕದಿಂದ ಪ್ರತ್ಯೇಕಗೊಂಡ ಸ್ವತಂತ್ರ ರಾಷ್ಟ್ರ ಎಂದು ಘೋಷಿಸಿಕೊಂಡಿದ್ದಾರೆ. ದುಬ್ಲಾಂಡಿಯಾ, ಸ್ಲೋಜಾಮ್‌ಸ್ತಾನ್ ರಾಷ್ಟ್ರದ ರಾಜಧಾನಿಯಾಗಿದೆ. ಅಲ್ಲಿಂದಲೇ ಲೈವ್ ಮೂಲಕ ಸ್ವತಂತ್ರ ರಾಷ್ಟ್ರ ಎಂದು ಘೋಷಿಸಿದ್ದಾರೆ.

ಇದನ್ನೂ ಓದಿ: Swami Nithyananda: ʼಕೈಲಾಸʼದಿಂದ ವಿಶ್ವಸಂಸ್ಥೆಗೆ ಬಂದ ನಿತ್ಯಾನಂದನ ಪ್ರತಿನಿಧಿ ಯಾರೀಕೆ?

ಈ ಹೊಸ ರಾಷ್ಟ್ರವು ತನ್ನದೇ ಪಾಸ್‌ಪೋರ್ಟ್, ಸ್ವಂತ ಧ್ವಜ, ಸ್ವಂತ ಕರೆನ್ಸ್, ರಾಷ್ಟ್ರಗೀತೆ ಸೇರಿದಂತೆ ಸಾರ್ವಭೌಮ ರಾಷ್ಟ್ರಕ್ಕಿರುವ ಎಲ್ಲ ಸಂಗತಿಗಳನ್ನು ಒಳಗೊಂಡಿದೆ. ಸಿಎನ್ಎನ್ ಟ್ರಾವಲರ್ ವರದಿಯ ಪ್ರಕಾರ, ಸದ್ಯ 500 ನೋಂದಾಯಿತ ನಾಗರಿಕರಿದ್ದರು, ನೋಂದಣಿಗೆ ಇನ್ನೂ 4500 ಜನರು ಕಾಯ್ದು ಕುಳಿತಿದ್ದಾರೆ. ಅಂದ ಹಾಗೆ, ಹೊಸ ದೇಶ ನಿರ್ಮಾಣಕ್ಕೆ ವಿಲಿಯಮ್ಸ್ ಕೇವಲ 15 ಲಕ್ಷ ವೆಚ್ಚವಾಗಿದೆ.

ವಿದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Continue Reading

ತಂತ್ರಜ್ಞಾನ

Instagram: ನಿಮ್ಮ ಮಕ್ಕಳು ಇನ್‌ಸ್ಟಾ ಯೂಸ್ ಮಾಡ್ತಾ ಇದ್ದಾರಾ? ಈ ಜಾಲತಾಣದಲ್ಲೇ ಮಕ್ಕಳ ಲೈಂಗಿಕ ಶೋಷಣೆ ಜಾಲ ಸಕ್ರಿಯ!

ಜನಪ್ರಿಯ ಫೋಟೋ ಷೇರಿಂಗ್ ಸೋಷಿಯಲ್ ಮೀಡಿಯಾ ಇನ್‌ಸ್ಟಾಗ್ರಾಮ್ ಮಕ್ಕಳ ಬಳಕೆಗೆ ಯೋಗ್ಯವಲ್ಲ. ಈ ಜಾಲದಲ್ಲಿ ಶಿಶುಪೀಡನೆ ಜಾಲ ಸಕ್ರಿಯವಾಗಿದೆ ಎನ್ನುತ್ತಿವೆ ಸಂಶೋಧನಾ ವರದಿಗಳು.

VISTARANEWS.COM


on

Edited by

Child Sex Abuse and Instragram
Koo

ಸ್ಯಾನ್ ಫ್ರಾನ್ಸಿಸ್ಕೋ, ಅಮೆರಿಕ: ಫೋಟೋ ಷೇರಿಂಗ್ ವೇದಿಕೆಯಾಗಿರುವ ಇನ್‌ಸ್ಟಾಗ್ರಾಮ್ (Instagram) ಬಳಕೆದಾರರಿಗೆ ಇದು ಶಾಕಿಂಗ್ ಸುದ್ದಿ. ಯಾಕೆಂದರೆ, ಈ ತಾಣವನ್ನು ಶಿಶು ಪೀಡನೆ ಜಾಲವು, ಮಕ್ಕಳ ಮೇಲಿನ ಲೈಂಗಿಕ ಶೋಷಣೆ(pedophile networks), ದೌರ್ಜನ್ಯಕ್ಕಾಗಿ ಬಳಸಿಕೊಳ್ಳುತ್ತಿದೆ. ಅಂದರೆ, ಇನ್‌ಸ್ಟಾಗ್ರಾಮ್ ಮೂಲಕವೇ ಮಕ್ಕಳ ಲೈಂಗಿಕ ಕಂಟೆಂಟ್‌ ಪ್ರಮೋಟ್ ಮತ್ತು ಮಾರಾಟ ಮಾಡುವುದನ್ನು ಮಾಡಲಾಗುತ್ತಿದೆ ಎಂದು ಅಮೆರಿಕದ ಸ್ಟ್ಯಾನ್‌ಪೋರ್ಡ್ ವಿಶ್ವವಿದ್ಯಾಲಯ ಮತ್ತು ವಾಲ್ ಸ್ಟ್ರೀಟ್ ಜರ್ನಲ್ ತಯಾರಿಸಿದ ವರದಿಯಲ್ಲಿ ತಿಳಿಸಲಾಗಿದೆ(Child Sex Abuse Networks).

ಅಪ್ರಾಪ್ತ ವಯಸ್ಕರು ನಿರ್ವಹಿಸುತ್ತಿರುವ ಖಾತೆಗಳ ದೊಡ್ಡ ನೆಟ್‌ವರ್ಕ್‌ಗಳು ಸ್ವಯಂ-ರಚಿಸಿದ ಮಕ್ಕಳ ಲೈಂಗಿಕ ಶೋಷಣೆಯ ವಸ್ತುಗಳನ್ನು ಮಾರಾಟಕ್ಕಾಗಿ ಬಹಿರಂಗವಾಗಿ ಜಾಹೀರಾತು ಮಾಡುತ್ತಿವೆ ಎಂದು ಅಮೆರಿಕದ ವಿಶ್ವವಿದ್ಯಾಲಯದ ಸೈಬರ್ ನೀತಿ ಕೇಂದ್ರದ ಸಂಶೋಧಕರು ಹೇಳಿದ್ದಾರೆ.

ಇನ್‌ಸ್ಟಾಗ್ರಾಮ್ ಪ್ರಸ್ತುತ ಈ ಶಿಶುಪೀಡನೆ ಜಾಲಗಳಿಗೆ ಪ್ರಮುಖ ವೇದಿಕೆಯಾಗಿದೆ. ಶಿಫಾರಸು ಅಲ್ಗಾರಿದಮ್‌ಗಳು ಮತ್ತು ಖರೀದಿದಾರರು ಮತ್ತು ಮಾರಾಟಗಾರರನ್ನು ಸಂಪರ್ಕಿಸಲು ಸಹಾಯ ಮಾಡುವ ನೇರ ಸಂದೇಶ ಕಳುಹಿಸುವಿಕೆಯಂತಹ ವೈಶಿಷ್ಟ್ಯಗಳನ್ನು ಇದು ಒಳಗೊಂಡಿದೆ ಎಂದು ತಿಳಿಸಿದೆ.

ನಿರ್ದಿಷ್ಟವಾಗಿ ಮಕ್ಕಳನ್ನು ಉಲ್ಲೇಖಿಸುವ ಲೈಂಗಿಕವಾಗಿ ಸ್ಪಷ್ಟವಾದ ಕೀವರ್ಡ್‌ಗಳ ಸರಳ ಹುಡುಕಾಟವು ಅಪ್ರಾಪ್ತ ವಯಸ್ಕರ ಲೈಂಗಿಕ ದೌರ್ಜನ್ಯವನ್ನು ತೋರಿಸುವ ವಿಷಯವನ್ನು ಜಾಹೀರಾತು ಮಾಡಲು ಈ ಪದಗಳನ್ನು ಬಳಸುವ ಖಾತೆಗಳಿಗೆ ಕಾರಣವಾಗುತ್ತದೆ. ಈ ಪ್ರೊಫೈಲ್‌ಗಳು ಮಕ್ಕಳ ಪ್ರೊಫೈಲ್‌ಗಳೆಂದು ಹೇಳಿಕೊಳ್ಳುತ್ತವೆ. ಜತೆಗೆ ಲೈಂಗಿಕ ರಹಸ್ಯ ಹೆಸರುಗಳನ್ನು ಒಳಗೊಂಡಿರುತ್ತವೆ ಎಂದು ವಾಲ್ ಸ್ಟ್ರೀಟ್ ಜರ್ನಲ್‌ನಲ್ಲಿ ಪ್ರಕಟವಾದ ವರದಿಯಲ್ಲಿ ತಿಳಿಸಲಾಗಿದೆ.

ಈ ಸುದ್ದಿಯನ್ನೂ ಓದಿ: Harrassment : ಹಾಸನದ ವಸತಿ ಶಾಲೆಯಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ; ಪ್ರಿನ್ಸಿಪಾಲ್‌ ಸೇರಿ ಐವರ ಸೆರೆ

ಅಲ್ಲದೇ ಈ ಇನ್‌ಸ್ಟಾಗ್ರಾಮ್‌ನಲ್ಲಿ ಕೆಲವು ಲೈಂಗಿಕ ಪ್ರಚೋದನಕಾರಿ ವಿಡಿಯೋಗಳು ಇರುವುದನ್ನು ಸ್ಟ್ಯಾನ್‌ಫೋರ್ಡ್ ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಅಲ್ಲದೇ, ಒಂದು ನಿರ್ದಿಷ್ಟ ದರದಲ್ಲಿ ಮಕ್ಕಳನ್ನು ಮುಖತಃ ಭೇಟಿಯಾಗಲು ಅವಕಾಶವನ್ನೂ ಕಲ್ಪಿಸಲಾಗುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ಕುರಿತು ಇನ್‍‌ಸ್ಟಾಗ್ರಾಮ್ ಒಡೆತನವನ್ನು ಹೊಂದಿರುವ ಮೆಟಾ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Continue Reading

ಪ್ರಮುಖ ಸುದ್ದಿ

Donald Trump: ಟ್ರಂಪ್ ವಿರುದ್ಧ ಮತ್ತೊಂದು ಕೇಸ್! ಅಮೆರಿಕ ಅಧ್ಯಕ್ಷ ಎಲೆಕ್ಷನ್‌ ಸ್ಪರ್ಧಿಸುವ ಆಸೆ ಠುಸ್

Donald Trump: ಪೋರ್ನ್ ತಾರೆ ಜತೆಗಿನ ಸಂಬಂಧವನ್ನು ಮರೆ ಮಾಚಲು ಲಂಚ ನೀಡಿದ ಕ್ರಿಮಿನಲ್ ಪ್ರಕರಣವನ್ನು ಎದುರಿಸುತ್ತಿರುವ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಅಮೆರಿಕ ಸರ್ಕಾರ ಮತ್ತೊಂದ ಕೇಸ್ ದಾಖಲಿಸಿದೆ.

VISTARANEWS.COM


on

Edited by

Donald Trump
Koo

ವಾಷಿಂಗ್ಟನ್: ಅಧ್ಯಕ್ಷ ಸ್ಥಾನದಿಂದ ಕೆಳಗಿಳದ ಬಳಿಕವೂ ಅಮೆರಿಕ ರಹಸ್ಯ ದಾಖಲೆಗಳನ್ನು (Secret Documents) ನಿರ್ವಹಣೆ ಮಾಡಿದ ಆರೋಪವನ್ನು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ವಿರುದ್ಧ ಹೊರಿಸಲಾಗಿದೆ. ಈ ವಿಷಯವನ್ನು ಟ್ರಂಪ್ ಅವರೇ ಖಚಿತಪಡಿಸಿದ್ದಾರೆ. ಅಲ್ಲದೇ, ಇಂಥ ಆರೋಪ ಎದುರಿಸುತ್ತಿರುವ ಅಮೆರಿಕದ ಮೊದಲ ಹಾಲಿ ಅಥವಾ ಮಾಜಿ ಅಧ್ಯಕ್ಷರಾಗಿದ್ದಾರೆ ಟ್ರಂಪ್ ಅವರು. 2024ರ ಅಧ್ಯಕ್ಷೀಯ ಚುನಾವಣೆಗೆ ಎರಡನೇ ಬಾರಿಗೆ ಸ್ಪರ್ಧಿಸಲು ಮುಂದಾಗಿರುವ ಟ್ರಂಪ್ ಅವರಿಗೆ ಈ ಆರೋಪವು ಕಾನೂನು ತೊಡಕಾಗುವ ಎಲ್ಲ ಸಾಧ್ಯತೆಗಳಿವೆ(US presidential election 2024).

ಭ್ರಷ್ಟ ಬೈಡೆನ್ ಆಡಳಿತವು ನನ್ನನ್ನು ದೋಷಾರೋಪಣೆಗೆ ಒಳಪಡಿಸಲಾಗಿದೆ ಎಂದು ನನ್ನ ವಕೀಲರಿಗೆ ತಿಳಿಸಿದೆ ಎಂದು ಟ್ರಂಪ್ ತಮ್ಮ ಪ್ಲಾಟ್‌ಫಾರ್ಮ್ ಟ್ರೂತ್ ಸೋಶಿಯಲ್‌ನಲ್ಲಿ ಬರೆದಿದುಕೊಂಡಿದ್ದಾರೆ. ಆ ಮೂಲಕ ಇದೇ ಮೊದಲ ಬಾರಿಗೆ ಹಾಲಿ ಅಥವಾ ಮಾಜಿ ಕಮಾಂಡರ್ ಚೀಫ್‌ ಒಬ್ಬರು ಇಂಥ ಫೆಡರಲ್ ಆರೋಪಗಳನ್ನು ಎದುರಿಸುವಂತಾಗಿದೆ. ಇದು ಅಮೆರಿಕದ ಇತಿಹಾಸದಲ್ಲೇ ಮೊದಲು ಎಂದು ಹೇಳಲಾಗುತ್ತಿದೆ.

ಟ್ರಂಪ್ ಅವರಿಕೆ ಖಚಿತಪಡಿಸಲು ಈ ಕುರಿತು ನ್ಯಾಯಾಂಗ ಇಲಾಖೆಯಿಂದ ತಕ್ಷಣದ ದೃಢೀಕರಣವಿಲ್ಲ, ಆದಾಗ್ಯೂ ದಿ ನ್ಯೂಯಾರ್ಕ್ ಟೈಮ್ಸ್ ಸೇರಿದಂತೆ ಕೆಲವು ಅಮೆರಿಕದ ಮಾಧ್ಯಮಗಳು ಟ್ರಂಪ್ ಅವರನ್ನು ನಿಜವಾಗಿಯೂ ದೋಷಾರೋಪಣೆ ಮಾಡಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿವೆ. ಎರಡನೇ ಬಾರಿಗೆ ಅಧ್ಯಕ್ಷೀಯ ಚುನಾವಣೆಗೆ ತಯಾರಿ ನಡೆಸುತ್ತಿರುವ ಟ್ರಂಪ್, ಮಿಯಾಮಿಯಲ್ಲಿ ಫೆಡರಲ್ ಕೋರ್ಟ್‌ಹೌಸ್‌ಗೆ ಬರುವಂತೆ ತಿಳಿಸಲಾಗಿದೆ ಎಂದು ಟ್ರೂತ್ ಸೋಷಿಯಲ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: 2020ರಲ್ಲಿ ಡೊನಾಲ್ಡ್ ಟ್ರಂಪ್​ ಕುಟುಂಬ ಭಾರತಕ್ಕೆ ಬಂದಾಗ ಅವರ ವ್ಯವಸ್ಥೆಗಾಗಿ ಕೇಂದ್ರ ಸರ್ಕಾರ ವ್ಯಯಿಸಿದ್ದೆಷ್ಟು?!

ಟ್ರಂಪ್ ಅವರು ಈಗಾಗಲೇ ಅಪರಾಧದ ಆರೋಪಕ್ಕೆ ಒಳಗಾದ ಮೊದಲ ಮಾಜಿ ಅಥವಾ ಹಾಲಿ ಅಧ್ಯಕ್ಷರಾಗಿದ್ದಾರೆ. ಕಳೆದ ಅಧ್ಯಕ್ಷೀಯ ಚುನಾವಣೆಯ ವೇಳೆ ಪೋರ್ನ್ ತಾರೆಯೊಬ್ಬರಿಗೆ ಅವರು ತಮ್ಮೊಂದಿಗೆ ಸಂಬಂಧ ಹೊಂದಿದ್ದರು ಎಂಬುದನ್ನ ಮರೆ ಮಾಚಲು ಆಕೆಗೆ ಹಣ ಪಾವತಿ ಮಾಡಿದ ಆರೋಪವನ್ನು ಎದುರಿಸುತ್ತಿದ್ದಾರೆ. ಆದರೆ, ಈ ಹೊಸ ಪ್ರಕರಣದಲ್ಲಿ ಟ್ರಂಪ್ ಅವರ ವಿರುದ್ಧ ನಿರ್ದಿಷ್ಟವಾಗಿ ಯಾವ ಕೇಸಿನಲ್ಲಿ ಆರೋಪ ಹೊರಿಸಲಾಗಿದೆ ಎಂಬುದು ಇನ್ನ ಗೊತ್ತಾಗಿಲ್ಲ.

ವಿದೇಶದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Continue Reading

ಕರ್ನಾಟಕ

ವಿಸ್ತಾರ TOP 10 NEWS: ಆಗಸ್ಟ್‌ನಲ್ಲಿ ಗ್ಯಾರಂಟಿ ಜಾರಿಗೆ ಸಿದ್ಧ, ಬಿಜೆಪಿ ಅವಲೋಕನ ಸಭೆಯಲ್ಲಿ ಯುದ್ಧ ಹಾಗೂ ಮತ್ತಷ್ಟು ಪ್ರಮುಖ ಸುದ್ದಿಗಳಿವು

ದೇಶ, ವಿದೇಶ, ರಾಜ್ಯದಲ್ಲಿ ದಿನಪೂರ್ತಿ ನಡೆದ ಘಟನಾವಳಿಗಳಲ್ಲಿ ಆಯ್ದ ಪ್ರಮುಖ ಸುದ್ದಿಗಳು ವಿಸ್ತಾರ TOP 10 NEWS ನಲ್ಲಿ.

VISTARANEWS.COM


on

Edited by

vistara top 10 news congress guarantee launch in august to bjp introspection meeting and more news
Koo

1. Congress Guarantee: ಆ. 1ರಂದು ಫ್ರೀ ಕರೆಂಟ್‌, ಆ.18ರಂದು ಮನೆಯೊಡತಿಗೆ 2000 ರೂ. ಯೋಜನೆಗೆ ಚಾಲನೆ
ರಾಜ್ಯ ಸರ್ಕಾರ ಘೋಷಿಸಿರುವ ಗ್ಯಾರಂಟಿ ಯೋಜನೆಗಳಲ್ಲಿ ಗೃಹಜ್ಯೋತಿ ಯೋಜನೆ ಆಗಸ್ಟ್‌ 1 ರಂದು ಹಾಗೂ ಗೃಹ ಲಕ್ಷ್ಮಿ ಯೋಜನೆಗೆ ಆಗಸ್ಟ್‌ 17- 18 ರಂದು ಚಾಲನೆ ನೀಡಲು ತಯಾರಿ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Congress Guarantee: ಸೇವಾ ಸಿಂಧುಗೆ ʼಗ್ಯಾರಂಟಿʼ ಲೋಡ್‌ ಆತಂಕ: ಕೋಟ್ಯಂತರ ಜನರ ಅರ್ಜಿ ಭಾರ ತಡೆಯಬಲ್ಲದೇ?

2. Textbook Revision: ʼಕೇಸರಿʼ ಪಠ್ಯಕ್ಕೆ ರೆಡ್‌ ಸಿಗ್ನಲ್‌!: ಪಠ್ಯ ಪರಿಷ್ಕರಣೆ ಶತಃಸಿದ್ಧ ಎಂದ ಶಿಕ್ಷಣ ಸಚಿವ
ಬಿಜೆಪಿ ಅವಧಿಯಲ್ಲಿ ಕೈಗೊಂಡ ಪಠ್ಯಪುಸ್ತಕ ಪರಿಷ್ಕರಣೆಯನ್ನು ಬದಲಾವಣೆ ಮಾಡುವುದು ಖಚಿತ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Text Book: ಹಿಂದಿನ ಪಠ್ಯದಲ್ಲಿ ಹುಸಿ ದೇಶಭಕ್ತಿ; ಪಠ್ಯ ಪರಿಷ್ಕರಣೆ ಮಾಡುವುದೇ ಸರಿ ಅಂದ್ರು ಕುಂ. ವೀರಭದ್ರಪ್ಪ!

3. BJP Karnataka: ನಿಮ್ಮ ತಪ್ಪಿನಿಂದ ನಾವು ಬಲಿಯಾದೆವು: ಬಿಜೆಪಿ ಅವಲೋಕನ ಸಭೆಯಲ್ಲಿ ನಾಯಕರ ವಿರುದ್ಧ ಅಸಮಾಧಾನ ಸ್ಫೋಟ
ವಿಧಾನಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋತ ನಂತರ ಮೊದಲ ಬಾರಿಗೆ ನಡೆಸಿದ ಅವಲೋಕನ ಸಭೆಯಲ್ಲಿ, ಪರಾಜಿತ ಅಭ್ಯರ್ಥಿಗಳು ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ರಾಜ್ಯ ಬಿಜೆಪಿ ಕಚೇರಿಯಲ್ಲಿ ನೂತನ ಶಾಸಕರಿಗೆ ಬೆಳಗ್ಗೆ ಹಾಗೂ ಪರಾಜಿತ ಅಭ್ಯರ್ಥಿಗಳಿಗೆ ಸಂಜೆ ಅವಲೋಕನ ಸಭೆಯನ್ನು ಏರ್ಪಡಿಸಲಾಗಿತ್ತು. ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಸಭೆಗಳು ನಡೆದವು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. Bengaluru Rain: ಡಿಕೆಶಿ ಅಪಾರ್ಟ್‌ಮೆಂಟ್ ಆದರೂ ಬುಲ್ಡೋಜರ್‌ ಪಕ್ಕಾ: ಡಿಸಿಎಂ ಡಿ.ಕೆ. ಶಿವಕುಮಾರ್‌ ಖಡಕ್‌ ಮಾತು
ಬೆಂಗಳೂರಿನಲ್ಲಿ ಮಳೆ ಸುರಿದಾಗ ಹಾನಿಯಾಗುವ ಹಾಗೂ ಲೇಔಟ್‌ಗಳಿಗೆ ನೀರು ನುಗ್ಗುವ ಪ್ರದೇಶಗಳಿಗೆ ಡಿಸಿಎಂ ಹಾಗೂ ಬೆಂಗಳೂರು ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್‌ ಭೇಟಿ ನೀಡಿ ಪರಿಶೀಲಿಸಿದರು. ಯಮಲೂರು, ದೊಮ್ಮಲೂರು, ಬೆಳಂದೂರು ಸರ್ಜಾಪುರ ಸೇರಿದಂತೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು. ಒತ್ತುವರಿಯಾದ ರಾಜಕಾಲುವೆ ಸ್ಥಳಗಳಿಗೆ ಭೇಟಿ ಪರಿಶೀಲನೆ ನಡೆಸಿದರು. ಬೆಂಗಳೂರು ಮೆಟ್ರೊ, ಬಿಡಿಎ, ಬಿಬಿಎಂಪಿ ಅಧಿಕಾರಿಗಳ ಜತೆಗೆ ವೀಕ್ಷಣೆ ಮಾಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. Monsoon 2023: ‘ಲೇಟ್ ಲತೀಫ್’ ಮಳೆರಾಯ! ಒಂದು ವಾರ ತಡವಾಗಿ ಕೇರಳಕ್ಕೆ ಬಂದ
ವಾಡಿಕೆಗಿಂತ ಒಂದು ವಾರ ತಡವಾಗಿ ಮುಂಗಾರು (Monsoon 2023) ಕೇರಳಕ್ಕೆ (Kerala) ಕಾಲಿಟ್ಟಿದೆ. ಸಾಮಾನ್ಯವಾಗಿ ಪ್ರತಿ ವರ್ಷ ಜೂನ್ 1ಕ್ಕೆ ಮುಂಗಾರು ಮಾರುತಗಳು ಕೇರಳದ ಕರಾವಳಿಗೆ ಅಪ್ಪಳಿಸುತ್ತಿದ್ದವು. ಆದರೆ, ಈ ಬಾರಿ ಒಂದು ವಾರ ತಡವಾಗಿದೆ. ಇದರಿಂದ ಸಹಜವಾಗಿಯೇ ಪರಿಣಾಮ ಬೀರಲಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಭಾರತೀಯ ಹವಾಮಾನ ಸಂಸ್ಥೆ (India Meteorological Department – IMD), ನೈಋತ್ಯ ಮಾನ್ಸೂನ್ ಜೂನ್ 1ರ ಬದಲಿಗೆ ಇಂದು ಅಂದರೆ ಜೂನ್ 8ರಂದು ಕೇರಳದಲ್ಲಿ ಆರಂಭವಾಗಿದೆ ಎಂದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. ವಿಸ್ತಾರ ಸಂಪಾದಕೀಯ: ರೆಪೊ ದರ ಯಥಾಸ್ಥಿತಿ; ಆರ್‌ಬಿಐ ನಿರ್ಧಾರ ಸ್ವಾಗತಾರ್ಹ
ಈ ಬಾರಿಯ ಹಣಕಾಸು ನೀತಿ ಸಮಿತಿ ಸಭೆಯ ಬಳಿಕ, ಸದ್ಯಕ್ಕೆ ರೆಪೊ ದರವನ್ನು ಯಥಾಸ್ಥಿತಿಯಲ್ಲಿಡುವ (ಶೇ.6.50) ನಿರ್ಧಾರವನ್ನು ಆರ್‌ಬಿಐ ಪ್ರಕಟಿಸಿದೆ. ಈ ಮೂಲಕ ಆರ್‌ಬಿಐ ಸಾಲಗಾರರ ಆತಂಕವನ್ನು ದೂರ ಮಾಡಿದೆ. ಸತತ ಆರು ಬಾರಿಯಿಂದ ಆರ್‌ಬಿಐ ರೆಪೊ ದರ ಏರಿಸುತ್ತಲೇ ಬಂದಿದೆ. 2022ರ ಮೇ ತಿಂಗಳಿನಿಂದ ರೆಪೊ ದರ ಏರಿಕೆ ಆರಂಭವಾಗಿತ್ತು. ಇದರಿಂದಾಗಿ ಬಡ್ಡಿ ದರ ಏರಿಕೆಗೂ ಕಾರಣವಾಗಿತ್ತು. ಹೀಗಾಗಿ ಮುಖ್ಯವಾಗಿ ಗೃಹ ಸಾಲ, ವಾಹನ ಸಾಲಗಾರರ ಮೇಲೆ ಭಾರಿ ಬಡ್ಡಿ ಹೊರೆ ಬೀಳುವಂತಾಗಿತ್ತು. ಈ ಬಾರಿಯೂ ರೆಪೊ ದರ ಏರಬಹುದು ಎಂಬ ಆತಂಕ ಜನಸಾಮಾನ್ಯರಲ್ಲಿತ್ತು. ಆದರೆ ಆರ್‌ಬಿಐ ನಿರ್ಧಾರದಿಂದಾಗಿ ಜನ ತುಸು ನಿರಾಳವಾಗುವಂತಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Sam Altman: ಚಾಟ್‌ಜಿಪಿಟಿ ಬಗ್ಗೆಯೂ ಮೋದಿ ಬಳಿ ಉತ್ತರವಿದೆ; ಭೇಟಿ ಬಳಿಕ ಓಪನ್‌ಎಐ ಮುಖ್ಯಸ್ಥ ಹೀಗೆ ಹೇಳಿದ್ದೇಕೆ?
ಚಾಟ್‌ಜಿಪಿಟಿಯ ಮಾತೃಸಂಸ್ಥೆಯಾದ ಓಪನ್‌ಎಐ (OpenAI) ಸಿಇಒ ಸ್ಯಾಮ್‌ ಅಲ್ಟ್‌ಮನ್‌ (Sam Altman) ಅವರು ಭಾರತ ಪ್ರವಾಸದಲ್ಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಮಾತುಕತೆ ನಡೆಸಿದ್ದಾರೆ. ಮಾತುಕತೆ ಬಳಿಕ ಭೇಟಿ, ಚರ್ಚೆಯ ವಿಷಯಗಳನ್ನು ಹರಡಿರುವ ಅವರು, ಭಾರತದಲ್ಲಿ ಕೃತಕ ಬುದ್ಧಿಮತ್ತೆ (Artificial Intelligence) ತಂತ್ರಜ್ಞಾನದ ಅಳವಡಿಕೆ, ಕಾನೂನು ನಿಯಂತ್ರಣ ಸೇರಿ ಹಲವು ವಿಚಾರ ತಿಳಿಸಿದ್ದಾರೆ. ಹಾಗೆಯೇ, “ನರೇಂದ್ರ ಮೋದಿ ಅವರ ಉತ್ಸಾಹ ಅತ್ಯದ್ಭುತ” ಎಂದು ಬಣ್ಣಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Viral News : ಮೆರವಣಿಗೆಯಲ್ಲಿ ಕಾಣಿಸಿತು ಇಂದಿರಾಗಾಂಧಿ ಹತ್ಯೆಯ ಸ್ತಬ್ಧಚಿತ್ರ!
ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರನ್ನು ಅವರನ್ನು ಅವರ ರಕ್ಷಣೆಗೆ ನಿಯೋಜನೆಗೊಂಡಿದ್ದವರೇ ಕೊಂದ ವಿಚಾರ ಎಲ್ಲರಿಗೂ ತಿಳಿದಿರುವುದು. ಆ ದಿನದಂದು ಪೂರ್ತಿ ದೇಶ ಕಣ್ಣೀರು ಹಾಕಿತ್ತು. ಆದರೆ ಆ ಕೃತ್ಯವನ್ನು ಕೆಲವರು ಮಾತ್ರ ಸಂಭ್ರಮಿಸಿದ್ದರು. ಇದೀಗ ಆ ಕೊಲೆಯನ್ನೇ ತಮ್ಮ ಹೆಮ್ಮೆ ಎನ್ನುವಂತೆ ಕೆನಡಾದಲ್ಲಿರುವ ಖಲಿಸ್ತಾನಿಗಳು (Viral News) ಪ್ರದರ್ಶಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. WTC Final 2023: 87 ವರ್ಷಗಳ ಹಿಂದಿನ ದಾಖಲೆ ಮುರಿದ ಸ್ಮಿತ್​-ಹೆಡ್​ ಜೋಡಿ
ಭಾರತ ವಿರುದ್ಧದ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದಲ್ಲಿ ಶತಕ ಬಾರಿಸಿ ಸಂಭ್ರಮಿಸಿದ ಸ್ಟೀವನ್​ ಸ್ಮಿತ್​ ಮತ್ತು ಟ್ರಾವಿಸ್​ ಹೆಡ್​ ಅವರು 87 ವರ್ಷಗಳ ಹಿಂದಿನ ಜತೆಯಾಟದ ದಾಖಲೆಯೊಂದನ್ನು ಮುರಿದಿದ್ದಾರೆ. ಲಂಡನ್‌ನ ಐತಿಹಾಸಿಕ ಕೆನ್ನಿಂಗ್ಟನ್‌ ಓವಲ್‌ ಮೈದಾನದಲ್ಲಿ ಬುಧವಾರ ಆರಂಭಗೊಂಡ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್​ನಲ್ಲಿ 469 ರನ್​ ಗಳಿಸಿ ಸವಾಲೊಡ್ಡಿದೆ. ದ್ವಿತೀಯ ದಿನವಾದ ಗುರುವಾರ ಆಟ ಮುಂದುವರಿಸಿದ ವೇಳೆ ಸ್ಟೀವನ್​ ಸ್ಮಿತ್​ ಮತ್ತು ಟ್ರಾವಿಸ್ ಹೆಡ್ ಅವರು ದಾಖಲೆಯ ಜತೆಯಾಟವೊಂದನ್ನು ನಿರ್ಮಿಸಿದರು. ಈ ಮೂಲಕ 87 ವರ್ಷಗಳ ಹಿಂದಿನ ದಾಖಲೆಯೊಂದು ಪತನಗೊಂಡಿತು. ಉಭಯ ಆಟಗಾರರು ನಾಲ್ಕನೇ ವಿಕೆಟ್‌ಗೆ ಓವಲ್‌ ಮೈದಾನದಲ್ಲಿ ಅತ್ಯಧಿಕ ಜತೆಯಾಟ ನಡೆಸಿದ ಆಟಗಾರರಾಗಿ ಮೂಡಿಬಂದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Mumbai Murder Case: ತನ್ನ ಲಿವ್ ಇನ್‌ ಸಂಗಾತಿಯನ್ನು ತುಣುಕುಗಳಾಗಿ ಕತ್ತರಿಸಿ, ಕುಕ್ಕರ್‌ನಲ್ಲಿ ಕುದಿಸಿದ ಮುಂಬೈ ವ್ಯಕ್ತಿ
 ಶ್ರದ್ಧಾ ವಾಳ್ಕರ್ ರೀತಿಯ ಪ್ರಕರಣವೊಂದು ಮಹಾರಾಷ್ಟ್ರದ (Maharashtra) ಮುಂಬೈನಲ್ಲಿ (Mumbai) ನಡೆದಿದೆ. 56 ವರ್ಷದ ವ್ಯಕ್ತಿಯೊಬ್ಬ ತನ್ನ ಲೈವ್ ಇನ್ ಸಂಗಾತಿಯನ್ನು (Live-in-Partner) ತುಣುಕುಗಳಾಗಿ ಕತ್ತರಿಸಿ, ಕೆಲವು ತುಣುಕುಗಳ್ನು ಕುಕ್ಕರ್‌ನಲ್ಲಿ (Cooker) ಬೇಯಿಸಿದ ಭೀಭೀತ್ಸ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಆರೋಪಿ ಮರ ಕತ್ತರಿಸುವ ಕಟ್ಟರ್ (Tree Cutter) ಬಳಸಿ, ತನ್ನ ಸಂಗಾತಿಯನ್ನು ಕತ್ತರಿಸಿ ಕೊಲೆ ಮಾಡಿದ್ದಾನೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

Continue Reading
Advertisement
Monsoon Fashion 2023
ಫ್ಯಾಷನ್12 seconds ago

Monsoon Fashion 2023: ಫ್ಯಾಷನ್‌ ಲೋಕಕ್ಕೆ ಲಗ್ಗೆ ಇಟ್ಟ ಮಾನ್ಸೂನ್‌ ಸೀಸನ್‌ ವೈಬ್ರೆಂಟ್‌ ಔಟ್‌ಫಿಟ್ಸ್!

Chamarajanagar oxygen tragedy and Dinesh Gundu Rao
ಆರೋಗ್ಯ3 mins ago

Dinesh Gundu Rao: ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣ ಮರು ತನಿಖೆ; ರೆಡಿ ಆಗ್ತಿದೆ ಡಿಪಿಆರ್!

Manja Thread dead person
ಕರ್ನಾಟಕ5 mins ago

Manja Thread: ಯಾರೋ ಹಾರಿಸಿದ ಗಾಳಿಪಟದ ಮಾಂಜಾ ದಾರ ತೆಗೆಯಿತು ಅಮಾಯಕನ ಪ್ರಾಣ!

Lock and unlock of aadhar services through online
ತಂತ್ರಜ್ಞಾನ8 mins ago

Aadhaar Services: ಆನ್‌ಲೈನ್ ಮೂಲಕ ಆಧಾರ್ ‘ಲಾಕ್’ ಮತ್ತು ‘ಅನ್‌ಲಾಕ್’ ಮಾಡುವುದು ಹೇಗೆ?

Gujarat High Court On Termination Of Pregnancy
ದೇಶ16 mins ago

17 ವರ್ಷದ ಹೆಣ್ಣುಮಕ್ಕಳು ಮಗು ಹೆರುವ ಕಾಲವಿತ್ತು; ರೇಪ್‌ ಸಂತ್ರಸ್ತೆಯ ಗರ್ಭಪಾತ ಬೇಡವೆಂದ ಹೈಕೋರ್ಟ್

Virat Kohli troll
ಕ್ರಿಕೆಟ್27 mins ago

WTC Final 2023: ಹಣಕ್ಕಾಗಿ ಅಲ್ಲ, ದೇಶಕ್ಕಾಗಿ ಆಡು; ಔಟಾದ ಬಳಿಕ ಊಟದ ಜತೆ ಬೈಗುಳ ತಿಂದ ಕೊಹ್ಲಿ

Appeals to CM not to increase liquor prices
ಕರ್ನಾಟಕ51 mins ago

Viral News: ಮುಖ್ಯಮಂತ್ರಿಗಳೇ ಎಣ್ಣೆ ರೇಟ್‌ ಜಾಸ್ತಿ ಮಾಡ್ಬೇಡಿ; BPL ಕಾರ್ಡ್‌ದಾರನ ವಾರ್ಷಿಕ ಲೆಕ್ಕ ಮುಂದಿಟ್ಟ ಕುಡುಕರ ಸಂಘ!

A new country is ready in just Rs 15 lakh and the name is Slowjamastan
ಪ್ರಮುಖ ಸುದ್ದಿ59 mins ago

New Country: ಕೇವಲ 15 ಲಕ್ಷ ರೂ.ನಲ್ಲಿ ರೆಡಿ ಆಯ್ತು ಹೊಸ ದೇಶ, ಹೆಸರು ಸ್ಲೋಜಾಮ್‌ಸ್ತಾನ!

water issuse
ಉಡುಪಿ1 hour ago

Viral News: ಶಾಲೆಗೆ ನೀರು ಪೂರೈಸಲು ಹೊರಟಿದ್ದ ಟ್ಯಾಂಕರ್‌ ವಾಪಸ್‌; ನೀರು ಕೊಡ್ಬೇಡ ಎಂದು ಗ್ರಾಪಂ ಅಧ್ಯಕ್ಷ ಅವಾಜ್‌

ICC World Test Championship Final 2023
Live News1 hour ago

WTC Final 2023: ಭಾರತ-ಆಸೀಸ್​ ಮೂರನೇ ದಿನದಾಟದ ಹೈಲೆಟ್ಸ್​

7th Pay Commission
ನೌಕರರ ಕಾರ್ನರ್7 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ4 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ11 hours ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Govt employees ssociation
ಕರ್ನಾಟಕ4 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Village Accountant Recruitment
ಉದ್ಯೋಗ4 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike Order from Govt
ನೌಕರರ ಕಾರ್ನರ್3 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ6 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

7th Pay Commission
ಕರ್ನಾಟಕ7 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Teacher Transfer
ನೌಕರರ ಕಾರ್ನರ್8 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

smartphone
ವಾಣಿಜ್ಯ2 months ago

Mobile export : ಭಾರತದಿಂದ 2022-23ರಲ್ಲಿ 85,000 ಕೋಟಿ ರೂ. ಮೊಬೈಲ್‌ ಫೋನ್‌ ರಫ್ತು

Cancellation of tenders for 108 ambulances and Dinesh Gundu rao
ಆರೋಗ್ಯ4 hours ago

Dinesh Gundu Rao: ಬಿಜೆಪಿ ಅವಧಿಯ 108 ಆಂಬ್ಯುಲೆನ್ಸ್‌, ಡಯಾಲಿಸಿಸ್‌ ಟೆಂಡರ್‌ ರದ್ದು; ಆರೋಗ್ಯ ಇಲಾಖೆಯಲ್ಲಿ ಮೇಜರ್‌ ಸರ್ಜರಿ

Meghalaya Villagers Chase Bangladesh soldiers
ದೇಶ4 hours ago

Viral Video : ಗಡಿ ದಾಟಿ ಭಾರತಕ್ಕೆ ನುಗ್ಗಿದ ಬಾಂಗ್ಲಾ ಯೋಧರು! ಅಟ್ಟಾಟಿಸಿಕೊಂಡು ಒದ್ದೋಡಿಸಿದ ಹಳ್ಳಿಗರು

snake mate in chamarajnagar 2
ಕರ್ನಾಟಕ4 hours ago

Video Viral: ಚಾಮರಾಜನಗರದಲ್ಲಿ ಹಾವುಗಳ ಮಿಲನ; ಗಂಟೆಗೂ ಹೆಚ್ಚು ಸರಸ ಸಲ್ಲಾಪ! ವೈರಲ್‌ ಆಯ್ತು ವಿಡಿಯೊ

Rain in mangalore
ಉಡುಪಿ5 hours ago

Rain News: ಬಿಪರ್‌ಜಾಯ್‌ ಸೈಕ್ಲೋನ್ ಎಫೆಕ್ಟ್‌; ಮಂಗಳೂರಲ್ಲಿ ಚಿಟಪಟ ಮಳೆ

Rain in koppal
ಉಡುಪಿ20 hours ago

Weather Report: ಕರಾವಳಿಯಲ್ಲಿ ಗುಡುಗಲಿರುವ ಮಳೆ; ಮಲೆನಾಡು, ಒಳನಾಡಲ್ಲಿ ಹೇಗಿರಲಿದೆ ಪ್ರಭಾವಳಿ

youths rescued in Kaveri river
ಕರ್ನಾಟಕ22 hours ago

Video Viral: ತಲಕಾಡಿನ ಕಾವೇರಿ ನದಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಮೂವರು ಯುವಕರ ರಕ್ಷಣೆ!

Elephant attack in muttunga wildlife sanctuary
ಕರ್ನಾಟಕ1 day ago

Viral Video: ವನ್ಯಧಾಮದಲ್ಲಿ ಮೂತ್ರಕ್ಕೆಂದು ಕಾಡಿಗೆ ಹೋದ; ಆನೆ ದಾಳಿಗೆ ಹೆದರಿ ಪ್ಯಾಂಟ್‌ ಹಿಡಿದು ಓಡೋಡಿ ಬಂದ!

abhishek ambareesh wedding Reception
ಕರ್ನಾಟಕ2 days ago

Abhishek Ambareesh Reception: ಅಭಿ- ಅವಿವ ಅದ್ಧೂರಿ ಆರತಕ್ಷತೆ; ಲೈವ್‌ ವಿಡಿಯೊ ಇಲ್ಲಿದೆ

N Chaluvarayaswamy about Congress guarantee
ಕರ್ನಾಟಕ2 days ago

Video Viral: ಉಚಿತ ಗ್ಯಾರಂಟಿ ಯೋಜನೆ ಚುನಾವಣೆಯ ಚೀಪ್‌ ಗಿಮಿಕ್‌ ಎಂದ ಕೃಷಿ ಸಚಿವ ಚಲುವರಾಯಸ್ವಾಮಿ!

horoscope today love and horoscope
ಪ್ರಮುಖ ಸುದ್ದಿ2 days ago

Horoscope Today : ಈ ರಾಶಿಯವರಿಗೆ ಇಂದು ಪ್ರೀತಿ ಅಂಕುರವಾಗಲಿದೆಯಂತೆ!

ಟ್ರೆಂಡಿಂಗ್‌

error: Content is protected !!