Site icon Vistara News

Alexander Lukashenko: ಬೆಲಾರಸ್ ಅಧ್ಯಕ್ಷನಿಗೆ ರಷ್ಯಾದಲ್ಲಿ ವಿಷಪ್ರಾಶನ? ಪುಟಿನ್ ಭೇಟಿ ಬಳಿಕ ಅಸ್ವಸ್ಥರಾದ ಲುಕಾಶೆಂಕೋ

Alexander Lukashenko

#image_title

ಮಾಸ್ಕೋ, ರಷ್ಯಾ: ಬೆಲಾರಸ್ ಅಧ್ಯಕ್ಷ (Belarus president) ಅಲೆಕ್ಸಾಂಡರ್ ಲುಕಾಶೆಂಕೋ (Alexander Lukashenko) ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Vladimir Putin) ಅವರೊಂದಿಗೆ ಸಭೆ ನಡೆಸಿದ ಬಳಿಕ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅವರನ್ನು ಮಾಸ್ಕೋದ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವಿಷಯವನ್ನು ಖಚಿತಪಡಿಸಿರುವ ಬೆಲಾರಸ್‌ ಪ್ರತಿಪಕ್ಷದ ನಾಯಕ ವ್ಯಾಲೆರಿ ತ್ಸೆಪ್ಕಾಲೊ (Valery Tsepkalo) ತಿಳಿಸಿದ್ದಾರೆ. ಅಲ್ಲದೇ, ಅಧ್ಯಕ್ಷ ಲುಕಾಶೆಂಕೋ ಅವರಿಗೆ ವಿಷಪ್ರಾಶನ (poisoning) ಮಾಡಿರುವ ಸಾಧ್ಯತೆಗಳಿವೆ ಎಂದು ಅವರು ಹೇಳಿದ್ದಾರೆ. ಉಕ್ರೇನ್ ಮೇಲಿನ ದಾಳಿಗೆ ಸಂಬಂಧಿಸಿದಂತೆ ರಷ್ಯಾ ಬೆಂಬಲಕ್ಕೆ ನಿಂತಿರುವ ಬೆಲಾರಸ್, ಪುಟಿನ್ ಅವರ ಕೆಲವೇ ಕೆಲವು ನಿಕಟ ನಾಯಕರಲ್ಲಿ ಲುಕಾಶೆಂಕೋ ಕೂಡ ಒಬ್ಬರು.

ಸದ್ಯದ ಮಾಹಿತಿಯ ಪ್ರಕಾರ, ಪುಟಿನ್ ಅವರ ಜತೆಗೆ ರಹಸ್ಯ ಮಾತುಕತೆ ನಡೆಸಿದ ಬೆನ್ನಲ್ಲೇ ಲುಕಾಶೆಂಕೋ ಅವರನ್ನು ತ್ವರಿತವಾಗಿ ಮಾಸ್ಕೋ ಸೆಂಟ್ಲ್ ಕ್ಲಿನಿಕಲ್ ಆಸ್ಪತ್ರೆ ದಾಖಲಿಸಲಾಗಿದೆ. ಸದ್ಯ ಅವರು ನಿಗಾ ಘಟಕದಲ್ಲಿದ್ದು, ಅವರನ್ನು ಆರೈಕೆ ಮಾಡಲಾಗುತ್ತಿದೆ ಎಂದು ಬೆಲಾರಸ್ ಪ್ರತಿಪಕ್ಷದ ನಾಯಕ ವ್ಯಾಲೆರಿ ತ್ಸೆಪ್ಕಾಲೊ ಟ್ವೀಟ್ ಮಾಡಿದ್ದಾರೆ.

ಲುಕಾಶೆಂಕೋ ಅವರ ಆರೋಗ್ಯವನ್ನು ವಿಶೇಷ ತಜ್ಞ ವೈದ್ಯರ ತಂಡ ನೋಡಿಕೊಳ್ಳುತ್ತಿದ್ದು, ರಕ್ತ ಶುದ್ದೀಕರಣ ಪ್ರಕ್ರಿಯೆಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಅಲ್ಲದೇ, ಅವರನ್ನು ಬೇರೇಡೆಗೆ ಸ್ಥಳಾಂತರಿಸುವ ಸ್ಥಿತಿಯಲ್ಲಿ ಅವರಿಲ್ಲ ಎಂದು ಹೇಳಲಾಗಿದೆ.

ಬೆಲಾರಸ್ ಪ್ರತಿಪಕ್ಷ ನಾಯಕ ವ್ಯಾಲೇರಿ ಅವರ ಟ್ವೀಟ್

ಬೆಲಾರಸ್ ಸರ್ವಾಧಿಕಾರಿ ಅಧ್ಯಕ್ಷರನ್ನು ಉಳಿಸಿಕೊಳ್ಳುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಲುಕಾಶೆಂಕೋ ಅವರಿಗೆ ವಿಷಪ್ರಾಶನ ಮಾಡಿರುವ ಸಾಧ್ಯತೆಗಳಿವೆ ಎಂದು ಪ್ರತಿಪಕ್ಷದ ನಾಯಕ ವ್ಯಾಲೇರಿ ಅವರು ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಇತ್ತೀಚೆಗೆ ಲುಕಾಶೆಂಕೋ ಅವರ ಅನಾರೋಗ್ಯದ ಕುರಿತು ಸಾಕಷ್ಟು ಸುದ್ದಿಗಳು ಹರಿದಾಡಿದ್ದವು. ತಿಂಗಳ ಆರಂಭದಲ್ಲಿ ರಷ್ಯಾದಲ್ಲಿ ಆಯೋಜಿಸಲಾಗಿದ್ದ ವಿಕ್ಟರಿ ಡೇ ಪರೇಡ್‌ನಲ್ಲಿ ಜಾಸ್ತಿ ಹೊತ್ತು ಪಾಲ್ಗೊಳ್ಳದೇ ವಾಪಸ್ ಆಗಿದ್ದರು. ಅಲ್ಲದೇ, ಪುಟಿನ್ ಜತೆಗಿನ ಔತಣಕೂಟದಲ್ಲೂ ಅವರ ಪಾಲ್ಗೊಂಡಿರಲಿಲ್ಲ. ತುಂಬಾ ದಣಿದ ರೀತಿಯಲ್ಲಿ ಕಾಣುತ್ತಿದ್ದ ಲುಕಾಶೆಂಕೋ ಅವರ ಬಲಗೈ ಬ್ಯಾಂಡೇಜ್ ಕಟ್ಟಲಾಗಿತ್ತು ಮಾಧ್ಯಮಗಳು ವರದಿ ಮಾಡಿದ್ದವು.

ಈ ಸುದ್ದಿಯನ್ನೂ ಓದಿ: Nobel Prize : ನೊಬೆಲ್​ ಪುರಸ್ಕೃತ ಬೆಲಾರಸ್​ನ ಮಾನವ ಹಕ್ಕುಗಳ ಹೋರಾಟಗಾರನಿಗೆ 10 ವರ್ಷ ಜೈಲು ಶಿಕ್ಷೆ! ಇಲ್ಲಿದೆ ಕಾರಣ

ಬಳಿಕ ತಮ್ಮ ಆನಾರೋಗ್ಯದ ಎಲ್ಲ ಸುದ್ದಿಗಳನ್ನು ತಳ್ಳಿ ಹಾಕಿದ್ದ ಲುಕಾಶೆಂಕೋ ಅವರು, ನಾನು ಅಷ್ಟು ಬೇಗ ಸಾಯಲಾರೆ. ಮುಂಬರುವ ದಿನಗಳಲ್ಲಿ ಇನ್ನೂ ಬಹಳ ಕಾಲ ನನ್ನೊಂದಿಗೆ ನೀವು ಹೋರಾಡಬೇಕಿದೆ ಎಂದು ಅವರು ಹೇಳಿದ್ದರು. ಆದರೆ, ಈ ರಷ್ಯಾದಲ್ಲಿ ಪುಟಿನ್ ಸಭೆಯ ವೇಳೆ ಅವರು ತೀವ್ರ ಅಸ್ವಸ್ಥರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸ್ಥಿತಿ ಗಂಭೀರವಾಗಿದ್ದು, ವಿಷ ಪ್ರಾಶನ ಮಾಡಲಾಗಿದೆ ಎಂಬ ಚರ್ಚೆಗಳು ಜೋರಾಗಿವೆ.

ವಿದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version