ನ್ಯೂಯಾರ್ಕ್: ಕೌಟುಂಬಿಕ ಹಿಂಸೆಯ (Domestic Violence) ಹಿನ್ನೆಲೆಯಲ್ಲಿ ಪೊಲೀಸರಿಗೆ (Los Angeles County sheriff) ಕರೆ ಮಾಡಿದ್ದ ಮಹಿಳೆಯು ಪೊಲೀಸರು ಗುಂಡಿಗೆ ಮೃತಪಟ್ಟ ಘಟನೆ ಲಾಸ್ ಏಂಜಲೀಸ್‌ನಲ್ಲಿ ನಡೆದಿದೆ. ಡಿಸೆಂಬರ್ 4ರಂದು ಕಪ್ಪು ಮಹಿಳೆಯು ಅಮೆರಿಕದ ತುರ್ತು ಸಹಾಯವಾಣಣಿ 911 ನಂಬರ್‌ಗೆ ಕರೆ ಮಾಡಿ, ಕೌಟುಂಬಿಕ ಹಿಂಸಾಚಾರದ ಬಗ್ಗೆ ದೂರು ನೀಡಿದ್ದಾರೆ. ಈ ಕರೆಗೆ ಪ್ರತಿಕ್ರಿಯಿಸಿದ ಲಾಸ್ ಏಂಜಲೀಸ್ ಕೌಂಟಿ ಶೆರಿಫ್‌ನ ಸಹಾಯಕ ಅಧಿಕಾರಿಗಳು ಕೂಡಲೇ ಸಂತ್ರಸ್ತೆ ಮನೆಗೆ ಬಂದಿದ್ದಾರೆ. ಈ ವೇಳೆ, ನಡೆದ ಗುಂಡಿನ ದಾಳಿಯಲ್ಲಿ ದೂರು ನೀಡಿದ ಕಪ್ಪು ಮಹಿಳೆಯೇ ಪೊಲೀಸರ ಗುಂಡಿಗೆ ಬಲಿಯಾಗಿದ್ದಾಳೆ(Black Woman Dead).
ಡಿಸೆಂಬರ್ 4ರ ಸಂಜೆ 27 ವರ್ಷದ ನಿಯಾನಿ ಫಿನ್ಲೇಸನ್ ಕೌಟುಂಬಿಕ ಹಿಂಸಾಚಾರದ ಪ್ರಕರಣವನ್ನು ವರದಿ ಮಾಡಲು 911ಗೆ ಡಯಲ್ ಮಾಡಿ, ತನ್ನ ಮಾಜಿ ಗೆಳೆಯ ತನ್ನನ್ನು ಒಂಟಿಯಾಗಿ ಬಿಡುತ್ತಿಲ್ಲ ಎಂದು ಹೇಳಿದ್ದಾಳೆ. ಈ ವೇಳೆ, ಜೋರಾಗಿ ಕಿರುಚಾಡುವ ಮತ್ತು ಗಲಾಟೆ ಕೇಳಿ ಬರುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಲಾಸ್ ಏಂಜಲೀಸ್‌ನ ಕೌಂಟಿ ಶೆರಿಫ್‌ನ ಉಪ ಸಿಬ್ಬಂದಿಯು ಲ್ಯಾಂಕಾಸ್ಟರ್‌ನಲ್ಲಿರುವ ಈಸ್ಟ್ ಅವೆನ್ಯೂ ಅಪಾರ್ಟ್‌ಮೆಂಟ್‌ಗೆ ಆಗಮಿಸಿದ್ದಾರೆ. ಆಗ ಜಗಳಾಡುವುದು ಮತ್ತು ಕಿರಾಚುಡುವುದು ಕೇಳಿದ್ದಾರೆ. ಈ ವೇಳೆ, ಪೊಲೀಸರು ಬಲವಂತವಾಗಿ ಬಾಗಿಲು ತೆರೆದಿದ್ದಾರೆ. ಆಗ, ಮಹಿಳೆ ಅಡುಗೆ ಮನೆಯಲ್ಲಿ ಬಳಸುವ ದೊಡ್ಡ ಚಾಕು ಹಿಡಿದು ನಿಂತಿರುವುದನ್ನು ಕಂಡಿದ್ದಾರೆ. ಒಂಬತ್ತು ವರ್ಷದ ಮಗಳನ್ನು ತಳ್ಳಿದ್ದಕ್ಕಾಗಿ ತನ್ನ ಮಾಜಿ ಪ್ರಿಯಕರನನ್ನು ಇರಿದು ಹಾಕುವುದಾಗಿ ಮಹಿಳೆ ಚೀರುತ್ತಿದ್ದಳು ಎಂದು ಪೊಲೀಸರು ಹೇಳಿದ್ದಾರೆ.
ಬಳಿಕ ಮಹಿಳೆಯು ತನ್ನ ಗೆಳೆಯ ಕುಳಿತಿದ್ದ ಜಾಗದತ್ತ ನುಗ್ಗಿ, ಬ್ಲೇಡ್ ಚಾಕುನೊಂದಿಗೆ ಆತನನ್ನು ಹಿಡಿದುಕೊಂಡಳು. ಪರಿಸ್ಥಿತಿಯನ್ನು ಹೀಗೆ ಬಿಟ್ಟರೆ ಗಂಭೀರ ಪರಿಣಾಮ ಎದುರಾಗಬಹುದು ಎಂದು ಅರಿತ ದಾಳಿ ನಡೆಸಿದ್ದಾರೆ. ಆಗ ಈ ದಾಳಿಯಲ್ಲಿ ಮಹಿಳೆಗೆ ಗುಂಡು ತಗುಲಿವೆ.
ತೀವ್ರ ರಕ್ತ ಸ್ರಾವದಿಂದ ಬಳಲುತ್ತಿದ್ದ ಮಹಿಳೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆಕೆ ಮೃತಪಟ್ಟಿದ್ದಾಳೆಂದು ಆಸ್ಪತ್ರೆಯ ವೈದ್ಯರು ಘೋಷಿಸಿದ್ದಾರೆ. ಈ ಕುರಿತು ಒಟ್ಟಾರೆ ತನಿಖೆಯನ್ನು ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶೆರಿಫ್‌ನ ಡೆಪ್ಯೂಟಿ ಟೈ ಶೆಲ್ಟನ್ 202ರಲ್ಲಿ ಇದೇ ರೀತಿಯ ಪರಿಸ್ಥಿತಿಯಲ್ಲಿ ಒಬ್ಬ ವ್ಯಕ್ತಿಯನ್ನು ಕೊಂದಿದ್ದ ಎಂಬ ಆರೋಪವಿದೆ.
ನನ್ನ ತಾಯಿ ಅವರಿಗೆ(ಪೊಲೀಸರಿಗೆ) ಬೆದರಿಕೆ ಹಾಕುತ್ತಿದ್ದಾರೆಂದು ಪೊಲೀಸರು ಸುಳ್ಳು ಹೇಳುತ್ತಿದ್ದಾರೆ ಎಂದು ಮೃತ ಮಹಿಳೆಯ ಮಗಳು ಕ್ಸೈಶಾ ಆರೋಪಿಸಿದ್ದಾರೆ. ಈಕೆಯ ಕಣ್ಣ ಮುಂದೆಯೇ ಪೊಲೀಸ್ ಗುಂಡಿಗೆ ತಾಯಿ ಬಲಿಯಾಗಿದ್ದಾಳೆ. ಗುರುವಾರ ತನ್ನ ಅಜ್ಜಿಯರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಶೆಲ್ಟನ್ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಸ್ಪಷ್ಟಪಡಿಸಿದಳು.
ನನ್ನ ಅಮ್ಮ ನನ್ನ ಬೆಸ್ಟ್ ಫ್ರೆಂಡ ಆಗಿದ್ದಳು. ಅವಳು ಯಾವಾಗಲೂ ನನ್ನೊಂದಿಗೆ ಇದ್ದಳು. ಈಗ ಅವಳಿಲ್ಲ. ಅವಳು ಮತ್ತೆ ಎಂದೂ ಹಿಂದಿರುಗಿ ಬರಲಾಳು ಎಂಬುದನ್ನೇ ನಂಬಲಾಗುತ್ತಿಲ್ಲ. ನನ್ನ ಎರಡು ವರ್ಷದ ತಂಗಿ ಪದೇ ಪದೇ ಅಮ್ಮ ಎಲ್ಲಿ ಎಂದು ಕೇಳುತ್ತಿದ್ದಾಳೆ. ಆ ಮಗುವಿಗೆ ಹೇಗೆ ಹೇಳಬೇಕು ಎಂದು ಗೊತ್ತಾಗುತ್ತಿಲ್ಲ ಸಂತ್ರಸ್ತ ಮಹಿಳೆಯ ದೊಡ್ಡ ಮಗಳು ಹೇಳಿದ್ದಾಳೆ.
ಈ ಸುದ್ದಿಯನ್ನೂ ಓದಿ: RPF Firing: ರೈಲಿನಲ್ಲಿ ಶೂಟೌಟ್ ಪ್ರಕರಣ; ಬೀದರ್‌ನ ವ್ಯಕ್ತಿ ಸಾವು!