Site icon Vistara News

Rishi Sunak | ಬ್ರಿಟನ್ ಪ್ರಧಾನಿ ರಿಷಿ ಸುನಕ್ ಕೈಯಲ್ಲಿ ಪವಿತ್ರ ಕೆಂಪು ದಾರ ಕಲಾವಾ!

Rishi Sunak

ಲಂಡನ್: ರಿಷಿ ಸನಕ್ (Rishi Sunak) ಅವರು ಇಂಗ್ಲೆಂಡ್‌ನ ಮೊದಲ ಭಾರತೀಯ ಮೂಲದ ಹಾಗೂ ಹಿಂದು ಪ್ರಧಾನಿಯಾಗಿದ್ದಾರೆ. ಅವರು ಅಧಿಕಾರ ಸ್ವೀಕರಿಸುವ ವೇಳೆ, ಹಿಂದೂ ಸಂಪ್ರದಾಯದ ಪವಿತ್ರ ದಾರವನ್ನು ಕಲಾವಾವನ್ನು ಕಟ್ಟಿಕೊಂಡಿರುವುದು ಕಂಡು ಬಂತು. 10 ಡೌನಿಂಗ್ ಸ್ಟ್ರೀಟ್‌ನಲ್ಲಿ ಅವರು ಮಾತನಾಡುವಾಗ ಅವರ ಕೈಯಲ್ಲಿದ್ದ ಪವಿತ್ರ ದಾರವು ಕ್ಯಾಮೆರಾ ಕಣ್ಣುಗಳಿಗೆ ಕಂಡಿದೆ.

ಮೌಳಿ ಅಥವಾ ಕಲಾವಾವು ಹತ್ತಿಯ ಕೆಂಪು ದಾರವಾಗಿದ್ದು, ಇದನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಈ ದಾರವನ್ನು ಹಿಂದೂಗಳ ಎಲ್ಲಾ ಧಾರ್ಮಿಕ ಉದ್ದೇಶಗಳಿಗಾಗಿ ಬಳಸುತ್ತಾರೆ. ಈ ದಾರವನ್ನು ದೇವರಿಗೆ ಬಟ್ಟೆಯ ನೈವೇದ್ಯವಾಗಿ ಬಳಸಲಾಗುತ್ತದೆ. ಹಾಗೆಯೇ ಈ ದಾರವು ಯಾವುದೇ ಪೂಜೆಯ ಅವಿಭಾಜ್ಯ ಅಂಗವಾಗಿದೆ ಎಂದು ಹೇಳಲಾಗುತ್ತದೆ. ಕೈಗೆ ಈ ದಾರವನ್ನು ಕಟ್ಟಿಕೊಳ್ಳುವುದರಿಂದ ನೀವು ನಿಮ್ಮ ಶತ್ರುಗಳ ಮೇಲೆ ಜಯ ಸಾಧಿಸಬಹುದು, ಅದು ರಕ್ಷಣೆ ಒದಗಿಸುತ್ತದೆ ಎಂಬ ನಂಬಿಕೆ ಹಿಂದೂಗಳಲ್ಲಿ ಇದೆ.

ಲಿಜ್ ಟ್ರಸ್ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಭಾರತೀಯ ಮೂಲದ ಹಾಗೂ ಇನ್ಫೋಸಿಸ್ ಕಂಪನಿ ಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ ಆಗಿರುವ ರಿಷಿ ಸುನಕ್ ಅವರು ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಬೋರಿಸ್ ಜಾನ್ಸನ್ ಅವರು ರಾಜೀನಾಮೆ ನೀಡಿದಾಗಲೂ ರಿಷಿ ಪ್ರಧಾನಿ ಹುದ್ದೆಯ ಆಯ್ಕೆ ರೇಸಿನಲ್ಲಿ ಅಂತಿಮ ಹಂತದವರೆಗೂ ಬಂದಿದ್ದರು.

ಇದನ್ನೂ ಓದಿ | Rishi Sunak | ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ರಿಷಿ ಸುನಕ್! 3ನೇ ಕಿಂಗ್ ಚಾರ್ಲ್ಸ್‌ರಿಂದ ನೇಮಕ

Exit mobile version