ಲಂಡನ್: ಕಳೆದ ವರ್ಷದಿಂದ ತೀವ್ರ ಅನಾರೋಗ್ಯಕ್ಕೀಡಾಗಿದ್ದ ಬ್ರಿಟನ್ ರಾಣಿ ಎಲಿಜಬೆತ್ II (Queen Elizabeth II) ಅವರು ಗುರುವಾರ ನಿಧರಾಗಿದ್ದಾರೆ. ೧೯೫೩ರಿಂದ ಬ್ರಿಟನ್ ರಾಣಿಯಾಗಿರುವ ಅವರು ಸುದೀರ್ಘ ಅವಧಿಗೆ ಆಡಳಿತ ನಡೆಸಿದ ಖ್ಯಾತಿ ಹೊಂದಿದ್ದರು. ತೀವ್ರ ಅನಾರೋಗ್ಯಕ್ಕೀಡಾಗಿದ್ದ ಅವರು ಕೆಲ ದಿನಗಳಿಂದ ಚಿಕಿತ್ಸೆಗೆ ಸ್ಪಂದಿಸುತ್ತಿರಲಿಲ್ಲ.
ರಾಣಿ ಎಲಿಜಬೆತ್ II ಗೆ ಕಳೆದ ಅಕ್ಟೋಬರ್ನಿಂದಲೂ ಅನಾರೋಗ್ಯ ಕಾಡುತ್ತಿತ್ತು. ಈಗೀಗಂತೂ ಅವರಿಗೆ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಅಷ್ಟೇ ಅಲ್ಲ ಎದ್ದು ನಿಲ್ಲಲೂ ಸಾಧ್ಯವಾಗದ ಸ್ಥಿತಿ ತಲುಪಿದ್ದರು. ಇತ್ತೀಚೆಗೆ ಅವರು ನಡೆಸಬೇಕಿದ್ದ ಎಲ್ಲ ಸಭೆಗಳನ್ನೂ ರದ್ದುಗೊಳಿಸಲಾಗಿತ್ತು.
ರಾಣಿ ಎಲಿಜಬೆತ್ ನಿಧನದಿಂದಾಗಿ ಬಕಿಂಗ್‌ಹ್ಯಾಮ್ ಪ್ಯಾಲೇಸ್ ಎದುರು ಸಾವಿರಾರು ಜನ ಸೇರಿದ್ದಾರೆ ಎಂದು ತಿಳಿದುಬಂದಿದೆ. ಆದಾಗ್ಯೂ, ಆರೋಗ್ಯ ಸ್ಥಿತಿ ಗಂಭೀರವಾದ ಕಾರಣ ಎಲಿಜಬೆತ್ ಅವರ ಎಲ್ಲ ಸಂಬಂಧಿಕರು, ರಾಜ ಮನೆತನದವರನ್ನು ಕರೆಸಲಾಗಿದೆ.