Site icon Vistara News

Cancer treatment: ಕ್ಯಾನ್ಸರ್ ಇಲ್ಲದ ಮಹಿಳೆಗೆ ಕಿಮೋ ಥೆರಪಿ ಮಾಡಿದ ಆಸ್ಪತ್ರೆ; ಮುಂದೇನಾಯಿತು?

Cancer treatment

ನ್ಯೂಯಾರ್ಕ್: ಕ್ಯಾನ್ಸರ್ (cancer) ಇಲ್ಲದೇ ಇದ್ದರೂ ಮಹಿಳೆಯೊಬ್ಬರಿಗೆ ಕಿಮೋಥೆರಪಿ (chemotherapy) ಮಾಡಿರುವ ಘಟನೆ ಅಮೆರಿಕದ (america) ಟೆಕ್ಸಾಸ್ ನಲ್ಲಿ (Texas) ನಡೆದಿದೆ. ತೀವ್ರ ಹೊಟ್ಟೆನೋವೆಂದು ಆಸ್ಪತ್ರೆಗೆ ಹೋಗಿದ್ದ ಮಹಿಳೆಗೆ ವೈದ್ಯರ ಎಡವಟ್ಟಿನಿಂದ ತಪ್ಪಾಗಿ ಕ್ಯಾನ್ಸರ್ ಚಿಕಿತ್ಸೆ (Cancer treatment) ನೀಡಲಾಗಿದೆ ಎಂದು ಮಹಿಳೆ ಹೇಳಿಕೊಂಡಿದ್ದಾಳೆ. 39 ವರ್ಷದ, ಎರಡು ಮಕ್ಕಳ ತಾಯಿಯಾಗಿದ್ದ ಲಿಸಾ ಮಾಂಕ್ (Lisa Monk) 2022 ರಲ್ಲಿ ಹೊಟ್ಟೆ ನೋವಿನಿಂದ (stomach pain) ಬಳಲುತ್ತಿದ್ದರು. ಅದು ಮೂತ್ರಪಿಂಡದ ಕಲ್ಲುಗಳಿಗೆ ಸಂಬಂಧಿಸಿದ್ದು ಎಂದು ಅವರು ಶಂಕಿಸಿದ್ದರು. ವೈದ್ಯಕೀಯ ಪರೀಕ್ಷೆಯಲ್ಲೂ ಇದು ದೃಢಪಟ್ಟಿತು.

ಯಾವಾಗ ತಿಳಿಯಿತು ?

ಬಳಿಕ ಅವರು 2023ರ ಜನವರಿಯಲ್ಲಿ ಮೂತ್ರಪಿಂಡದಲ್ಲಿ ಇದ್ದ ಕಲ್ಲುಗಳನ್ನು ತೆಗೆದು ಹಾಕಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಆದರೆ ಆ ಬಳಿಕ ಅವರಿಗೆ ಕ್ಯಾನ್ಸರ್ ಇದೆ ಎಂದು ವೈದ್ಯರು ಹೇಳಿದ್ದರು.

ಇದನ್ನೂ ಓದಿ: IPL 2024: ಹೆಲಿಕಾಪ್ಟರ್ ಶಾಟ್ ಮೂಲಕ ಬೌಂಡರಿ ಬಾರಿಸಿದ ಪರಾಗ್; ವಿಡಿಯೊ ವೈರಲ್​

ಮೂತ್ರಪಿಂಡವನ್ನು ಪರೀಕ್ಷಿಸಲು ಲ್ಯಾಬ್‌ ಗೆ ಕಳುಹಿಸುವ ಮೊದಲು ಮೂರು ವಿಭಿನ್ನ ರೋಗಶಾಸ್ತ್ರ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ. ಅಲ್ಲಿ ಅವರು ಗುಲ್ಮದಲ್ಲಿ ಕಂಡುಬರುವ ಕ್ಲಿಯರ್ ಸೆಲ್ ಆಂಜಿಯೋಸಾರ್ಕೊಮಾ ಎಂಬ ಅಪರೂಪದ ಕ್ಯಾನ್ಸರ್‌ ಇರುವುದನ್ನು ಪತ್ತೆ ಮಾಡಲಾಗಿದೆ.


ಗುಲ್ಮದಲ್ಲಿ ಕಂಡುಬರುವ ರಕ್ತನಾಳದ ಕ್ಯಾನ್ಸರ್ ಇದೆ ಎಂದು ಆಕೆ ಮನೆಯವರಿಗೆ ಹೇಳಲಿಲ್ಲ. 15 ತಿಂಗಳು ಮಾತ್ರ ನನ್ನ ಜೀವನಕ್ಕೆ ಅವಕಾಶವಿತ್ತು. ಆ ಸಂದರ್ಭ ಅತ್ಯಂತ ಕೆಟ್ಟದಾಗಿತ್ತು ಎಂದು ಮಾಂಕ್ ವಿಡಿಯೋದಲ್ಲಿ ಹೇಳಿದ್ದಾರೆ.

ಕಿಮೊಥೆರಪಿ ಪ್ರಾರಂಭ ಹೇಗಿತ್ತು ?

ಬಳಿಕ ತೀವ್ರ ತೆರನಾದ ಕಿಮೊಥೆರಪಿಗೆ ಒಳಗಾಗಬೇಕಿತ್ತು. ಇದಕ್ಕಾಗಿ ಕ್ಯಾನ್ಸರ್ ಆಸ್ಪತ್ರೆಗೆ ದಾಖಲಿಸಲಾಯಿತು. 2023ರ ಮಾರ್ಚ್ ನಲ್ಲಿ ಆಕೆಯ ಮೊದಲ ಸುತ್ತಿನ ಕೀಮೋವನ್ನು ಮಾಡಲಾಗಿತ್ತು. ಇದರಿಂದ ಎಲ್ಲ ಕೂದಲನ್ನು ಕಳೆದುಕೊಂಡೆ. ಬಳಿಕ ಎರಡನೇ ಸುತ್ತಿನ ಚಿಕಿತ್ಸೆ ನೀಡಿದರು. ಇದರಿನ ವಾಂತಿ ಪ್ರಾರಂಭವಾಯಿತು. ಚರ್ಮ ಬೆಳ್ಳಿಯ ಹಾಗೆ ಬಿಳುಚಿಕೊಂಡಿತ್ತು.

ಇದು ತುಂಬಾ ಕರಾಳ ಸಮಯ. ಆದರೂ ಈ ಸಂದರ್ಭದಲ್ಲಿ ನಾನು ಇನ್ನೆಂದಿಗೂ ಭೇಟಿಯಾಗಲು ಸಾಧ್ಯವಿಲ್ಲ ಎಂದುಕೊಂಡಿದ್ದ ಮೊಮ್ಮಕ್ಕಳಿಗೆ ಮತ್ತು ನಾನು ಭಾಗವಹಿಸದ ಮದುವೆ ಸಮಾರಂಭದವರಿಗೆ ವಿದಾಯ ಪತ್ರಗಳನ್ನು ಬರೆಯುತ್ತಿದ್ದೆ.

ಕ್ಯಾನ್ಸರ್ ಇಲ್ಲವೆಂದು ಯಾವಾಗ ತಿಳಿಯಿತು ?

ಆದರೆ ಏಪ್ರಿಲ್‌ನಲ್ಲಿ ಚಿಕಿತ್ಸೆ ವೇಳೆ ಮಾಂಕ್ ಅವರು ಎಂದಿಗೂ ಕ್ಯಾನ್ಸರ್ ಅನ್ನು ಹೊಂದಿರಲಿಲ್ಲ ಎಂಬುದು ತಿಳಿಯಿತು. ರೋಗಶಾಸ್ತ್ರದ ವರದಿ ತಪ್ಪಾಗಿದೆ ಎಂದು ವೈದ್ಯರು ಹೇಳಿದರು.

ನರ್ಸ್ ವೊಬ್ಬರು ನನ್ನಲ್ಲಿ ರೋಗಲಕ್ಷಣಗಳನ್ನು ಕೇಳುತ್ತಿದ್ದಾಗ ಅವರಿಗೆ ತಮ್ಮ ತಪ್ಪಿನ ಅರಿವಾಗಿತ್ತು. ಕಂಪ್ಯೂಟರ್ ನೋಡುತ್ತಿದ್ದ ಅವರು ಇದ್ದಕ್ಕಿದ್ದಂತೆ ಮಾತನಾಡುವುದನ್ನು ನಿಲ್ಲಿಸಿ ಗಾಬರಿಯಿಂದ ವೈದ್ಯರನ್ನು ಕರೆದುಕೊಂಡು ಬರಲು ಕೋಣೆಯಿಂದ ಓಡಿಹೋದಳು. ಸುಮಾರು 15 ನಿಮಿಷಗಳ ಕಾಲ ನಾನು ಒಬ್ಬಂಟಿಯಾಗಿದ್ದೆ. ವೈದ್ಯರು ಹಿಂತಿರುಗಿ ಸಾಕಷ್ಟು ವಿವರಣೆಗಳನ್ನು ನೀಡಿ ಕ್ಯಾನ್ಸರ್ ಇಲ್ಲ ಎಂಬುದನ್ನು ಹೇಳಿದರು.


ಕ್ಯಾನ್ಸರ್ ಇಲ್ಲ ಎಂದು ಆ ಕ್ಷಣ ಅನಿಸಿದರೂ ನಾನು ಕ್ಯಾನ್ಸರ್ ರೋಗಿಗಳಂತೆ ಕಾಣುತ್ತಿದ್ದೆ. ವಾಂತಿ ಮಾಡುತ್ತಿದ್ದರಿಂದ ನನಗೆ ಕ್ಯಾನ್ಸರ್ ಇದೆ ಎಂದು ಅನಿಸಿತ್ತು. ಸಾಕಷ್ಟು ಅರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದೆ. ವೈದ್ಯರು ನನ್ನನ್ನು ಅಭಿನಂದಿಸಿದರು. ಅದು ನನಗೆ ನಿಜವಾಗಿಯೂ ಹಿಂಸೆ ಎಂದೆನಿಸಿತು ಎಂದು ಮಾಂಕ್ ಹೇಳಿದ್ದಾರೆ.

ಆ ಸಮಯದಲ್ಲಿ ನಾನು ಆಘಾತಕ್ಕೊಳಗಾಗಿದ್ದೆ ಆದರೆ ಈಗ ಹೆಚ್ಚು ಸೂಕ್ತವಾದ ಪ್ರತಿಕ್ರಿಯೆ ನಾನು ನೀಡಬೇಕಿತ್ತು. ಅದಕ್ಕೆ ಪರೀಕ್ಷಾ ವರದಿಯ ಪ್ರತಿಯನ್ನು ಕೇಳಿ ಪತಿಗೆ ಕರೆ ಮಾಡಿದೆ.

ಎರಡನೇ ಸುತ್ತಿನ ಕೀಮೋಗೆ ಮುಂಚಿತವಾಗಿಯೇ ಈ ಮಾಹಿತಿ ವರದಿಯಲ್ಲಿರುವುದನ್ನು ನೋಡಿದ ಆಕೆ ವೈದ್ಯರು ಸರಿಯಾಗಿ ವರದಿಯನ್ನು ಓದಿದ್ದರೆ ನಾನು ಎರಡನೇ ಸುತ್ತಿನ ಕೀಮೋಥೆರಪಿಯನ್ನು ತಪ್ಪಿಸುತ್ತಿದ್ದೆ ಎಂದು ಮಾಂಕ್ ತಿಳಿಸಿದ್ದಾರೆ.

ಕ್ಯಾನ್ಸರ್ ಇಲ್ಲ ಎಂಬುದು ದೃಢಪಟ್ಟ ಮೇಲೂ ಒಂದೆರಡು ದಿನ ಆಸ್ಪತ್ರೆಯಲ್ಲೇ ಉಳಿದೆ. ಈ ಬಗ್ಗೆ ವೈದ್ಯರೊಂದಿಗೆ ಚರ್ಚಿಸಿದ ನಂತರ ಕ್ಯಾನ್ಸರ್ ಅಲ್ಲ ಎಂಬುದನ್ನು ದೃಢಪಡಿಸಿದರು. ಮೂತ್ರಪಿಂಡದಲ್ಲಿ ಕಲ್ಲು ಇದ್ದುದರಿಂದ ಕೇವಲ ರಕ್ತನಾಳದ ಚಟುವಟಿಕೆಗೆ ತೊಂದರೆಯಾಗಿತ್ತು. ಆದರೆ ಅದರಲ್ಲಿ ಯಾವುದೇ ಕ್ಯಾನ್ಸರ್ ಇರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ ಎಂದು ಮಾಂಕ್ ಹೇಳಿಕೊಂಡಿದ್ದಾರೆ.

Exit mobile version