Site icon Vistara News

China Earthquake: ಪ್ರಬಲ ಭೂಕಂಪಕ್ಕೆ ತತ್ತರಿಸಿದ ಚೀನಾ, 110ಕ್ಕೂ ಅಧಿಕ ಬಲಿ

china earthquake

ಬೀಜಿಂಗ್‌: ವಾಯುವ್ಯ ಚೀನಾದ ಗನ್ಸು ಮತ್ತು ಕಿಂಗ್ಹೈ ಪ್ರಾಂತ್ಯದಲ್ಲಿ ಸಂಭವಿಸಿದ 6.2 ತೀವ್ರತೆಯ ಭೂಕಂಪದಲ್ಲಿ ಕನಿಷ್ಠ 111 ಮಂದಿ ಸಾವನ್ನಪ್ಪಿದ್ದಾರೆ. ಭೂಕಂಪದಲ್ಲಿ (China Earthquake) ಗನ್ಸು ಪ್ರಾಂತ್ಯದಲ್ಲಿ 100 ಜನ ಮತ್ತು ನೆರೆಯ ಕಿಂಗ್ಹೈನಲ್ಲಿ 11 ಜನರು ಸಾವನ್ನಪ್ಪಿದ್ದಾರೆ ಎಂದು ಸರ್ಕಾರಿ ಸುದ್ದಿಸಂಸ್ಥೆ ತಿಳಿಸಿದೆ.

ಆದರೆ ಭೂಕಂಪದಲ್ಲಿ ಗನ್ಸು ಪ್ರಾಂತ್ಯದಲ್ಲಿ 86 ಮತ್ತು ನೆರೆಯ ಕಿಂಗ್ಹೈ ಪ್ರಾಂತ್ಯದಲ್ಲಿ 86 ಮಂದಿ ಸಾವನ್ನಪ್ಪಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ಹೇಳಿದೆ. ಸೋಮವಾರ ರಾತ್ರಿ ಸುಮಾರು 10 ಕಿಲೋಮೀಟರ್ ಆಳದಲ್ಲಿ ಭೂಕಂಪನ ಸಂಭವಿಸಿದೆ. ಗನ್ಸು ಪ್ರಾಂತ್ಯ ಮತ್ತು ಕಿಂಗ್ಹೈ ಪ್ರಾಂತ್ಯದಲ್ಲಿ ಭೂಕಂಪದ ಬಳಿಕ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ಭೂಕಂಪದಿಂದ 230ಕ್ಕೂ ಹೆಚ್ಚು ಜನ ಗಾಯಗೊಂಡರು. ಮನೆಗಳು ಮತ್ತು ರಸ್ತೆಗಳು ಹಾನಿಗೊಳಗಾದವು. ವಿದ್ಯುತ್ ವ್ಯವಸ್ಥೆ ಅಸ್ತವ್ಯಸ್ತಗೊಂಡಿತು.

ತುರ್ತು ಕಾರ್ಯಾಚರಣೆ ಬಗ್ಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಪ್ರಮುಖ ಸೂಚನೆಗಳನ್ನು ನೀಡಿದ್ದಾರೆ. ಪೂರ್ಣ ಪ್ರಮಾಣದ ಹುಡುಕಾಟ ಮತ್ತು ರಕ್ಷಣಾ ಪ್ರಯತ್ನಗಳು ನಡೆದಿವೆ. ಮನೆಗಳ ಕುಸಿತ ಸೇರಿದಂತೆ ಭೂಕಂಪ ತೀವ್ರ ಹಾನಿಯನ್ನುಂಟುಮಾಡಿದೆ. ಸುರಕ್ಷತೆಗಾಗಿ ಜನರು ಬೀದಿಗೆ ಓಡಿಬಂದರು. ಮಂಗಳವಾರ ಮುಂಜಾನೆ ರಕ್ಷಣಾ ಕಾರ್ಯ ಮುಂದುವರಿದಿದೆ.

ಯುಎಸ್ ಜಿಯೋಲಾಜಿಕಲ್ ಸರ್ವೆ ಪ್ರಕಾರ ರಿಕ್ಟರ್‌ 5.9 ತೀವ್ರತೆ ಮತ್ತು ಕ್ಸಿನ್ಹುವಾದಿಂದ 6.2 ತೀವ್ರತೆ ದಾಖಲಾಗಿದೆ. ಕೆಲವು ಸ್ಥಳೀಯ ಗ್ರಾಮಗಳಲ್ಲಿ ವಿದ್ಯುತ್ ಮತ್ತು ನೀರು ಸರಬರಾಜು ಅಸ್ತವ್ಯಸ್ತಗೊಂಡಿದೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ವೀಡಿಯೊಗಳಲ್ಲಿ ಬಿದ್ದ ಮನೆಗಳು ಮತ್ತು ಇತರ ಅವಶೇಷಗಳನ್ನು ಕಂಡುಬಂದಿವೆ.

USGS ಪ್ರಕಾರ, ಸೋಮವಾರ ಸ್ಥಳೀಯ ಕಾಲಮಾನ ರಾತ್ರಿ 11:59ಕ್ಕೆ 10 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದೆ. ಆರಂಭದಲ್ಲಿ 6.0 ರಿಕ್ಟರ್‌ ತಿಳಿಯಲಾಗಿತ್ತು. ಭೂಕಂಪ ಗನ್ಸು ಪ್ರಾಂತ್ಯದ ರಾಜಧಾನಿ ಲ್ಯಾನ್‌ಝೌದಿಂದ ಸುಮಾರು 100 ಕಿಲೋಮೀಟರ್ ನೈಋತ್ಯಕ್ಕೆ ಸಂಭವಿಸಿದೆ. ನಂತರ ಹಲವಾರು ಪಶ್ಚಾತ್‌ ಕಂಪನಗಳು ಘಟಿಸಿವೆ.

ಇದನ್ನೂ ಓದಿ: Pneumonia Outbreak: ಚೀನಾದಿಂದ ಬಂದೇ ಬಿಟ್ಟಿತು ನ್ಯುಮೋನಿಯಾ ಸೋಂಕು, ದಿಲ್ಲಿಯಲ್ಲಿ 7 ಮಂದಿಗೆ ಪೊಸಿಟಿವ್

Exit mobile version