Site icon Vistara News

Spy Balloon: ಅಮೆರಿಕ ಮಾತ್ರವಲ್ಲ, ಭಾರತದ ಮೇಲೂ ಚೀನಾ ಬಲೂನ್ ಕಣ್ಗಾವಲು!

China targeted countries including India with spy balloon

ನವದೆಹಲಿ: ಅಮೆರಿಕದ ಸೇನಾ ಸೂಕ್ಷ್ಮ ಪ್ರದೇಶಗಳ ಮೇಲೆ ಹಾರಾಟ ನಡೆಸುತ್ತಿದ್ದ ಚೀನಾದ ಗೂಢಚಾರ ಬಲೂನನ್ನು (spy balloon) ಭದ್ರತಾ ಪಡೆಗಳು ಹೊಡೆದುರುಳಿಸಿದ ಮಾರನೇ ದಿನವೇ ಪ್ರಕಟವಾದ ವರದಿಯೊಂದು ಆತಂಕಕ್ಕೆ ಕಾರಣವಾಗಿದೆ. ಭಾರತ, ಜಪಾನ್ ಸೇರಿದಂತೆ ವಿವಿಧ ದೇಶಗಳನ್ನು ಗುರಿಯಾಗಿಸಿಕೊಂಡು ಚೀನಾ ಗೂಢಚಾರ ಬಲೂನ್‌ಗಳ ಕಾರ್ಯಾಚರಣೆ ನಡೆಸುತ್ತಿದೆ ಎಂದು ಈ ವರದಿಯಲ್ಲಿ ತಿಳಿಸಲಾಗಿದೆ.

ಚೀನಾದ ದಕ್ಷಿಣ ಕರಾವಳಿಯ ಹೈನಾನ್ ಪ್ರಾಂತ್ಯದಿಂದ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಕಣ್ಗಾವಲು ಬಲೂನ್ ಪ್ರಯತ್ನವು ಜಪಾನ್, ಭಾರತ, ವಿಯೆಟ್ನಾಂ, ತೈವಾನ್ ಮತ್ತು ಫಿಲಿಪ್ಪಿನ್ಸ್ ಸೇರಿದಂತೆ ಚೀನಾಕ್ಕೆ ಸವಾಲೊಡ್ಡುವ ದೇಶಗಳಲ್ಲಿನ ಮಿಲಿಟರಿ ಆಸ್ತಿಗಳ ಮಾಹಿತಿಯನ್ನು ಸಂಗ್ರಹಿಸಿದೆ ಎಂದು ಅಮೆರಿಕದ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

ಇದನ್ನೂ ಓದಿ: ಲ್ಯಾಟಿನ್​ ಅಮೆರಿಕದಲ್ಲೂ ಹಾರುತ್ತಿದೆ ಚೀನಾದ ಬೇಹುಗಾರಿಕಾ ಬಲೂನ್​​; ಅಮೆರಿಕದತ್ತ ಬರುತ್ತಿಲ್ಲ ಎಂದ ಪೆಂಟಗನ್​

ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ‌ಯ ವಾಯು ಪಡೆಯ ಭಾಗವಾಗಿ ಈ ಕಣ್ಗಾವಲ ಬಲೂನ್‌ಗಳನ್ನು ಐದು ಖಂಡಗಳಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ಪತ್ರಿಕೆಯು ವರದಿ ಮಾಡಿದೆ. ಮತ್ತೊಂದೆಡೆ, ವಿದೇಶಾಂಗ ಇಲಾಖೆಯ ಡೆಪ್ಯುಟಿ ಸೆಕ್ರೆಟರಿ ವೆಂಡಿ ಶರ್ಮನ್ ಅವರು 40 ರಾಯಭಾರ ಕಚೇರಿಗಳಿಗೆ ಈ ಮಾಹಿತಿ ನೀಡಿದ್ದಾರೆ ಎಂದು ಮೂಲಗಳ ಹೇಳಿಕೆಯನ್ನು ಉಲ್ಲೇಖಿಸಿ ಮಾಹಿತಿ ನೀಡಲಾಗಿದೆ.

Exit mobile version