Spy Balloon: ಅಮೆರಿಕ ಮಾತ್ರವಲ್ಲ, ಭಾರತದ ಮೇಲೂ ಚೀನಾ ಬಲೂನ್ ಕಣ್ಗಾವಲು! - Vistara News

ವಿದೇಶ

Spy Balloon: ಅಮೆರಿಕ ಮಾತ್ರವಲ್ಲ, ಭಾರತದ ಮೇಲೂ ಚೀನಾ ಬಲೂನ್ ಕಣ್ಗಾವಲು!

spy balloon: ಇತ್ತೀಚೆಗಷ್ಟೇ ಅಮೆರಿಕ ಸೇನಾ ನೆಲೆಗಳಿರುವ ಪ್ರದೇಶದಲ್ಲಿ ಚೀನಾದ ಬಲೂನ್‌ಗಳು ಕಾಣಿಸಿಕೊಂಡಿದ್ದವು. ಈಗ ಗೊತ್ತಾಗಿರುವ ಮಾಹಿತಿಯ ಪ್ರಕಾರ, ಭಾರತ ಸೇರಿದಂತೆ ಇತರ ರಾಷ್ಟ್ರಗಳ ಮೇಲೂ ಇದೇ ರೀತಿಯ ಸ್ಪೈ ಬಲೂನ್‌ ಹಾರಿ ಬಿಟ್ಟಿದೆ.

VISTARANEWS.COM


on

China targeted countries including India with spy balloon
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಅಮೆರಿಕದ ಸೇನಾ ಸೂಕ್ಷ್ಮ ಪ್ರದೇಶಗಳ ಮೇಲೆ ಹಾರಾಟ ನಡೆಸುತ್ತಿದ್ದ ಚೀನಾದ ಗೂಢಚಾರ ಬಲೂನನ್ನು (spy balloon) ಭದ್ರತಾ ಪಡೆಗಳು ಹೊಡೆದುರುಳಿಸಿದ ಮಾರನೇ ದಿನವೇ ಪ್ರಕಟವಾದ ವರದಿಯೊಂದು ಆತಂಕಕ್ಕೆ ಕಾರಣವಾಗಿದೆ. ಭಾರತ, ಜಪಾನ್ ಸೇರಿದಂತೆ ವಿವಿಧ ದೇಶಗಳನ್ನು ಗುರಿಯಾಗಿಸಿಕೊಂಡು ಚೀನಾ ಗೂಢಚಾರ ಬಲೂನ್‌ಗಳ ಕಾರ್ಯಾಚರಣೆ ನಡೆಸುತ್ತಿದೆ ಎಂದು ಈ ವರದಿಯಲ್ಲಿ ತಿಳಿಸಲಾಗಿದೆ.

ಚೀನಾದ ದಕ್ಷಿಣ ಕರಾವಳಿಯ ಹೈನಾನ್ ಪ್ರಾಂತ್ಯದಿಂದ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಕಣ್ಗಾವಲು ಬಲೂನ್ ಪ್ರಯತ್ನವು ಜಪಾನ್, ಭಾರತ, ವಿಯೆಟ್ನಾಂ, ತೈವಾನ್ ಮತ್ತು ಫಿಲಿಪ್ಪಿನ್ಸ್ ಸೇರಿದಂತೆ ಚೀನಾಕ್ಕೆ ಸವಾಲೊಡ್ಡುವ ದೇಶಗಳಲ್ಲಿನ ಮಿಲಿಟರಿ ಆಸ್ತಿಗಳ ಮಾಹಿತಿಯನ್ನು ಸಂಗ್ರಹಿಸಿದೆ ಎಂದು ಅಮೆರಿಕದ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

ಇದನ್ನೂ ಓದಿ: ಲ್ಯಾಟಿನ್​ ಅಮೆರಿಕದಲ್ಲೂ ಹಾರುತ್ತಿದೆ ಚೀನಾದ ಬೇಹುಗಾರಿಕಾ ಬಲೂನ್​​; ಅಮೆರಿಕದತ್ತ ಬರುತ್ತಿಲ್ಲ ಎಂದ ಪೆಂಟಗನ್​

ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ‌ಯ ವಾಯು ಪಡೆಯ ಭಾಗವಾಗಿ ಈ ಕಣ್ಗಾವಲ ಬಲೂನ್‌ಗಳನ್ನು ಐದು ಖಂಡಗಳಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ಪತ್ರಿಕೆಯು ವರದಿ ಮಾಡಿದೆ. ಮತ್ತೊಂದೆಡೆ, ವಿದೇಶಾಂಗ ಇಲಾಖೆಯ ಡೆಪ್ಯುಟಿ ಸೆಕ್ರೆಟರಿ ವೆಂಡಿ ಶರ್ಮನ್ ಅವರು 40 ರಾಯಭಾರ ಕಚೇರಿಗಳಿಗೆ ಈ ಮಾಹಿತಿ ನೀಡಿದ್ದಾರೆ ಎಂದು ಮೂಲಗಳ ಹೇಳಿಕೆಯನ್ನು ಉಲ್ಲೇಖಿಸಿ ಮಾಹಿತಿ ನೀಡಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Viral Video: 7 ಅಜ್ಜಂದಿರ ಜೊತೆ ಸಂಸಾರ ನಡೆಸುತ್ತಿರುವ ಯುವತಿ; ಆಕೆಯ ಪ್ಲ್ಯಾನ್ ಇಂಟರೆಸ್ಟಿಂಗ್!

Viral Video: ಕಟ್ಟಿಕೊಂಡ ಗಂಡನ ಜೊತೆ ಈಗ ಬಾಳ್ವೆ ನಡೆಸುವುದೇ ಕಷ್ಟವಾಗಿರುವ ಈ ದಿನಗಳಲ್ಲಿ ಇಲ್ಲೊಬ್ಬಳು ಯುವತಿ ಏಳು ಮಂದಿ ಪುರುಷರ ಜೊತೆ ಸುಖವಾಗಿ ಇದ್ದೇನೆ ಎಂದು ಹೇಳುವ ಮೂಲಕ ಎಲ್ಲರ ಗಮನವನ್ನು ತನ್ನತ್ತ ಸೆಳೆದುಕೊಂಡಿದ್ದಾಳೆ. ಪ್ರೀತಿಸಿದ ಯುವಕ ದೂರಾದ ಬಳಿಕ ಈಕೆ ಸಂಬಂಧ ಬೆಳೆಸಿದ್ದು ವಯಸ್ಸಾದ ಪುರುಷರ ಜೊತೆಯಂತೆ. ಇನ್ನು ಈ ಸಂಬಂಧ ಹೊಂದಲು ಕಾರಣವೇನು ಎಂಬುದನ್ನು ಕೇಳಿದ್ರೆ ನೀವು ಶಾಕ್‌ ಆಗ್ತೀರಿ!

VISTARANEWS.COM


on

Viral Video
Koo

ಕೊಲಂಬಿಯಾ : ತಾಳಿ ಕಟ್ಟಿಸಿಕೊಂಡ ಒಬ್ಬನ ಜೊತೆ ಸರಿಯಾಗಿ ಬಾಳ್ವೆ ನಡೆಸದೇ ಮದುವೆಯಾಗಿ ಮಾರನೇ ದಿನಕ್ಕೆ ವಿಚ್ಛೇದನ ನೀಡುವ ಹೆಣ್ಣಿನ ಬಗ್ಗೆ, ಮನೆಯಲ್ಲಿ ಹೆಂಡತಿಯಿದ್ದರೂ, ಹೊರಗಡೆ ಸಂಬಂಧ ಇಟ್ಟುಕೊಂಡ ಗಂಡಸಿನ ಬಗ್ಗೆ ಕೇಳಿರುತ್ತೇವೆ, ನೋಡಿರುತ್ತೇವೆ. ಇನ್ನು ನಮ್ಮ ಪುರಾಣದ ಪುಟ ತಿರುವಿ ಹಾಕಿದರೆ ಮಹಾಭಾರತದಲ್ಲಿ ದ್ರೌಪದಿಗೆ ಐದು ಮಂದಿ ಪತಿಯರಿರುವುದನ್ನೂ ಕೇಳಿರುತ್ತೇವೆ. ಆದರೆ ಕಲಿಯುಗದ ಈ ಮಹಿಳೆಯೊಬ್ಬಳು 7 ಮಂದಿ ಪುರುಷರ ಜೊತೆ ಸುಖವಾಗಿ ಕಾಲ ಕಳೆಯುತ್ತಿರುವ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ (Viral Video) ಆಗಿದ್ದು, ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ.

ವರದಿಯ ಪ್ರಕಾರ ಲೀನಾ ಎಂಬ ಮಹಿಳೆ ಕೊಲಂಬಿಯಾದ ಬ್ಯಾರನ್ ಕ್ವಿಲ್ಲಾ ನಗರದಲ್ಲಿ ವಾಸವಾಗಿದ್ದಳು. ಆಕೆಗೆ 7 ಮಂದಿ ಗೆಳೆಯರಿದ್ದು, ಎಲ್ಲರೂ ವಯಸ್ಸಾದ ಮುದುಕರಾಗಿದ್ದಾರೆ. ಅಲ್ಲದೇ ಅವರ ಖರ್ಚುವೆಚ್ಚವನ್ನು ಆಕೆಯೇ ನೋಡಿಕೊಳ್ಳುತ್ತಾಳೆ ಎನ್ನಲಾಗಿದೆ. ಇನ್ನು ಅವರ ಜೊತೆಗೆ ಸಂಬಂಧ ಹೊಂದಲು ಕಾರಣವೇನು ಎಂಬುದನ್ನು ಆಕೆ ಬಿಚ್ಚಿಟ್ಟಿದ್ದಾಳೆ.

ಮಹಿಳೆಯ ಸಂದರ್ಶನದ ವಿಡಿಯೊವನ್ನು ಯೂಟ್ಯೂಬ್ ಚಾನೆಲ್‌ವೊಂದು ಪೋಸ್ಟ್ ಮಾಡಿದ್ದು, ಈ ವಿಡಿಯೊದಲ್ಲಿ ಮಹಿಳೆ ತಿಳಿಸಿದಂತೆ ಆಕೆಗೆ ತನ್ನ ಪ್ರಿಯತಮನ ಜೊತೆಗಿನ ಸಂಬಂಧದಲ್ಲಿ ಸಮಸ್ಯೆಯಾದ ಕಾರಣ ಆಕೆ ತನ್ನ ಜೀವನವನ್ನು ಸಾಗಿಸಲು ಪಿಂಚಣಿ ಹೊಂದಿರುವ ವಯಸ್ಸಾದ ವ್ಯಕ್ತಿಗಳೊಂದಿಗೆ ಸಂಬಂಧ ಹೊಂದಲು ಶುರುಮಾಡಿದಳಂತೆ. ಆಕೆ ಮೊದಲು ಯುವಕನ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಳಂತೆ. ಆದರೆ ಅವರ ನಡುವೆ ಸಮಸ್ಯೆ ಉಂಟಾದ ಕಾರಣ ಇಬ್ಬರೂ ದೂರವಾದರು. ಹೀಗಿರುವಾಗ ಒಂದು ದಿನ ಆಕೆಯ ಪಕ್ಕದ ಮನೆಯ ವಯಸ್ಸಾದ ವ್ಯಕ್ತಿಯೊಬ್ಬ ಅವಳ ಜೊತೆ ಚೆಲ್ಲಾಟವಾಡಲು ಶುರುಮಾಡಿದನಂತೆ. ಆಕೆಗೆ ಆರ್ಥಿಕ ಸಮಸ್ಯೆ ಇರುವ ಕಾರಣ ಅವನ ಚೆಲ್ಲಾಟವನ್ನು ಸಹಿಸಿಕೊಂಡಳು. ಮುಂದೆ ಇದನ್ನೇ ದಾರಿಯಾಗಿಸಿಕೊಂಡ ಆಕೆ ಪಿಂಚಣಿ ಹಣ ಹೊಂದಿರುವ ವಯಸ್ಸಾದ ವ್ಯಕ್ತಿಯ ಜೊತೆ ಸಂಬಂಧವಿರಿಸಿಕೊಳ್ಳುವುದಕ್ಕೆ ಶುರುಮಾಡಿದ್ದಾಳೆ. ಅದಕ್ಕಾಗಿ ಅವಳು ಉದ್ಯಾನವನ ಮತ್ತು ವಯಸ್ಸಾದ ವ್ಯಕ್ತಿಗಳು ಸಮಯ ಕಳೆಯುವಂತಹ ಸ್ಥಳಗಳಿಗೆ ಭೇಟಿ ನೀಡಲು ಪ್ರಾರಂಭಿಸಿದಳು. ಹಾಗಾಗಿ ಇದೀಗ ಅವಳು 7 ಮಂದಿ ವಯಸ್ಸಾದ ಪುರುಷರ ಜೊತೆ ಸಂಬಂಧದಲ್ಲಿರುವ ಮೂಲಕ ಬಹುಪತಿತ್ವವನ್ನು ಅನುಸರಿಸುತ್ತಿದ್ದಾಳೆ.

ಇದನ್ನೂ ಓದಿ: Viral Video: ಬಕ್ರೀದ್ ಬಲಿ ಕೊಡುವ ಮೇಕೆಯ ಮೈಮೇಲೆ ʼರಾಮʼ ನಾಮ; ಹಿಂದೂಗಳನ್ನು ಕೆಣಕಿದ ವ್ಯಕ್ತಿ ಅರೆಸ್ಟ್

ಅಲ್ಲದೇ ಆಕೆಯ ಪ್ರಕಾರ ವಯಸ್ಸಾದ ವ್ಯಕ್ತಿಗಳ ಬಳಿ ಏನನ್ನೂ ಕೇಳಬೇಕಾಗಿಲ್ಲ, ಎಲ್ಲವನ್ನೂ ಅವರೇ ನೀಡುತ್ತಾರೆ. ಏಕೆಂದರೆ ಅವರ ವಯಸ್ಸಿನವರಿಗೆ ತನ್ನಂತಹ ಹುಡುಗಿಯು ಸಿಗುವುದಿಲ್ಲ. ಹಾಗಾಗಿ ತಾನು ಪಿಂಚಣಿ ಹೊಂದಿರುವ ಅಂತಹ ವ್ಯಕ್ತಿಯನ್ನು ಹುಡುಕಿದೆ. ಯಾಕೆಂದರೆ ಅವರು ತನ್ನನ್ನು ಸುಖವಾಗಿ ನೋಡಿಕೊಳ್ಳುತ್ತಾರೆ. ಅಂದ ಹಾಗೇ ಈಕೆಯ ಗೆಳೆಯರು ಕಾರ್ಲೋಸ್, ಸೈಮನ್, ಜೀಸಸ್, ಪಾಬ್ಲೋ, ಮ್ಯಾನುಯೆಲ್ ಹಾಗೂ ಇಬ್ಬರ ಹೆಸರನ್ನು ಬಹಿರಂಗಪಡಿಸಿಲ್ಲ. ಇವರೆಲ್ಲರೂ ಸಹ ಪಿಂಚಣಿದಾರರಾಗಿದ್ದು, ಒಬ್ಬರನೊಬ್ಬರು ಚೆನ್ನಾಗಿ ಅರಿತುಕೊಂಡಿದ್ದಾರಂತೆ. ಹಾಗೇ ಅವರು ಆಕೆಗೆ ಅಡುಗೆ ಮಾಡಲು, ಬಟ್ಟೆ ಒಗೆಯಲು, ಮನೆ ಶುಚಿ ಮಾಡುವಂತಹ ಕೆಲಸಗಳಲ್ಲಿ ಸಹಾಯ ಮಾಡುತ್ತಾರಂತೆ.

Continue Reading

ದೇಶ

Air India Food:‌ ಪ್ರಯಾಣಿಕರೇ ಎಚ್ಚರ; ವಿಮಾನದ ಊಟದಲ್ಲಿ ಸಿಕ್ತು ಮೆಟಲ್‌ ಬ್ಲೇಡ್!

Air India Food: ಮ್ಯಾಥ್ಯೂರಸ್‌ ಪೌಲ್‌ ಎಂಬ ಪತ್ರಕರ್ತ ಬೆಂಗಳೂರಿನಿಂದ ಸ್ಯಾನ್‌ ಪ್ರಾನ್ಸಿಸ್ಕೋಗೆ ಏರ್‌ ಇಂಡಿಯಾ ವಿಮಾನದಲ್ಲಿ ತೆರಳುವಾಗ ಅವರಿಗೆ ಭೀಕರ ಅನುಭವವಾಗಿದೆ. ವಿಮಾನದಲ್ಲಿ ಅವರು ಆರ್ಡರ್‌ ಮಾಡಿದ ಆಹಾರದಲ್ಲಿ ಮೆಟಲ್‌ ಬ್ಲೇಡ್‌ ಪತ್ತೆಯಾಗಿದೆ. ಈ ಕುರಿತು ಅವರು ಪೋಸ್ಟ್‌ ಮಾಡುತ್ತಲೇ ವಿಮಾನಯಾನ ಸಂಸ್ಥೆಯು ಕ್ಷಮೆಯಾಚಿಸಿದೆ.

VISTARANEWS.COM


on

Air India Food
Koo

ಬೆಂಗಳೂರು: ಏರ್‌ ಇಂಡಿಯಾ ಸೇರಿ ಹಲವು ಸಂಸ್ಥೆಗಳ ವಿಮಾನಗಳಲ್ಲಿ ಪ್ರಯಾಣಿಕರು ಕುಡಿದು ಗಲಾಟೆ ಮಾಡುವುದು, ಸಹ ಪ್ರಯಾಣಿಕರಿಗೆ ತೊಂದರೆ ಕೊಡುವುದು, ವಿಮಾನದ ಸಿಬ್ಬಂದಿ ಮೇಲೆ ಹಲ್ಲೆ ನಡೆಸುವುದು ಸೇರಿ ಹಲವು ಕೃತ್ಯಗಳು ಇತ್ತೀಚೆಗೆ ವರದಿಯಾಗುತ್ತಲೇ ಇವೆ. ಇದರ ಬೆನ್ನಲ್ಲೇ, ಏರ್‌ ಇಂಡಿಯಾ ವಿಮಾನದಲ್ಲಿ ಆರ್ಡರ್‌ ಮಾಡಿದ ಊಟದಲ್ಲಿ (Air India Food) ಮೆಟಲ್‌ ಬ್ಲೇಡ್‌ (Metal Blade) ಒಂದು ಸಿಕ್ಕಿದ್ದು, ಊಟ ಆರ್ಡರ್‌ ಮಾಡಿದ ವ್ಯಕ್ತಿಯು ಕಂಗಾಲಾಗಿದ್ದಾರೆ. ಹಾಗೆಯೇ, ತಮಗೆ ಆದ ಭೀಕರ ಅನುಭವವನ್ನು, ಮೆಟಲ್‌ ಬ್ಲೇಡ್‌ ಫೋಟೊವನ್ನು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಮ್ಯಾಥ್ಯೂರಸ್‌ ಪೌಲ್‌ ಎಂಬ ಪತ್ರಕರ್ತ ಬೆಂಗಳೂರಿನಿಂದ ಸ್ಯಾನ್‌ ಪ್ರಾನ್ಸಿಸ್ಕೋಗೆ ಏರ್‌ ಇಂಡಿಯಾ ವಿಮಾನದಲ್ಲಿ ತೆರಳುವಾಗ ಅವರಿಗೆ ಇಂತಹ ಭೀಕರ ಅನುಭವವಾಗಿದೆ. “ಏರ್‌ ಇಂಡಿಯಾ ವಿಮಾನದಲ್ಲಿ ನಾನು ಆರ್ಡರ್‌ ಮಾಡಿದ ಸ್ವೀಟ್‌ ಪೊಟ್ಯಾಟೋ ಹಾಗೂ ಫಿಗ್‌ ಚಾಟ್‌ನಲ್ಲಿ ಬ್ಲೇಡ್‌ ರೀತಿ ಇರುವ ಮೆಟಲ್‌ ತುಣುಕು ಪತ್ತೆಯಾಗಿದೆ. ಅದೃಷ್ಟವಶಾತ್‌ ಇದರಿಂದ ನನಗೆ ಯಾವುದೇ ತೊಂದರೆ ಆಗಿಲ್ಲ. ಆದರೆ, ಏರ್‌ ಇಂಡಿಯಾ ಕೆಟರಿಂಗ್‌ ಸರ್ವಿಸ್‌ ಬಗ್ಗೆ ನನಗೆ ಇದ್ದ ಗೌರವ ಕಡಿಮೆಯಾಗಿದೆ” ಎಂದು ಪೋಸ್ಟ್‌ ಮಾಡಿದ್ದಾರೆ.

ಮ್ಯಾಥ್ಯೂರಸ್‌ ಪೌಲ್‌ ಕೂಡಲೇ ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆಯು ಪ್ರತಿಕ್ರಿಯಿಸಿದೆ. “ನಿಮಗೆ ಇಂತಹ ಕೆಟ್ಟ ಅನುಭವ ಆಗಿದ್ದಕ್ಕೆ ಕ್ಷಮೆ ಇರಲಿ. ನಾವು ಪ್ರಯಾಣಿಕರಿಗೆ ಸೇವೆ ನೀಡಬೇಕು ಎಂಬ ನಿರ್ದಿಷ್ಟ ಗುರಿ ಹೊಂದಿದ್ದು, ಆ ಗುರಿಗೆ ಇದು ಧಕ್ಕೆ ತರುವಂತಿದೆ. ಸೇವೆಯಲ್ಲಿ ಸಮಸ್ಯೆಯಾಗಿರುವುದಕ್ಕೆ ಕ್ಷಮೆ ಇರಲಿ. ನಾವು ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳುತ್ತೇವೆ” ಎಂಬುದಾಗಿ ಏರ್‌ ಇಂಡಿಯಾ ಪ್ರತಿಕ್ರಿಯಿಸಿದೆ. ಅಷ್ಟೇ ಅಲ್ಲ, ಏರ್‌ ಇಂಡಿಯಾ ಸಂಸ್ಥೆಯು ಮ್ಯಾಥ್ಯೂರಸ್‌ ಪೌಲ್‌ ಅವರಿಗೆ ಒಂದು ವರ್ಷದಲ್ಲಿ ಒಮ್ಮೆ ಉಚಿತವಾಗಿ ಟಿಕೆಟ್‌ ನೀಡಲಾಗುವುದು ಎಂದು ಆಫರ್‌ ನೀಡಿದೆ. ಆದರೆ, ಇದನ್ನು ಪತ್ರಕರ್ತ ನಿರಾಕರಿಸಿದ್ದಾರೆ.

ವೆಜ್‌ ಊಟದಲ್ಲಿ ಮೂಳೆಗಳು ಪತ್ತೆ

ಕೆಲ ತಿಂಗಳ ಹಿಂದೆಯೂ ಏರ್‌ ಇಂಡಿಯಾ ವಿಮಾನದಲ್ಲಿ ಆರ್ಡರ್‌ ಮಾಡಿದ ಸಸ್ಯಾಹಾರದ ಬದಲಿಗೆ ಚಿಕನ್‌ ಪೀಸ್‌ಗಳು ಇರುವ ಊಟ ನೀಡಲಾಗಿದೆ ಎಂದು ಮಹಿಳೆಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದರು. ಹಾಗೆಯೇ, ಫೋಟೊಗಳ ಸಮೇತ ಅವರು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದರು.

“ಏರ್‌ ಇಂಡಿಯಾ 582 ವಿಮಾನದಲ್ಲಿ ನಾನು ಪ್ರಯಾಣಿಸುತ್ತಿದ್ದೆ. ಇದೇ ವೇಳೆ ನನಗೆ ನೀಡಿದ ವೆಜ್‌ ಮೀಲ್‌ನಲ್ಲಿ ಚಿಕನ್‌ ಪೀಸ್‌ಗಳು ದೊರೆತಿವೆ. ನಾನು ಕಲ್ಲಿಕೋಟೆಯಿಂದ ವಿಮಾನ ಹತ್ತಿದೆ. ಈ ವಿಮಾನವು 6.40 ಹೊರಡುವ ಬದಲು 7.40ಕ್ಕೆ ಹಾರಾಟ ಆರಂಭಿಸಿದೆ. ವಿಮಾನ ಹಾರಾಟ ವಿಳಂಬ ಮಾಡುವ ಜತೆಗೆ ಮಾಂಸಾಹಾರ ನೀಡಲಾಗಿದೆ. ಇದರ ಕುರಿತು ವಿಮಾನದ ಸಿಬ್ಬಂದಿಗೆ ಮಾಹಿತಿ ನೀಡಿದರೆ, ಅವರು ಒಂದು ಸಾರಿ ಕೇಳಿ ಸುಮ್ಮನಾದರು. ಹಾಗಾಗಿ, ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂಬುದಾಗಿ ಆಗ್ರಹಿಸುತ್ತಿದ್ದೇನೆ” ಎಂದು ವೀರಾ ಜೈನ್‌ ಎಂಬ ಮಹಿಳೆಯು ಪೋಸ್ಟ್‌ ಮಾಡಿದ್ದರು.

ಇದನ್ನೂ ಓದಿ: Mayank Agarwal: ವಿಮಾನದಲ್ಲಿ ನೀರೆಂದು ಆ್ಯಸಿಡ್ ಕುಡಿದ ಕ್ರಿಕೆಟಿಗ ಮಯಾಂಕ್ ಅಗರ್ವಾಲ್? ಐಸಿಯುನಲ್ಲಿ ಚಿಕಿತ್ಸೆ

Continue Reading

ವಿದೇಶ

Dawood Ibrahim: ವೃದ್ಧ ಡಾನ್‌ ದಾವೂದ್‌ ಇಬ್ರಾಹಿಂ ಈಗ ಅಮೆರಿಕದ ಕೇಂದ್ರ ಗುಪ್ತಚರ ಸಂಸ್ಥೆಯ ಕೈಗೊಂಬೆ?

Dawood Ibrahim: ಅಮೆರಿಕದ ಕೇಂದ್ರ ಗುಪ್ತಚರ ಸಂಸ್ಥೆಯು ಭೂಗತ ಪಾತಕಿ, ಭಾರತಕ್ಕೆ ಬೇಕಾಗಿರುವ ಮೋಸ್ಟ್‌ ವಾಂಟೆಡ್‌ ಉಗ್ರ ದಾವೂದ್‌ ಇಬ್ರಾಹಿಂನನ್ನು ಪಾಕಿಸ್ತಾನದಲ್ಲಿರುವ ತನ್ನ ಆಪ್ತ ಎಂದು ಪರಿಗಣಿಸಿದೆ. ಪಾಕಿಸ್ತಾನದ ವಿವಿಧ ಪ್ರಾಂತ್ಯಗಳಲ್ಲಿನ ಸುರಕ್ಷಿತ ಮನೆಗಳಿಗೆ ನಿರಂತರವಾಗಿ ಸ್ಥಳಾಂತರಗೊಳ್ಳುತ್ತಿರುವ ದಾವೂದ್ ಈಗ ಇಸ್ಲಾಮಾಬಾದ್‌ನಲ್ಲಿರುವ ಸಿಐಎ ಸ್ಟೇಷನ್ ನಿರ್ದೇಶಕರಿಗೆ ನೇರವಾಗಿ ವರದಿ ಮಾಡುತ್ತಿದ್ದಾನೆ. ವೃದ್ಧಾಪ್ಯ (68) ಮತ್ತು ಅನಾರೋಗ್ಯದ ಹೊರತಾಗಿಯೂ ದಾವೂದ್ ಭಯೋತ್ಪಾದಕ ಚಟುವಟಿಕೆ ಮತ್ತು ಮಾದಕ ವಸ್ತುಗಳ ಕಳ್ಳಸಾಗಣೆಯ ಬೃಹತ್ ಸಾಮ್ರಾಜ್ಯದ ಮೇಲೆ ತನ್ನ ಹಿಡಿತ ಹೊಂದಿದ್ದಾನೆ. ದಾವೂದ್ ಅಫ್ಘಾನಿಸ್ತಾನದಲ್ಲಿ ಆಳವಾದ ಜಾಲವನ್ನು ಹೊಂದಿರುವ ಕಾರಣಕ್ಕೆ ಸಿಐಎ ಆತನ ಮೇಲೆ ವಿಶೇಷ ಗಮನ ಹರಿಸಿದೆ.

VISTARANEWS.COM


on

Dawood Ibrahim
Koo

ಇಸ್ಲಾಮಾಬಾದ್‌: ಅಮೆರಿಕದ ಕೇಂದ್ರ ಗುಪ್ತಚರ ಸಂಸ್ಥೆ (CIA)ಯು ಭೂಗತ ಪಾತಕಿ, ಭಾರತಕ್ಕೆ ಬೇಕಾಗಿರುವ ಮೋಸ್ಟ್‌ ವಾಂಟೆಡ್‌ ಉಗ್ರ ದಾವೂದ್‌ ಇಬ್ರಾಹಿಂ(Dawood Ibrahim)ನನ್ನು ಪಾಕಿಸ್ತಾನದಲ್ಲಿರುವ ತನ್ನ ಆಪ್ತ ಎಂದು ಪರಿಗಣಿಸಿದೆ. ಇಷ್ಟರ ತನಕ ಪಾಕಿಸ್ತಾನ ಸಶಸ್ತ್ರ ಪಡೆಗಳ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ISI)ನ ಭಾಗವಾಗಿದ್ದ ದಾವೂದ್‌ನನ್ನು 2023ರ ಅಕ್ಟೋಬರ್ 1ರಂದು ಐಎಸ್‌ಐಯ ಮಹಾನಿರ್ದೇಶಕನನ್ನಾಗಿ ನೇಮಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ಪಾಕಿಸ್ತಾನದ ವಿವಿಧ ಪ್ರಾಂತ್ಯಗಳಲ್ಲಿನ ಸುರಕ್ಷಿತ ಮನೆಗಳಿಗೆ ನಿರಂತರವಾಗಿ ಸ್ಥಳಾಂತರಗೊಳ್ಳುತ್ತಿರುವ ದಾವೂದ್ ಈಗ ಇಸ್ಲಾಮಾಬಾದ್‌ನಲ್ಲಿರುವ ಸಿಐಎ ಸ್ಟೇಷನ್ ನಿರ್ದೇಶಕರಿಗೆ ನೇರವಾಗಿ ವರದಿ ಮಾಡುತ್ತಿದ್ದಾನೆ. ಐಎಸ್ಐ ಈಗ ದಾವೂದ್‌ಗೆ ಏನಾದರೂ ಸಂದೇಶ ನೀಡಬೇಕಿದ್ದರೆ ಅದನ್ನು ಸಿಐಎ ಮೂಲಕವೇ ರವಾನಿಸಬೇಕಾಗುತ್ತದೆ ಎಂದು ಭಾರತೀಯ ಭದ್ರತಾ ಸಂಸ್ಥೆಯ ಮೂಲಗಳು ತಿಳಿಸಿವೆ. ದಾವೂದ್‌ನ ಕುಟುಂಬ ಸದಸ್ಯರಿಗೆ ಪಶ್ಚಿಮ ದೇಶಗಳಿಗೆ ಉಚಿತ ಪ್ರವೇಶವಿದೆ ಎಂದೂ ವರದಿ ಹೇಳಿದೆ.

ವೃದ್ಧಾಪ್ಯ (68) ಮತ್ತು ಅನಾರೋಗ್ಯದ ಹೊರತಾಗಿಯೂ ದಾವೂದ್ ಭಯೋತ್ಪಾದಕ ಚಟುವಟಿಕೆ ಮತ್ತು ಮಾದಕ ವಸ್ತುಗಳ ಕಳ್ಳಸಾಗಣೆಯ ಬೃಹತ್ ಸಾಮ್ರಾಜ್ಯದ ಮೇಲೆ ತನ್ನ ಹಿಡಿತ ಹೊಂದಿದ್ದಾನೆ. ದಾವೂದ್ ಅಫ್ಘಾನಿಸ್ತಾನದಲ್ಲಿ ಆಳವಾದ ಜಾಲವನ್ನು ಹೊಂದಿರುವ ಕಾರಣಕ್ಕೆ ಸಿಐಎ ಆತನ ಮೇಲೆ ವಿಶೇಷ ಗಮನ ಹರಿಸಿದೆ. ಜತೆಗೆ ದಾವೂದ್‌ ತಾಲಿಬಾನ್ ಆಡಳಿತದ ಜತೆಗೆ ಪಾಲುದಾರಿಕೆ ಹೊಂದಿದ್ದಾನೆ. 1993ರ ಮುಂಬೈ ಸರಣಿ ಸ್ಫೋಟಗಳನ್ನು ಕಾರ್ಯಗತಗೊಳಿಸಿದ ಟೈಗರ್ ಮೆಮನ್ ಸಹಾಯದಿಂದ ಅಫ್ಘಾನಿಸ್ತಾನದಲ್ಲಿ ಅಕ್ರಮವಾಗಿ ರತ್ನಗಳ ಗಣಿಗಾರಿಕೆ ನಡೆಸುವ ಮೂಲಕ ದೊಡ್ಡ ಪ್ರಮಾಣದ ಲಾಭವನ್ನು ಗಳಿಸುತ್ತಿದ್ದಾನೆ ಎನ್ನಲಾಗಿದೆ.

ತೀವ್ರ ಭಯ

ಇಷ್ಟೆಲ್ಲ ಚಟುವಟಿಕೆಯ ಹೊರತಾಗಿಯೂ ಡಾನ್‌ ದಾವೂದ್ ಭಾರತೀಯರ ಭಯದಲ್ಲಿಯೇ ದಿನ ದೂಡುವಂತಾಗಿದೆ. ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದಲ್ಲಿ ಅಡಗಿರುವ, ಭಾರತಕ್ಕೆ ಬೇಕಾದ ಹಲವು ಭಯೋತ್ಪಾದಕರು ʼಅಪರಿಚಿತ ವ್ಯಕ್ತಿʼಯ ಗುಂಡಿಗೆ ಬಲಿಯಾಗುತ್ತಿರುವುದು ದಾವೂದ್‌ನ ನಿದ್ದೆಗೆಡಿಸಿದೆ. ಈ ಬಗ್ಗೆ ಆತ ಭಯಭೀತನಾಗಿದ್ದಾನೆ. ಹೀಗಾಗಿ ಮೊದಲಿನಂತೆ ಮುಕ್ತವಾಗಿ ಓಡಾಡುತ್ತಿಲ್ಲ. ಅಲ್ಲದೆ ಈ ಹಿಂದಿನಂತೆ ಸೌದಿ ಅರೇಬಿಯಾದ ಹಜ್ ಮತ್ತು ಉಮ್ರಾಕ್ಕೂ ಪ್ರವಾಸ ಹೋಗುತ್ತಿಲ್ಲ ಎಂದು ವರದಿ ತಿಳಿಸಿದೆ.

ವಿವಿಧ ಕಾಯಿಲೆ

ಕರ್ಮದ ಫಲ ಎನ್ನುವಂತೆ ದಾವೂದ್‌ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾನೆ. ತೀವ್ರವಾದ ಗ್ಯಾಸ್ಟ್ರಿಕ್‌ ಮತ್ತು ಆ್ಯಸಿಡಿಟಿಯಿಂದ ಆತನನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಜತೆಗೆ ಅಧಿಕ ಮಟ್ಟದ ಮಧುಮೇಹವನ್ನು ನಿಯಂತ್ರಿಸಲು ಸಾಧ್ಯವಾಗದೆ ಒದ್ದಾಡುತ್ತಿದ್ದಾನೆ. ಈ ಹಿಂದೆ ಪಾಕಿಸ್ತಾನದ ಸೇನಾ ಉನ್ನತ ಅಧಿಕಾರಿಗಳು ಸೇರಿದಂತೆ ಗಣ್ಯರು ಆಯೋಜಿಸುತ್ತಿದ್ದ ರಾತ್ರಿ ಪಾರ್ಟಿಗಳಲ್ಲಿ ಪ್ರಮುಖ ಅತಿಥಿಯಾಗಿ ಪಾಲ್ಗೊಳ್ಳುತ್ತಿದ್ದ ದಾವೂದ್‌ ಈಗ ಎಲ್ಲಿಗೂ ಹೋಗುತ್ತಿಲ್ಲ. ಹೀಗಾಗಿ ತನ್ನ ಕಾನೂನುಬಾಹಿರ ಕಾರ್ಯಾಚರಣೆಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಛೋಟಾ ಶಕೀಲ್‌ನಂತಹ ಆಪ್ತ ಸಹಾಯಕರಿಗೆ ಬಿಟ್ಟಿದ್ದಾನೆ. ಆದರೆ ಐಎಸ್ಐ ಮತ್ತು ಈಗ ಸಿಐಎ ನೀಡಿದ ಜವಾಬ್ದಾರಿಗಳನ್ನು ಆತನೇ ನಿರ್ವಹಿಸುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಪಾಕಿಸ್ತಾನದಂತಹ ದೇಶದಲ್ಲಿ ಉಳಿದುಕೊಂಡಿದ್ದಕ್ಕಾಗಿ ದಾವೂದ್‌ಗೆ ಈಗಲೂ ವಿಷಾದವಿದೆ. ಶತಕೋಟಿ ಡಾಲರ್‌ಗಳನ್ನು ಗಳಿಸಿದ್ದರೂ ಸ್ವಾತಂತ್ರ್ಯ ಇಲ್ಲದ ಕಾರಣ ನೋವು ಅನುಭವಿಸುತ್ತಾನೆ. ಈಗಲೂ ಮೇಲಾಧಿಕಾರಿಗಳ ಆಜ್ಞೆಯನ್ನು ಪಾಲಿಸಬೇಕು ಎನ್ನುವ ಕೊರಗು ಕೂಡ ಆತನನ್ನು ಕಾಡುತ್ತಿದೆ ಎಂದು ವರದಿ ಹೇಳಿದೆ.

ಇದನ್ನೂ ಓದಿ: Dawood Ibrahim: ದಾವೂದ್‌ ಇಬ್ರಾಹಿಂಗೆ ವಿಷಪ್ರಾಶನ? ಆಸ್ಪತ್ರೆಗೆ ದಾಖಲು

Continue Reading

ವೈರಲ್ ನ್ಯೂಸ್

Reasi Terror Attack: ಪಾಕಿಸ್ತಾನದಲ್ಲಿ ರಿಯಾಸಿ ಭಯೋತ್ಪಾದಕ ದಾಳಿಯ ಮಾಸ್ಟರ್‌ ಮೈಂಡ್‌ನ ಹತ್ಯೆ; ವಿಡಿಯೊ ವೈರಲ್‌

Reasi Terror Attack: ಮಹತ್ವದ ಬೆಳವಣಿಗೆಯೊಂದರಲ್ಲಿ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಭಯೋತ್ಪಾದಕ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಅನ್ನು ಪಾಕಿಸ್ತಾನದಲ್ಲಿ ‘ಅಪರಿಚಿತ ವ್ಯಕ್ತಿಗಳು’ ಹತ್ಯೆ ಮಾಡಿದ್ದಾರೆ ಎಂದು ಪಾಕಿಸ್ತಾನದ ಮಾಧ್ಯಮಗಳು ಮತ್ತು ಯೂಟ್ಯೂಬರ್‌ಗಳು ಹೇಳಿದ್ದಾರೆ. ಜೂನ್ 9ರಂದು ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ನಡೆದ ಭೀಕರ ಭಯೋತ್ಪಾದಕರ ದಾಳಿಗೆ ಪುಟ್ಟ ಕಂದಮ್ಮನೂ ಸೇರಿ ಒಟ್ಟು 9 ಮಂದಿ ಮೃತಪಟ್ಟು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

VISTARANEWS.COM


on

Reasi Terror Attack
Koo

ಶ್ರೀನಗರ: ಮಹತ್ವದ ಬೆಳವಣಿಗೆಯೊಂದರಲ್ಲಿ ಜಮ್ಮು ಮತ್ತು ಕಾಶ್ಮೀರದ (Jammu & Kashmir) ರಿಯಾಸಿ ಭಯೋತ್ಪಾದಕ ದಾಳಿ (Reasi Terror Attack)ಯ ಹಿಂದಿನ ಮಾಸ್ಟರ್ ಮೈಂಡ್ ಅನ್ನು ಪಾಕಿಸ್ತಾನದಲ್ಲಿ ‘ಅಪರಿಚಿತ ವ್ಯಕ್ತಿಗಳು’ ಹತ್ಯೆ ಮಾಡಿದ್ದಾರೆ ಎಂದು ಪಾಕಿಸ್ತಾನದ ಮಾಧ್ಯಮಗಳು ಮತ್ತು ಯೂಟ್ಯೂಬರ್‌ಗಳು ಹೇಳಿದ್ದಾರೆ. ಜೂನ್ 9ರಂದು ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ನಡೆದ ಭೀಕರ ಭಯೋತ್ಪಾದಕರ ದಾಳಿಗೆ ಪುಟ್ಟ ಕಂದಮ್ಮನೂ ಸೇರಿ ಒಟ್ಟು 9 ಮಂದಿ ಮೃತಪಟ್ಟು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಇದೀಗ ಈ ಕೃತ್ಯಕ್ಕೆ ಸಂಚು ರೂಪಿಸಿದವನ ವಿರುದ್ಧ ಪ್ರತಿಕಾರ ಕೈಗೊಳ್ಳಲಾಗಿದೆ ಎನ್ನಲಾಗಿದ್ದು, ಸದ್ಯ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ (Viral Video).

ಇಬ್ಬರು ವ್ಯಕ್ತಿಗಳು ಈ ಬಗ್ಗೆ ಮಾಹಿತಿ ನೀಡುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ಈ 16 ಸೆಕೆಂಡುಗಳ ಈ ಪುಟ್ಟ ವಿಡಿಯೊ ಇದೀಗ ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸಿದೆ. ಇಬ್ಬರು ಕ್ಯಾಮೆರಾ ಮುಂದೆ ನಿಂತು ಜಮ್ಮು ಮತ್ತು ಕಾಶ್ಮೀರದ ರಿಯಾಸಿಯಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಗಳ ಬಗ್ಗೆ ಚರ್ಚಿಸುತ್ತಾರೆ. ಬಳಿಕ ಪಾಕಿಸ್ತಾನದಲ್ಲಿ ಅಪರಿಚಿತ ವ್ಯಕ್ತಿಗಳು ಈ ಕೃತ್ಯದ ಮಾಸ್ಟರ್ ಮೈಂಡ್ ಅನ್ನು ಹತ್ಯೆ ಮಾಡಿದ್ದಾರೆ ಎಂದು ಹೇಳುತ್ತಾರೆ. ಸದ್ಯ ಈ ಬಗ್ಗೆ ಚರ್ಚೆ ನಡೆಯುತ್ತಿದೆ.

ಪಾಕಿಸ್ತಾನದಲ್ಲಿ ಹೆಚ್ಚುತ್ತಿದೆ ಉಗ್ರರ ಹತ್ಯೆ

ವಿಶೇಷ ಎಂದರೆ ಪಾಕಿಸ್ತಾನದಲ್ಲಿ ಉಗ್ರರ ಹತ್ಯೆ ಹೆಚ್ಚುತ್ತಿದೆ. ಅಪರಿಚಿತರ ಗುಂಡಿನ ದಾಳಿಗೆ ಉಗ್ರರು ಬಲಿಯಾಗುತ್ತಿದ್ದಾರೆ. ಇದಕ್ಕೆ ಇತ್ತೀಚಿನ ಉದಾಹರಣೆ ಎಂದರೆ ಬೇಹುಗಾರಿಕೆ ಆರೋಪ ಹೊತ್ತು ಪಾಕಿಸ್ತಾನದ ಜೈಲಿನಲ್ಲಿದ್ದ ಭಾರತೀಯ ಪ್ರಜೆ ಸರಬ್ಜಿತ್ ಸಿಂಗ್ ಅವರನ್ನು ಹತ್ಯೆ ಮಾಡಿದ್ದ ಅಮೀರ್ ಸರ್ಫರಾಜ್ ಅಲಿಯಾಸ್ ತಾಂಬಾ ಎಂಬಾತನನ್ನು ಏಪ್ರಿಲ್‌ 14ರಂದು ಪಾಕಿಸ್ತಾನದ ಲಾಹೋರ್‌ನಲ್ಲಿ ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದರು.

ಬಂಧಿತರ ಸಂಖ್ಯೆ 50ಕ್ಕೆ ಏರಿಕೆ

ಈತನ್ಮಧ್ಯೆ ಜಮ್ಮು ಮತ್ತು ಕಾಶ್ಮೀರದ ರಿಯಾಸಿಯ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಇದುವರೆಗೆ ಸುಮಾರು 50 ಜನರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೂನ್ 9ರಂದು ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರದ ಶಿವ ಖೋರಿ ದೇವಸ್ಥಾನಕ್ಕೆ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ದಾಳಿ ನಡೆಸಿದ್ದರು. ಇದರಿಂದ ಚಾಲಕನ ನಿಯಂತ್ರಣ ತಪ್ಪಿದ ಬಸ್‌ ಆಳವಾದ ಕಂದಕಕ್ಕೆ ಬಿದ್ದಿತ್ತು. ʼʼಈ ಘಟನೆ ಬಗ್ಗೆ ಕಾಂಡಾ ಪ್ರದೇಶ ಪೊಲೀಸ್ ಠಾಣೆಯ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದ್ದು, ಈವರೆಗೆ 50 ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆʼʼ ಎಂದು ರಿಯಾಸಿಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮೋಹಿತಾ ಶರ್ಮಾ ಹೇಳಿದ್ದಾರೆ.

ಮತ್ತೆ ಕಣಿವೆ ರಾಜ್ಯದಲ್ಲಿ ಗುಂಡಿನ ಮೊರೆತ

ಇದುವರೆಗೆ ಶಾಂತವಾಗಿದ್ದ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಉಗ್ರರ ಉಪಟಳ ಆರಂಭವಾಗಿದೆ. ರಿಯಾಸಿ ಜತೆಗೆ ಭಯೋತ್ಪಾದಕರು ಇತರ ಎರಡು ಕಡೆ ದಾಳಿ ನಡೆಸಿದ್ದಾರೆ. ಕಥುವಾ ಮತ್ತು ದೋಡಾದಲ್ಲಿ ಉಗ್ರರು ದಾಂಧಲೆ ಎಬ್ಬಿಸಿದ್ದಾರೆ. ಈ ಪೈಕಿ 3 ಉಗ್ರರನ್ನು ಹತ್ಯೆ ಮಾಡಲಾಗಿದೆ.

ಇದನ್ನೂ ಓದಿ: All Eyes on Raesi: ಹಿಂದೂ ಯಾತ್ರಿಕರ ಹತ್ಯೆ: ಆಲ್ ಐಸ್ ಆನ್ ರಿಯಾಸಿ; ರಫಾ ರಫಾ ಅನ್ನುತ್ತಿದ್ದ ಸೆಲೆಬ್ರಿಟಿಗಳು ಈಗೆಲ್ಲಿ?

Continue Reading
Advertisement
Viral Video
Latest4 mins ago

Viral Video: 7 ಅಜ್ಜಂದಿರ ಜೊತೆ ಸಂಸಾರ ನಡೆಸುತ್ತಿರುವ ಯುವತಿ; ಆಕೆಯ ಪ್ಲ್ಯಾನ್ ಇಂಟರೆಸ್ಟಿಂಗ್!

Malaika Vasupal experimented with a halter neck blouse for a traditional saree
ಫ್ಯಾಷನ್7 mins ago

Malaika Vasupal: ಟ್ರೆಡಿಷನಲ್‌ ಸೀರೆಗೆ ಹಾಲ್ಟರ್‌ ನೆಕ್‌ ಬ್ಲೌಸ್‌ ಪ್ರಯೋಗಿಸಿದ ನಟಿ ಮಲೈಕಾ ವಸುಪಾಲ್‌

Air India Food
ದೇಶ10 mins ago

Air India Food:‌ ಪ್ರಯಾಣಿಕರೇ ಎಚ್ಚರ; ವಿಮಾನದ ಊಟದಲ್ಲಿ ಸಿಕ್ತು ಮೆಟಲ್‌ ಬ್ಲೇಡ್!

Viral news
ವೈರಲ್ ನ್ಯೂಸ್20 mins ago

Viral News: ಕಾಯಿಲೆ ಗುರುತು ಹಿಡಿಯಲು ಖ್ಯಾತ ವೈದ್ಯರ ತಿಣುಕಾಟ; ಹತ್ತೇ ಸೆಕೆಂಡ್ ನಲ್ಲಿ ಪತ್ತೆಹಚ್ಚಿದ ಕೆಲಸದ ಮಹಿಳೆ!

T20 World Cup Super 8
ಕ್ರೀಡೆ21 mins ago

T20 World Cup Super 8 Stage: ಸೂಪರ್​-8 ಪಂದ್ಯಕ್ಕೂ ಮಳೆ ಭೀತಿ; ಭಾರತ-ಆಸೀಸ್​ ಪಂದ್ಯ ಅನುಮಾನ!

Rakshit Shetty Ekam web series release date announce
ಸ್ಯಾಂಡಲ್ ವುಡ್22 mins ago

Rakshit Shetty: ʻಏಕಂʼ ವೆಬ್ ಸಿರೀಸ್​ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದ ಸಿಂಪಲ್‌ ಸ್ಟಾರ್‌ ರಕ್ಷಿತ್ ಶೆಟ್ಟಿ!

Dawood Ibrahim
ವಿದೇಶ32 mins ago

Dawood Ibrahim: ವೃದ್ಧ ಡಾನ್‌ ದಾವೂದ್‌ ಇಬ್ರಾಹಿಂ ಈಗ ಅಮೆರಿಕದ ಕೇಂದ್ರ ಗುಪ್ತಚರ ಸಂಸ್ಥೆಯ ಕೈಗೊಂಬೆ?

Two drown in quarry
ಕರ್ನಾಟಕ33 mins ago

Drown in Quarry: ಕ್ವಾರಿಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರ ಸಾವು

MAHE Manipal 1 Day Treatment Capacity Development Training Program at KMC
ಬೆಂಗಳೂರು44 mins ago

MAHE Manipal: ಕೆಎಂಸಿಯಲ್ಲಿ 1 ದಿನದ ಚಿಕಿತ್ಸಾ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ

Job Recruitment
Latest46 mins ago

Job Recruitment: ಬ್ಯಾಂಕ್ ಆಫ್ ಬರೋಡಾದಲ್ಲಿ 627 ಹುದ್ದೆಗಳಿಗೆ ಅರ್ಜಿ ಆಹ್ವಾನ; 55 ಲಕ್ಷದವರೆಗೆ ಸಂಬಳ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಮೈಸೂರು4 hours ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು5 hours ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ23 hours ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 day ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 day ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ3 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು3 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು3 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ3 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

ಟ್ರೆಂಡಿಂಗ್‌