Site icon Vistara News

Death Penalty: ಈ 7 ದೇಶಗಳಲ್ಲಿ ಅತ್ಯಾಚಾರ ನಡೆಸಿದರೆ ಮರಣ ದಂಡನೆಯೇ ಶಿಕ್ಷೆ!

Death Penalty

ಭಾರತದಲ್ಲಿ ಅತ್ಯಾಚಾರ ಪ್ರಕರಣಗಳು (Physical Abuse) ಹೆಚ್ಚಾಗಿದ್ದರೂ ಆರೋಪಿಗಳಿಗೆ ಶಿಕ್ಷೆ ನೀಡುವಾಗ ಸಾಕಷ್ಟು ವಿಳಂಬವಾಗುತ್ತಿದೆ. ಇಂಥ ಘೋರ ಕೃತ್ಯಕ್ಕೆ ನಮ್ಮಲ್ಲಿ ಮರಣ ದಂಡನೆ ಶಿಕ್ಷೆ ಆಗುವುದೇ ಅಪರೂಪ. ಶಿಕ್ಷೆಯಿಂದ ಪಾರಾಗುವವರೇ ಹೆಚ್ಚು. ಅಪರೂಪದ ಪ್ರಕರಣಗಳಲ್ಲಿ ಮಾತ್ರ ಅಪರಾಧಿಗಳಿಗೆ ಮರಣದಂಡನೆ (Death Penalty) ವಿಧಿಸಲಾಗುತ್ತದೆ. ಆದರೆ ವಿಶ್ವದ ಕೆಲವು ರಾಷ್ಟ್ರಗಳಲ್ಲಿ ಅತ್ಯಾಚಾರ ಆರೋಪಿಗಳಿಗೆ (sexualy abuse case) ಮರಣದಂಡನೆಯನ್ನೇ ವಿಧಿಸಲಾಗುತ್ತದೆ.

ಭಾರತೀಯ ನ್ಯಾಯಾಲಯಗಳು ಮರಣದಂಡನೆಯನ್ನು ನೀಡುವಾಗ ಅಪರೂಪದ ಸಂದರ್ಭಗಳ ನಿಯಮವನ್ನು ಅನ್ವಯಿಸುತ್ತವೆ. 2012ರ ಡಿಸೆಂಬರ್‌ನಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯವು ನಿರ್ಭಯ ಪ್ರಕರಣದಲ್ಲಿ ಅವರ ಮೇಲೆ ನಡೆದ ಮಾರಣಾಂತಿಕ ಸಾಮೂಹಿಕ ಅತ್ಯಾಚಾರದ ನಾಲ್ವರು ಅಪರಾಧಿಗಳಿಗೆ ಮರಣದಂಡನೆ ವಿಧಿಸಿತು. ಈ ಅತ್ಯಾಚಾರ ಪ್ರಕರಣ ರಾಷ್ಟ್ರವ್ಯಾಪಿ ಆಕ್ರೋಶಕ್ಕೆ ಕಾರಣವಾಗಿತ್ತು. ದೇಶದ ಅತ್ಯಾಚಾರ ಕಾನೂನುಗಳನ್ನು ಆಮೂಲಾಗ್ರವಾಗಿ ಮರುಪರಿಶೀಲಿಸುವಂತೆ ಮಾಡಿತು.

ಆದರೆ ವಿಶ್ವದ ಏಳು ರಾಷ್ಟ್ರಗಳಲ್ಲಿ ಅತ್ಯಾಚಾರಕ್ಕೆ ಮರಣದಂಡನೆಯನ್ನೇ ಶಿಕ್ಷೆಯಾಗಿ ನೀಡಲಾಗುತ್ತದೆ. ಅವುಗಳು ಯಾವುದು ಎನ್ನುವ ಕುರಿತು ಇಲ್ಲಿದೆ ಮಾಹಿತಿ.


ಸೌದಿ ಅರೇಬಿಯಾ

ಸರಣಿ ಅತ್ಯಾಚಾರ ಪ್ರಕರಣಗಳಲ್ಲಿ ಸೌದಿ ಅರೇಬಿಯಾದಲ್ಲಿ ಅತ್ಯಾಚಾರಕ್ಕೆ ಹದ್ ಅಥವಾ ತಝೀರ್ ಹೆಸರಿನಲ್ಲಿ ಮರಣದಂಡನೆಯನ್ನು ವಿಧಿಸಲಾಗುತ್ತದೆ.

Death Penalty


ಬಾಂಗ್ಲಾದೇಶ

ಅತ್ಯಾಚಾರಕ್ಕೆ ಕಡ್ಡಾಯ ಮರಣದಂಡನೆಯನ್ನು ವಿಧಿಸಲು ಬಾಂಗ್ಲಾದೇಶದಲ್ಲಿ ಸುಪ್ರೀಂ ಕೋರ್ಟ್ 2015ರಲ್ಲಿ ತೀರ್ಪು ನೀಡಿತು. ಆದರೆ ಇಲ್ಲಿ ಮರಣದಂಡನೆಯು ಜೀವಾವಧಿ ಶಿಕ್ಷೆಯ ಜೊತೆಗೆ ಒಂದು ಆಯ್ಕೆಯಾಗಿ ಪರಿಗಣಿಸಬಹುದಾಗಿದೆ. ಇದು ಅಪರಾಧದ ತೀವ್ರತೆಯನ್ನು ಅವಲಂಬಿಸಿರುತ್ತದೆ.


ಜಪಾನ್

ದರೋಡೆ, ಅತ್ಯಾಚಾರದ ಅಪರಾಧಕ್ಕೆ ಇಪ್ಪತ್ತು ವರ್ಷಗಳ ಕಠಿಣ ಶಿಕ್ಷೆ ಅಥವಾ ಮರಣದಂಡನೆಯನ್ನು ವಿಧಿಸಲಾಗುತ್ತದೆ. ಮಾರಣಾಂತಿಕ ಅತ್ಯಾಚಾರವಾಗಿದ್ದರೆ ಮರಣದಂಡನೆಯೇ ಶಿಕ್ಷೆಯಾಗಿದೆ.


ಇರಾನ್

ಇಸ್ಲಾಮಿಕ್ ದಂಡ ಸಂಹಿತೆಯ ಆರ್ಟಿಕಲ್ 224ರ ಅಡಿಯಲ್ಲಿ ಬಲವಂತದಿಂದ ಅತ್ಯಾಚಾರ ನಡೆಸಿದ್ದಕ್ಕೆ ಮಾತ್ರವಲ್ಲ, ವ್ಯಭಿಚಾರ ನಡೆಸಿದರೂ ಮರಣದಂಡನೆಗೆ ಗುರಿಯಾಗಬೇಕಾಗುತ್ತದೆ.


ಪಾಕಿಸ್ತಾನ

ಸಾಮೂಹಿಕ ಅತ್ಯಾಚಾರ, ಮಕ್ಕಳಿಗೆ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರಕ್ಕೆ ಮರಣದಂಡನೆ ವಿಧಿಸಲಾಗುತ್ತದೆ. ಮಹಿಳೆಯ ಮೇಲೆ ಹಲ್ಲೆ ಮತ್ತು ಉದ್ದೇಶಪೂರ್ವಕವಾಗಿ ಆಕೆಯ ದೇಹವನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದರೆ ಮರಣದಂಡನೆ ಶಿಕ್ಷೆ ನೀಡಲಾಗುತ್ತದೆ. 16 ವರ್ಷದೊಳಗಿನ ಬಾಲಕಿಯರ ಮೇಲೆ ಅತ್ಯಾಚಾರ, ಸಾಮೂಹಿಕ ಅತ್ಯಾಚಾರಕ್ಕೆ ಮರಣದಂಡನೆಯೇ ಶಿಕ್ಷೆಯಾಗಿದೆ.

ಇದನ್ನೂ ಓದಿ: Physical abuse: ಐದು ದಿನಗಳಿಂದ ನಿರಂತರ ಗ್ಯಾಂಗ್‌ರೇಪ್‌; ಕೈ-ಕಾಲು ಕಟ್ಟಿದ ಸ್ಥಿತಿಯಲ್ಲಿ ಬೆಲ್ಜಿಯಂ ಮಹಿಳೆ ರಸ್ತೆ ಬದಿಯಲ್ಲಿ ಪತ್ತೆ


ಕ್ಯೂಬಾ

ಗಂಭೀರವಾದ ಗಾಯಕ್ಕೆ ಕಾರಣವಾಗುವ ಅತ್ಯಾಚಾರಕ್ಕೆ ಮರಣದಂಡನೆ ವಿಧಿಸಲಾಗುತ್ತದೆ. 12 ವರ್ಷದೊಳಗಿನ ಮಗುವಿನ ಮೇಲೆ ಅತ್ಯಾಚಾರ ನಡೆಸುವ ಅಪರಾಧಿಗಳಿಗೆ ನಿರ್ದಾಕ್ಷಿಣ್ಯವಾಗಿ ಮರಣದಂಡನೆ ಶಿಕ್ಷೆಯನ್ನು ವಿಧಿಸಲಾಗುತ್ತದೆ.


ಯುನೈಟೆಡ್ ಸ್ಟೇಟ್ಸ್

ಲೂಯಿಸಿಯಾನ ಮತ್ತು ಫ್ಲೋರಿಡಾದಂತಹ ಅಮೆರಿಕದ ಕೆಲವು ರಾಜ್ಯಗಳು ಮಕ್ಕಳ ಅತ್ಯಾಚಾರ ಪ್ರಕರಣಗಳಲ್ಲಿ ಮರಣದಂಡನೆಯನ್ನು ವಿಧಿಸುತ್ತವೆ.

Exit mobile version