ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald trump) ಮೇಲಿನ ಗುಂಡಿನ ದಾಳಿ(Donald Trump Assassination Bid)ಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಟ್ರಂಪ್ ಮೇಲೆ ಗುಂಡು ಹಾರುತ್ತಿದ್ದಂತೆ ಸೀಕ್ರೆಟ್ ಸರ್ವಿಸ್ ಏಜೆಂಟ್ ಪ್ರತಿದಾಳಿ ಹೇಗೆ ಇತ್ತು ಎಂಬುದನ್ನು ಕಾಣಬಹುದಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಭಾರೀ ಶೇರ್ ಆಗುತ್ತಿದೆ. ಟ್ರಂಪ್ ರ್ಯಾಲಿ ನಡೆಯುತ್ತಿದ್ದ ವೇದಿಕೆಯಿಂದ ಕೆಲವೇ ದೂರದಲ್ಲಿರುವ ಕಟ್ಟಡದ ಮೇಲೆ ಇಬ್ಬರಲ್ಲಿ ಒಬ್ಬ ಸ್ನೈಪರ್ ಗನ್ ಸಮೇತ ಟ್ರಂಪ್ ಭದ್ರತೆಗೆ ನಿಯೋಜನೆಗೊಂಡಿದ್ದ. ಆತನಿಗೆ ಶೂಟರ್ ಕಂಡ ಕೂಡಲೇ ಶೂಟ್ ಮಾಡಿದ್ದಾನೆ. ಗುಂಡಿನ ಸದ್ದು ಕೇಳುತ್ತಿದತೆ ಟ್ರಂಪ್ ಸಮೇತ ಅಲ್ಲಿದ್ದ ಜನ ಕಕ್ಕಾಬಿಕ್ಕಿ ಆಗಿದ್ದಾರೆ. ಟ್ರಂಪ್ ತಕ್ಷಣ ಡಯಾಸ್ ಕೆಳಗೆ ಅವಿತು ಕೂರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
Footage showing the Reaction of the U.S. Secret Service Counter-Sniper Team who Eliminated the Shooter, the Moment that Shots rang out at the Trump Campaign Rally in Butler, Pennsylvania. pic.twitter.com/1ni7L1Makp
— OSINTdefender (@sentdefender) July 14, 2024
ಡೊನಾಲ್ಡ್ ಟ್ರಂಪ್ ಮೇಲಿನ ಗುಂಡಿನ ದಾಳಿ(Shootout) ಬಗ್ಗೆ ಅಮೆರಿಕದ ಗುಪ್ತಚರ ಇಲಾಖೆ FBI ಕೂಲಂಕುಷ ತನಿಖೆ ಕೈಗೆತ್ತಿಕೊಂಡಿದೆ. ತನಿಖೆ ಮೊದ ಭಾಗವಾಗಿ ದಾಳಿಕೋರನ ಗುರುತು ಪತ್ತೆ ಮಾಡಿದೆ. FBI ವರದಿ ಪ್ರಕಾರ ಒಬ್ಬ ದಾಳಿಕೋರನ ಗುರುತು ಪತ್ತೆಯಾಗಿದ್ದು, ಆತನ ಹೆಸರು ಥಾಮಸ್ ಮ್ಯಾಥ್ಯೂ ಕ್ರೂಕ್ಸ್. ಟ್ರಂಪ್ ಮೇಲೆ ದಾಳಿಯಾಗುತ್ತಿದ್ದಂತೆ ಭದ್ರತಾ ಸಿಬ್ಬಂದಿ ಸೀಕ್ರೆಟ್ ಸರ್ವಿಸ್ ಏಜೆಂಟ್ ಈತನನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದೆ. ಇನ್ನು ದಾಳಿಗೆ ನಿಜವಾದ ಕಾರಣ ಏನೆಂಬುದು ಇನ್ನೂ ಪತ್ತೆಯಾಗಿಲ್ಲ. ಆ ಬಗ್ಗೆ ತನಿಖೆ ಮುಂದುವರೆದಿದೆ ಎಂದು FBI ಹೇಳಿದೆ.
ಯುಎಸ್ ಮಾಧ್ಯಮ ವರದಿಗಳು ಶೂಟರ್ ಅನ್ನು 20 ವರ್ಷದ ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಎಂದು ಗುರುತಿಸಿವೆ. ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಪೆನ್ಸಿಲ್ವೇನಿಯಾದ ಬೆಥೆಲ್ ಪಾರ್ಕ್‌ನಿಂದ ಕ್ರೂಕ್ಸ್, ಬಟ್ಲರ್‌ನಲ್ಲಿ ಹೊರಾಂಗಣ ರ್ಯಾಲಿಯಲ್ಲಿ ಟ್ರಂಪ್ ಮೇಲೆ ಗುಂಡು ಹಾರಿಸಿದ್ದಾನೆ. ಅದರಲ್ಲಿ ಒಂದು ಬುಲೆಟ್ ಟ್ರಂಪ್ ಕಿವಿಗೆ ತಾಗಿತು. ಬಟ್ಲರ್ ಫಾರ್ಮ್ ಶೋ ಮೈದಾನದಲ್ಲಿ ವೇದಿಕೆಯಿಂದ 130 ಗಜಗಳಷ್ಟು ದೂರದಲ್ಲಿರುವ ಉತ್ಪಾದನಾ ಘಟಕದ ಛಾವಣಿಯ ಮೇಲೆ ಕ್ರೂಕ್ಸ್ ಗನ್ ಸಮೇತ ಇದ್ದ ಎನ್ನಲಾಗಿದೆ.
ಪೆನ್ಸಿಲ್ವೇನಿಯಾದ ಬಟ್ಲರ್ನ್‌ನಲ್ಲಿ ಶನಿವಾರ ಸಂಜೆ ನಡೆದ ರ್ಯಾಲಿ ಆಯೋಜಿಸಲಾಗಿತ್ತು. ಈ ವೇಳೆ ಈ ಗುಂಡಿನ ದಾಳಿ ನಡೆದಿದ್ದು, ಟ್ರಂಪ್ ಅವರ ಕಿವಿ ಮತ್ತು ಮುಖದ ಮೇಲೆ ರಕ್ತ ಬಂದಿದ್ದು, ಕೂಡಲೇ ಅವರನ್ನು ವೇದಿಕೆಯಿಂದ ಸ್ಥಳಾಂತರಿಸಲಾಯಿತು. ಇನ್ನು ಘಟನೆಯಲ್ಲಿ ಒಬ್ಬ ಶೂಟರ್ ಮತ್ತು ರ್ಯಾಲಿಯಲ್ಲಿ ಭಾಗವಹಿಸಿದ್ದವರಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: US Presidential Election: ನೀಲಿ ಚಿತ್ರ ತಾರೆ ಜತೆ ಡೊನಾಲ್ಡ್ ಟ್ರಂಪ್ ಸೆಕ್ಸ್; ಚರ್ಚೆ ವೇಳೆ ಬೈಡೆನ್ ಆರೋಪ