ನವದೆಹಲಿ: ಅಶ್ಲೀಲ ವೆಬ್‌ಸೈಟ್‌ಗಳನ್ನು (Porn Websites) ನಿಷೇಧಿಸುವ ಬದಲಿಗೆ ಲೈಂಗಿಕ ಅಭಿವ್ಯಕ್ತಿಯನ್ನು (Sexual expression) ಸರ್ಕಾರಗಳು ಹಿರಿಮೆ ಎಂದು ಭಾವಿಸಬೇಕು. ಅಲ್ಲದೇ ಅಶ್ಲೀಲತೆಯನ್ನು ಸಾಮಾನ್ಯವಾಗಿಸುವ (Porn Normal) ಮೂಲಕ ಬೋರಿಂಗ್ (Boring) ಆಗುವಂತೆ ಮಾಡಬೇಕು ಎಂದು ಪೋರ್ನ್ ಹಬ್ (Pornhub) ಮಾಲೀಕ ಸೊಲೊಮನ್ ಫ್ರೀಡ್ಮನ್ (Solomon Friedman) ಅವರು ಹೇಳಿದ್ದಾರೆ. ಎಎಫ್‌ಪಿ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಸೋಲೊಮನ್ ಫ್ರೀಡ್ಮನ್ ಅವರು, ಲೈಂಗಿಕ ಅಭಿವ್ಯಕ್ತಿಯನ್ನು ಹೆಮ್ಮೆ ಪಡುವ ದಿಕ್ಕಿನತ್ತ ಸಮಾಜವು ಸಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ(viral News).
ನಾವು ಲೈಂಗಿಕ ಅಭಿವ್ಯಕ್ತಿಯ ಬಗ್ಗೆ ಹೆಮ್ಮೆಪಡುವ ದಿಕ್ಕಿನಲ್ಲಿ ಸಮಾಜವು ಸಾಗಿದೆ ಎಂದು ನಾನು ಭಾವಿಸುತ್ತೇನೆ ಎಂದು ಎಥಿಕಲ್ ಕ್ಯಾಪಿಟಲ್ ಪಾರ್ಟ್‌ನರ್ಸ್‌ನ ಸೊಲೊಮನ್ ಫ್ರೈಡ್‌ಮನ್ ಹೇಳಿದ್ದಾರೆ. ಕೆನಡಾದಲ್ಲಿ ಕಾನೂನುಬದ್ಧವಾಗಿಯೇ ಗಾಂಜಾ ಅನುಮತಿ ನೀಡಲಾಯಿತು. ಬಳಿಕ ಈಗ ಅಲ್ಲಿ ಸಾಮಾನ್ಯವಾಗಿದೆ ಮತ್ತು ಜನರಿಗೆ ಅದು ಬೋರಿಂಗ್ ಕೂಡ ಆಗುತ್ತಿದೆ. ಹಾಗೆಯೇ ಪೋರ್ನ್‌ದಿಂದಲೂ ಜನರು ಬೋರಿಂಗ್ ಆಗುತ್ತಾರೆ ಎಂದು ಅವರು ಹೇಳಿದರು.
ಕೆಲವು ತಿಂಗಳ ಹಿಂದೆ ಪೋರ್ಹ್‌ನಬ್‌ನ ಮೂಲ ಸಂಸ್ಥೆ ಮೈಂಡ್‌ಗೀಕ್ ಅನ್ನು ಕೆನಡಾದ ಖಾಸಗಿ ಸಂಸ್ಥೆ ಎಥಿಕಲ್ ಕ್ಯಾಪಿಟಲ್ ಪಾರ್ಟ್‌ನರ್ಸ್ ಖರೀದಿಸಿತು. ಇದರಿಂದಾಗಿ ಇಸಿಪಿ ಯುಪೋರ್ನ್ ಸೇರಿದಂತೆ ಇತರ ಸೈಟ್‌ಗಳ ಏಕೈಕ ನಿಯಂತ್ರಕ ಸಂಸ್ಥೆಯಾಗಿ ಮಾರ್ಪಟ್ಟಿತು. ಇತ್ತೀಚೆಗೆ ಇಸಿಪಿ ಸಂಸ್ಥಾಪಕ ಸೊಲೊಮನ್ ಫ್ರೈಡ್‌ಮನ್ ಅವರು ತಮ್ಮ ಕಂಪನಿಯು ಸ್ವಾಧೀನಪಡಿಸಿಕೊಂಡ ನಂತರ ಎದುರಿಸಿದ ಸಮಸ್ಯೆ ಮತ್ತು ಅದರ ವೆಬ್‌ಸೈಟ್‌ಗಳಲ್ಲಿ ಲೈಂಗಿಕವಾಗಿ ನಿಂದನೀಯ ಮತ್ತು ಹಿಂಸಾತ್ಮಕ ವಿಷಯವನ್ನು ತೆಗೆದುಹಾಕಲು ಏನು ಮಾಡಿದೆ ಎಂಬುದರ ಕುರಿತು ವಿವರವಾಗಿ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: India Porn Ban | 67 ಅಶ್ಲೀಲ ವೆಬ್‌ಸೈಟ್ ನಿಷೇಧಿಸಿದ ಕೇಂದ್ರ ಸರ್ಕಾರ, ಕಾರಣ ಏನು?
ಹೆಚ್ಚಿನ ಸಂಖ್ಯೆಯ ಅಪ್ರಾಪ್ತ ವೀಕ್ಷಕರು ಹಾಗೂ ಲೈಂಗಿಕ ಹಿಂಸೆ ಮತ್ತು ನಿಂದನೆ ಪ್ರಕರಣಗಳಿಂದಾಗಿ ಇಸಿಪಿಯ ಅನೇಕ ಅಶ್ಲೀಲ ವೆಬ್‌ಸೈಟ್‌ಗಳು ವಿವಿಧ ದೇಶಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಎದುರಿಸುತ್ತಿವೆ. ಪೋರ್ನ್ ಹಬ್ ಸ್ವಾಧೀನಪಡಿಸಿಕೊಂಡ ಬಳಿಕ ಇಸಿಪಿ ಬಹಳಷ್ಟು ಕಾನೂನು ಸಮಸ್ಯೆಗಳನ್ನು ಎದುರಿಸುತ್ತಿದೆ. ಅಮೆರಿಕದ ಉತಾಹ್‌ದಿಂದ ಇಸಿಪಿಯ ಅನೇಕ ಪೋರ್ನ್ ವೆಬ್‌ಸೈಟ್‌ಗಳನ್ನು ತೆಗೆದು ಹಾಕಲಾಯಿತು. ಈ ಅಶ್ಲೀಲ ಜಾಲತಾಣಗಳ ವೀಕ್ಷಕರು ಅಪ್ರಾಪ್ತರು ಎಂದು ಗೊತ್ತಾಗುತ್ತಿದ್ದಂತೆ ಅಲ್ಲಿನ ಸರ್ಕಾರ ಈ ನಿರ್ಧಾರ ಕೈಗೊಂಡಿತು. ಸಾಕಷ್ಟು ಕಾನೂನಾತ್ಮಕ ತೊಂದರೆಗಳನ್ನು ಎದುರಿಸುತ್ತಿರುವ ಇಸಿಪಿ ತನ್ನ ಬಹುತೇಕ ಅಶ್ಲೀಲ ಜಾಲತಾಣಗಳನ್ನು ಜುಲೈ 7ರಂದು ಸ್ಥಗಿತ ಮಾಡುವ ಅನಿವಾರ್ಯತೆಗೆ ಸಿಲುಕಿದೆ. ಈ ಮಧ್ಯೆ ಜಾಲತಾಣಗಳ ಮಾಲೀಕರು ಮತ್ತು ಕಾನೂನು ಪ್ರತಿಬಂಧಕ ಸಂಸ್ಥೆಗಳ ನಡುವೆ ಮಾತುಕತೆ ನಡೆದಿದೆ.
ವಿದೇಶದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.