ರಿಯಾದ್: ಅಸಮರ್ಥ ನಾಯಕತ್ವ, ಉಗ್ರರಿಗೆ ಹಣಕಾಸು ನೆರವು, ದೂರ ದೃಷ್ಟಿ ಇಲ್ಲದ ರಾಜಕಾರಣಿಗಳಿಂದಾಗಿ ಆರ್ಥಿಕ ಬಿಕ್ಕಟ್ಟು (Pakistan Economic Crisis) ಎದುರಿಸುತ್ತಿರುವ ಪಾಕಿಸ್ತಾನವು ಜಾಗತಿಕವಾಗಿ ನೆರವಿಗಾಗಿ ಭಿಕ್ಷಾ ಪಾತ್ರೆ ಹಿಡಿದು ನಿಂತಿದೆ. ಪಾಕಿಸ್ತಾನಕ್ಕೇ ಇಂತಹ ಪರಿಸ್ಥಿತಿ ಬಂದಿರುವ ಬೆನ್ನಲ್ಲೇ, “ಸೌದಿ ಅರೇಬಿಯಾದ ಹಜ್ ಯಾತ್ರೆಗೆ ನಿಮ್ಮ ದೇಶದ ಭಿಕ್ಷುಕರು ಹಾಗೂ ಕಳ್ಳರನ್ನು ಕಳುಹಿಸದಿರಿ” ಎಂದು ಪಾಕ್‌ಗೆ ಸೌದಿ ಅರೇಬಿಯಾ (Saudi Arabia) ಖಡಕ್ ಎಚ್ಚರಿಕೆ ನೀಡಿದೆ.
ಹಜ್ ಯಾತ್ರೆ ವೇಳೆ ಇತ್ತೀಚೆಗೆ ಪಾಕಿಸ್ತಾನದ ಭಿಕ್ಷುಕರು ಕಳ್ಳತನಗಳಲ್ಲಿ ತೊಡಗಿದ್ದಾರೆ. ಇದರಿಂದಾಗಿ ಸೌದಿ ಅರೇಬಿಯಾ ವಿದೇಶಾಂಗ ಸಚಿವರು ಸಭೆ ನಡೆಸಿ, ಪಾಕಿಸ್ತಾನಕ್ಕೆ ಹಲವು ಸೂಚನೆ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. “ಹಜ್ ಯಾತ್ರೆ ವೇಳೆ ಜೇಬು ಕಳ್ಳತನ ಮಾಡಿ ಸಿಕ್ಕವರಲ್ಲಿ ಶೇ.90ರಷ್ಟು ಮಂದಿ ಪಾಕಿಸ್ತಾನದವರೇ ಆಗಿದ್ದಾರೆ. ಅಲ್ಲದೆ, ಹಜ್ ಕೋಟಾದಲ್ಲಿ ಅವರು ಉಮ್ರಾ ವೀಸಾ ಪಡೆದವರೇ ಆಗಿದ್ದಾರೆ. ಹಾಗಾಗಿ, ಪಾಕಿಸ್ತಾನವು ವೀಸಾ ನೀಡುವ ಮೊದಲು ಅವರ ಕುರಿತು ಪರಿಶೀಲನೆ ಮಾಡಬೇಕು” ಎಂಬುದಾಗಿ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಜಾಗತಿಕ ಮಾಧ್ಯಮಗಳಲ್ಲಿ ವರದಿ
"سب سے زیادہ پاکستانی بھکاری بیرون ملک جارہے ہیں"
— Geo News Urdu (@geonews_urdu) September 27, 2023
سیکریٹری اوورسیز پاکستانیز کا انکشاف pic.twitter.com/MgFXTaAuj0
ಜೈಲು ತುಂಬ ಪಾಕಿಸ್ತಾನಿಯರೇ
“ಮೆಕ್ಕಾದಲ್ಲಿರುವ ಅಲ್ ಹರಮ್ ಮಸೀದಿಯ ಬಳಿ ಇರುವ ಭಿಕ್ಷುಕರು ಕೂಡ ಪಾಕಿಸ್ತಾನದವರೇ ಆಗಿದ್ದಾರೆ. ಕಳ್ಳತನ ಮಾಡಿ ಸಿಕ್ಕವರನ್ನು ಜೈಲಿಗೆ ಕಳುಹಿಸಿದಾಗ ಹೆಚ್ಚಿನ ಪರಿಶೀಲನೆ ಮಾಡಲಾಗಿದೆ. ಆಗ, ಹೆಚ್ಚಿನವರು ಪಾಕಿಸ್ತಾನದವರೇ ಆಗಿದ್ದಾರೆ. ನಮ್ಮ ಜೈಲುಗಳಲ್ಲಿ ತುಂಬಿರುವ ಕೈದಿಗಳಲ್ಲಿ ಪಾಕಿಸ್ತಾನದವರೇ ಹೆಚ್ಚಿದ್ದಾರೆ. ಇವರಿಗೆ ಬೇಕಾಬಿಟ್ಟಿಯಾಗಿ ಉಮ್ರಾ ವೀಸಾ ನೀಡಿದ ಕಾರಣ ಹಜ್ ಯಾತ್ರೆಗೆ ಬಂದು ಕಳ್ಳತನದಲ್ಲಿ ತೊಡಗುತ್ತಿದ್ದಾರೆ” ಎಂಬುದಾಗಿ ಪಾಕಿಸ್ತಾನದ ಅಧಿಕಾರಿಗಳಿಗೆ ಸೌದಿ ಅರೇಬಿಯಾ ತಿಳಿಸಿದೆ ಎನ್ನಲಾಗಿದೆ.
ಇದನ್ನೂ ಓದಿ: Pak Propaganda: ಪಾಕ್ ಭಿಕಾರಿ; ವಿಶ್ವಸಂಸ್ಥೆಯಲ್ಲಿ ಬಣ್ಣ ಬಯಲು ಮಾಡಿದ ಕಾಶ್ಮೀರದ ದಿಟ್ಟೆ!
ಅರಬ್ ರಾಷ್ಟ್ರಗಳು ಪಾಕಿಸ್ತಾನದ ಮುಸ್ಲಿಮರನ್ನು ನಂಬುವುದಿಲ್ಲ. ಅದರಲ್ಲೂ, ಉಮ್ರಾ ವೀಸಾ ಪಡೆದು ಸೌದಿ ಅರೇಬಿಯಾಗೆ ಬರುವ ಅವರು ಕಳ್ಳತನದ ಪ್ರಕರಣಗಳಲ್ಲಿ ಸಿಲುಕಿದ ಬಳಿಕವಂತೂ ಯಾರೂ ಪಾಕಿಸ್ತಾನಿಯರಿಗೆ ಕೆಲಸವನ್ನೂ ನೀಡುತ್ತಿಲ್ಲ. ಅರಬ್ ರಾಷ್ಟ್ರಗಳ ಇಂತಹ ಅಸಮಾಧಾನದಿಂದಾಗಿ ಸೌದಿ ಅರೇಬಿಯಾಗೆ ಮುಜುಗರ ತಂದಿದೆ. ಭಾರತ ಹಾಗೂ ಬಾಂಗ್ಲಾದೇಶದ ಮುಸ್ಲಿಮರನ್ನು ಅರಬ್ ರಾಷ್ಟ್ರಗಳು ನಂಬುತ್ತವೆ. ಆದರೆ, ಪಾಕಿಸ್ತಾನಿಯರನ್ನು ಅವರು ನಂಬುವುದಿಲ್ಲ ಎನ್ನಲಾಗಿದೆ. ಇದರಿಂದ ಜಾಗತಿಕವಾಗಿ ಪಾಕಿಸ್ತಾನಕ್ಕೆ ಮತ್ತೊಂದು ಹಿನ್ನಡೆಯಾದಂತಾಗಿದೆ ಎಂದೇ ಹೇಳಲಾಗುತ್ತಿದೆ.