ಲಂಡನ್: ‘ತೂಕ ಹೆಚ್ಚಾಯಿತು’ ಎಂದು 19 ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಿದ ವಿಲಕ್ಷಣ ಘಟನೆ ನಡೆದಿದೆ(Too Heavy To Take-Off). ಲಂಡನ್ ಮೂಲದ ಈಸಿಜೆಟ್ ಏರ್‌ಲೈನ್ (Easyjet Airline) ಕಂಪನಿಯ ವಿಮಾನ ಟೇಕ್ ಆಫ್ ವೇಳೆ ಈ ಘಟನೆ ನಡೆದ ಬಗ್ಗೆ ಇಂಡಿಪೆಂಡೆಂಟ್ ವರದಿ ಮಾಡಿದೆ. ಪ್ರತಿಕೂಲಕರ ಹವಾಮಾನ ಹಾಗೂ ಹೆಚ್ಚು ತೂಕದ ಪರಿಣಾಮದಿಂದ ಟೇಕ್ ಆಫ್‌ಗೆ ತೊಂದರೆಯಾದ ಹಿನ್ನೆಲೆಯಲ್ಲಿ ವಿಮಾನ ಸಿಬ್ಬಂದಿಯ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ. ಈಸಿಜೆಟ್ ಸ್ಪೇನ್‌ನ (Spain) ಲ್ಯಾಂಜರೋಟ್‌ನಿಂದ(Lanzarote) ಲಿವರ್‌ಪೂಲ್‌ಗೆ (Liverpool) ಟೇಕ್ ಆಫ್ ಮಾಡಬೇಕಾಗಿತ್ತು. 300ಕ್ಕೂ ಅಧಿಕ ವಿಮಾನಗಳನ್ನು ಹೊಂದಿರುವ ಈಸಿಜೆಟ್ ಸುಮಾರು 1000 ಮಾರ್ಗಗಳಲ್ಲಿ ಹಾರಾಟ ನಡೆಸುತ್ತದೆ(Viral News).
#easyJet's Captain asked 20 passengers to leave the aircraft because it was overweight and wouldn't be able to takeoff from #Lanzarote due to wind and warm weather. The flight from Lanzarote to #Liverpool was delayed by about 2 hours.
— FlightMode (@FlightModeblog) July 8, 2023
🎥 ©razza699/TikTok#Spain #uk #aviation pic.twitter.com/oa8pi4Imox
ವಿಮಾನದಿಂದ 19 ಪ್ರಯಾಣಿಕರನ್ನು ಕೆಳಗಿಳಿಸುತ್ತಿರುವ ದೃಶ್ಯಗಳನ್ನು ಪ್ರಯಾಣಿಕರೊಬ್ಬರು ಚಿತ್ರಿಕರಿಸಿ ಮೈಕ್ರೋಬ್ಲಾಗಿಂಗ್ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ನೀವು ಇಲ್ಲಿ ಬಂದಿದ್ದಕ್ಕಾಗಿ ಧನ್ಯವಾದಗಳು. ಆದರೆ, ಬಹಳಷ್ಟು ಪ್ರಯಾಣಿಕರಿಂದ ವಿಮಾನದ ಭಾರ ಹೆಚ್ಚಾಗಿದೆ ಎಂದು ಪೈಲಟ್ ಹೇಳುವ ಮಾತುಗಳು ವಿಡಿಯೋದಲ್ಲಿ ದಾಖಲಾಗಿವೆ.
ಲ್ಯಾಂಜರೋಟ್‌ನಲ್ಲಿರುವ ಚಿಕ್ಕದಾದ ರನ್‌ವೇ ಮತ್ತು ಪ್ರತಿಕೂಲ ಪರಿಸ್ಥತಿಗಳಿಂದಾಗಿ ವಿಮಾನ ಟೇಕ್ ಆಫ್ ಮಾಡಲು ಕಷ್ಟವಾಗುತ್ತಿದೆ. ನಾನು ಈ ತರದ ಅನುಭವವನ್ನು ನನ್ನ ಹಿರಿಯ ಅಧಿಕಾರಿಗಳೊಂದಿಗೆ ಅನುಭವಿಸಿದ್ದೇನೆ. ಈ ಹಿಂದೆಯೂ ಇಂಥ ಪರಿಸ್ಥಿತಿಗೆ ನಾವು ಸಾಕ್ಷಿಯಾಗಿದ್ದೇವೆ. ಸುರಕ್ಷತೆಯೇ ನಮ್ಮ ಮೊದಲ ಆದ್ಯತೆಯಾಗಿದೆ. ಈ ವಿಮಾನ ಗಾಳಿಯಲ್ಲಿ ಹಾರಬೇಕೆಂದರ ಹಲವಾರು ಅಂಶಗಳು ಕಾರಣವಾಗುತ್ತವೆ. ಗಾಳಿ ಚಲನೆ ಅದ್ಭುತವಾಗಿಲ್ಲ. ಗಾಳಿಯ ದಿಕ್ಕು ಕೂಡ ಸರಿಯಾಗಿಲ್ಲ ಎಂದು ಪೈಲಟ್ ಹೇಳುವುದನ್ನು ವಿಡಿಯೋದಲ್ಲಿ ಕೇಳಬಹುದಾಗಿದೆ.
ಈ ಸುದ್ದಿಯನ್ನೂ ಓದಿ: Viral News : ಮನೆ ಬಾಡಿಗೆಗೆ ಕೊಡುವುದರೊಂದಿಗೆ ಸ್ಪೆಷಲ್ ಗಿಫ್ಟ್ ಕೊಟ್ಟ ಓನರ್! ವೈರಲ್ ಆಗ್ತಿದೆ ಕಿಮ್ಚಿ ಕಥೆ
ಸಣ್ಣ ಅನುಭವದ ಮಾತುಗಳನ್ನು ಹೇಳಿದ ಪೈಲಟ್, ವಿಮಾನದಿಂದ ಕೆಳಗಿಳಯಲು ಅರ್ಹರಾದ 19 ಪ್ರಯಾಣಿಕರನ್ನು ಆಯ್ಕೆ ಮಾಡಿದರು. ಅಲ್ಲದೇ, ಈಸಿಜೆಟ್ ಪರವಾಗಿ ಅವರಿಗೆ 500 ಯುರೋಗಳಷ್ಟು ಪ್ರೋತ್ಸಾಹ ಧನವನ್ನು ಘೋಷಿಸಿದರು. 19 ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಿದ ನಡೆಯನ್ನು ಖಚಿತಪಡಿಸಿರುವ ಈಸಿಜೆಟ್ ವಕ್ತಾರರು, ಲಂಜಾರೋಟ್‌ನಿಂದ ಲಿವರ್‌ಪೂಲ್‌ಗೆ ಹೊರಟಿದ್ದ ವಿಮಾನದಲ್ಲಿದ್ದ 19 ಪ್ರಯಾಣಿಕರು ಸ್ವಯಂಪ್ರೇರಿತರಾಗಿಯೇ ನಂತರದ ವಿಮಾನದಲ್ಲಿ ಹೊರಡಲು ಒಪ್ಪಿಕೊಂಡಿದ್ದಾರೆ. ವಿಮಾನದ ತೂಕದ ಮಿತಿ ಹಾಗೂ ಹವಾಮಾನ ಪರಿಸ್ಥಿತಿಗಳಿಂದಾಗಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಸುರಕ್ಷತೆಯ ಕಾರಣಕ್ಕಾಗಿ ಎಲ್ಲ ವಿಮಾನಗಳಿಗೂ ತೂಕದ ಮಿತಿ ಇರುತ್ತದೆ. ಇದೊಂದು ಸಾಮಾನ್ಯ ಪ್ರಕ್ರಿಯೆ ಎಂದು ಅವರು ಇಂಡಿಪೆಂಡೆಂಟ್ ಪತ್ರಿಕೆಗೆ ತಿಳಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.