Site icon Vistara News

Elon Musk | ಅಮೆರಿಕ ಮಾಜಿ ಅಧ್ಯಕ್ಷ ಟ್ರಂಪ್ ಖಾತೆ ಮರು ಆರಂಭಿಸಿದ ಎಲಾನ್ ಮಸ್ಕ್!

trump and twitter

ಸ್ಯಾನ್‌ಫ್ರಾನ್ಸಿಸ್ಕೋ: ಅಮೆರಿಕದ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಅವರು ಟ್ವಿಟರ್‌ಗೆ ಮರಳಿದ್ದಾರೆ. ಈ ಮೈಕ್ರೋ ಬ್ಲಾಗಿಂಗ್ ವೇದಿಕೆಯ ಓನರ್ ಎಲಾನ್ ಮಸ್ಕ್ (Elon Musk) ಅವರು ಮಾಜಿ ಅಧ್ಯಕ್ಷರ ಖಾತೆಯನ್ನು ಮರು ಸ್ಥಾಪಿಸಬೇಕೆ ಎಂಬ ಪೋಲ್ ಆರಂಭಿಸಿದ್ದರು. 24 ಗಂಟೆಗಳ ಕಾಲ ನಡೆದ ಈ ಸಮೀಕ್ಷೆಯಲ್ಲಿ 15 ಲಕ್ಷ ಜನರು ಪಾಲ್ಗೊಂಡಿದ್ದರು. 51.8 ಪ್ರತಿಶತ ಜನರು ಖಾತೆ ಮರು ಸ್ಥಾಪಿಸಲು ಒಪ್ಪಿಗೆ ಸೂಚಿಸಿದರೆ, 48.2 ಪ್ರತಿಶತ ಜನರು ವಿರುದ್ಧವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. 2024ರ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಲು ಎಂದು ಡೋನಾಲ್ಡ್ ಟ್ರಂಪ್ ಅವರು ಘೋಷಿಸಿದ ಬೆನ್ನಲ್ಲೇ ಟ್ವಿಟರ್ ಅವರ ಖಾತೆಯನ್ನು ಮರು ಸ್ಥಾಪಿಸಿದೆ.

ಅಮೆರಿಕದ ಕ್ಯಾಪಿಟಲ್ ಹಿಲ್ ಮೇಲೆ ದಾಳಿ ನಡೆಸಲು ತಮ್ಮ ಬೆಂಬಲಿಗರನ್ನು ಪ್ರಚೋದಿಸಿದ ಕಾರಣಕ್ಕೆ ಟ್ವಿಟರ್ ಡೋನಾಲ್ಡ್ ಟ್ರಂಪ್ ಅವರ ಖಾತೆಯನ್ನು 2021ರಲ್ಲಿ ಶಾಶ್ವತವಾಗಿ ನಿಷೇಧಿಸಿತ್ತು. ಈ ಮಧ್ಯೆ, ಟ್ವಿಟರ್ ಮಾಲೀಕತ್ವ ಕೂಡ ಬದಲಾಯಿತು. ಸಂದರ್ಭಕ್ಕೆ ಅನುಗುಣವಾಗಿ ಎಲಾನ್ ಮಸ್ಕ್ ಅವರು ಟ್ರಂಪ್ ಖಾತೆಯನ್ನು ಮತ್ತೆ ಆರಂಭಿಸಿದ್ದಾರೆ.

ಅಮೆರಿಕದ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರ ಖಾತೆಯ ಕುರಿತು ನಡೆಸಿದ ಪೋಲ್ ಬಗ್ಗೆ ಟ್ವೀಟ್ ಮಾಡಿರುವ ಎಲಾನ್ ಮಸ್ಕ್ ಅವರು, ಜನರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಟ್ರಂಪ್ ಅವರ ಖಾತೆಯನ್ನು ಮರುಚಾಲನೆಗೊಳಿಸಲಾಗುವುದು ಎಂದು ಹೇಳಿದ್ದಾರೆ. ಜತೆಗೇ ಟ್ವೀಟ್‌ನಲ್ಲಿ Vox Populi, Vox Dei ಎಂದು ಸೇರಿದ್ದಾರೆ. ಲ್ಯಾಟಿನ್ ಭಾಷೆಯಲ್ಲಿ Vox Populi, Vox Dei ಎಂದರೆ, ಜನದ ಧ್ವನಿಯೇ ದೇವರ ಧ್ವನಿ ಎಂಬ ಅರ್ಥವಿದೆ.

ಇದನ್ನೂ ಓದಿ | Koo App | ಬನ್ನಿ ನಮ್ಜೊತೆ ಕೆಲಸ ಮಾಡಿ, ಟ್ವಿಟರ್‌ನ ಮಾಜಿ ಉದ್ಯೋಗಿಗಳಿಗೆ ಕೂ ಆ್ಯಪ್ ಆಹ್ವಾನ

Exit mobile version