ನವದೆಹಲಿ: ಮೈಕ್ರೋ ಬ್ಲಾಗಿಂಗ್ ವೇದಿಕೆ ಟ್ವಿಟರ್ನ ಹೊಸ ಮಾಲೀಕ ಎಲಾನ್ ಮಸ್ಕ್ (Elon Musk) ಅವರಿಗೆ ತಾವು ಹತ್ಯೆಯಾಗಬಹುದು ಎಂದೆನಿಸುತ್ತಿದೆಯಂತೆ! ಹೌದು, ಈ ವಿಷಯವನ್ನು ಸ್ವತಃ ಎಲಾನ್ ಮಸ್ಕ್ ಅವರೇ ಹೇಳಿಕೊಂಡಿದ್ದಾರೆ. ಟ್ವಿಟರ್ನ ಆಡಿಯೋ ವೇದಿಕೆಯಾಗಿರುವ ಸ್ಪೇಸ್ನಲ್ಲಿ ಮಾತನಾಡುವಾಗ ಈ ವಿಷಯವನ್ನು ಅವರು ತಿಳಿಸಿದ್ದಾರೆ. ತಮಗೆ ಏನಾದರೂ ಕೆಟ್ಟದಾಗಿ ಸಂಭವಿಸುವ ಅಥವಾ ಅಕ್ಷರಶಃ ಗುಂಡು ಹಾರಿಸುವ ಅಪಾಯವು “ಸಾಕಷ್ಟು ಮಹತ್ವದ್ದಾಗಿದೆ” ಎಂದು ಹೇಳಿಕೊಂಡಿದ್ದಾರೆ.
ಯಾರನ್ನಾದರೂ ಕೊಲ್ಲಬೇಕೆಂದು ಬಯಸಿದರೆ ಅದೇನೂ ಅಷ್ಟು ಕಷ್ಟದ ಕೆಲಸವಲ್ಲ. ಹಾಗಾಗಿ, ಆದರೆ, ಅಂಥ ಪರಿಸ್ಥಿತಿ ನಾನು ಎದುರಿಸಲಿಕ್ಕಿಲ್ಲ. ಆ ರೀತಿಯಾಗಿ ಮಾಡುವವರು ಯಾರೂ ಇಲ್ಲ. ನನ್ನೊಂದಿಗೆ ಇಂಥದೊಂದು ದುರದೃಷ್ಟಕರ ಘಟನೆ ಸಂಭವಿಸುವುದಿಲ್ಲ ಎಂದು ಭಾವಿಸಿಕೊಂಡಿದ್ದೇನೆ. ಆದರೆ, ಖಂಡಿತವಾಗಿಯೂ ಒಂದಿಷ್ಟು ಅಪಾಯವಂತೂ ಇದ್ದೇ ಇದೆ ಎಂದು ಅವರು ಹೇಳಿಕೊಂಡಿದ್ದಾರೆ.
ಅಂತಿಮವಾಗಿ ನಾವು ತುಳಿತಕ್ಕೆ ಒಳಗಾಗದಿದ್ದರೆ ಮಾತ್ರವೇ ನಮಗೆ ಭವಿಷ್ಯವುಂಟು. ಹಾಗಾಗಿ, ಪ್ರತೀಕಾರದ ಭಯವಿಲ್ಲದೆ ನಾವು ಏನು ಹೇಳಬೇಕೆಂದು ಹೇಳಬಹುದು. ನೀವು ನಿಜವಾಗಿಯೂ ಬೇರೆಯವರಿಗೆ ಹಾನಿಯನ್ನುಂಟು ಮಾಡದಿರುವವರೆಗೆ ನಿಮಗೆ ಬೇಕಾದುದನ್ನು ಹೇಳಲು ನಿಮಗೆ ಅವಕಾಶ ನೀಡಬೇಕು ಎಂದು ಅವರು ಟ್ವಿಟರ್ನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ತಮ್ಮ ಬದ್ಧತೆಯ ಕುರಿತು ಸ್ಪಷ್ಟಪಡಿಸಿದರು.
ಇದನ್ನೂ ಓದಿ | Elon Musk | ಅಮೆರಿಕ ಮಾಜಿ ಅಧ್ಯಕ್ಷ ಟ್ರಂಪ್ ಖಾತೆ ಮರು ಆರಂಭಿಸಿದ ಎಲಾನ್ ಮಸ್ಕ್!