Site icon Vistara News

Elon Musk | ವಿಶ್ವದ ಸಿರಿವಂತ ಎಲಾನ್‌ ಮಸ್ಕ್‌ ಅವರ ತಾಯಿ ಗ್ಯಾರೇಜ್‌ನಲ್ಲಿ ಮಲಗಿದ್ದೇಕೆ?

Elon Musk Mother

ವಾಷಿಂಗ್ಟನ್‌: ಲಕ್ಷಾಂತರ ಕೋಟಿ ರೂಪಾಯಿಗಳಿಗೆ ಒಡೆಯರಾಗಿರುವ, ಟೆಸ್ಲಾ ಕಂಪನಿಯ ಸಿಇಒ ಹುದ್ದೆಯಲ್ಲಿರುವ, ಇತ್ತೀಚೆಗಷ್ಟೇ ಸಾವಿರಾರು ಕೋಟಿ ರೂ. ಕೊಟ್ಟು ಟ್ವಿಟರ್‌ ಖರೀದಿಸಲು ಮುಂದಾಗಿದ್ದ, ವಿಶ್ವದಲ್ಲೇ ಶ್ರೀಮಂತ ವ್ಯಕ್ತಿ ಎನಿಸಿರುವ ಎಲಾನ್‌ ಮಸ್ಕ್‌ (Elon Musk) ಅವರ ತಾಯಿ ಗ್ಯಾರೇಜ್‌ನಲ್ಲಿ ಮಲಗುತ್ತಾರೆ ಎಂದರೆ ಯಾರಾದರೂ ನಂಬುತ್ತಾರಾ? ಖಂಡಿತ ಇಲ್ಲ. ಆದರೆ, ಇದು ನಂಬುವಂತಹ ಸುದ್ದಿಯೇ ಆಗಿದ್ದು, ಗ್ಯಾರೇಜ್‌ನಲ್ಲಿಯೇ ಮಲಗಿದ್ದೆ ಎಂದು ಮಸ್ಕ್‌ ತಾಯಿಯೇ ಹೇಳಿದ್ದಾರೆ.

ಬ್ರಿಟನ್‌ ಸುದ್ದಿಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿರುವ ಎಲಾನ್‌ ಮಸ್ಕ್‌ ತಾಯಿ ಮಾಯೆ ಮಸ್ಕ್‌, “ನಾನು ಗ್ಯಾರೇಜ್‌ನಲ್ಲಿ ಮಲಗಿದ್ದೇನೆ” ಎಂದಿದ್ದಾರೆ. “ಎಲಾನ್‌ ಮಸ್ಕ್‌ಗೆ ಆಡಂಬರದಲ್ಲಿ ಆಸಕ್ತಿ ಇಲ್ಲ. ನಾನು ಟೆಕ್ಸಾಸ್‌ನಲ್ಲಿರುವ ಸ್ಪೇಸ್‌ಎಕ್ಸ್‌ ಕೇಂದ್ರ ಕಚೇರಿಗೆ ಭೇಟಿ ನೀಡಿದಾಗಲೆಲ್ಲ ಗ್ಯಾರೇಜ್‌ನಲ್ಲಿ ಮಲಗುತ್ತೇನೆ. ಅಷ್ಟಕ್ಕೂ, ರಾಕೆಟ್‌ ಸೈಟ್‌ನಲ್ಲಿ ಚೆಂದದೊಂದು ಮನೆ ಇರುವುದಾದರೂ ಹೇಗೆ” ಎಂದು ಹೇಳಿದ್ದಾರೆ.

ಸ್ಪೇಸ್‌ಎಕ್ಸ್‌, ಎಲಾನ್‌ ಮಸ್ಕ್‌ ಅವರ ಮಹತ್ವಕಾಂಕ್ಷಿ ಯೋಜನೆಯಾಗಿದೆ. ಇದರ ಕಚೇರಿಗೆ ಮಾಯೆ ಮಸ್ಕ್‌ ಆಗಾಗ ಭೇಟಿ ನೀಡುತ್ತಾರೆ ಎಂದು ತಿಳಿದುಬಂದಿದೆ. ಅಷ್ಟಕ್ಕೂ, ನನ್ನ ಬಳಿ ಸ್ವಂತದ್ದೊಂದು ಮನೆಯೇ ಇಲ್ಲ ಎಂದು ಎಲಾನ್‌ ಮಸ್ಕ್‌ ಹೇಳಿದ್ದರು.

ಇದನ್ನೂ ಓದಿ | ಮಲಮಗಳಲ್ಲಿ 2ನೇ ಮಗು ಹುಟ್ಟಿಸಿದ ಎಲಾನ್‌ ಮಸ್ಕ್ ತಂದೆ! ʻನಾವಿರೋದೇ ಮಗು ಮಾಡೋಕೆʼ ಎಂದ ಭೂಪ!

Exit mobile version