Site icon Vistara News

Emmanuel Macron: ಕ್ರೀಡಾ ಸಚಿವೆಗೆ ಎಲ್ಲರೆದುರೇ ಚುಂಬಿಸಿದ ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರಾನ್‌-ವಿಡಿಯೋ ಇದೆ

Emmanuel Macron

ಪ್ಯಾರಿಸ್‌: ಫ್ರಾನ್ಸ್‌ ಅಧ್ಯಕ್ಷ(France President) ಇಮಾನ್ಯುಯೆಲ್‌ ಮ್ಯಾಕ್ರಾನ್(Emmanuel Macron) ತಮ್ಮ ಕ್ರೀಡಾ ಸಚಿವೆಗೆ ತುಂಬಿದ ಸಭೆಯಲ್ಲಿ ಚುಂಬಿಸಿರುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಶುಕ್ರವಾರ 2024ರ ಒಲಿಂಪಿಕ್‌ ಕ್ರೀಡಾಕೂಟ(2024 Olympics)ದ ಉದ್ಘಾಟನಾ ಸಮಾರಂಭದಲ್ಲಿ ಮ್ಯಾಕ್ರಾನ್‌, ಕ್ರೀಡಾ ಸಚಿವೆ ಅಮೆಲಿ ಔಡಿಯಾ-ಕ್ಯಾಸ್ಟೆರಾ(Amélie Oudéa-Castéra) ಅವರಿಗೆ ಚುಂಬಿಸಿರುವ ವಿಡಿಯೋ ಎಲ್ಲೆಡೆ ವೈರಲ್‌(Vira video) ಆಗುತ್ತಿದೆ.

ವಿಡಿಯೋದಲ್ಲಿ ಅಮೆಲಿ, ಒಂದು ಕೈಯಲ್ಲಿ ಮ್ಯಾಕ್ರಾನ್‌ ಅವರನ್ನು ಬಳಸಿ, ಅವರ ಕತ್ತಿಗೆ ಮುತ್ತಿಕ್ಕಿದ್ದಾರೆ. ಈ ಸಂದರ್ಭದಲ್ಲಿ ಫ್ರಾನ್ಸ್‌ ಪ್ರಧಾನಿ ಗ್ಯಾಬ್ರಿಯಲ್‌ ಅಟ್ಟಲ್‌ ಕೂಡ ಉಪಸ್ಥಿತರಿದ್ದರು. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಎಕ್ಸ್‌ನಲ್ಲಿ 4 ಮಿಲಿಯನ್ ವೀಕ್ಷಣೆಗಳನ್ನು ಪಡೆದಿವೆ. ಈ ವಿಡಿಯೋಗೆ ನೆಟ್ಟಿಗರು ನಾನಾ ರೀತಿಯಲ್ಲಿ ಕಮೆಂಟ್‌ ಮಾಡಿದ್ದಾರೆ.

ಇದು ಕೇವಲ ಅಭಿನಂದಿಸುವ ವಿಧಾನ ಅಷ್ಟೇ ಎಂದು ಒಬ್ಬ ನೆಟ್ಟಿಗರ ಕಮೆಂಟ್‌ ಮಾಡಿದ್ದಾರೆ. ಈ ರೀತಿಯಾಗಿ ನಾನು ನನ್ನ ಪ್ರೇಯಸಿಗೆ ಕಿಸ್‌ ಮಾಡುತ್ತೇನೆ..ಇದು ಅತ್ಯಂತ ಮುಜುಗರಕ್ಕೀಡು ಮಾಡುವಂತಹ ಘಟನೆ ಎಂದು ಮತ್ತೊರ್ವ ಪ್ರತಿಕ್ರಿಯಿಸಿದ್ದಾರೆ. ಇನ್ನು ಕೆಲವರು ಮ್ಯಾಕ್ರನ್‌ ಪತ್ನಿ ಈ ಘಟನೆಗೆ ಹೇಗೆ ರಿಯಾಕ್ಟ್‌ ಮಾಡಬಹುದೆಂಬ ಮೀಮ್ಸ್‌ ಪೋಸ್ಟ್‌ ಮಾಡಿದ್ದಾರೆ.

ಕಳೆದ ಭಾರಿ ಮ್ಯಾಕ್ರಾನ್‌ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿ ಮೋದಿ ಜೊತೆಗೂಡಿ ಚಹಾ ಸೇವಿಸಿದ್ದರು. ಜೈಪುರದ ಹವಾ ಮಹಲ್ ಬಳಿಯ ಅಂಗಡಿಯಲ್ಲಿ ಮ್ಯಾಕ್ರಾನ್ ಮತ್ತು ಮೋದಿ ಕುಲ್ಹಾಡ್ ಚಹಾ ಸೇವಿಸಿದ್ದರು. ಮೋದಿ ಅದಕ್ಕೆ ತಮ್ಮ ಫೋನ್‌ನಲ್ಲಿ ಯುಪಿಐ ಬಳಸಿ ಚಹಾಕ್ಕೆ ಹಣ ಪಾವತಿಸಿದ್ದರು. ಮ್ಯಾಕ್ರಾನ್ ಇದನ್ನು ಆಶ್ಚರ್ಯಚಕಿತರಾಗಿ ವೀಕ್ಷಿಸಿದರು. ಅಂಗಡಿ ಮಾಲೀಕರು ತಮ್ಮ ಫೋನ್‌ನಲ್ಲಿ ಪಾವತಿಯ ದೃಢೀಕರಣ ಪಡೆದಿದ್ದನ್ನು ಸಹ ಮೋದಿ ತಮಗೆ ತೋರಿಸಿದರು ಎಂದು ಮ್ಯಾಕ್ರಾನ್‌ ಬಳಿಕ ಸ್ಮರಿಸಿದ್ದರು.

ಭಾರತದಿಂದ UPI ಅನ್ನು ಅಳವಡಿಸಿಕೊಳ್ಳಲು ಫ್ರಾನ್ಸ್ ಬಲವಾದ ಆಸಕ್ತಿಯನ್ನು ತೋರಿಸಿದೆ. ಜುಲೈನಲ್ಲಿ ಮೋದಿಯವರು ಫ್ರಾನ್ಸ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ, ಐಫೆಲ್ ಟವರ್‌ನಿಂದ ಪ್ರಾರಂಭವಾಗುವ ಯುಪಿಐ ಪಾವತಿ ಕಾರ್ಯವಿಧಾನವನ್ನು ಬಳಸಲು ಭಾರತ ಮತ್ತು ಫ್ರಾನ್ಸ್ ಒಪ್ಪಿಕೊಂಡಿವೆ. ಫ್ರಾನ್ಸ್‌ನಲ್ಲಿರುವ ಭಾರತೀಯ ಪ್ರವಾಸಿಗರು ಈಗ ರೂಪಾಯಿಗಳಲ್ಲಿ ಪಾವತಿ ಮಾಡಲು ಸಾಧ್ಯವಾಗುತ್ತದೆ ಎಂದು ಮೋದಿ ಹೇಳಿದ್ದರು. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದ (ಎನ್‌ಸಿಪಿಐ) ಅಂತಾರಾಷ್ಟ್ರೀಯ ಅಂಗವು ಯುಪಿಐ ಮತ್ತು ರುಪೇ ಸ್ವೀಕರಿಸಲು ಫ್ರಾನ್ಸ್‌ನ ಲೈರಾ ನೆಟ್‌ವರ್ಕ್‌ನೊಂದಿಗೆ ತಿಳುವಳಿಕೆ ಪತ್ರಕ್ಕೆ (ಎಂಒಯು) ಸಹಿ ಹಾಕಿತ್ತು.

ಇದನ್ನೂ ಓದಿ: Abhinav Bindra : ಭಾರತದ ಶೂಟರ್ ಅಭಿನವ್ ಬಿಂದ್ರಾಗೆ ‘ಒಲಿಂಪಿಕ್​ ಆರ್ಡರ್’ ಗೌರವ​

Exit mobile version