ನವದೆಹಲಿ: ಸಾಮಾನ್ಯವಾಗಿ ಚಾಂಪಿಯನ್‌ಶಿಪ್ ಎಂದ ಕೂಡಲೇ ಕ್ರೀಡೆಗೆ ಸಂಬಂಧಿಸಿದ ಯಾವುದೇ ಪಂದ್ಯಾವಳಿ ಇರಬಹುದು ಎಂದು ಭಾವಿಸುತ್ತೇವೆ. ಸ್ವೀಡನ್‌ನಲ್ಲಿ (Sweden) ಆಯೋಜಿಸಲಾಗುತ್ತಿದೆ ಎನ್ನಲಾದ ಸೆಕ್ಸ್ ಚಾಂಪಿಯನ್‌ಶಿಪ್ (Sex Championship) ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅಂದ ಹಾಗೆ, ಇದು ಸಾಮಾನ್ಯ ಕ್ರೀಡೆ ಅಲ್ಲ, ‘ರತಿಕ್ರೀಡೆ’ಗೆ ಸಂಬಂಧಿಸಿದ ಚಾಂಪಿಯನ್‌ಶಿಪ್! ಹೌದು, ಸ್ವೀಡನ್‌ನಲ್ಲಿ ಜೂನ್ ತಿಂಗಳಲ್ಲಿ ಸೆಕ್ಸ್ ಚಾಂಪಿಯನ್‌ಶಿಪ್ ಆಯೋಜಿಸಲಾಗುತ್ತಿದೆ ಎಂಬ ಸುದ್ದಿ ಸಖತ್ ವೈರಲ್ ಆಗಿದೆ(Fact Check).
ಟ್ವಿಟರ್‌ನಲ್ಲಿ ಮೊದಲು ಪ್ರಕಟವಾದ ಸುದ್ದಿಯ ವಿವರಗಳನ್ನು ಹಲವಾರು ಸುದ್ದಿವಾಹಿನಿಗಳು ಪ್ರಕಟಿಸಿದವು. ಈ ಸೆಕ್ಸ್ ಚಾಂಪಿಯನ್‌ಶಿಪ್ ಜೂನ್ 8 ರಂದು ಪ್ರಾರಂಭವಾಗುತ್ತದೆ ಮತ್ತು ಹಲವಾರು ವಾರಗಳವರೆಗೆ ಇರುತ್ತದೆ, ಭಾಗವಹಿಸುವವರು ಪ್ರತಿದಿನ ಆರು ಗಂಟೆಗಳ ಕಾಲ ಸ್ಪರ್ಧೆ ಮಾಡಬೇಕಾಗುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು. ಆದರೆ, ಈ ಸುದ್ದಿಯು ನಕಲಿ ಎಂದು ತಿಳಿದುಬಂದಿದೆ. ಸ್ವೀಡಿಷ್‌ನ ಗೋಟರ್ಬೋರ್ಗ್ಸ್-ಪೋಸ್ಟೆನ್ ಪ್ರಕಾರ, ಸೆಕ್ಸ್ ಚಾಂಪಿಯನ್‌ಶಿಪ್ ನಡೆಸುವ ಪ್ರಸ್ತಾಪಕ್ಕೆ ಅಲ್ಲಿ ಸರ್ಕಾರವು ಕಳೆದ ಏಪ್ರಿಲ್‌ನಲ್ಲಿ ಅನುಮತಿಯನ್ನು ನೀಡಿಲ್ಲ ಎನ್ನಲಾಗಿದೆ.
ಈಗಿರುವ ರದಿಗಳ ಪ್ರಕಾರ, ಸ್ವೀಡನ್‌ನಲ್ಲಿ ಫೆಡರೇಷನ್ ಆಫ್ ಸೆಕ್ಸ್ ಸಂಸ್ಥೆ ಇದೆ. ಅದರ ಮುಖ್ಸ್ಥ ಡ್ರಾಗನ್ ಬ್ರಾಸ್ಟಿಕ್ ಸೆಕ್ಸ್ ಚಾಂಪಿಯನ್‌ಶಿಪ್ ಆಯೋಜಿಸುವ ಬಗ್ಗೆ ನಿರ್ಧಾರ ಮಾಡಿದ್ದರು. ಆ ಮೂಲಕ ಮಾನವರ ಮೇಲೆ ಲೈಂಗಿಕತೆಯ ದೈಹಿಕ ಮತ್ತು ಮಾನಸಿಕ ಆರೋಗ್ಯದ ಪ್ರಭಾವವನ್ನು ಎತ್ತಿ ತೋರಿಸುವುದಾಗಿತ್ತು. ಆದರೆ, ರಾಷ್ಟ್ರೀಯ ಕ್ರೀಡಾ ಒಕ್ಕೂಟದ ಸದಸ್ಯರಾಗಲು ಸೆಕ್ಸ್ ಫೆಡರೇಶನ್‌ನ ಅರ್ಜಿಯನ್ನು ನಿರಾಕರಿಸಲಾಗಿದೆ ಎಂದು ಗೊಟರ್‌ಬೋರ್ಗ್ಸ್-ಪೋಸ್ಟನ್ ತನ್ನ ವರದಿಯಲ್ಲಿ ತಿಳಿಸಿತ್ತು. ಈ ವರ್ಷದ ಆರಂಭದಲ್ಲೇ ಬ್ರಾಸ್ಟಿಕ್ ಅವರು ತಮ್ಮ ಅರ್ಜಿಯನ್ನು ಸಲ್ಲಿಸಿದ್ದರು.
ಸೆಕ್ಸ್ ಚಾಂಪಿಯನ್ ಶಿಪ್ ನಮ್ಮ ಅವಶ್ಯಕತೆಗಳನ್ನು ಪೂರೈಸುವುದಿಲ್ಲ ಮತ್ತು ಈ ಅರ್ಜಿಯನ್ನು ತಿರಸ್ಕರಿಸಲಾಗಿದೆ. ನಾವು ಇತರ ಕೆಲಸಗಳನ್ನು ಮಾಡಬೇಕಾಗಿದೆ ಎಂದು ಕ್ರೀಡಾ ಒಕ್ಕೂಟದ ಮುಖ್ಯಸ್ಥ ಜಾರ್ನ್ ಎರಿಕ್ಸನ್ ಸ್ಥಳೀಯ ಸುದ್ದಿ ಔಟ್ಲೆಟ್ಗೆ ತಿಳಿಸಿದ್ದರು. ಫೆಡರೇಷನ್ ಆಫ್ ಸೆಕ್ಸ್‌ನ ಅಧ್ಯಕ್ಷ ಬ್ರಾಕ್ಟಿಕ್ ಅವರು ಸ್ವೀಡನ್‌ನಲ್ಲಿ ಸ್ಟ್ರಿಪ್ ಕ್ಲಬ್‌ಗಳನ್ನು ನಡೆಸುತ್ತಿದ್ದಾರೆ ಮತ್ತು ಲೈಂಗಿಕತೆಯನ್ನು ಕ್ರೀಡೆಯಾಗಿ ಪರಿಗಣಿಸಬೇಕೆಂದು ಅವರು ಒತ್ತಾಯಿಸುತ್ತಾರೆ.
ಇದನ್ನೂ ಓದಿ: Same Sex Marriage: ಸಲಿಂಗ ವಿವಾಹ ಕಾನೂನುಬದ್ಧಗೊಳಿಸಿದರೆ ಲೈಂಗಿಕ ರೋಗ ಉಲ್ಬಣ: ಆರ್‌ಎಸ್‌ಎಸ್ ಸಮೀಕ್ಷೆ ವರದಿ
ಚಟುವಟಿಕೆಗಳು ಅಥವಾ ‘ರತಿಕ್ರೀಡೆಗಳು’ 45 ನಿಮಿಷದಿಂದ 1 ಗಂಟೆಯ ಅವಧಿಯಾಗಿರುವ ಸಾಧ್ಯತೆಗಳಿರುತ್ತವೆ ಎಂಬ ಮಾಹಿತಿ ಇರುವ ಟ್ವೀಟ್‌ಗಳು ವೈರಲ್ ಆಗಿದ್ದವು. ಪ್ರತಿ ಭಾಗವಹಿಸುವವರು 5 ರಿಂದ 10 ಅಂಕಗಳನ್ನು ಗಳಿಸುವ ಮೂಲಕ 16 ವಿಭಾಗಗಳು ಇರುತ್ತವೆ ಎಂದು ತಿಳಿಸಲಾಗಿತ್ತು. ಮಜಾ ಅಂದರೆ, ಅಧಿಕೃತವಲ್ಲದೇ ಈ ಸುದ್ದಿಯನ್ನು ನಂಬಿ 20 ಜನರು ನೋಂದಣಿ ಕೂಡ ಮಾಡಿಸಿಕೊಂಡಿದ್ದರು.