ನ್ಯೂಯಾರ್ಕ್: ತನ್ನ ವಿದ್ಯಾರ್ಥಿ ಜತೆಗೆ 30 ಬಾರಿ ಲೈಂಗಿಕ ಕ್ರಿಯೆ ನಡೆಸಿರುವುದಾಗಿ (Sex With High School Student) ಅಮೆರಿಕದ 33 ವರ್ಷದ ಶಿಕ್ಷಕಿಯೊಬ್ಬರು ತಪ್ಪೊಪ್ಪಿಕೊಂಡಿದ್ದಾರೆ(Teacher From America). ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ಆರೋಪಿ ಹೀದರ್ ಹೇರ್ (Heather Hare) ಈಗ ವಿವಾಹಿತೆಯಾಗಿದ್ದು, ಕಾನೂನುಬಾಹಿರ ಲೈಂಗಿಕ ಚಟುವಟಿಕೆಗಾಗಿ ಅಪ್ರಾಪ್ತನ ಜತೆಗೆ ಲೈಂಗಿಕ ಸಂಬಂಧ(Sexual Abuse) ಹೊಂದಿದ್ದಕ್ಕಾಗಿ ಈಗ ಜೀವಾವಧಿ ಶಿಕ್ಷೆಯನ್ನು (life sentence) ಎದುರಿಸುತ್ತಿದ್ದಾರೆ.
ಸಂತ್ರಸ್ತ 17 ವರ್ಷದ ಹೈಸ್ಕೂಲ್ ವಿದ್ಯಾರ್ಥಿ ತನ್ನ ಮೇಲಾಗುತ್ತಿರುವ ಲೈಂಗಿಕ ಶೋಷಣೆ ಸಂಬಂಧ ಶಿಕ್ಷಕಿ ವಿರುದ್ಧ ದೂರು ನೀಡಿದಾಗ, ಆರೋಪಿ ಶಿಕ್ಷಕಿಯನ್ನು 2023ರ ಏಪ್ರಿಲ್ ತಿಂಗಳಲ್ಲಿ ಬಂಧಿಸಲಾಗಿತ್ತು. ಜೆಆರ್ ಎಂದು ಗುರುತಿಸಲಾದ ವಿದ್ಯಾರ್ಥಿ, 2021ರಲ್ಲಿ ಬ್ರ್ಯಾಂಟ್ ಹೈಸ್ಕೂಲ್‌ನಲ್ಲಿ ತನ್ನ ಹಿರಿಯ ವರ್ಷದ ಮೊದಲ ದಿನದಂದು ಆರೋಪಿ ಶಿಕ್ಷೆಯನ್ನು ಭೇಟಿಯಾಗಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ.
ಹೇರ್ ಅಪ್ರಾಪ್ತನೊಂದಿಗೆ ಕೌನ್ಸೆಲಿಂಗ್ ಸೆಷನ್‌ಗಳನ್ನು ಆರಂಭಿಸಿದ್ದರು. ಅಂತಿಮವಾಗಿ ಬಾಲಕನಿಗೆ ತಮ್ಮ ವೈಯಕ್ತಿಕ ಫೋನ್ ಸಂಖ್ಯೆಯನ್ನು ನೀಡಿದರು ಮತ್ತು ಪ್ರಾಥಮಿಕವಾಗಿ ಇನ್‌ಸ್ಟಾಗ್ರಾಮ್ ಮತ್ತು ಸ್ನ್ಯಾಪ್‌ಚಾಟ್ ಮೂಲಕ ಸಂವಹನ ನಡೆಸಿದರು. ಒಂದು ಹಂತದಲ್ಲಿ, ಲೈಂಗಿಕ ಸಂಬಂಧ ಹೊಂದು ಆಸೆಯನ್ನು ಹೇರ್ ಅವರು ಜೆಆರ್‌ಗೆ ತಿಳಿಸಿದರು ಎಂದು ಅಟಾರ್ನಿ ಜನರಲ್ ಜಾನ್ ರೇ ವೈಟ್ ಅವರು ಕೋರ್ಟ್ ತಿಳಿಸಿದ್ದಾರೆಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಅಪ್ರಾಪ್ತ ಸಂತ್ರಸ್ತ ಮತ್ತು ಹೇರ್ ಅವರು 2021-2022ರ ಶಾಲಾ ಅವಧಿಯಲ್ಲಿ ಸುಮಾರು 20 ರಿಂದ 30 ಬಾರಿ ಲೈಂಗಿಕ ಕ್ರಿಯೆಯನ್ನು ನಡೆಸಿದ್ದಾರೆ. ಅವರ ಕಾನ್ವೇ ನಿವಾಸದಲ್ಲಿ, ಅವರ ವಾಹನದಲ್ಲಿ ಮತ್ತು ಅವರ ತರಗತಿಯಲ್ಲಿ ಮತ್ತು ಬ್ರ್ಯಾಂಟ್ ಹೈಸ್ಕೂಲ್‌ನಲ್ಲಿ ಪಾರ್ಕಿಂಗ್ ಸ್ಥಳಗಳಲ್ಲಿ ಹೀಗೆ ಎಲ್ಲೆಂದರಲ್ಲಿ ಹಲವಾರು ಬಾರಿ ಲೈಂಗಿಕ ಕ್ರಿಯೆ ನಡೆಸಿದ್ದಾರೆಂದು ವಕೀಲರು ಕೋರ್ಟ್‌ಗೆ ತಿಳಿಸಿದ್ದಾರೆ.
2022 ರಲ್ಲಿ ಕೈಗೊಂಡ ಶಾಲಾ ಪ್ರವಾಸದ ವೇಳೆಯೂ ಆಕೆ ವಿದ್ಯಾರ್ಥಿ ಜತೆಗೆ ಸೆಕ್ಸ್ ಮಾಡಿದ್ದರು. ಪ್ರವಾಸದ ವೇಳೆ ಲೈಂಗಿಕ ಕ್ರಿಯೆ ನಡೆಸುವ ಬಗ್ಗೆ ಪ್ಲ್ಯಾನ್ ಮಾಡಿದ್ದು, ಸಿಕ್ಕಿ ಹಾಕಿಕೊಳ್ಳುವ ಭಯವಿಲ್ಲ ಎಂದು ಆರೋಪಿ ಶಿಕ್ಷಕಿ ಸಂತ್ರಸ್ತ ಬಾಲಕನಿಗೆ ತಿಳಿಸಿದ್ದರು. ಅದರಂತೆ ಹೇರ್ ಹೊಟೇಲ್ ಕೋಣೆಗೆ ವಿದ್ಯಾರ್ಥಿಯನ್ನು ಕರೆದುಕೊಂಡು ಹೋಗಿ ಸೆಕ್ಸ್ ನಡೆಸಿದ್ದರು ಎಂದು ವಕೀಲರು ತಿಳಿಸಿದ್ದಾರೆ.
ಕೋರ್ಟ್‌ನಲ್ಲಿ ಶಿಕ್ಷಕಿ ವಿರುದ್ದ ವಕೀಲರು ನೇರ ಆರೋಪ ಮಾಡುತ್ತಿದ್ದಂತೆ ಆಕೆ ಕಣ್ಣೀರಿಟ್ಟರು ಮತ್ತು ತಮ್ಮ ತಪ್ಪನ್ನು ಒಪ್ಪಿಕೊಂಡರು. ಅಪ್ರಾಪ್ತನ ಜತೆ ಲೈಂಗಿಕ ಸಂಬಂಧ ಹೊಂದಿದ್ದಕ್ಕಾಗಿ ಆಕೆ ಜೀವಾವಾಧಿ ಶಿಕ್ಷೆಯಾಗುವ ಸಾಧ್ಯತೆಗಳಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಈ ಸುದ್ದಿಯನ್ನೂ ಓದಿ: ಚಲಿಸುತ್ತಿದ್ದ ರೈಲಿನಲ್ಲಿ 26 ವರ್ಷದ ಮಹಿಳೆಗೆ 46 ವರ್ಷದ ವ್ಯಕ್ತಿಯಿಂದ ಲೈಂಗಿಕ ಕಿರುಕುಳ, ಬಂಧನ