Site icon Vistara News

ರಷ್ಯಾ ಸೇನಾ ತರಬೇತಿ ನೆಲೆ ಮೇಲೆ ಉಗ್ರರಿಂದ ದಾಳಿ; 11 ಜನರು ಸಾವು, 15ಕ್ಕೂ ಹೆಚ್ಚು ಮಂದಿಗೆ ಗಾಯ

Firing

ರಷ್ಯಾದ ಬೆಲ್ಗೊರೊಡ ಪ್ರದೇಶದಲ್ಲಿರುವ ಸೇನಾ ತರಬೇತಿ ನೆಲೆ ಮೇಲೆ ಉಗ್ರದಾಳಿಯಾಗಿದೆ. ಬಂದೂಕು ಧಾರಿಗಳ ಆಕ್ರಮಣಕ್ಕೆ 11 ಮಂದಿ ಸಾವನ್ನಪ್ಪಿದ್ದಾರೆ ಮತ್ತು 15ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ. ಹೀಗೆ ಗುಂಡಿನ ದಾಳಿ ನಡೆದಾಗ ಲೈವ್​ ಫೈರ್​ ತಾಲೀಮು ನಡೆಯುತ್ತಿತ್ತು.

ಇಲ್ಲಿ ರಷ್ಯಾ ಸೈನಿಕರಷ್ಟೇ ಇರಲಿಲ್ಲ. ಬದಲಾಗಿ ಉಕ್ರೇನ್​ ಮೇಲೆ ನಡೆಯುತ್ತಿರುವ ಯುದ್ಧದಲ್ಲಿ ಭಾಗವಹಿಸಲು ಸ್ವಯಂ ಪ್ರೇರಣೆಯಿಂದ ಬಂದ ಜನರಿಗೆ ಫೈರಿಂಗ್ ತರಬೇತಿ ನೀಡಲಾಗುತ್ತಿತ್ತು. ಇದೇ ವೇಳೆ ಇಬ್ಬರು ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ರಷ್ಯನ್​ ರಕ್ಷಣಾ ಸಚಿವಾಲಯ ತಿಳಿಸಿದೆ. ಹಾಗೇ, ದಾಳಿ ಮಾಡಿದ ಇಬ್ಬರೂ ಸೋವಿಯತ್​ ನಂತರದ ರಾಜ್ಯಗಳಿಗೆ ಸೇರಿದವರೇ ಆಗಿದ್ದಾರೆ. ಇವರಿಬ್ಬರನ್ನೂ ಗುಂಡಿಕ್ಕಿ ಕೊಲ್ಲಲಾಗಿದೆ ಎಂದೂ ರಕ್ಷಣಾ ಇಲಾಖೆ ಮಾಹಿತಿ ನೀಡಿದೆ.

ಉಕ್ರೇನ್​ ಮೇಲಿನ ಯುದ್ಧಕ್ಕೆ ಇನ್ನಷ್ಟು ಸೇನಾ ಸಿಬ್ಬಂದಿ ಅಗತ್ಯವಿರುವ ಕಾರಣಕ್ಕೆ ಇತ್ತೀಚೆಗೆ ಸುಮಾರು 2 ಲಕ್ಷ ಜನರು ರಷ್ಯಾ ಸೇನೆಗೆ ಸೇರ್ಪಡೆಗೊಂಡಿದ್ದಾರೆ. ಅದಾದ ಮೇಲೆ ಹೀಗೆ ಅಪರಿಚಿತ ವ್ಯಕ್ತಿಗಳು ಬಂದು ಗುಂಡಿನ ದಾಳಿ ನಡೆಸುವ ಪ್ರಕರಣಗಳೂ ಹೆಚ್ಚಾಗಿವೆ ಎನ್ನಲಾಗಿದೆ.

ಇದನ್ನೂ ಓದಿ: ರಷ್ಯಾ-ಉಕ್ರೇನ್​ ಯುದ್ಧ; ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತದ್ದು ಮತ್ತೆ ತಟಸ್ಥ ನಿಲುವು, ಮತದಾನದಿಂದ ದೂರ

Exit mobile version