ವಾಷಿಂಗ್ಟನ್: 126 ಪ್ರಯಾಣಿಕರನ್ನು ಹೊತ್ತಿದ್ದ ವಿಮಾನ ಮಿಯಾಮಿ ಅಂತಾರಾರಾಷ್ಟ್ರೀಯ ನಿಲ್ದಾಣದಲ್ಲಿ ಲ್ಯಾಂಡ್ ಆಗುವ ವೇಳೆ ಅಪಘಾತ ಸಂಭವಿಸಿದ್ದು, ಇಡೀ ವಿಮಾನ ಧಗಧಗನೆ ಹೊತ್ತಿ ಉರಿದಿರುವ ಘಟನೆ ಅಮೆರಿಕದ ವಾಷಿಂಗ್ಟನ್ನಲ್ಲಿ ನಡೆದಿದೆ.
ರೆಡ್ ಏರ್ ಫ್ಲೈಟ್ ಹೆಸರಿನ ವಿಮಾನವು ರನ್ವೇಯಲ್ಲಿ ಇಳಿಯುವಾಗ ನೆಲಕ್ಕೆ ಅಪ್ಪಳಿಸಿದೆ. ಪರಿಣಾಮವಾಗಿ ವಿಮಾನದ ಹಿಂಭಾಗ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ವಿಮಾನ ರನ್ವೇ ಅಲ್ಲಿ ಅಪ್ಪಳಿಸಿದ ತಕ್ಷಣವೇ ಸ್ಥಳದಲ್ಲಿದ್ದ ವಿಮಾನದ ಸಿಬ್ಬಂದಿ ಕೂಡಲೇ ಪ್ರಯಾಣಿಕರ ನೆರವಿಗೆ ಧಾವಿಸಿದ್ದಾರೆ. ತಕ್ಷಣವೇ ವಿಮಾನದಲ್ಲಿದ್ದ ಅಷ್ಟೂ ಪ್ರಯಾಣಿಕರನ್ನು ಕೆಳಗೆ ಇಳಿಸಲಾಗಿದೆ. ಅದರಲ್ಲಿ ಮೂವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಇದನ್ನು ಓದಿ| ಬೆಂಕಿ ಕಾಣಿಸಿಕೊಂಡರೂ ವಿಮಾನದಲ್ಲಿದ್ದ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಿದ ದಿಟ್ಟ women pilot
ಘಟನೆ ಸಂಬಂಧ ವಿಮಾನ ಅಪಘಾತವಾಗಲು ನಿಖರ ಕಾರಣ ತಿಳಿದು ಬಂದಿಲ್ಲ. ಹೀಗಾಗಿ ಪೊಲೀಸರು ಅಪಘಾತದ ಕುರಿತು ತನಿಖೆ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಆಗಬೇಕಿದ್ದ ದೊಡ್ಡ ದುರಂತದಿಂದ ಜನರು ಪಾರಾಗಿದ್ದು, ಪ್ರಾಣ ಉಳಿಸಿಕೊಳ್ಳಲು ರನ್ವೇಯಲ್ಲಿ ವಿಮಾನ ಇಳಿದು ಓಡಿದ್ದಾರೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದು, ವಿಡಿಯೋದಲ್ಲಿ ವಿಮಾನ ರನ್ವೇ ಅಲ್ಲಿ ಅಪ್ಪಳಿಸಿ ಧಗಧಗಿಸುವುದನ್ನು ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ.