Site icon Vistara News

Pakistan: ಕಾಶ್ಮೀರ ಮರೆತು, ಭಾರತದ ಜತೆ ಸ್ನೇಹ ಸಂಪಾದಿಸಿ ಎಂದ ಸೌದಿ ಅರೆಬಿಯಾ; ಪಾಕಿಸ್ತಾನಕ್ಕೆ ಮುಖಭಂಗ

Shehbaz Sharif

ನವದೆಹಲಿ: ಅಂತಾರಾಷ್ಟ್ರೀಯವಾಗಿ ಪಾಕಿಸ್ತಾನಕ್ಕೆ (Pakistan) ಮತ್ತೊಂದು ಮುಖಭಂಗವಾಗಿದೆ. ಕಾಶ್ಮೀರ ಸಮಸ್ಯೆಯನ್ನು (Kashmir issue) ಮರೆತು, ಭಾರತದೊಂದಿಗೆ ಸ್ನೇಹದಿಂದ ವರ್ತಿಸಿ ಎಂದು ಸೌದಿ ಅರೆಬಿಯಾ ಪಾಕಿಸ್ತಾನಕ್ಕೆ ಕಿವಿಮಾತು ಹೇಳಿದೆ ಎಂದು ವರದಿಯಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತವು ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ್ದರ ಬಗ್ಗೆ ಅನಗತ್ಯವಾಗಿ ವಿವಾದವನ್ನು ಮಾಡುವುದು ಬಿಟ್ಟು ಬಿಡಿ ಎಂದು ಸೌದಿ ಅರೆಬಿಯಾ (saudi arabia) ಮತ್ತು ಯುಎಇ (UAE) ಸಲಹೆ ನೀಡಿದೆ ಎಂದು ತಿಳಿದು ಬಂದಿದೆ.

ಸೌದಿ ಅರೆಬಿಯಾದ ಈ ಸಲಹೆ ಪಾಕಿಸ್ತಾನಕ್ಕೆ ತೀವ್ರ ಹಿನ್ನೆಡೆ ಎಂದು ಭಾವಿಸಲಾಗುತ್ತಿದೆ. ಸಮಸ್ಯೆ ಎದುರಾದಾಗಲೆಲ್ಲ ಪಾಕಿಸ್ತಾನವು ಸೌದಿ ಕಡೆ ನೆರವಿಗಾಗಿ ನೋಡುತ್ತಿತ್ತು. ಮೊನ್ನೆಯಷ್ಟೇ ಕಾಶ್ಮೀರ ವಿಷಯದಲ್ಲಿ ಸೌದಿ ಅರೆಬಿಯಾ ಮಧ್ಯಸ್ಥಿಕೆ ವಹಿಸಬೇಕೆಂದು ಪಾಕಿಸ್ತಾನದ ಪ್ರಧಾನಿಗಳು ಕೇಳಿಕೊಂಡಿದ್ದರು. ಈಗ ಸೌದಿ ಅರೆಬಿಯಾ, ಕಾಶ್ಮೀರ ಮರೆತು ಭಾರತದೊಂದಿಗೆ ಸ್ನೇಹದಿಂದ ವರ್ತಿಸಿ ಎಂದು ಹೇಳಿರುವುದು ನುಂಗಲಾರದ ತುಪ್ಪವಾಗಿದೆ ಪಾಕಿಸ್ತಾನಕ್ಕೆ. ಪಾಕಿಸ್ತಾನವು ನಿರಂತವರಾಗಿ ಅಂತಾರಾಷ್ಟ್ರೀಯ ಮುಸ್ಲಿಮ್ ದೇಶಗಳ ಸಂಘಟನೆ(OIC) ವೇದಿಕೆಯಲ್ಲಿ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸುತ್ತಲೇ ಬಂದಿದೆ. ಆದರೆ, ಈ ಬಾರಿ ತೀವ್ರ ಮುಖಭಂಗ ಎದುರಾಗಿದೆ.

ಪಾಕಿಸ್ತಾನ ಪಾಠ ಕಲಿತಿದೆ, ಯುದ್ಧ ಬೇಡ: ಪಾಕ್‌ ಪಿಎಂ

ಭಾರತದ ಜತೆಗೆ ಮೂರು ಯುದ್ಧಗಳ ಬಳಿಕ ಪಾಕಿಸ್ತಾನ ಪಾಠ ಕಲಿತಿದೆ. ನಮಗೆ ಯುದ್ಧ ಬೇಕಾಗಿಲ್ಲ, ಶಾಂತಿ ಬೇಕು ಎಂದು ಪಾಕಿಸ್ತಾನ ಪ್ರಧಾನ ಮಂತ್ರಿ ಶೆಹಬಾಜ್‌ ಶರೀಫ್‌ ಹೇಳಿದ್ದಾರೆ. ಆಜ್‌ ಅರಬಿಯಾ ಟಿವಿಗೆ ನೀಡಿದ ಒಂದು ಸಂದರ್ಶನದಲ್ಲಿ ಅವರು ಇದನ್ನು ಹೇಳಿದ್ದಾರೆ. ʼʼಪಾಕಿಸ್ತಾನಕ್ಕೆ ಶಾಂತಿ ಬೇಕು. ಆದರೆ ಕಾಶ್ಮೀರದಲ್ಲಿ ನಡೆಯುತ್ತಿರುವುದನ್ನು ನಿಲ್ಲಿಸಬೇಕುʼʼ ಎಂದೂ ಅವರು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದ್ದಾರೆ. ಕಾಶ್ಮೀರದಲ್ಲಿ ನಡೆಯುತ್ತಿದೆ ಎನ್ನಲಾದ ಮಾನವ ಹಕ್ಕು ಉಲ್ಲಂಘನೆಗಳನ್ನು ಕಡೆಗಣಿಸಲಾಗದು ಎಂದಿದ್ದಾರೆ.

ನಮ್ಮಲ್ಲಿ ಎಂಜಿನಿಯರ್ಸ್‌, ಡಾಕ್ಟರ್ಸ್‌, ಕುಶಲ ಉದ್ಯೋಗಿಗಳಿದ್ದಾರೆ. ಈ ಪ್ರತಿಭೆಗಳನ್ನು ಒಳಿತಿಗಾಗಿ ಬಳಸುವ ಉದ್ದೇಶ ನಮ್ಮದು. ಈ ಮೂಲಕ ಎರಡೂ ದೇಶಗಳು ಬೆಳೆಯಬಹುದು. ಶಾಂತಿಯುತವಾಗಿ ಬೆಳೆಯುವುದು ಅಥವಾ ಕಾದಾಡುತ್ತಾ ಸಮಯ ವ್ಯರ್ಥ ಮಾಡುವುದು- ಇವೆರಡರಲ್ಲಿ ಆಯ್ಕೆ ನಮ್ಮದೇ ಆಗಿದೆ. ನಾವು ಭಾರತದ ಜತೆಗೆ ಮೂರು ಯುದ್ಧ ಮಾಡಿದ್ದೇವೆ. ಅವು ನಮಗೆ ಯಾತನೆ, ಬಡತನ, ನಿರುದ್ಯೋಗಗಳನ್ನಷ್ಟೇ ನೀಡಿವೆ. ನಾವು ಪಾಠ ಕಲಿತಿದ್ದೇವೆ. ಸಮಸ್ಯೆಗಳನ್ನು ಮೂಲದಲ್ಲಿ ಪರಿಹರಿಸಿಕೊಂಡು ಶಾಂತಿಯಲ್ಲಿ ಬಾಳಲು ಇಚ್ಛಿಸುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ: Indus River Treaty: ಸಿಂಧೂ ನದಿ ಒಪ್ಪಂದ ಬದಲಾಯಿಸಿ, ಪಾಕಿಸ್ತಾನಕ್ಕೆ ಭಾರತ ಖಡಕ್‌ ಎಚ್ಚರಿಕೆ

ಬಾಂಬುಗಳು ಹಾಗೂ ಶಸ್ತ್ರಾಸ್ತ್ರಗಳ ಮೇಲೆ ಹಣ ವ್ಯರ್ಥ ಮಾಡಲು ಪಾಕಿಸ್ತಾನ ಇಚ್ಛಿಸುವುದಿಲ್ಲ. ನಾವಿಬ್ಬರೂ ಪರಮಾಣು ಅಸ್ತ್ರ ಹೊಂದಿದ ದೇಶಗಳು. ಒಂದು ವೇಳೆ ಯುದ್ಧ ಶುರುವಾದರೆ, ಏನಾಯಿತೆಂದು ಹೇಳಲು ಉಳಿಯುವವರಾದರೂ ಯಾರು ಎಂದು ಅವರು ಪ್ರಶ್ನಿಸಿದ್ದಾರೆ.

Exit mobile version