ಒಟ್ಟವಾ: ಕೆನಡಾ(Canada)ದಲ್ಲಿ ಬಹುಕೋಟಿ ಡಾಲರ್ ಮೌಲ್ಯದ ಚಿನ್ನ ದರೋಡೆ ಪ್ರಕರಣ(Gold Heist Case)ಕ್ಕೆ ಸಂಬಂಧಿಸಿದಂತೆ ಭಾರತೀಯ ಮೂಲದ ವ್ಯಕ್ತಿಯನ್ನು ಟೊರೊಂಟೋ ವಿಮಾನ ನಿಲ್ದಾಣ(Pearson International Airport)ದಲ್ಲಿ ಅರೆಸ್ಟ್ ಮಾಡಲಾಗಿದೆ. ದೇಶದ ಇತಿಹಾಸದಲ್ಲೇ ಇದೊಂದು ಅತಿ ದೊಡ್ಡ ದರೋಡೆ ಪ್ರಕರಣವಾಗಿದ್ದು, ಈಗಾಗಲೇ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಅರೆಸ್ಟ್ ಮಾಡಿದೆ. ಇನ್ನು ಬಂಧಿತನನ್ನು ಅರ್ಚಿತ್ ಗ್ರೋವರ್ ಎಂದು ಗುರುತಿಸಲಾಗಿದ್ದು, ಈತನ ಬಂಧನಕ್ಕಾಗಿ ಕೆನಡಾದಾದ್ಯಂತ ವಾರೆಂಟ್ ಜಾರಿಗೊಳಿಸಲಾಗಿತ್ತು. ಗ್ರೋವರ್ ವಿರುದ್ಧ 5,000ಡಾಲರ್ ಕಳ್ಳತನ ಮತ್ತು ದರೋಡೆಗೆ ಸಂಚು ರೂಪಿಸಿದ ಪ್ರಕರಣ ದಾಖಲಾಗಿದೆ. ಅಲ್ಲದೇ ಅಮೆರಿಕದ ಮಿಲಿಟರಿ ಶಸ್ತ್ರಾಸ್ತ್ರ ಸಾಗಾಟ ಪ್ರಕರಣದಲ್ಲೂ ಈತನ ಹೆಸರು ಕೇಳಿ ಬಂದಿದೆ.
ಏನಿದು ದರೋಡೆ ಪ್ರಕರಣ?
ಕಳೆದ ವರ್ಷ ಏಪ್ರಿಲ್ 17ರಂದು 22 ಕೆನಾಡಿಯನ್ ಡಾಲರ್ಸ್ ಮೌಲ್ಯದ ವಿದೇಶಿ ಕರೆನ್ಸಿ ಮತ್ತು ಗೋಲ್ಡ್ ಬಿಸ್ಕೇಟ್ಸ್ ಇದ್ದ ಏರ್ ಕಾರ್ಗೋ ಕಂಟೈನರ್ ಅನ್ನು ನಕಲಿ ದಾಖಲೆ ಬಳಸಿ ದರೋಡೆ ಮಾಡಲಾಗಿತ್ತು. ಈ ಕಂಟೈನರ್ ಏರ್ ಕೆನಡಾ ವಿಮಾನದ ಮೂಲಕ ಸ್ವಿಡ್ಜರ್‌ಲ್ಯಾಂಡ್‌ನ ಜೂರಿಚ್ ಇಂದ ಟೊರೊಂಟೋ ವಿಮಾನ ನಿಲ್ದಾಣಕ್ಕೆ ಬಂದಿತ್ತು. ವಿಮಾನ ಲ್ಯಾಂಡ್ ಆಗ್ತಿದ್ದಂತೆ ಕಾರ್ಗೋವನ್ನು ವಿಮಾನ ನಿಲ್ದಾಣದ ಬೇರೆ ಪ್ರದೇಶಕ್ಕೆ ಸಾಗಿಲಾಗಿತ್ತು. ಇದಾದ ಬಳಿಕ ಅದು ನಿಗೂಡವಾಗಿ ಕಣ್ಮರೆ ಆಗಿತ್ತು. ಇನ್ನು ಕಾರ್ಗೋದಲ್ಲಿ 400 ಕೆಜಿ ತೂಕದ 6600 ಚಿನ್ನದ ಗಟ್ಟಿ ಇದ್ದಿದ್ದು, ಅದರ ಮೌಲ್ಯ ಸುಮಾರು 20 ಮಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. ಇನ್ನು ಕಾರ್ಗೋದಲ್ಲಿ 2.5 ಮಿಲಿಯನ್ ಡಾಲರ್ ಮೌಲ್ಯದ ವಿದೇಶಿ ಕರೆನ್ಸಿ ಇತ್ತು ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ಭಾರತ ಮೂಲದ ಪರಂಪಾಲ್ ಸಿಧು, ಅಮಿತ್ ಜಲೋಟಾ, ಅಮ್ಮದ್ ಚೌಧರಿ, ಅಲಿರಾಝಾ ಮತ್ತು ಪ್ರಶಾಂತ್ ಪರಮಲಿಂಗಂ ಎಂಬುವವರನ್ನು ಪೊಲೀಸರು ಅರೆಸ್ಟ್ ಮಾಡಿದ್ದರು. ಇನ್ನು ನಾಪತ್ತೆಯಾಗಿರುವ ಸಿಮ್ರನ್ ಪ್ರಿತ್ ಪನೇಸರ್ ಮತ್ತು ಅರ್ಸಲನ್ ಚೌಧರಿ ಪತ್ತೆಗೆ ಪೊಲೀಸರರು ಕೆನಡಾದಾದ್ಯಂತ ಅರೆಸ್ಟ್ ವಾರೆಂಟ್ ಜಾರಿಗೊಳಿಸಿದ್ದಾರೆ. ಇನ್ನು ಈ ಭಾರೀ ದರೋಡೆಗೆ ಕೆನಡಾ ಏರ್‌ಲೈನ್ ನೌಕರರು ಸಹಾಯ ಮಾಡಿರುವ ಆರೋಪ ಕೇಳಿ ಬಂದಿತ್ತು. ಒಬ್ಬನನ್ನು ಈಗಾಗಲೇ ಅರೆಸ್ಟ್ ಮಾಡಿದ್ದು, ಇನ್ನೊಬ್ಬನ ಬಂಧನಕ್ಕೆ ವಾರೆಂಟ್ ಹೊರಡಿಸಿದೆ. ಪೊಲೀಸರ ಮಾಹಿತಿ ಪ್ರಕಾರ ತನಿಖಾಧಿಕಾರಿಗಳು ಸುಮಾರು ಕೆನಡಾದ ಡಾಲರ್ 89,000 ಮೌಲ್ಯದ ಒಂದು ಕಿಲೋಗ್ರಾಂ ಚಿನ್ನ, ಸುಮಾರು 434,000 ಡಾಲರ್ ಮೌಲ್ಯದ ಕೆನಡಾದ ಕರೆನ್ಸಿಯನ್ನೂ ವಶಕ್ಕೆ ಪಡೆಯಲಾಗಿದೆ.