Site icon Vistara News

ಜಗತ್ತಿನ ಅತಿ ದುರಾದೃಷ್ಟ ವ್ಯಕ್ತಿ! 290 ಶತಕೋಟಿ ಡಾಲರ್ ಮೌಲ್ಯದ ಷೇರು ಕೇವಲ 800 ಡಾಲರ್‌ಗೆ ಮಾರಾಟ!

Ronald Wayne

ನವದೆಹಲಿ: ಇವರಂಥ ದುರಾದೃಷ್ಟ ವ್ಯಕ್ತಿ (unluckiest man) ಈ ಜಗತ್ತಿನಲ್ಲಿ ಎಲ್ಲಿ ಹುಡುಕಿದರೂ ಸಿಗಲಿಕ್ಕಿಲ್ಲ. ಇಲ್ಲದಿದ್ದರೆ 290 ಶತಕೋಟಿ ಡೌಲರ್ ಮೌಲ್ಯದ ಷೇರುಗಳನ್ನು (Share) ಕೇವಲ 800 ಡಾಲರ್‌ಗೆ ಮಾರಲು ಹೇಗೆ ಸಾಧ್ಯ? ಹೌದು, ಇದು ನಿಜ. ನಿಮಗೆ ಆ್ಯಪಲ್ ಕಂಪನಿ (Apple Company) ಗೊತ್ತಲ್ಲ. ಮಾರುಕಟ್ಟೆಯಲ್ಲಿ ಅದರ ಮೌಲ್ಯ ಸುಮಾರು 2.9 ಲಕ್ಷ ಕೋಟಿ ಡಾಲರ್ ಇದೆ. ಈ ಕಂಪನಿಯನ್ನು ಹುಟ್ಟು ಹಾಕಿದ ಮೂವರ ಪೈಕಿ ಈ ದುರಾದೃಷ್ಟ ವ್ಯಕ್ತಿಯೂ ಒಬ್ಬರು. ರೊನಾಲ್ಡ್ ವೇಯ್ನ್ (Ronald Wayne) ಅವರೇ ಆ ವ್ಯಕ್ತಿ!

ಸ್ಟೀವ್ ವೋಜ್ನಿಯಾಕ್(Steve Wozniak), ಸ್ಟೀವ್ ಜಾಬ್ಸ್ (Steve Jobs) ಮತ್ತು ರೊನಾಲ್ಡ್ ವೇಯ್ನ್ ( Ronald Wayne) ಮೂವರು ಸೇರಿ ಆ್ಯಪಲ್ ಕಂಪನಿಯನ್ನು ಆರಂಭಿಸಿದರು. ಆ ಸಮಯದಲ್ಲಿ ವೇಯ್ನ್‌ ಅವರಿಗೆ 42 ವರ್ಷ ವಯಸ್ಸಾಗಿತ್ತು. ಇನ್ನುಳಿದ ಇಬ್ಬರು 20 ಹರೆಯದವರು. ವೇಯ್ನ್ ಅವರಿಗೆ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮತ್ತು ದಾಖಲಾತಿಯ ಕೆಲಸವನ್ನು ವಹಿಸಲಾಯಿತು. ಹಾಗಾಗಿ, ಅವರಿಗೆ ಶೇ.10 ರಷ್ಟು ಷೇರುಗಳನ್ನು ಪಡೆದುಕೊಂಡರು. ಕಂಪನಿಯ ಮೊದಲ ಒಪ್ಪಂದವನ್ನೂ ಅವರೇ ಮಾಡಿದ್ದರು. ಅಲ್ಲದೇ ಕಂಪನಿಯ ಲೋಗೋವನ್ನು ಸಹ ಮಾಡಿದರು. ಆ್ಯಪಲ್ ಕಂಪನಿಯ ಮೊದಲ ಲೋಗೋ ಈಗಿನಂತಿರಲಿಲ್ಲ. ಐಸಾಕ್ ನ್ಯೂಟನ್ ಅವರ ಫೋಟೋ ಮತ್ತು ಅವರು ಮರದ ಕೆಳಗೆ ಸೇಬನ್ನು ತಿನ್ನುವ ಚಿತ್ರವನ್ನು ಹೊಂದಿತ್ತು.

ಬಿಸಿನೆಸ್‌ನ ಮೊದಲ ಒಪ್ಪಂದವನ್ನು ಪೂರೈಸುವುದಕ್ಕಾಗಿ ಸ್ಟೀವ್ ಜಾಬ್ಸ್ ಅವರು ಬೈಟ್ ಶಾಪ್‌ನಿಂದ 15,000 ಡಾಲರ್ ಸಾಲ ಪಡೆದಿದ್ದರು. ಈ ಕಂಪನಿಯ ತನ್ನ ವೆಂಡರ್ಸ್‌ಗೆ ಯಾವತ್ತೂ ಹಣ ಪಾವತಿಸುವುದಿಲ್ಲ ಎಂಬ ಕುಖ್ಯಾತಿಯನ್ನು ಹೊಂದಿತ್ತು. ಹಾಗಾಗಿ, ಇನ್ನು ಸ್ಟೀವ್ ಜಾಬ್ಸ್ ಅವರು ತಮ್ಮ ಹಣವನ್ನು ಎಂದೂ ಮರಳಿ ಪಡೆಯಲಾರರು ಎಂದು ರೋನಾಲ್ಡ್ ವೇಯ್ನ್ ಅವರೇ ಭಾವಿಸಿದರು.

ಆ ಸಮಯದಲ್ಲಿ ವೇಯ್ನ್ ಅವರು ಆಸ್ತಿಗಳನ್ನು ಹೊಂದಿದ್ದರು. ಆದರೆ, ಉಳಿದ ಇಬ್ಬರು ಪಾರ್ಟ್ನರ್ಸ್ ಯಾವುದೇ ಆಸ್ತಿಯ ಮಾಲೀಕರಾಗಿರಲಿಲ್ಲ. ಹಾಗಾಗಿ, ಕಂಪನಿ ಒಂದೊಮ್ಮೆ ಉತ್ತಮ ಪ್ರದರ್ಶನ ತೋರದಿದ್ದರೆ ತಮಗೆ ಆರ್ಥಿಕವಾಗಿ ತೊಂದರೆಯಾಗಬುಹದು ಎಂದು ವೇಯ್ನ್ ಅವರು ಅಂದಾಜಿಸಿದರು. ಹಾಗಾಗಿ, ಕಂಪನಿಯ ಒಪ್ಪಂದದಿಂದ ಹಿಂದೆ ಸರಿದ ವೇಯ್ನ್ ಅವರು, ತಮ್ಮ ಪಾಲಿನ ಶೇ.10 ಷೇರುಗಳನ್ನು ಕೇವಲ 800 ಡಾಲರ್ ಅಂದರೆ, ಈಗಿನ ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ ಕೇವಲ 65600 ರೂ.ಗೆ ಮಾರಾಟ ಮಾಡಿದರು. ಒಂದೊಮ್ಮೆ ಶೇ.10 ಷೇರುಗಳು ಈಗಲೂ ವೇಯ್ನ್ ಅವರ ಬಳಿ ಇದ್ದಿದ್ದರೆ, ಅವರು ಜಗತ್ತಿನ ಶ್ರೀಮಂತ ವ್ಯಕ್ತಿಯಲ್ಲಿ ಒಬ್ಬರಾಗಿರುತ್ತಿದ್ದರೆ. ಯಾಕೆಂದರೆ, ಆ್ಯಪಲ್ ಕಂಪನಿಯ ಆ ಶೇ.10 ಷೇರುಗಳ ಮೌಲ್ಯ ಈಗ 290 ಬಿಲಿಯನ್ ಡಾಲರ್ ಆಗಿದೆ. ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ ಸುಮಾರು, 27.80 ಶತಕೋಟಿ ರೂಪಾಯಿ ಆಗಿರುವುದು!

ಈ ಸುದ್ದಿಯನ್ನೂ ಓದಿ: Apple India:‌ ಭಾರತದಲ್ಲಿ ಆ್ಯಪಲ್‌ ಕಂಪನಿಗೆ ಕೇವಲ 2 ಸ್ಟೋರ್‌ಗಳಲ್ಲಿ ತಿಂಗಳಿಗೆ ಸೇಲ್ಸ್‌ ಎಷ್ಟು ಕೋಟಿ?

ಆದರೆ, ವೇಯ್ನ್ ಅವರಿಗೆ ಈ ಕುರಿತು ಯಾವುದೇ ಪಶ್ಚಾತ್ತಾಪ ಇಲ್ಲ. ಸಂದರ್ಶನವೊಂದರಲ್ಲಿ ವೇಯ್ನ್ ಅವರು ಈ ಬಗ್ಗೆ ಮಾತನಾಡಿದ್ದಾರೆ. ಆ್ಯಪಲ್ ನನಗೆ ಸೂಕ್ತವಾದ ಸಂಸ್ಥೆಯಾಗಿರಲಿಲ್ಲ. ಈಗಲೂ ನಾನು ಅಲ್ಲೇ ಇದ್ದಿದ್ದರೆ, 20 ವರ್ಷಗಳಿಂದ ದಾಖಲಾತಿಗಳನ್ನು ಪರಿಶೀಲಿಸುವುದನ್ನಷ್ಟೇ ಮಾಡುತ್ತಿದ್ದೆ ಎಂದು ತಿಳಿಸಿದ್ದಾರೆ.

ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version