Site icon Vistara News

Danesh Palyani: ಪಾಕಿಸ್ತಾನದಲ್ಲಿ ಹಿಂದು ಯುವತಿಯರ ಮತಾಂತರ; ಕರಾಳ ಮುಖ ಬಿಚ್ಚಿಟ್ಟ ಸಂಸದ!

Danesh Palyani

Hindu girls being forcibly converted to Islam; reveals Hindu senator Danesh Kumar Palyani in Pakistan

ಇಸ್ಲಾಮಾಬಾದ್:‌ ಪಾಕಿಸ್ತಾನದಲ್ಲಿ (Pakistan) ಹಿಂದುಗಳನ್ನು, ಹಿಂದು ಯುವತಿಯರನ್ನು ಬಲವಂತವಾಗಿ ಮತಾಂತರ ಮಾಡುವ ಹೀನ ಕೃತ್ಯವು ಮೊದಲಿನಿಂದಲೂ ನಡೆಯುತ್ತಿದೆ. ಭಾರತ ಹಾಗೂ ಪಾಕಿಸ್ತಾನ ವಿಭಾಜನೆಯಾದಾಗಿನಿಂದಲೂ ಮುಸ್ಲಿಮರು ಮತಾಂತರಗೊಳಿಸಿದ ಕಾರಣ ನೆರೆ ರಾಷ್ಟ್ರದಲ್ಲಿ ಹಿಂದುಗಳ ಸಂಖ್ಯೆಯು ಗಣನೀಯವಾಗಿ ಕುಸಿದಿದೆ. ಪಾಕಿಸ್ತಾನದ ಹಿಂದು ಸಂಸದ, ಹಿಂದುಗಳ ನಾಯಕರೂ ಆದ ದಾನೇಶ್‌ ಕುಮಾರ್‌ ಪಲ್ಯಾನಿ (Danesh Kumar Palyani) ಅವರೀಗ ಹಿಂದು ಯುವತಿಯರನ್ನು ಹೇಗೆ ಬಲವಂತವಾಗಿ ಮತಾಂತರ (Conversion) ಮಾಡಲಾಗುತ್ತಿದೆ ಎಂಬುದನ್ನು ಸಂಸತ್‌ನಲ್ಲಿಯೇ ಬಹಿರಂಗಪಡಿಸಿದ್ದಾರೆ. ಈ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

ಸಂಸತ್‌ನಲ್ಲಿ ಮಾತನಾಡಿದ ದಾನೇಶ್‌ ಕುಮಾರ್‌ ಪಲ್ಯಾನಿ, “ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದಲ್ಲಿ ಮಾನವ ಹಕ್ಕುಗಳ ಧಕ್ಕೆಯಾಗುತ್ತಿದೆ. ಅದರಲ್ಲೂ, ಹಿಂದು ಯುವತಿಯರನ್ನು ಮುಸ್ಲಿಮರು ಬಲವಂತವಾಗಿ ಮತಾಂತರ ಮಾಡುತ್ತಿದ್ದಾರೆ. ಹಿಂದು ಯುವತಿಯನ್ನು ಅಪಹರಣ ಮಾಡಿ, ಬಳಿಕ ಅವರನ್ನು ಇಸ್ಲಾಂಗೆ ಮತಾಂತರಗೊಳಿಸಲಾಗುತ್ತಿದೆ. ಪಾಕಿಸ್ತಾನವು ಹಿಂದುಗಳನ್ನು ಬಲವಂತವಾಗಿ ಮಾತನಾಡಬಾರದು ಎಂಬ ಹಕ್ಕು ನೀಡಿದೆ. ಆದರೆ, ಸಿಂಧ್‌ ಪ್ರಾಂತ್ಯದಲ್ಲಿ ಹಿಂದುಗಳ ಸ್ಥಿತಿಯು ದುಸ್ಥರವಾಗಿದೆ” ಎಂದು ಹೇಳಿದ್ದಾರೆ.

“ಬಲವಂತವಾಗಿ ಧರ್ಮವನ್ನು ಹೇರಬಾರದು ಎಂಬುದಾಗಿ ಕುರಾನ್‌ ಕೂಡ ಹೇಳುತ್ತದೆ. ನಿಮ್ಮ ಧರ್ಮ ನಿಮ್ಮದು, ನಮ್ಮ ಧರ್ಮ ನಮ್ಮದು ಎಂಬ ಸಂದೇಶ ಸಾರಲಾಗಿದೆ. ಆದರೆ, ಇಸ್ಲಾಂ ಧರ್ಮದ ದುಷ್ಕರ್ಮಿಗಳು ಪಾಕಿಸ್ತಾನದ ಸಂವಿಧಾನವನ್ನೂ ನಂಬಲ್ಲ, ಕುರಾನ್‌ ಷರೀಫ್‌ಅನ್ನು ಕೂಡ ನಂಬುವುದಿಲ್ಲ. ಇದರಿಂದಾಗಿ ಪಾಕಿಸ್ತಾನದಲ್ಲಿ ಹಿಂದು ಯುವತಿಯರು ಬಲವಂತವಾಗಿ ತಮ್ಮ ಧರ್ಮವನ್ನು ಬದಲಾಯಿಸಬೇಕಾಗಿದೆ. ಪ್ರಿಯಾ ಕುಮಾರಿ ಎಂಬ ಯುವತಿಯನ್ನು ಅಪಹರಿಸಿ ಎರಡು ವರ್ಷಗಳೇ ಕಳೆದಿವೆ. ಆದರೂ, ಸರ್ಕಾರ ಇಂತಹ ದುಷ್ಕರ್ಮಿಗಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ” ಎಂದು ದೂರಿದರು.

“ಪಾಕಿಸ್ತಾನದ ಸಂವಿಧಾನವಾಗಲಿ, ಪವಿತ್ರ ಕುರಾನ್‌ ಆಗಲಿ ಬಲವಂತದ ಮತದಾನವನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಹೀಗಿದ್ದರೂ, ನಮ್ಮ ಮಾತೃಭೂಮಿಯಾದ ಪಾಕಿಸ್ತಾನದ ಘನತೆಗೆ ದುಷ್ಕರ್ಮಿಗಳು ಧಕ್ಕೆ ತರುತ್ತಿದ್ದಾರೆ. ಇಂತಹವರ ವಿರುದ್ಧ ಪಾಕಿಸ್ತಾನ ಸರ್ಕಾರವು ಕಠಿಣ ಕ್ರಮ ತೆಗೆದುಕೊಳ್ಳಬೇಕು” ಎಂಬುದಾಗಿ ಆಗ್ರಹಿಸಿದ್ದಾರೆ. ಪಾಕಿಸ್ತಾನದಲ್ಲಿ ಬಲವಂತದ ಮತಾಂತರ, ಯುವತಿಯರ ಅಪಹರಣ, ಮಕ್ಕಳ ಕಳ್ಳ ಸಾಗಣೆ, ಬಾಲ್ಯ ವಿವಾಹದಂತಹ ಸಮಸ್ಯೆಗಳು ತಲೆದೋರಿರುವ ಕುರಿತು ಕೆಲ ದಿನಗಳ ಹಿಂದಷ್ಟೇ ವಿಶ್ವಸಂಸ್ಥೆಯು ಕಳವಳ ವ್ಯಕ್ತಪಡಿಸಿತ್ತು.

ಇದನ್ನೂ ಓದಿ: Forced Conversion : ಮಹಿಳೆಯ ಖಾಸಗಿ ವಿಡಿಯೊ ಮಾಡಿ, ಇಸ್ಲಾಂಗೆ ಮತಾಂತರ ಮಾಡಲು ಯತ್ನಿಸಿದ ನೀಚ ದಂಪತಿ

Exit mobile version