Site icon Vistara News

ನಿದ್ದೆಯಲ್ಲಿದ್ದ ಉದ್ಯಮಿಯ ಕಾಲ್ಬೆರಳು ಚೀಪಿದ ಹೋಟೆಲ್ ಮ್ಯಾನೇಜರ್​: ಪಾರಾಗಲು ಹೊಗೆ ವಾಸನೆ ಕಥೆ ಕಟ್ಟಿದ!

Hotel Manager Suck the Toes of Guest in Nashville of US

#image_title

ಜಗತ್ತಿನಲ್ಲಿ ಎಂತೆಂಥಾ ವಿಚಿತ್ರ, ವಿಲಕ್ಷಣ ಮನಸ್ಥಿತಿಯ ಜನರು ಇರುತ್ತಾರೆ ಎಂಬುದಕ್ಕೆ ಈ ಸ್ಟೋರಿ ಒಂದು ತಾಜಾ ಉದಾಹರಣೆ. ಯುಎಸ್​ನ ಟೆನ್ನೆಸ್ಸೀ ನಗರದ ನ್ಯಾಶ್ವಿಲ್ಲೆ ನಗರದ ಹೋಟೆಲ್​ವೊಂದರಲ್ಲಿ ನಡೆದ ಘಟನೆಯೀಗ ಭರ್ಜರಿ ಸುದ್ದಿಯಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಪ್ರಾರಂಭವಾಗಿದೆ. ‘ನಿದ್ದೆಯಲ್ಲಿ ಮಾತನಾಡುವವರನ್ನು ನೋಡಿದ್ದೇವೆ, ನಿದ್ದೆಗಣ್ಣಲ್ಲಿ ಎದ್ದು ಓಡಾಡುವವರನ್ನು ನೋಡಿದ್ದೇವೆ..ಆದರೆ ಇವನ್ಯಾರು?- ನಿದ್ದೆ ಮಾಡುತ್ತಿರುವವರ ಕಾಲ್ಬೆರಳನ್ನು ಚೀಪುವವನು?’ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. ಇದು ನಿಜಕ್ಕೂ ಶಾಕಿಂಗ್​ ಮತ್ತು ಅತ್ಯಂತ ಅಸಹ್ಯಕರ ವರ್ತನೆ ಎಂದೂ ಅನೇಕರು ಹೇಳುತ್ತಿದ್ದಾರೆ.

ಅಂಥದ್ದೇನಾಯ್ತು?
ಟೆನ್ನೆಸ್ಸೀ ನಗರದ ನ್ಯಾಶ್ವಿಲ್ಲೆಯಲ್ಲಿರುವ ಹಿಲ್ಟನ್​ ನ್ಯಾಶ್ವಿಲ್ಲೆ ಡೌನ್​ಟೌನ್​ ಎಂಬ ಲಾಡ್ಜ್​​/ಹೋಟೆಲ್​​ನಲ್ಲಿ ಮ್ಯಾನೇಜರ್​ ಆಗಿದ್ದ 52ವರ್ಷದ ಡೇವಿಡ್ ನೀಲ್​ ಎಂಬಾತನ ವಿಲಕ್ಷಣ ವರ್ತನೆಗೆ, ಅಲ್ಲಿ ತಂಗಿದ್ದ ಅತಿಥಿಯೊಬ್ಬರು ಹೆದರಿ ಹೌಹಾರಿದ್ದಾರೆ. ಸದ್ಯ ಡೇವಿಡ್ ನೀಲ್​ನನ್ನು ಪೊಲೀಸರು ಬಂಧಿಸಿದ್ದಾರೆ. ಮಾರ್ಚ್​ 30ರಂದು ರಾತ್ರಿ ಟೆಕ್ಸಾಸ್ ಮೂಲದ ಉದ್ಯಮಿಯೊಬ್ಬರು ಈ ಹೋಟೆಲ್​​ನಲ್ಲಿ ರಾತ್ರಿ ತಂಗಿದ್ದರು. ಮಾರ್ಚ್​ 31ರ ಮುಂಜಾನೆ 5.30ರ ಹೊತ್ತಿಗೆ ಆ ಉದ್ಯಮಿಗೆ ತನ್ನ ಕಾಲಿನ ಬಳಿ ಏನೋ ಇರುವ ಅನುಭವ ಆಗಿ ಥಟ್ಟನೆ ಎಚ್ಚರಗೊಂಡರು. ಕಣ್ಬಿಟ್ಟು, ಕಾಲ ಬಳಿ ನೋಡಿದರೆ ಅಲ್ಲಿ ಮ್ಯಾನೇಜರ್​ ಡೇವಿಡ್​ ನೀಲ್​ ಇದ್ದ. ಅವನು ಆ ಉದ್ಯಮಿಯ ಕಾಲ್ಬೆರಳುಗಳನ್ನು ತನ್ನ ಬಾಯಿಯಲ್ಲಿ ಇಟ್ಟುಕೊಂಡು ಚೀಪುತ್ತಿದ್ದ. ಆ ದೃಶ್ಯವನ್ನು ನೋಡಿ ಭಯಗೊಂಡ ಉದ್ಯಮಿ ಅಲ್ಲಿಂದ ಧಡಬಡನೆ ಎದ್ದು, ಮಾರು ದೂರ ಹೋಗಿ ನಿಂತಿದ್ದ. ಇದನ್ನೆಲ್ಲ ಆ ಉದ್ಯಮಿಯೇ ಪೊಲೀಸರ ಬಳಿ ಹೇಳಿಕೊಂಡಿದ್ದಾರೆ.

‘ನಾನು ಮುನ್ನಾದಿನವಷ್ಟೇ ಈ ಹೋಟೆಲ್​ಗೆ ಬಂದಿದ್ದೆ. ಆಗ ನೀಲ್​​ನನ್ನು ನೋಡಿದ್ದೆ. ಮುಂಜಾನೆ ನನ್ನ ಕೋಣೆಗೆ ಬಂದಾಗಲೂ ಅವನು ಹೋಟೆಲ್ ಸಮವಸ್ತ್ರ ಧರಿಸಿಯೇ ಇದ್ದ. ಕೋಣೆಗೆ ಬರಲು ಅವನು ಮಾಸ್ಟರ್ ಕೀ ಕಾರ್ಡ್ ಪ್ರಯೋಗ ಮಾಡಿದ್ದ. ಇಲ್ಲಿಗ್ಯಾಕೆ ಬಂದು ಎಂದು ಅವನನ್ನು ನಾನು ಪ್ರಶ್ನಿಸಿದೆ. ಆದರೆ ಆತ ಸಮರ್ಪಕ ಉತ್ತರ ಕೊಡಲಿಲ್ಲ’ ಎಂದು ಉದ್ಯಮಿ ಪೊಲೀಸರ ಎದುರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ವರ ಹಾರ ಹಾಕಿದ್ದು ಒಬ್ಬಳಿಗೆ, ತಾಳಿ ಕಟ್ಟಿದ್ದು ಅವಳ ತಂಗಿಗೆ; ವಧುವನ್ನೇ ಬದಲಿಸಿತು ಒಂದು ಫೋನ್​ ಕರೆ !

ನೀಲ್​​ನನ್ನು ಪೊಲೀಸರು ಅರೆಸ್ಟ್ ಮಾಡಿ ವಿಚಾರಣೆಗೆ ಒಳಪಡಿಸಿದ್ದಾರೆ. ಆಗ ನೀಲ್​ ತಾನು ಆ ಉದ್ಯಮಿಯ ಕೋಣೆ ಪ್ರವೇಶ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ. ಆದರೆ ಕೋಣೆಯಿಂದ ಅದೇನೋ ಹೊಗೆಯ ವಾಸನೆ ಬಂದಿದ್ದರಿಂದ ಒಳಹೊಕ್ಕೆ ಎಂದು ಹೇಳಿಕೊಂಡಿದ್ದಾನೆ. ಆದರೆ ಆತನ ಈ ಹೇಳಿಕೆಯನ್ನು ಹೋಟೆಲ್​​ನ ಸೆಕ್ಯೂರಿಟಿಗಳೂ, ಇತರ ಸಿಬ್ಬಂದಿಯೇ ನಿರಾಕರಿಸಿದ್ದಾರೆ. ಯಾವ ರೂಮಿನಲ್ಲೂ ಏನೂ ಹೊಗೆ ಎದ್ದಿರಲಿಲ್ಲ, ವಾಸನೆಯೂ ಬಂದಿರಲಿಲ್ಲ ಎಂದಿದ್ದಾರೆ. ನೀಲ್​ನನ್ನು ಸರಿಯಾಗಿ ವಿಚಾರಣೆ ಮಾಡಿದ ಪೊಲೀಸರು, ಎಚ್ಚರಿಕೆ ಕೊಟ್ಟು, ಜಾಮೀನು ಆಧಾರದ ಮೇಲೆ ಬಿಟ್ಟು ಕಳಿಸಿದ್ದಾರೆ.ಆದರೆ ನೆಟ್ಟಿಗರು ಮಾತ್ರ ಈ ವಿಷಯವನ್ನು ಸುಲಭಕ್ಕೆ ಬಿಡುತ್ತಿಲ್ಲ. ನೀಲ್ ವರ್ತನೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Rishabh Pant: ಊರುಗೋಲು ಬದಿಗಿಟ್ಟು ಕೆಜಿಎಫ್​ ರಾಕಿ ಭಾಯ್​ ಶೈಲಿಯಲ್ಲಿ ನಡೆದಾಡಿದ ರಿಷಭ್​ ಪಂತ್​; ವಿಡಿಯೊ ವೈರಲ್​

Exit mobile version