Site icon Vistara News

Jail For Parents: ಮಕ್ಕಳು ಶಾಲೆಗೆ ಚಕ್ಕರ್ ಹಾಕಿದ್ರೆ, ತಂದೆ-ತಾಯಿಗೆ ಜೈಲು ಗ್ಯಾರಂಟಿ!

Saudi Arabia School

ನವದೆಹಲಿ: ಮಕ್ಕಳು ಕ್ಲಾಸಿಗೆ ಚಕ್ಕರ್ ಹಾಕಿದರೆ(Students skipping school), ಅಂಥ ಮಕ್ಕಳ ಪೋಷಕರು ಜೈಲಿನಲ್ಲಿ ಕಂಬಿ ಎಣಿಸಬೇಕಾಗುತ್ತದೆ!(Jail For Parents). ನಿಜ, ಸೌದಿ ಅರೆಬಿಯಾದಲ್ಲಿ(Saudi Arabia) ಮಗುವೊಂದು ನಿರಂತರವಾಗಿ 20 ದಿನಗಳ ಕಾಲ ಶಾಲೆಗೆ ಬರದೇ ಇದ್ದರೆ ಅಂಥ ಮಗುವಿನ ಪೋಷಕರನ್ನು ಅಧಿಕಾರಿಗಳ ಬಂಧಿಸಿ ಜೈಲಿಗೆ ಅಟ್ಟಬಹುದು ಎಂದು ಸೌದಿ ಅರೆಬಿಯಾದ ಶಿಕ್ಷಣ ಇಲಾಖೆ (Ministry of Education) ಹೇಳಿದೆ(Viral News).

ಸೌದಿ ಅರೆಬಿಯಾ ಮೂಲದ ಮೆಕ್ಕಾ ಸುದ್ದಿ ಪತ್ರಿಕೆಯಲ್ಲಿ ಈ ಕುರಿತು ವರದಿ ಪ್ರಕಟವಾಗಿದ್ದು, ವಿದ್ಯಾರ್ಥಿಯು 20 ದಿನಗಳವರೆಗೆ ಶಾಲೆಗೆ ಹಾಜರಾಗಿದ್ದರೆ, ವಿದ್ಯಾರ್ಥಿಯ ಪೋಷಕರನ್ನು ಪಬ್ಲಿಕ್ ಪ್ರಾಸಿಕ್ಯೂಷನ್ ಆಫೀಸ್‌ಗೆ ಕಳುಹಿಸುವುದು ಶಾಲೆಯ ಜವಾಬ್ದಾರಿಯಾಗಿರುತ್ತದೆ. ಈ ನಿಯಮವು ಮಕ್ಕಳ ರಕ್ಷಣಾ ಕಾನೂನು ಅಡಿಯಲ್ಲಿ ಬರುತ್ತದೆ, ಅಂಥ ಮಕ್ಕಳ ಪೋಷಕರನ್ನು ವಿಚಾರಣೆಗೆ ಒಳಪಡಿಸುವ ಅಧಿಕಾರವನ್ನು ನೀಡುತ್ತದೆ ಎಂದು ತಿಳಿಸಲಾಗಿದೆ.

ನಿಯಮಗಳ ಪ್ರಕಾರ, ಸಾರ್ವಜನಿಕ ತನಿಖಾ ಕಚೇರಿಯು ಪೂರ್ಣಗೊಳಿಸಿದ ಬಳಿಕ ಪ್ರಕರಣವನ್ನು ಕ್ರಿಮಿನಲ್ ಕೋರ್ಟ್‌ಗೆ ಶಿಫಾರಸು ಮಾಡುತ್ತದೆ. ಈ ವೇಳೆ, ಪೋಷಕರ ನಿರ್ಲಕ್ಷ್ಯದ ಕಾರಣದಿಂದಾಗಿ ಮಗು ಶಾಲೆಗೆ ಗೈರು ಹಾಜರಾಗಿರುವುದು ಸಾಬೀತಾದರೆ, ನ್ಯಾಯಾಧೀಶರು ಪೋಷಕರಿಗೆ ಜೈಲು ಶಿಕ್ಷೆಯನ್ನು ವಿಧಿಸುವ ಹಕ್ಕನ್ನು ಹೊಂದಿರುತ್ತಾರೆ.

ಈ ಸುದ್ದಿಯನ್ನೂ ಓದಿ: Fraud Teacher: 5 ವರ್ಷದಿಂದ ಶಾಲೆಗೆ ಚಕ್ಕರ್‌, ಸಂಬಳಕ್ಕೆ ಹಾಜರ್;‌ ಕುಂದಾಪುರ ಶಿಕ್ಷಕ ಮಾಡಿದ ಮಕ್ಕರ್!

ನಿಮಯಗಳ ಪ್ರಕಾರ, ವಿದ್ಯಾರ್ಥಿಯು 3 ದಿನಗಳ ರಜೆಯನ್ನು ತೆಗೆದುಕೊಂಡರೆ ಮೊದಲ ಎಚ್ಚರಿಕೆಯನ್ನು ನೀಡಲಾಗುತ್ತದೆ ಮತ್ತು ವಿದ್ಯಾರ್ಥಿ ಮಾರ್ಗದರ್ಶಕರಿಗೆ ವರ್ಗಾಯಿಸಲಾಗುತ್ತದೆ. ವಿದ್ಯಾರ್ಥಿಯು 5 ದಿನಗಳ ರಜೆಯನ್ನು ತೆಗೆದುಕೊಂಡ ನಂತರ, ಎರಡನೇ ಎಚ್ಚರಿಕೆಯನ್ನು ನೀಡಲಾಗುತ್ತದೆ ಮತ್ತು ಪೋಷಕರಿಗೆ ಈ ಕುರಿತು ತಿಳಿಸಲಾಗುತ್ತದೆ. 10 ದಿನಗಳ ಅನುಪಸ್ಥಿತಿಯ ನಂತರ, ಮೂರನೇ ಎಚ್ಚರಿಕೆಯನ್ನು ನೀಡಲಾಗುತ್ತದೆ ಮತ್ತು ಪೋಷಕರನ್ನು ಶಾಲೆಗೆ ಕರೆಸಲಾಗುತ್ತದೆ ಮತ್ತು ಪ್ರತಿಜ್ಞೆಗೆ ಸಹಿ ಮಾಡಬೇಕಾಗುತ್ತದೆ. 15 ದಿನಗಳ ಗೈರುಹಾಜರಿಯ ನಂತರ ವಿದ್ಯಾರ್ಥಿಯನ್ನು ಶಿಕ್ಷಣ ಇಲಾಖೆಯ ಮೂಲಕ ಬೇರೆ ಶಾಲೆಗೆ ವರ್ಗಾಯಿಸಲಾಗುತ್ತದೆ. 20 ದಿನಗಳವರೆಗೆ ಗೈರು ಹಾಜರಾದ್ರೆ ಶಿಕ್ಷಣ ಇಲಾಖೆಯು ಮಕ್ಕಳ ರಕ್ಷಣಾ ಕಾನೂನಿನ ನಿಬಂಧನೆಗಳ ಅನ್ವಯ ಮುಂದಿನ ಕ್ರಮಗಳನ್ನು ಜರಗಿಸುತ್ತಾರೆ.

ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version