ವಾಷಿಂಗ್ಟನ್: ಏರೋಸ್ಪೇಸ್ ತಜ್ಞರಾಗಿರುವ ಇಂಡಿಯನ್-ಅಮೆರಿಕನ್ ಎ ಸಿ ಚರಾನಿಯಾ (AC Charania) ಅವರು ನ್ಯಾಷನಲ್ ಏರೋನಾಟಿಕ್ಸ್ ಆ್ಯಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್(ನಾಸಾ) ಚೀಫ್ ಟೆಕ್ನಾಲಜಿಸ್ಟ್ (NASA Chief Technologist) ಆಗಿ ನೇಮಕಗೊಂಡಿದ್ದಾರೆ. ನಾಸಾದ ಟೆಕ್ನಾಲಜಿ, ಪಾಲಿಸಿ ಮತ್ತು ಸ್ಟ್ರಾಟರ್ಜಿ ವ್ಯಾಪ್ತಿಯಲ್ಲಿ ಚರಾನಿಯಾ ಅವರು ಕೆಲಸ ಮಾಡಲಿದ್ದಾರೆಂದು ನಾಸಾ ತನ್ನ ಹೇಳಿಕೆಯಲ್ಲಿತಿಳಿಸಿದೆ.
ಎಸಿ ಚರಾನಿಯಾ ಅವರು ಆರು ಮಿಷನ್ ನಿರ್ದೇಶನಾಲಯಗಳಾದ್ಯಂತ ಮಿಷನ್ ಅಗತ್ಯತೆಗಳೊಂದಿಗೆ ನಾಸಾದ ಏಜೆನ್ಸಿಯಾದ್ಯಂತ ತಂತ್ರಜ್ಞಾನ ಹೂಡಿಕೆಗಳನ್ನು ಒಟ್ಟುಗೂಡಿಸಲಿದ್ದಾರೆ. ಇತರ ಫೆಡರಲ್ ಏಜೆನ್ಸಿಗಳು, ಖಾಸಗಿ ವಲಯ ಮತ್ತು ಬಾಹ್ಯ ಮಧ್ಯಸ್ಥಗಾರರೊಂದಿಗೆ ತಂತ್ರಜ್ಞಾನ ಸಹಯೋಗದ ಮೇಲ್ವಿಚಾರಣೆ ಹೊಣೆಯನ್ನು ನಿರ್ವಹಿಸುತ್ತಾರೆ ಎಂದು ನಾಸಾ ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ.
ಚರಾನಿಯಾ ಅವರು, ನಾಸಾ ಆಡಳಿತಾಧಿಕಾರಿ ಬಿಲ್ ನೆಲ್ಸನ್ ಅವರಿಗೆ ಪ್ರಿನ್ಸಿಪಲ್ ಅಡ್ವೈಸರ್ ಆಗಿಯೂ ಕೆಲಸ ಮಾಡಲಿದ್ದಾರೆ. ನಾಸಾ ಸೇರ್ಪಡೆಯಾಗುವುದಕ್ಕಿಂತ ಮುಂಚೆ ಅವರು, ರಿಲಿಯಬಲ್ ರೊಬೋಟಿಕ್ಸ್ ಕಂಪನಿಯಲ್ಲಿ ಪ್ರಾಡಕ್ಟ್ ಸ್ಟ್ರಾಟರ್ಜಿಯ ವಿಭಾಗದ ಉಪಾಧ್ಯಕ್ಷರಾಗಿದ್ದರು. ಇದಕ್ಕೂ ಮೊದಲು ಅವರು ಬ್ಲೂ ಓರಿಜಿನ್ ಸೇರಿದಂತೆ ಅನೇಕ ಕಂಪನಿಗಳಲ್ಲಿ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ | NASA | ಚಂದ್ರನ ಮೇಲೂ ಹಕ್ಕು ಸಾಧಿಸಲು ಹವಣಿಸುತ್ತಿದೆ ಚೀನಾ: ನಾಸಾ ಮುಖ್ಯಸ್ಥ ಆರೋಪ