ವಾಷಿಂಗ್ಟನ್, ಅಮೆರಿಕ: ಭಾರತೀಯ ಮೂಲದ ಮಕ್ಕಳು ಅಮೆರಿಕ ಸ್ಪೆಲ್ಲಿಂಗ್ ಬೀ ಸ್ಪರ್ಧೆಯಲ್ಲಿ ತಮ್ಮ ಪ್ರಾಬಲ್ಯವನ್ನು ವರ್ಷದಿಂದ ವರ್ಷಕ್ಕೆ ಹೆಚ್ಚಿಸುತ್ತಿದ್ದಾರೆ. ಈ ಸಾಲಿಗೆ, ಫ್ಲೋರಿಡಾದ 14 ವರ್ಷದ ಇಂಡಿಯನ್-ಅಮೆರಿಕನ್ ಹುಡುಗ ದೇವ್ ಶಾ (Dev Shah) ಅವರು ಸೇರ್ಪಡೆಯಾಗಿದ್ದಾರೆ. ದೇವ್ ಶಾ ಅವರು, 2023ರ ಸಾಲಿನ ಅಮೆರಿಕ ನ್ಯಾಷನಲ್ ಸ್ಪೆಲ್ಲಿಂಗ್ ಬೀ (US National Spelling Bee) ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ. ಅವರು ಒಟ್ಟು 50 ಸಾವಿರ ಡಾಲರ್ ಬಹುಮಾನ ಪಡೆದುಕೊಂಡಿದ್ದಾರೆ. ಅಂದರೆ, ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ ಅಂದಾಜು 41 ಲಕ್ಷ ರೂಪಾಯಿಯಾಗುತ್ತದೆ.
ಅಮೆರಿಕದ ನ್ಯಾಷನಲ್ ಸ್ಪೆಲ್ಲಿಂಗ್ ಬೀ ಚಾಂಪಿಯನ್‍ಷಿಪ್‌ನ 15ನೇ ಸುತ್ತಿನಲ್ಲಿ 14 ವರ್ಷದ ದೇವ್ ಶಾ ಅವರು psammophile ಎಂಬ ಪದವನ್ನು ಸರಿಯಾಗಿ ಉಚ್ಚರಿಸುವ ಮೂಲಕ ಚಾಂಪಿಯನ್ ಎನಿಸಿಕೊಂಡರು. ದೇವ್ ಶಾ ಅವರು, ಆರ್ಲಿಂಗ್ಟನ್ ವರ್ಜೀನಿಯಾದ ಎಂಟನೇ ತರಗತಿ ವಿದ್ಯಾರ್ಥಿನಿ ಚಾರ್ಲೊಟ್ ವಾಲ್ಷ್(14) ಅವರನ್ನು ಸೋಲಿಸಿದ ಚಾಂಪಿಯನ್ ಪಟ್ಟಕ್ಕೆ ಏರಿದರು. ವಿದ್ಯಾರ್ಥಿನಿ ವಾಲ್ಷ್ ಸ್ಕಾಟಿಷ್ ಪದವಾದ “daviely” ಪದವನ್ನು ತಪ್ಪಾಗಿ ಬರೆದು, ಎರಡನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.
ಕೋವಿಡ್ ಸಾಂಕ್ರಾಮಿಕ ರೋಗವು 14 ವರ್ಷದ ದೇವ್ ಶಾ ಅವರ ಕಾಗುಣಿತ ವೃತ್ತಿಜೀವನಕ್ಕೆ ಅಡ್ಡಿಪಡಿಸಿತ್ತು. ಇದರಿಂದಾಗಿ 2022ರಲ್ಲಿ ದೇವ್ ಶಾ ಅವರು ಪ್ರಾದೇಶಿಕ ಸ್ಪೆಲ್ಲಿಂಗ್ ಬೀ ಗೆಲ್ಲಲು ಸಾಧ್ಯವಾಗಲಿಲ್ಲ. ಆದರೆ ಷಾ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಅವರ ಮೂರನೇ ಮತ್ತು ಅಂತಿಮ ಪ್ರಯತ್ನದ ನಂತರ ಅದನ್ನು ಕಠಿಣ ಮತ್ತು ಅತ್ಯಂತ ಪ್ರತಿಷ್ಠಿತ ಸ್ಪರ್ಧೆಯಲ್ಲಿ ಪಾಲ್ಗೊಂಡರು ಮತ್ತು ಅಂತಿ ಟ್ರೋಫಿಯನ್ನು ಗೆದ್ದುಕೊಂಡರು.
ಪ್ರಸಕ್ತ ಸಾಲಿನ ಅಮೆರಿಕದ ನ್ಯಾಷನಲ್ ಸ್ಪೆಲ್ಲಿಂಗ್ ಬೀ ಸ್ಪರ್ಧೆಯಲ್ಲಿ 94 ಹುಡುಗಿಯರು ಮತ್ತು 134 ಹುಡುಗರು ಪಾಲ್ಗೊಂಡಿದ್ದರು. ಇವರ ಜತೆಗೆ, ಇಬ್ಬರು ನಾನ್-ಬೈನರೀ ಎಂದು ಗುರುತಿಸಿಕೊಂಡವರು ಭಾಗವಹಿಸಿದ್ದರು. ಮೊತ್ತಬ್ಬರು ತಮ್ಮ ಐಡೆಂಟಿಟಿಯನ್ನು ಬಿಟ್ಟುಕೊಟ್ಟಿಲ್ಲ.
ಈ ಸುದ್ದಿಯನ್ನೂ ಓದಿ: Motivational story | ತಪ್ಪಾಗಿದ್ದು ಗೊತ್ತಾಗಬಾರದು ಎಂದು ತಿದ್ದುತ್ತಿದ್ದ ಹುಡುಗನಿಗೆ ಟೀಚರ್ ಹೇಳಿದ ಪಾಠ ಏನು?