ವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕದ ಉದ್ಯಮಿ(Indian Origin Businessman), ಔಟ್‌ಕಮ್ ಹೆಲ್ತ್ ಸಂಸ್ಥೆ(Outcome Health)ಯ ಸಹ ಸಂಸ್ಥಾಪಕ ರಿಶಿ ಶಾ ಅವರಿಗೆ ವಂಚನೆ ಪ್ರಕರಣದಲ್ಲಿ ಏಳೂವರೆ ವರ್ಷ ಶಿಕ್ಷೆಯಾಗಿದೆ. ಬರೋಬ್ಬರಿ 8,300 ಕೋಟಿ ರೂ. ವಂಚನೆ ಪ್ರಕರಣದಲ್ಲಿ ರಿಶಿ ಶಾ ಅವರನ್ನು ಅಮೆರಿಕ ಜಿಲ್ಲಾ ಕೋರ್ಟ್ ದೋಷಿ ಎಂದು ಘೋಷಿಸಿದ್ದು, ಇದೀಗ ಶಿಕ್ಷೆ ಪ್ರಮಾಣ ಪ್ರಕಟಿಸಿದೆ.
ಗೋಲ್ಡ್ ಸಚ್ಸ್ ಗ್ರೂಪ್, ಗೂಗಲ್ ಪೇರೆಂಟ್ ಆಲ್ಫಬೆಟ್ ಮತ್ತು ಇಲಿನಾಯ್ಸ್ ಗವರ್ನರ್ ಜೆಬಿ ಪ್ರಿಟ್ಜ್ಕರ್ ಅವರ ಸಾಹಸೋದ್ಯಮ ಬಂಡವಾಳ ಸಂಸ್ಥೆಗೆ ತಮ್ಮ ಸ್ಕೀಂ ಮೂಲಕ ಶಾ ಕೋಟ್ಯಂತರ ರೂ. ವಂಚನೆ ಮಾಡಿರುವುದು ಸಾಬೀತಾಗಿದ್ದು, ಅಮೆರಿಕ ಜಿಲ್ಲಾ ನ್ಯಾಯಾಧೀಶ ಥಾಮನ್ ಡರ್ಕಿನ್ ಏಳೂವರೆ ವರ್ಷ ಕಠಿನ ಸಜೆ ವಿಧಿಸಿದೆ. ಹೂಡಿಕೆದಾರರಿಗೆ ಸುಳ್ಳು ಹೇಳಿ ವಂಚನೆ, ಸುಳ್ಳು ಜಾಹೀರಾತು ಪ್ರಕಟಿಸಿ ವಂಚನೆ ಹೀಗೆ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಶಾಗೆ 15ವರ್ಷಗಳ ಶಿಕ್ಷೆ ವಿಧಿಸಬೇಕೆಂದು ಕೋರ್ಟ್‌ಗೆ ಸಂತ್ರಸ್ತರು ಮನವಿ ಮಾಡಿದ್ದರು.
ವೈದ್ಯರ ಕಚೇರಿಗಳಲ್ಲಿನ ಟಿವಿಗಳಲ್ಲಿ ಜಾಹೀರಾತುಗಳನ್ನು ಒದಗಿಸಿದ ಔಟ್‌ಕಮ್ ಹೆಲ್ತ್‌ನ ಸಹ-ಸಂಸ್ಥಾಪಕ, ಭಾರತೀಯ-ಅಮೆರಿಕನ್ ರಿಷಿ ಶಾ, 38, ಕಳೆದ ವರ್ಷ ಫೆಡರಲ್ ಕೋರ್ಟ್ ಅನೇಕ ವಂಚನೆ ಮತ್ತು ಮನಿ ಲಾಂಡರಿಂಗ್ ಪ್ರಕರಣಗಳಲ್ಲಿ ಶಿಕ್ಷೆ ವಿಧಿಸಿತ್ತು. ಇದೀಗ ಶಾ ಮತ್ತು ಮತ್ತು ಇತರ ಇಬ್ಬರು ಸಹೋದ್ಯೋಗಿಗಳಿಗೆ ಕಳೆದ ವಾರ ಚಿಕಾಗೋದಲ್ಲಿ US ಜಿಲ್ಲಾ ನ್ಯಾಯಾಧೀಶ ಥಾಮಸ್ ಡರ್ಕಿನ್ ಅವರು ಶಿಕ್ಷೆ ವಿಧಿಸಿದ್ದಾರೆ ಎಂದು US ಅಟಾರ್ನಿ ಕಚೇರಿ ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ.
2017 ರ ವಾಲ್ ಸ್ಟ್ರೀಟ್ ಜರ್ನಲ್ ಲೇಖನದಲ್ಲಿ ವಂಚನೆಯನ್ನು ಬಹಿರಂಗಪಡಿಸುವ ಮೊದಲು, ಶಾ ಡೆಮಾಕ್ರಟಿಕ್ ವಲಯಗಳಲ್ಲಿ ಉದಯೋನ್ಮುಖ ಉದ್ಯಮಿಯಾಗಿದ್ದರು. 2006 ರಲ್ಲಿ ಅವರು ಚಿಕಾಗೋದ ಉತ್ತರದಲ್ಲಿರುವ ನಾರ್ತ್‌ವೆಸ್ಟರ್ನ್ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಯಾಗಿದ್ದಾಗ ಶಾ ಕಾಂಟೆಕ್ಸ್ಸ್ಟ್ ಮೀಡಿಯಾ ಹೆಲ್ತ್ ಎಂಬ ಸ್ಟಾರ್ಟ್‌ಅಪ್ ಕಂಪೆನಿ ಶುರುಮಾಡಿದ್ದರು. ರೋಗಿಗಳನ್ನು ಗುರಿಯಾಗಿಸಿಕೊಂಡು ಆರೋಗ್ಯ ಜಾಹೀರಾತುಗಳನ್ನು ಸ್ಟ್ರೀಮ್ ಮಾಡಲು ವೈದ್ಯರ ಕಚೇರಿಗಳಲ್ಲಿ ಟೆಲಿವಿಷನ್‌ಗಳನ್ನು ಸ್ಥಾಪಿಸುವ ದೃಷ್ಟಿಕೋನದೊಂದಿಗೆ ಈ ಉದ್ಯಮ ಪ್ರಾರಂಭವಾಗಿತ್ತು. ಇದಾದ ಬಳಿ ಶಾ ತಮ್ಮ ಸಹ ಸಂಸ್ಥಾಪಕಮ ಶಾರದಾ ಅಗರ್ವಾಲ್ ಅವರ ಜೊತೆಗೂಡಿ ಸಂಸ್ಥೆಯನ್ನು ಅಭಿವೃದ್ಧಿ ಪಡಿಸಿದ್ದರು.
ಔಟ್‌ಕಮ್ ಹೆಲ್ತ್ ದಿನೇ ದಿನೇ ಎತ್ತರಕ್ಕೆ ಬೆಳೆಯುತ್ತಿದ್ದಂತೆ ಅದರ ಕರ್ಮಕಾಂಡ ಬೆಳಕಿಗೆ ಬಂದಿತ್ತು. ಕಂಪನಿಯು ಪ್ರಸಾರ ಮಾಡುವುದಕ್ಕಿಂತ ಹೆಚ್ಚಿನ ಜಾಹೀರಾತುಗಳನ್ನು ಮಾರಾಟ ಮಾಡಿತು ಮತ್ತು ವೈದ್ಯರ ಕಚೇರಿಗಳಲ್ಲಿನ ಟಿವಿಗಳ ನೆಟ್‌ವರ್ಕ್‌ನ ಗಾತ್ರದ ಬಗ್ಗೆ ಔಷಧೀಯ ದೈತ್ಯ Novo Nordisk A/S ನಂತಹ ಗ್ರಾಹಕರಿಗೆ ಸುಳ್ಳು ಹೇಳಿತ್ತು ಎಂಬುದು ಬಯಲಾಗಿತ್ತು.
ಇದನ್ನೂ ಓದಿ: MUDA site scandal: ಮುಡಾ ನಿವೇಶನಗಳ ಹಂಚಿಕೆ ರದ್ದು; ಬಹುಕೋಟಿ ಹಗರಣದ ತನಿಖೆಗೆ ಸರ್ಕಾರ ಆದೇಶ