Site icon Vistara News

Indian origin family killed: ಟೆಕ್ಸಾಸ್‌ನಲ್ಲಿ ಭೀಕರ ಅಪಘಾತ; ಭಾರತೀಯ ಮೂಲದ ದಂಪತಿ, ಮಗಳು ದುರ್ಮರಣ

Indian origin family killed

ವಾಷಿಂಗ್ಟನ್‌: ಅಮೆರಿಕದ ಟೆಕ್ಸಾಸ್‌(Texas Accident)ನಲ್ಲಿ ಸಂಭವಿಸಿದ ಕಾರು ಅಪಘಾತ(Car Accident)ದಲ್ಲಿ ಭಾರತೀಯ ಮೂಲದ ಒಂದೇ ಕುಟುಂಬದ(Indian origin family killed) ಮೂವರು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಲಿಯಾಂಡರ್ ನಿವಾಸಿಗಳಾದ ಅರವಿಂದ್ ಮಣಿ(45), ಅವರ ಪತ್ನಿ ಪ್ರದೀಪಾ ಅರವಿಂದ್(40), ಮತ್ತು ಅವರ 17 ವರ್ಷದ ಮಗಳು ಆಂಡ್ರಿಲ್ ಅರವಿಂದ್, ಲ್ಯಾಂಪಾಸ್ ಕೌಂಟಿ ಬಳಿ ಬುಧವಾರ ಬೆಳಿಗ್ಗೆ 5.45 ರ ವೇಳೆ ಸಂಭವಿಸಿದ ಭೀಕರ ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಇನ್ನು ಈ ದಂಪತಿ 14 ವರ್ಷದ ಮಗ ಆದಿರ್ಯಾನ್ ಘಟನೆ ಸಂದರ್ಭದಲ್ಲಿ ಜೊತೆಯಲ್ಲಿರಲಿಲ್ಲ. ಅಪ್ಪ, ಅಮ್ಮ ಮತ್ತು ಅಕ್ಕನನ್ನು ಕಳೆದುಕೊಂಡು ಪುಟ್ಟ ಬಾಲಕ ಅನಾಥನಾಗಿದ್ದಾನೆ. ಇನ್ನು GoFundMe ಎಂಬ ಸಾಮಾಜಿಕ ಜಾಲತಾಣ ಪೇಜ್‌ ಬಾಲಕನಿಗೆ ನಿಧಿ ಸಂಗ್ರಹಿಸಿದೆ. ಇದುವರೆಗೆ ಏಳು ಲಕ್ಷ ಡಾಲರ್‌ಗೂ ಅಧಿಕ ಹಣ ಸಂಗ್ರಹವಾಗಿದೆ.

ಇನ್ನು ಅರವಿಂದ್ ಮತ್ತು ಅವರ ಪತ್ನಿ ಉತ್ತರ ಟೆಕ್ಸಾಸ್‌ನಲ್ಲಿರುವ ತಮ್ಮ ಮಗಳನ್ನು ಕಾಲೇಜಿಗೆ ಕರೆದುಕೊಂಡು ಹೋಗುತ್ತಿದ್ದರು. 17 ವರ್ಷದ ಹುಡುಗಿ ಪ್ರೌಢಶಾಲೆಯಿಂದ ಪದವಿ ಪಡೆದಿದ್ದಾಳೆ ಮತ್ತು ಡಲ್ಲಾಸ್ ವಿಶ್ವವಿದ್ಯಾಲಯಕ್ಕೆ ಹಾಜರಾಗಲು ಹೋಗುತ್ತಿದ್ದಳು, ಅಲ್ಲಿ ಅವಳು ಕಂಪ್ಯೂಟರ್ ವಿಜ್ಞಾನವನ್ನು ಅಧ್ಯಯನ ಮಾಡಲು ನಿರ್ಧರಿಸಿದ್ದಳು. ಇನ್ನು ಈ ದುರ್ಘಟನೆಯಲ್ಲಿ ಭಾರತೀಯ ಮೂಲದ ಕುಟುಂಬದ ವಾಹನಕ್ಕೆ ಡಿಕ್ಕಿ ಹೊಡೆದ ಕಾರಿನ ಚಾಲಕ ಸೇರಿದಂತೆ ಒಟ್ಟು ಐದು ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

“ಬದುಕುಳಿಯುವ ಯಾವುದೇ ಅವಕಾಶವಿರಲಿಲ್ಲ. ಇದು 26 ವರ್ಷಗಳಲ್ಲಿ ನಾನು ನೋಡಿದ ಅತ್ಯಂತ ಭೀಕರ ಅಪಘಾತಗಳಲ್ಲಿ ಒಂದಾಗಿದೆ. ದಂಪತಿ ಇದ್ದ ಕಾರಿಗೆ ಡಿಕ್ಕಿ ಹೊಡೆದ ಕಾರಿನ ಚಾಲನೆಯು ಗಂಟೆಗೆ 160 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಇದನ್ನೂ ಓದಿ: ಅಮೆರಿಕದಲ್ಲಿ ಭಾರತೀಯ ಮೂಲದ ನಾಲ್ವರ ನಿಗೂಢ ಸಾವು; ಪ್ರಕರಣಕ್ಕೆ ಸಿಕ್ತು ರೋಚಕ ಟ್ವಿಸ್ಟ್‌

Exit mobile version