ವಾಷಿಂಗ್ಟನ್: ಇತ್ತೀಚಿನ ಯುವಕ-ಯುವತಿಯರಲ್ಲಿ ಸೇಡಿನ ಕೃತ್ಯಗಳು, ಲವ್ ಬ್ರೇಕಪ್ (Love Breakup) ಆದ ಕೂಡಲೇ ಪ್ರೇಯಸಿಯನ್ನು ಕೊಲ್ಲುವುದು, ಆಸಿಡ್ ದಾಳಿ ಮಾಡುವುದು ಸೇರಿ ಹಲವು ಕೃತ್ಯಗಳು ನಡೆಯುತ್ತಲೇ ಇರುತ್ತವೆ. ಇನ್ನು ಪಂಜಾಬ್ ಯುವಕನೊಬ್ಬ ಭಾರತದಿಂದ ಅಮೆರಿಕಕ್ಕೆ (America) ತೆರಳಿ, ಅಲ್ಲಿ 29 ವರ್ಷದ ಮಹಿಳೆಯ ಮೇಲೆ 7 ಬಾರಿ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ. ಈ ಭೀಕರ ಹತ್ಯೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಅಮೆರಿಕದ ನ್ಯೂಜೆರ್ಸಿಯಲ್ಲಿ ಪಂಜಾಬ್ ಮೂಲದ, 19 ವರ್ಷದ ಗೌರವ್ ಗಿಲ್ಲ ಎಂಬಾತನು 29 ವರ್ಷದ ಜಸ್ವೀರ್ ಕೌರ್ ಎಂಬ ಮಹಿಳೆಯನ್ನು ಕೊಂದಿದ್ದಾನೆ. ಗುಂಡಿನ ದಾಳಿಯಲ್ಲಿ 20 ವರ್ಷದ ಗಗನ್‌ದೀಪ್ ಕೌರ್ ಎಂಬ ಯುವತಿಯು ಗಾಯಗೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾರತದಿಂದ ಅಮೆರಿಕಕ್ಕೆ ತೆರಳಿ, ಅಲ್ಲಿ ಯುವತಿಯನ್ನು ಹುಡುಕಿ, ಅವರ ಮನೆಗೇ ತೆರಳಿ ಗುಂಡಿನ ದಾಳಿ ಮಾಡಲು ನಿಖರ ಕಾರಣ ತಿಳಿದುಬಂದಿಲ್ಲ. ಕೃತ್ಯದ ಬಳಿಕ ಪೊಲೀಸರು ಗೌರವ್ ಗಿಲ್‌ನನ್ನು ಬಂಧಿಸಿದ್ದಾರೆ.
#punjabi boy travelled from.qest to east to kill her girlfriend in #usa . Incident recorded in @cctv in ##newjersey. Suspect Gaurav Gill belonged to #Kent #Washington pic.twitter.com/GruixWznsx
— swaran danewalia (@danewaliaswaran) June 14, 2024
ಪಂಜಾಬ್‌ನ ಗೌರವ್ ಗಿಲ್ ಇತ್ತೀಚೆಗೆ ಅಮೆರಿಕಕ್ಕೆ ತೆರಳಿದ್ದು, ವಾಷಿಂಗ್ಟನ್ ಜಿಲ್ಲೆಯ ಕೆಂಟ್ ಪಟ್ಟಣದಲ್ಲಿ ವಾಸಿಸುತ್ತಿದ್ದ. ನ್ಯೂಜೆರ್ಸಿಯ ಕಾರ್ಟರೆಟ್‌ನಲ್ಲಿ ಘಟನೆ ನಡೆದಿದೆ. ಗೌರವ್ ಗಿಲ್ ಹಾಗೂ ಗಗನ್‌ದೀಪ್ ಕೌರ್ ಅವರು ಪಂಜಾಬ್‌ನ ನಾಕೋದರ್‌ನಲ್ಲಿ ಕೋಚಿಂಗ್ ಸೆಂಟರ್‌ನಲ್ಲಿ ಅಧ್ಯಯನ ಮಾಡುವಾಗ ಪರಸ್ಪರ ಪರಿಚಯವಾಗಿದ್ದರು ಎಂದು ತಿಳಿದುಬಂದಿದೆ. ಜಸ್ವೀರ್ ಅವರು ಗಗನ್‌ದೀಪ್ ಕಸಿನ್ ಆಗಿದ್ದು, ಗಗನ್‌ದೀಪ್ ಅವರು ಜಸ್ವೀರ್ ಮನೆಗೆ ಹೋಗಿದ್ದರು. ಆಗ ಗೌರವ್ ಗಿಲ್ ದಾಳಿ ನಡೆಸಿದ್ದಾನೆ ಎಂದು ತಿಳಿದುಬಂದಿದೆ.
ಜಸ್ವೀರ್ ಕೌರ್ ಅವರಿಗೆ ಈಗಾಗಲೇ ಮದುವೆಯಾಗಿದ್ದು, ಅಮೆಜಾನ್ ಫೆಸಿಲಿಟಿಯಲ್ಲಿ ಇದಕ್ಕೂ ಮೊದಲು ಕೆಲಸ ಮಾಡುತ್ತಿದ್ದರು. ಜಸ್ವೀರ್ ಕೌರ್ ಅವರ ಪತಿಯು ವಾಹನ ಚಾಲಕರಾಗಿದ್ದು, ಘಟನೆ ನಡೆದಾಗ ಅವರು ಕೆಲಸಕ್ಕೆ ಹೋಗಿದ್ದರು ಎನ್ನಲಾಗಿದೆ. ಜಸ್ವೀರ್ ಅವರು ಐದು ವರ್ಷದ ಹಿಂದೆಯೇ ಅಮೆರಿಕಕ್ಕೆ ತೆರಳಿದ್ದಾರೆ. ಇನ್ನು ಗಗನ್‌ದೀಪ್ ಅವರು ಅಧ್ಯಯನ ವೀಸಾ ಪಡೆದು ಇತ್ತೀಚೆಗೆ ಅಮೆರಿಕಕ್ಕೆ ಹೋಗಿದ್ದರು ಎನ್ನಲಾಗಿದೆ. ಮತ್ತೊಂದಿಷ್ಟು ಮೂಲಗಳ ಪ್ರಕಾರ, ಗೌರವ್ ಗಿಲ್ ಹಾಗೂ ಗಗನ್‌ದೀಪ್ ಕೌರ್ ಪ್ರೀತಿಸುತ್ತಿದ್ದರು. ಇಬ್ಬರ ಮಧ್ಯೆ ಬ್ರೇಕಪ್ ಆಗಿತ್ತು. ಇದರಿಂದ ಕುಪಿತಗೊಂಡ ಗೌರವ್ ಗಿಲ್, ಗಗನ್‌ದೀಪ್ ಕೌರ್ ಅವರನ್ನು ಕೊಲೆ ಮಾಡಲು ಗುಂಡು ಹಾರಿಸಿದ್ದಾನೆ. ಆಗ ಜಸ್ವೀರ್ ಕೌರ್‌ಗೆ ಗುಂಡು ತಗುಲಿ, ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಜಸ್ವೀರ್ ತಂದೆ ಹೇಳುವುದೇನು?
“ನನ್ನ ಪುತ್ರಿ ಜಸ್ವೀರ್ ಕೌರ್ ಮನೆಯಲ್ಲಿ ಗಗನ್‌ದೀಪ್ ಕೌರ್ ಇದ್ದಳು. ಘಟನೆ ನಡೆಯುವಾಗ ಜಸ್ವೀರ್ ಕೌರ್ ಮಲಗಿದ್ದಳು. ಮನೆಯ ಹೊರಗೆ ಗಗನ್‌ದೀಪ್ ಕೌರ್ ಹಾಗೂ ಗುಂಡಿನ ದಾಳಿ ನಡೆಸಿದ ವ್ಯಕ್ತಿಯ ಮಧ್ಯೆ ವಾಗ್ವಾದ ನಡೆದಿದೆ. ಆಗ ಸಹಾಯಕ್ಕಾಗಿ ಗಗನ್‌ದೀಪ್ ಕೌರ್ ನನ್ನ ಮಗಳನ್ನು ಕರೆದಿದ್ದಾಳೆ. ಆಗ ಜಸ್ವೀರ್ ಕೌರ್ ಜಗಳ ಬಿಡಿಸಲು ಹೋಗಿದ್ದು, ಆರೋಪಿಯು ನನ್ನ ಮಗಳ ಮುಖಕ್ಕೆ ಏಳು ಗುಂಡು ಹಾರಿಸಿ ಕೊಂದಿದ್ದಾನೆ” ಎಂದು ಜಸ್ವೀರ್ ಕೌರ್ ತಂದೆ ಕೇವಾಲ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: Actor Darshan: ಹಾಸ್ಯನಟ ಚಿಕ್ಕಣ್ಣಗೆ ಮೂರು ಗಂಟೆ ಪೊಲೀಸರ ಡ್ರಿಲ್, ರೇಣುಕಾಸ್ವಾಮಿ ಕೊಲೆ ವಿಷಯ ಬಂತಾ ಪಾರ್ಟಿಯಲ್ಲಿ?