ನವದೆಹಲಿ: ಪಾಕಿಸ್ತಾನದ (Pakistan) ಉಗ್ರ ನೆಲೆಗಳ (Bases Of Terror Groups) ಮೇಲೆ ಇರಾನ್ (Iran) ಮಂಗಳವಾರ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ. ಜೈಶ್ ಅಲ್-ಅದ್ಲ್(Jaish al-Adl) ಎಂಬ ಉಗ್ರಗಾಮಿ ಸಂಘಟನೆಯ ನೆಲೆ ಎಂದು ಗುರುತಿಸಲಾಗಿರುವ ಪಾಕಿಸ್ತಾನದ ಪ್ರದೇಶದ ಮೇಲೆ ಇರಾನ್ ದಾಳಿ ನಡೆಸಿದೆ.
ಸುನ್ನಿ ಉಗ್ರಗಾಮಿ ಗುಂಪು ಜೈಶ್ ಅಲ್-ಅದ್ಲ್ ಮೇಲಿನ ದಾಳಿಗಾಗಿ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಬಳಸಲಾಗಿದೆ. ಇದು ಹೆಚ್ಚಾಗಿ ಪರಮಾಣು ಶಸ್ತ್ರಸಜ್ಜಿತ ಪಾಕಿಸ್ತಾನದ ಗಡಿಯುದ್ದಕ್ಕೂ ಕಾರ್ಯನಿರ್ವಹಿಸುತ್ತದೆ ಎಂದು ಇರಾನ್ ಸರ್ಕಾರಿ ಸ್ವಾಮ್ಯದ ಐಆರ್‌ಎನ್‌ಎ ಸುದ್ದಿ ಸಂಸ್ಥೆ ತಿಳಿಸಿದೆ.
ಇರಾನ್ ಮತ್ತು ಪಾಕಿಸ್ತಾನ ನಡುವೆ ಈ ಪ್ರದೇಶಕ್ಕೆ ಸಂಬಂಧಿಸಿದಂತೆ ಹೆಚ್ಚು ಸಂಘರ್ಷ ಏರ್ಪಟ್ಟಿರುವ ಸಮಯದಲ್ಲೇ ಈ ದಾಳಿ ನಡೆದಿದೆ. ಸೋಮವಾರ ಇರಾನ್, ಇರಾಕ್‌ನ ಉತ್ತರ ಅರೆ ಸ್ವಾಯತ್ತ ಕುರ್ದಿಶ್ ಪ್ರದೇಶದ ಸ್ಥಾನವಾದ ಇರ್ಬಿಲ್ ನಗರದಲ್ಲಿನ ಅಮೆರಿಕ ಕಾನ್ಸುಲೇಟ್ ಕಾಂಪೌಂಡ್ ಬಳಿಯ ಇಸ್ರೇಲಿ “ಪತ್ತೇದಾರಿ ಪ್ರಧಾನ ಕಚೇರಿ” ಎಂದು ಕರೆಯುವ ಜಾಗದ ಮೇಲೆ ಕ್ಷಿಪಣಿ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ. ಈ ಉದ್ವಿಗ್ನ ಸ್ಥಿತಿಯಲ್ಲಿರುವಾಗಲೇ ಇತ್ತ ಪಾಕಿಸ್ತಾನದ ಗಡಿಯಲ್ಲೂ ದಾಳಿ ನಡೆಸಿದೆ.
ಉಗ್ರರಿಗೆ ಕಾರ್ಯಾಚರಣೆ ನಡೆಸಲು ತನ್ನ ನೆಲವನ್ನು ಬಿಟ್ಟುಕೊಡುತ್ತಿರುವ ಪಾಕಿಸ್ತಾನವು ಅದಕ್ಕೆ ಬೆಲೆಯನ್ನು ತೆರುತ್ತಿದೆ. ಭಾರತದ ವಿರುದ್ಧವೂ ಉಗ್ರ ಸಂಘಟನೆಗಳಿಗೆ ತನ್ನ ನೆಲವನ್ನು ಬಿಟ್ಟುಕೊಟ್ಟಿದೆ. ಪರಿಣಾಮ ಪಿಒಕೆಯಲ್ಲಿ ಸಾಕಷ್ಟು ಉಗ್ರ ಸಂಘಟನೆಗಳು ಕಾರ್ಯಾಚರಣೆ ನಡೆಸುತ್ತಿವೆ. ಭಾರತವು ಈ ಹಿಂದೆ ಸರ್ಜಿಕಲ್ ಸ್ಟ್ರೈಕ್ ನಡೆಸಿ, ಈ ಉಗ್ರರ ನೆಲೆಗಳನ್ನು ನಾಶಪಡಿಸಿತ್ತು.
ಈ ಸುದ್ದಿಯನ್ನೂ ಓದಿ: ಇರಾಕ್ ಬೆಂಬಲಿತ ಹಡಗುಗಳ ಮೇಲೆ ಅಮೆರಿಕ ದಾಳಿ; 10 ಹೌತಿ ಉಗ್ರರ ಹತ್ಯೆ, ವಿಡಿಯೊ ಇದೆ