Site icon Vistara News

60 ಉಗ್ರರನ್ನು ಕೊಂದು 250 ಜನರ ರಕ್ಷಿಸಿದ ಇಸ್ರೇಲ್‌ ಯೋಧರು; ರೋಚಕ ವಿಡಿಯೊ ಇಲ್ಲಿದೆ!

Israel Palestine War

Israeli Army Kills 60 Hamas Terrorists, Arrests Hamas Commander, Rescues 250 Hostages

ಜೆರುಸಲೇಂ: ಗಾಜಾಪಟ್ಟಿಯ ಹಮಾಸ್‌ ಉಗ್ರರನ್ನು ಸದೆಬಡಿಯಲು ಲಕ್ಷಾಂತರ ಸೈನಿಕರನ್ನು, ನೂರಾರು ಯುದ್ಧ ಟ್ಯಾಂಕರ್‌ಗಳನ್ನು ಗಾಜಾ ನಗರದತ್ತ ಕಳುಹಿಸುತ್ತಿರುವ ಇಸ್ರೇಲ್‌ (Israel Palestine War) ಸೇನೆಯು ಒತ್ತೆಯಾಳುಗಳಾಗಿ ಸಂಕಷ್ಟಕ್ಕೆ ಸಿಲುಕಿರುವ ನಾಗರಿಕರ ರಕ್ಷಣೆಯಲ್ಲೂ ಮುಂದಿದೆ. ಇದಕ್ಕೆ ನಿದರ್ಶನ ಎಂಬಂತೆ, ಇಸ್ರೇಲ್‌ ಯೋಧರು ಸಿನಿಮೀಯ ರೀತಿಯಲ್ಲಿ 250 ಒತ್ತೆಯಾಳುಗಳನ್ನು ರಕ್ಷಿಸಿದೆ. ಅಷ್ಟೇ ಅಲ್ಲ, ಸಿನಿಮಾ ರೀತಿಯ ಕಾರ್ಯಾಚರಣೆ ವೇಳೆ 60ಕ್ಕೂ ಹೆಚ್ಚು ಉಗ್ರರನ್ನೂ ಕೊಂದಿದ್ದಾರೆ.

ಇಸ್ರೇಲ್‌ ಡಿಫೆನ್ಸ್‌ ಫೋರ್ಸ್‌ನ (IDF) ಶಯೇಟೆಟ್‌ ಫ್ಲೀಟ್‌ ಯುನಿಟ್‌ನ ಯೋಧರು ಸೂಫಾ ಔಟ್‌ಪೋಸ್ಟ್‌ನಲ್ಲಿ ದಾಳಿ ನಡೆಸಿ, 250 ನಾಗರಿಕರನ್ನು ರಕ್ಷಿಸಿದ್ದಾರೆ. ಗಾಜಾಗೆ ನುಗ್ಗಿದ ಇಸ್ರೇಲ್‌ ಯೋಧರು ಸಿನಿಮೀಯವಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಯೋಜನೆ ರೂಪಿಸಿದಂತೆ ಆಪರೇಷನ್‌ ಕೈಗೊಂಡ ಅವರು, ಒಬ್ಬೊಬ್ಬನೇ ಉಗ್ರನನ್ನು ಹತ್ಯೆ ಮಾಡಿದ್ದಾರೆ. ನಿರಂತರ ಗುಂಡಿನ ದಾಳಿಯಲ್ಲಿ 60ಕ್ಕೂ ಹೆಚ್ಚಿನ ಉಗ್ರರನ್ನು ಹೊಡೆದುರುಳಿಸಿದ್ದಾರೆ. ಇನ್ನು ಹಮಾಸ್‌ ಕಮಾಂಡರ್‌ ಸೇರಿ 26 ಉಗ್ರರನ್ನು ಬಂಧಿಸಿದ್ದಾರೆ.

ಕಾರ್ಯಾಚರಣೆಯ ವಿಡಿಯೊ ಇಲ್ಲಿದೆ

ಇಸ್ರೇಲ್‌ ಡಿಫೆನ್ಸ್‌ ಫೋರ್ಸ್‌ ಕಾರ್ಯಾಚರಣೆಯ ವಿಡಿಯೊವನ್ನು ಅಪ್‌ಲೋಡ್‌ ಮಾಡಿದೆ. ವಿಡಿಯೊ ಈಗ ವೈರಲ್‌ ಆಗಿದ್ದು, ಸೇನೆಯ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಇಸ್ರೇಲ್‌ನ ಯೋಧರು, ನಾಗರಿಕರು, ಮಕ್ಕಳು ಹಾಗೂ ಮಹಿಳೆಯರು ಸೇರಿ ನೂರಾರು ಜನರನ್ನು ಅಪಹರಣ ಮಾಡಿರುವ ಹಮಾಸ್‌ ಉಗ್ರರು, ಗಾಜಾದಲ್ಲಿ ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದಾರೆ. ಆದರೆ, ನಾಗರಿಕರ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡುವ ಇಸ್ರೇಲ್‌ ಯೋಧರು ಸತತ ಕಾರ್ಯಾಚರಣೆ ಮೂಲಕ ರಕ್ಷಣೆ ಮಾಡುತ್ತಿದ್ದಾರೆ.

ಇದನ್ನೂ ಓದಿ: Israel Palestine War: ಗಾಜಾದತ್ತ ಹೊರಟ ಇಸ್ರೇಲ್‌ ಬಂಕರ್‌ಗಳು; ಹಮಾಸ್‌ ಉಗ್ರರ ಉಡೀಸ್‌ ಫಿಕ್ಸ್!

ಗಾಜಾ ನಗರದಲ್ಲಿ ಹಮಾಸ್‌ ಉಗ್ರರು ಜನರ ಮನೆಗಳಲ್ಲಿ, ಗುಹೆಗಳಲ್ಲಿ, ದೊಡ್ಡ ದೊಡ್ಡ ಕಟ್ಟಡಗಳಲ್ಲಿ ಅಡಗಿ ಕುಳಿತಿದ್ದಾರೆ ಎಂಬ ಮಾಹಿತಿ ಇಸ್ರೇಲ್‌ಗೆ ಲಭ್ಯವಾಗಿದೆ. ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು, ರಾಕೆಟ್‌ಗಳನ್ನು ಇಟ್ಟುಕೊಂಡಿರುವ ಹಮಾಸ್‌ ಉಗ್ರರು ಎಂದಿಗೂ ತಲೆನೋವು ಎಂಬುದು ಇಸ್ರೇಲ್‌ಗೆ ಗೊತ್ತಿದೆ. ಅದರಲ್ಲೂ, ಇಸ್ರೇಲ್‌ ಮೇಲೆ ದಾಳಿ ಮಾಡುವ ಮೂಲಕ ಹಮಾಸ್‌ ಉಗ್ರರು ಸಾವಿರಾರು ಜನರನ್ನು ಕೊಂದಿದ್ದಾರೆ. ಹಾಗಾಗಿ, ಗಾಜಾ ನಗರದ ಮೇಲೆ ಪೂರ್ಣಪ್ರಮಾಣದ ದಾಳಿ ಮಾಡುವ ಮೂಲಕ ಇಡೀ ನಗರವನ್ನು, ಹಮಾಸ್‌ ಉಗ್ರರನ್ನು ನಾಶಗೊಳಿಸಬೇಕು ಎಂಬುದು ಇಸ್ರೇಲ್‌ ಉದ್ದೇಶವಾಗಿದೆ. ಹಾಗಾಗಿಯೇ, ನೂರಾರು ಬಂಕರ್‌ಗಳನ್ನು, ವಾಹನಗಳನ್ನು ಗಾಜಾ ನಗರದತ್ತ ಸಾಗಿಸುತ್ತಿದೆ ಎಂದು ತಿಳಿದುಬಂದಿದೆ.

Exit mobile version