Site icon Vistara News

Joe Biden : ವ್ಯಾಪಾರ ನೀತಿ ಸಲಹಾ ಸಮಿತಿಗೆ ಇಬ್ಬರು ಭಾರತೀಯ ಮೂಲದವರನ್ನು ನೇಮಿಸಿದ ಬೈಡೆನ್

#image_title

ವಾಷಿಂಗ್ಟನ್:‌ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ (Joe Biden) ಅವರು ದೇಶದ ವ್ಯಾಪಾರ ನೀತಿ ಸಲಹಾ ಸಮಿತಿಗೆ ಇಬ್ಬರು ಭಾರತೀಯ ಮೂಲದ ಅಮೆರಿಕನ್ನರನ್ನು ನೇಮಿಸಿದ್ದಾರೆ. ಫ್ಲೆಕ್ಸ್‌ನ ಸಿಇಒ ರೇವತಿ ಅದ್ವೈತಿ ಮತ್ತು ನೈಸರ್ಗಿಕ ಸಂಪನ್ಮೂಲಗಳ ರಕ್ಷಣಾ ಮಂಡಳಿಯ ಸಿಇಒ ಮನೀಶ್‌ ಬಾಪ್ನಾ ಅವರನ್ನು ಸಲಹಾ ಸಮಿತಿಯ ಸದಸ್ಯರಾಗಿ ನೇಮಿಸಲಾಗಿದೆ.

ಇದನ್ನೂ ಓದಿ: ಯುಎಸ್ ಅಧ್ಯಕ್ಷ ಜೋ ಬೈಡೆನ್​​ಗೆ ಮರುಕಳಿಸಿದ ಕ್ಯಾನ್ಸರ್​; ಮತ್ತೇನೂ ಚಿಕಿತ್ಸೆ ಅಗತ್ಯವಿಲ್ಲ ಎಂದ ವೈದ್ಯರು
ವ್ಯಾಪಾರ ನೀತಿ ಸಲಹಾ ಸಮಿತಿಗೆ ಒಟ್ಟು 14 ಸಲಹೆಗಾರರನ್ನು ನೇಮಿಸುವುದಾಗಿ ಬೈಡೆನ್‌ ಅವರು ಶುಕ್ರವಾರ ಘೋಷಿಸಿದ್ದರು. ಅದರಲ್ಲಿ ಇಬ್ಬರು ಭಾರತೀಯ ಮೂಲದವರಿಗೆ ಸ್ಥಾನ ಕೊಡಲಾಗಿದೆ. ಈ ಸಲಹೆಗಾರರು ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳುವ ಮೊದಲು ಅದರ ಪರಿಣಾಮ, ವ್ಯಾಪಾರ ಒಪ್ಪಂದ ಅನುಷ್ಠಾನದ ಪರಿಣಾಮ, ಅದರ ಕಾರ್ಯಾಚರಣೆಗಳ ಬಗ್ಗೆ ಅಧ್ಯಯನ ನಡೆಸಿ, ಸಲಹೆ ನೀಡಲಿದ್ದಾರೆ.‌

ರೇವತಿ ಅದ್ವೈತಿ ಅವರು ಫ್ಲೆಕ್ಸ್‌ ಸಂಸ್ಥೆಯು ಸಿಇಒ ಆಗಿದ್ದಾರೆ. ಅವರು 2019ರಲ್ಲಿ ಆ ಸ್ಥಾನಕ್ಕೇರಿದ್ದಾರೆ. ಅದಕ್ಕೂ ಮೊದಲು ಅವರು ಎಲೆಕ್ಟ್ರಿಕಲ್‌ ವಲಯದ ವ್ಯವಹಾರಗಳ ಅಧ್ಯಕ್ಷೆ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿದ್ದರು. ಅವರು ಸತತ ನಾಲ್ಕು ವರ್ಷಗಳ ಕಾಲ ಫಾರ್ಚೂನ್‌ನ ವ್ಯಾಪಾರಿ ವಲಯದ ಅತ್ಯಂತ ಬಲಿಷ್ಠ ಮಹಿಳೆಯರ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದಾರೆ. ಬ್ಯುಸಿನೆಸ್ ಟುಡೆ ರೇವತಿ ಅವರನ್ನು ಭಾರತದ ಅತ್ಯಂತ ಬಲಿಷ್ಠ ಮಹಿಳೆಯರಲ್ಲಿ ಒಬ್ಬರು ಎಂದು ಹೆಸರಿಸಿದೆ. ರೇವತಿ ಅವರು ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್​ ಸೈನ್ಸ್‌ನಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಮತ್ತು ಥಂಡರ್‌ಬರ್ಡ್ ಸ್ಕೂಲ್ ಆಫ್ ಗ್ಲೋಬಲ್ ಮ್ಯಾನೇಜ್‌ಮೆಂಟ್‌ನಿಂದ ಎಂಬಿಎ ಪದವಿ ಪಡೆದಿದ್ದಾರೆ.

ಇದನ್ನೂ ಓದಿ: Jill Biden: ಕೀನ್ಯಾ ಯುವಕರೊಂದಿಗೆ ಸುರಕ್ಷಿತ ಸೆಕ್ಸ್​, ಕಾಂಡೊಮ್​ ಬಳಕೆ ಬಗ್ಗೆ ಮಾತನಾಡಿದ ಅಮೆರಿಕ ಅಧ್ಯಕ್ಷರ ಪತ್ನಿ ಜಿಲ್ ಬೈಡೆನ್​
ಮನೀಶ್ ಬಾಪ್ನಾ ಅವರು ನೈಸರ್ಗಿಕ ಸಂಪನ್ಮೂಲಗಳ ರಕ್ಷಣಾ ಮಂಡಳಿಯ (NRDC) ಅಧ್ಯಕ್ಷರು ಮತ್ತು ಸಿಇಒ ಆಗಿದ್ದಾರೆ. ಅವರಿಗೆ ಒಟ್ಟು 25 ವರ್ಷಗಳ ಕಾಲ ಈ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಅನುಭವವಿದೆ.

Exit mobile version