ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ (US Presidential Election 2024) ದಿನಗಣನೆ ಆರಂಭವಾಗಿದೆ. ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ (Donald Trump) ಅವರು ಅಬ್ಬರದ ಪ್ರಚಾರ ಕೈಗೊಳ್ಳುತ್ತಿದ್ದಾರೆ. ಗುಂಡಿನ ದಾಳಿಯ ಮಧ್ಯೆಯೂ ಅವರು ಪ್ರಚಾರದಲ್ಲಿ ತೊಡಗಿದ್ದಾರೆ. ಇದರ ಮಧ್ಯೆಯೇ, ಅಮೆರಿಕ ಅಧ್ಯಕ್ಷ, ಡೆಮಾಕ್ರಟಿಕ್ ಪಕ್ಷದ ಜೋ ಬೈಡೆನ್ (Joe Biden) ಅವರು ಚುನಾವಣೆ ರೇಸ್‌ನಿಂದಲೇ ಹಿಂದೆ ಸರಿದಿದ್ದಾರೆ. ಇದು ಅಮೆರಿಕ ಮಾತ್ರವಲ್ಲ, ಜಗತ್ತಿನಾದ್ಯಂತ ಸಂಚಲನ ಮೂಡಿಸಿದೆ.
ಹೌದು, ಅಮೆರಿಕ ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿಯುವ ಕುರಿತು ಜೋ ಬೈಡೆನ್ ಅವರೇ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪತ್ರದ ಮೂಲಕ ಘೋಷಿಸಿದ್ದಾರೆ. “ನಾನು ಕಳೆದ ಮೂರುವರೆ ವರ್ಷಗಳಿಂದ ಅಮೆರಿಕ ಅಧ್ಯಕ್ಷನಾಗಿ, ದೇಶದ ಏಳಿಗೆಗೆ ದುಡಿದಿದ್ದೇನೆ. ನಿಮ್ಮೆಲ್ಲರ ಅಧ್ಯಕ್ಷನಾಗಿ ಸೇವೆ ಮಾಡಿದ್ದು ನನಗೆ ಖುಷಿಯಾಗಿದೆ. ಎರಡನೇ ಬಾರಿ ಆಯ್ಕೆಗೂ ನಾನು ಮನಸ್ಸು ಮಾಡಿದ್ದೆ. ಆದರೆ, ದೇಶ ಹಾಗೂ ಪಕ್ಷದ ಹಿತದೃಷ್ಟಿಯಿಂದಾಗಿ ನಾನು ಅಮೆರಿಕ ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿದಿದ್ದೇನೆ” ಎಂದು ಅವರು ಹೇಳಿದ್ದಾರೆ.
— Joe Biden (@JoeBiden) July 21, 2024
ಜೋ ಬೈಡೆನ್ ಅವರಿಗೆ ಇತ್ತೀಚೆಗೆ ಮರೆವು ಜಾಸ್ತಿಯಾಗಿದೆ. ಅಲ್ಲದೆ, 81 ವರ್ಷದ ಜೋ ಬೈಡೆನ್ ಅವರ ಮರು ಸ್ಪರ್ಧೆಗೆ ಪಕ್ಷದಲ್ಲೇ ವಿರೋಧ ವ್ಯಕ್ತವಾಗಿತ್ತು. ಜಾಗತಿಕ ವೇದಿಕೆಗಳಲ್ಲಿ ಜೋ ಬೈಡೆನ್ ಅವರು ಮುಜುಗರ ಅನುಭವಿಸಿದ್ದರು. ಹಾಗಾಗಿ, ಅವರೇ ಸ್ಪರ್ಧೆಯಿಂದ ಹಿಂದೆ ಸರಿಯುವ ತೀರ್ಮಾನ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಇನ್ನು, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರೇ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಇವರು ಭಾರತ ಮೂಲದವರು ಎಂಬುದು ಗಮನಾರ್ಹವಾಗಿದೆ.
ಇತ್ತೀಚೆಗೆ ಹೆಚ್ಚಾದ ಮರೆವು
ಡೊನಾಲ್ಡ್ ಟ್ರಂಪ್ ಅವರಿಗೆ ಇತ್ತೀಚೆಗೆ ಮರೆವು ಜಾಸ್ತಿಯಾಗಿದೆ. ಕೆಲ ದಿನಗಳ ಹಿಂದೆ ನ್ಯಾಟೋ ಶೃಂಗಸಭೆ ನಡೆದಿದ್ದು, ಜಾಗತಿಕ ನಾಯಕರು ಭಾಗವಹಿಸಿದ್ದರು. ವೇದಿಕೆ ಮೇಲೆ ಭಾಷಣ ಮಾಡಿದ ಜೋ ಬೈಡೆನ್ ಅವರು ವೊಲೊಡಿಮಿರ್ ಜೆಲೆನ್‌ಸ್ಕಿ ಅವರನ್ನು ಸ್ವಾಗತಿಸಬೇಕಿತ್ತು. “ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್‌ಸ್ಕಿ ಅವರು ತುಂಬ ಧೈರ್ಯಶಾಲಿ” ಎಂದು ಇದೇ ವೇಳೆ ಬೈಡೆನ್ ಬಣ್ಣಿಸಿದರು. ಆದರೆ, ವೇದಿಕೆಗೆ ಆಹ್ವಾನಿಸುವ ವೇಳೆ ಅವರು ಪ್ರೆಸಿಡೆಂಟ್ ಪುಡಿನ್ ಅವರಿಗೆ ಸ್ವಾಗತ ಎಂದು ಹೇಳಿದ್ದು ಪ್ರಮಾದಕ್ಕೆ ಕಾರಣವಾಯಿತು. ಕೂಡಲೇ ಅವರು ಪ್ರಮಾದವನ್ನು ಸರಿಪಡಿಸಿಕೊಂಡರು. ವೇದಿಕೆ ಮೇಲೆಯೇ ಇದ್ದ ವೊಲೊಡಿಮಿರ್ ಜೆಲೆನ್‌ಸ್ಕಿ ಅವರು ಜೋ ಬೈಡೆನ್ ಪ್ರಮಾದದಿಂದ ನಕ್ಕು, ಮಾತನಾಡಿದರು. ಈ ವಿಡಿಯೊ ಈಗ ಭಾರಿ ವೈರಲ್ ಆಗಿತ್ತು.
ಕಮಲಾ ಹ್ಯಾರಿಸ್ ಅವರ ಹೆಸರು ಪ್ರಸ್ತಾಪಿಸುವ ವೇಳೆಯೂ ಜೋ ಬೈಡೆನ್ ನಗೆಪಾಟಲಿಗೀಡಾಗಿದ್ದರು. ವಾಷಿಂಗ್ಟನ್‌ನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುವಾಗ, ಉಪಾಧ್ಯಕ್ಷೆ ಕಮಲಾ ಹ್ಯಾರೀಸ್ ಹೆಸರಿಗೆ ಬದಲಾಗಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಸರು ಪ್ರಸ್ತಾಪಿಸಿದ್ದರು.
ಇದನ್ನೂ ಓದಿ: Donald Trump: ಅಮೆರಿಕವೂ ಐರನ್ ಡೋಮ್ ಕ್ಷಿಪಣಿ ತಯಾರಿಸಲಿದೆ; ಡೊನಾಲ್ಡ್ ಟ್ರಂಪ್ ಸೂಚನೆ