Site icon Vistara News

Khalistan attack: ಆಸ್ಟ್ರೇಲಿಯದಲ್ಲಿ ತ್ರಿವರ್ಣ ಧ್ವಜ ಪ್ರದರ್ಶಿಸಿದವರ ಮೇಲೆ ಖಲಿಸ್ತಾನಿಗಳ ದಾಳಿ, ಐವರಿಗೆ ಗಾಯ

Khalistan attack

ಮೆಲ್ಬೋರ್ನ್:‌ ಆಸ್ಟ್ರೇಲಿಯದ ಮೆಲ್ಬೋರ್ನ್‌ನಲ್ಲಿ ಹಿಂದೂ ದೇವಾಲಯದ ಮೇಲೆ ದಾಳಿ ನಡೆಸಿ ಖಲಿಸ್ತಾನಿಗಳು ಹಾನಿ ಎಸಗಿರುವ ಕೆಲವೇ ದಿನಗಳಲ್ಲಿ ಮತ್ತೊಂದು ಆಘಾತಕರ ಘಟನೆ ನಡೆದಿದೆ. ಭಾರತದ ತ್ರಿವರ್ಣ ಧ್ವಜ ಹಿಡಿದು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಖಲಿಸ್ತಾನಿಗಳು ರಾಡ್‌, ದೊಣ್ಣೆಗಳಿಂದ ದಾಳಿ ನಡೆಸಿದ್ದು, ಐವರನ್ನು ಗಾಯಗೊಳಿಸಿದ್ದಾರೆ.

ಮೆಲ್ಬೋರ್ನ್‌ನಲ್ಲಿ ಇತ್ತೀಚೆಗೆ ಮೂರು ಹಿಂದೂ ದೇವಾಲಯಗಳಿಗೆ ಖಲಿಸ್ತಾನಿಗಳು ಹಾನಿ ಎಸಗಿದ್ದರು. ಭಾರತ ವಿರೋಧಿ ಘೋಷಣೆಗಳನ್ನು ಕೂಗಿದ್ದರು. ಇದರ ನಂತರ, ಖಲಿಸ್ತಾನಿಗಳು ದೊಣ್ಣೆ- ರಾಡ್‌ಗಳಿಂದ ಭಾರತೀಯರ ಮೇಲೆ ದಾಳಿ ನಡೆಸುತ್ತಿರುವ ವಿಡಿಯೋವನ್ನು ಬಿಜೆಪಿ ನಾಯಕ ಮಂಜಿಂದರ್‌ ಸಿಂಗ್‌ ಸಿರ್ಸಾ ಶೇರ್‌ ಮಾಡಿದ್ದಾರೆ.

ಇದು ಮೆಲ್ಬೋರ್ನ್‌ನ ಫೆಡರೇಶನ್‌ ಸ್ಕ್ವೇರ್‌ ಎಂಬಲ್ಲಿ ನಡೆದಿದೆ. ಭಾರತೀಯ ತ್ರಿವರ್ಣಧ್ವಜಧಾರಿಗಳನ್ನು ಖಲಿಸ್ತಾನಿಗಳು ಅಟ್ಟಿಸಿಕೊಂಡು ಹೋಗಿ ಥಳಿಸುವುದು ಹಾಗೂ ತ್ರಿವರ್ಣಧ್ವಜವನ್ನು ರಸ್ತೆಗೆಸೆದು ತುಳಿಯುವುದು ವಿಡಿಯೀದಲ್ಲಿ ಕಾಣಿಸುತ್ತಿದೆ.

ಘಟನೆಯಲ್ಲಿ ಐವರು ಗಾಯಗೊಂಡಿದ್ದಾರೆ. ಖಡ್ಗ ಹಿಡಿದುಕೊಂಡಿದ್ದ ಇಬ್ಬರು ಖಲಿಸ್ತಾನಿ ಗೂಂಡಾಗಳನ್ನು ಬಂಧಿಸಲಾಗಿದೆ ಎಂದು ಆಸ್ಟ್ರೇಲಿಯ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Temple Attack in Australia | ಆಸ್ಟ್ರೇಲಿಯಾದಲ್ಲಿ ಹಿಂದು ದೇಗುಲ ಮೇಲೆ ಖಲಿಸ್ತಾನ್ ಉಗ್ರರ ದಾಳಿ, ಮೋದಿ ವಿರುದ್ಧ ಬರಹ

Exit mobile version