Site icon Vistara News

Kim Jong Un: ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಸುಖಕ್ಕೆ ಬೇಕು ಪ್ರತಿ ವರ್ಷ 25 ಹುಡುಗಿಯರು! ಏನಿದು ಆಹ್ಲಾದ ತಂಡ?

Kim Jong Un

Kim Jong Un

ಫ್ಯೊಂಗ್ಯಾಂಗ್‌: ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ (Kim Jong Un) ಬಗ್ಗೆ ವಿವಿಧ ಕಥೆಗಳನ್ನು ಕೇಳಿದ್ದೇವೆ. ಇದೀಗ ಆ ದೇಶದ ಯುವತಿಯೊಬ್ಬಳು ಬೆಚ್ಚಿ ಬೀಳಿಸುವ ಘೋರ ಸಂಗತಿಯೊಂದನ್ನು ಬಹಿರಂಗಪಡಿಸಿದ್ದಾಳೆ. ಕಿಮ್‌ ಜಾಂಗ್‌ ಉನ್‌ ಪ್ರತಿ ವರ್ಷ ತನ್ನ ʼಆಹ್ಲಾದ ತಂಡʼ (Pleasure Squad)ಕ್ಕಾಗಿ 25 ಹುಡುಗಿಯರನ್ನು ಆರಿಸಿಕೊಳ್ಳುತ್ತಾನೆ ಎಂದು ಉತ್ತರ ಕೊರಿಯಾದಿಂದ ತಪ್ಪಿಸಿಕೊಂಡಿರುವ ಈ ಯುವತಿ ಹೇಳಿದ್ದಾಳೆಂದು ವರದಿಯೊಂದು ತಿಳಿಸಿದೆ. ವಿಶೇಷವೆಂದರೆ ಹುಡುಗಿಯರನ್ನು ಅವರ ರೂಪ ಮತ್ತು ರಾಜಕೀಯ ನಿಷ್ಠೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ ಎಂದೂ ಯುವತಿ ವಿವರಿಸಿದ್ದಾಳೆ.

ಕಿಮ್‌ನ ಈ ಆಹ್ಲಾದ ತಂಡಕ್ಕಾಗಿ ಅವರನ್ನು ತನ್ನನ್ನು ಎರಡು ಬಾರಿ ಪರಿಗಣಿಸಿದ್ದರು. ಆದರೆ ತನ್ನ ಕುಟುಂಬದ ಸ್ಥಾನಮಾನದಿಂದಾಗಿ ಆಯ್ಕೆಯಾಗಿರಲಿಲ್ಲ ಎಂಬ ವಿಚಾರವನ್ನೂ ಆಕೆ ತಿಳಿಸಿದ್ದಾಳೆ.

ಆಯ್ಕೆ ಹೇಗೆ?

ಇನ್ನು ಈ ಕರಾಳ ಸಂಗತಿಯನ್ನು ಯುವತಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾಳೆ. ಕಿಮ್‌ ಜಾಂಗ್‌ ಉನ್‌ ತಂಡದ ಸದಸ್ಯರು ಶಾಲೆಗಳಿಗೆ ತೆರಳಿ ಚಂದದ ಹುಡುಗಿಯರನ್ನು ಹುಡುಕುತ್ತಾರೆ. ಒಂದಷ್ಟು ಜನರನ್ನು ಆಯ್ಕೆ ಮಾಡುವ ಅವರು ಬಳಿಕ ಆ ಹುಡುಗಿಯರ ಕುಟುಂಬದ ಸ್ಥಿತಿ ಮತ್ತು ರಾಜಕೀಯ ನಿಲುವುಗಳನ್ನು ಶೋಧಿಸುತ್ತಾರೆ. ಹೀಗೆ ಪರಿಶೀಲಿಸುವ ವೇಳೆ ಉತ್ತರ ಕೊರಿಯಾದಿಂದ ತಪ್ಪಿಸಿಕೊಂಡು ಬಂದ ಕುಟುಂಬಕ್ಕೆ ಸೇರಿದ ಮತ್ತು ದಕ್ಷಿಣ ಕೊರಿಯಾ ಅಥವಾ ಇತರ ದೇಶಗಳಲ್ಲಿ ಸಂಬಂಧಿಕರು ಹೊಂದಿರುವ ಹುಡುಗಿಯರನ್ನು ಕೈಬಿಡಲಾಗುತ್ತದೆ ಎಂದು ಹೇಳಿದ್ದಾಳೆ.

ಕನ್ಯತ್ವ ಪರೀಕ್ಷೆ

ಎಲ್ಲ ಕೂಲಂಕುಷವಾಗಿ ಪರಿಶೀಲಿಸಿದ ನಂತರ ಉಳಿದುಕೊಳ್ಳುವ ಹುಡುಗಿಯರ ಕನ್ಯತ್ವ ಪರೀಕ್ಷಿಸಲು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತದೆ. ಈ ವೇಳೆ ಸಣ್ಣ ಗಾಯ ಕಂಡು ಬಂದರೂ ಆಕೆಯನ್ನು ಕೈ ಬಿಡಲಾಗುತ್ತದೆ. ಹೀಗೆ ಹಲವು ಕಠಿಣ ಹಂತಗಳನ್ನು ದಾಟಿದ ಹುಡುಗಿಯರ ಪೈಕಿ ಕೆಲವರನ್ನು ಫ್ಯೊಂಗ್ಯಾಂಗ್‌ಗೆ ಕಳುಹಿಸಲಾಗುತ್ತದೆ. ಅಲ್ಲಿ ಅವರು ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ನ ಎಲ್ಲ ಆಸೆಗಳನ್ನು ಪೂರೈಸಬೇಕಾಗುತ್ತದೆ ಎಂದು ಯುವತಿ ತಿಳಿಸಿದ್ದಾಳೆ.

ಮೂರು ಗುಂಪು

ಆಯ್ಕೆಯಾದ ಹುಡುಗಿಯರನ್ನು ಮೂರು ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಒಂದು ತಂಡಕ್ಕೆ ಮಸಾಜ್‌ ತರಬೇತಿ ನೀಡಿದರೆ ಇನ್ನೊಂದು ಗುಂಪಿಗೆ ಹಾಡು ಮತ್ತು ನೃತ್ಯವನ್ನು ಹೇಳಿಕೊಡಲಾಗುತ್ತದೆ. ಮೂರನೇ ತಂಡ ಸರ್ವಾಧಿಕಾರಿ ಮತ್ತು ಆತನ ಆಪ್ತರಿಗೆ ಲೈಂಗಿಕವಾಗಿ ಸಹಕರಿಸಬೇಕು. ಅವರು ಸರ್ವಾಧಿಕಾರಿ ಮತ್ತು ಇತರ ಪುರುಷರ ಲೈಂಗಿಕ ವಾಂಛೆಗೆ ಸಹಕರಿಸಬೇಕು. ಪುರುಷರನ್ನು ಹೇಗೆ ಮೆಚ್ಚಿಸಬೇಕು ಎನ್ನುವುದನ್ನು ಅವರಿಗೆ ಕಲಿಸಲಾಗುತ್ತದೆ ಎಂದು ಯುವತಿ ವಿವರಿದ್ದಾಳೆ.

ಇದನ್ನೂ ಓದಿ: Viral Video: ತುಂಬಿದ ಸಭೆಯಲ್ಲಿ ಕಣ್ಣೀರಿಟ್ಟ ಉತ್ತರ ಕೊರಿಯಾ ಸರ್ವಾಧಿಕಾರಿ!

ಅತ್ಯಂತ ಆಕರ್ಷಕ ಹುಡುಗಿಯರನ್ನು ಸರ್ವಾಧಿಕಾರಿಯ ಸೇವೆ ಮಾಡಲು ಆಯ್ಕೆ ಮಾಡಿದರೆ, ಇತರರನ್ನು ಕೆಳದರ್ಜೆಯ ಜನರಲ್‌ಗಳು ಮತ್ತು ರಾಜಕಾರಣಿಗಳನ್ನು ತೃಪ್ತಿಪಡಿಸಲು ನಿಯೋಜಿಸಲಾಗುತ್ತದೆ. ವಿಶೇಷ ಎಂದರೆ ಹುಡುಗಿಯರ ವಯಸ್ಸು ಇಪ್ಪತ್ತು ದಾಟಿದ ನಂತರ ಅವರನ್ನು ತಂಡದಿಂದ ಕೈ ಬಿಡಲಾಗುತ್ತದೆ. ಆ ಪೈಕಿ ಕೆಲವರು ಬಾಡಿಗಾರ್ಡ್‌ ಅನ್ನು ಮದುವೆಯಾಗುತ್ತಾರೆ. ಈ ʼಆಹ್ಲಾದ ತಂಡʼ ಕಿಮ್ ಜಾಂಗ್ ಉನ್‌ನ ತಂದೆ ಕಿಮ್ ಜಾಂಗ್-2 ಕಾಲದಲ್ಲಿಯೇ ಇತ್ತು. ಅವರು ಹೀಗೆ ಲೈಂಗಿಕ ಸಂಬಂಧ ಹೊಂದುವುದು ಅಮರತ್ವವನ್ನು ನೀಡುತ್ತದೆ ಎಂದು ನಂಬಿದ್ದರು ಎಂದು ಯುವತಿ ಕರಾಳ ದಂಧೆಯ ಮೇಲೆ ಬೆಳಕು ಚೆಲ್ಲಿದ್ದಾಳೆ. ಕಿಮ್ ಜಾಂಗ್-2 2011ರಲ್ಲಿ ತಮ್ಮ 70ನೇ ವಯಸ್ಸಿನಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾದರು.

Exit mobile version