Site icon Vistara News

Queen Elizabeth Death | ಕಿಂಗ್ ಚಾರ್ಲ್ಸ್‌ಗೆ ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಬೇಕಿಲ್ಲ, ವೋಟ್ ಕೂಡ ಹಾಕಲ್ಲ!

King Charles

ಲಂಡನ್: ಕ್ವೀನ್ ಎಲಿಜಬೆತ್ ನಿಧನದ (Queen Elizabeth Death) ಬಳಿಕ ಪ್ರಿನ್ಸ್ ಚಾರ್ಲ್ಸ್ ಈಗ ಬ್ರಿಟನ್‌ನ ಹೊಸ ರಾಜ ಆಗಿದ್ದಾರೆ. ಈ ಕಿಂಗ್ ಚಾರ್ಲ್ಸ್ ಅನೇಕ ವಿಶೇಷ ಸವಲತ್ತು, ಗೌರವ, ಸ್ಥಾನಮಾನಗಳನ್ನು ಹೊಂದಿದ್ದಾರೆ. ಅವು ಒಂಚೂರು ವಿಚಿತ್ರ ಅನ್ನಿಸಿದರೂ ಸತ್ಯ ಮತ್ತು ರಾಜನಿಗಿರುವ ಅಧಿಕಾರ ಸಾಮರ್ಥ್ಯವನ್ನು ಪ್ರದರ್ಶಿಸುತ್ತವೆ. ಇದಕ್ಕೆ ಒಂದು ಚಿಕ್ಕ ಉದಾಹರಣೆ ಎಂದರೆ, ಕಿಂಗ್ ಚಾರ್ಲ್ಸ್ ಬರ್ತ್‌ಡೇಯನ್ನು ವರ್ಷಕ್ಕೆ ಎರಡು ಬಾರಿ ಆಚರಿಸಲಾಗುತ್ತದೆ!

ಮೂರನೇ ಕಿಂಗ್ ಚಾರ್ಲ್ಸ್ ಜಗತ್ತಿನ ಯಾವುದೇ ದೇಶಕ್ಕೆ ಪಾಸ್‌ಪೋರ್ಟ್ ಇಲ್ಲದೇ ಹೋಗಬಹುದು. ಯಾಕೆಂದರೆ, ರಾಜಮನೆತನದ ಇತರರಿಗೆ ಅಗತ್ಯವಾಗಿರುವ ರೀತಿಯಲ್ಲಿ ಯಾವುದೇ ದಾಖಲೆಯನ್ನು ಕಿಂಗ್ ಚಾರ್ಲ್ಸ್ ತಮ್ಮ ಹೆಸರಿನಲ್ಲೇ ಕೊಡುವಂತಿಲ್ಲ! ಬ್ರಿಟನ್ ವಿದೇಶಾಂಗ ಇಲಾಖೆಯು ಕಿಂಗ್ ಹೆಸರಿನಲ್ಲಿ ವಿದೇಶಗಳಿಗೆ ಮನವಿಯನ್ನು ಸಲ್ಲಿಸುತ್ತದೆ. ಆ ಬಳಿಕ ಸಂಬಂಧಿಸಿದ ದೇಶವು ಅವರಿಗೆ ಪ್ರವಾಸಕ್ಕೆ ಅವಕಾಶ ಕಲ್ಪಿಸುತ್ತದೆ. ಬಹುಶಃ ಬ್ರಿಟನ್‌ನಲ್ಲಿ ಡ್ರೈವಿಂಗ್ ಲೈಸೆನ್ಸ್ ಇಲ್ಲದೇ ವಾಹನ ಚಲಾಯಿಸುವ ಯಾರಾದರೂ ಇದ್ದರೆ ಅದು ಮೂರನೇ ಕಿಂಗ್ಸ್ ಚಾರ್ಲ್ಸ್ ಮಾತ್ರ. ಅವರಿಗೆ ಯಾವುದೇ ಚಾಲನಾ ಪರವಾನಿಗೆಯನ್ನು ಪಡೆದುಕೊಳ್ಳುವ ಅಗತ್ಯವಿಲ್ಲ.

ಎರಡು ಬರ್ತ್‌ಡೇ
ಕಿಂಗ್ ಚಾರ್ಲ್ಸ್ ಅವರು ತಮ್ಮ ತಾಯಿ ಎರಡನೇ ಕ್ವೀನ್ ಎಲಿಜಬೆತ್ ರೀತಿಯಲ್ಲಿ ವರ್ಷಕ್ಕೆ ಎರಡು ಬಾರಿ ಬರ್ತ್‌ಡೇ ಆಚರಿಸಿಕೊಳ್ಳಲಿದ್ದಾರೆ. ಕ್ವೀನ್ ಎಲಿಜಬೆತ್ ಅವರ ನಿಜವಾದ ಬರ್ತ್ ಡೇ ಏಪ್ರಿಲ್ 21. ಅಂದು ಅವರು ಖಾಸಗಿಯಾಗಿ ತಮ್ಮ ಬರ್ತ್‌ಡೇಯನ್ನು ಆಚರಿಸಿಕೊಳ್ಳುತ್ತಿದ್ದರು. ಎರಡನೇ ಬರ್ತ್‌ಡೇಯನ್ನು ಅವರು ಸಾರ್ವಜನಿಕವಾಗಿ ಜೂನ್‌ ತಿಂಗಳ ಎರಡನೇ ಮಂಗಳವಾರ ಆಚರಿಸಿಕೊಳ್ಳುತ್ತಿದ್ದರು. ಕಿಂಗ್ ಚಾರ್ಲ್ಸ್ ಅವರ ಬರ್ತ್‌ಡೇ ನವೆಂಬರ್ 14. ಇದು ಅವರ ನಿಜವಾದ ಬರ್ತ್‌ಡೇ. ಹಾಗೆಯೇ ಇನ್ನು ಅವರು ಸಾರ್ವಜನಿಕವಾಗಿ ಹುಟ್ಟುಹಬ್ಬವನ್ನು ಮತ್ತೊಂದು ಬಾರಿ ಆಚರಿಸಿಕೊಳ್ಳಲಿದ್ದಾರೆ.

ಮತವೂ ಇಲ್ಲ, ಎಲೆಕ್ಷನ್‌ಗೆ ಸ್ಪರ್ಧಿಸುವಂತಿಲ್ಲ
ಬ್ರಿಟನ್ ರಾಜರಾದವರಿಗೆ ಮತ ಚಲಾಯಿಸುವ ಹಕ್ಕಿರುವುದಿಲ್ಲ. ಹಾಗೆಯೇ ಅವರು ಚುನಾವಣೆಗೂ ಸ್ಪರ್ಧಿಸುವಂತಿಲ್ಲ. ದೇಶದ ಮುಖ್ಯಸ್ಥರ ಸ್ಥಾನದಲ್ಲಿರುವ ರಾಜ ಅಥವಾ ರಾಣಿ ಅವರು ನ್ಯೂಟ್ರಲ್ ಆಗಿ ಇರಬೇಕು ಎಂದು ಹೇಳುತ್ತದೆ ಬ್ರಿಟನ್ ಸಂಪ್ರದಾಯ. ಆದರೆ, ಸಂಸತ್ ಕಲಾಪ ಆರಂಭ, ಸಂಸತ್ ರೂಪಿಸಿದ ಶಾಸನಗಳಿಗೆ ಒಪ್ಪಿಗೆ ನೀಡುವ ಸಾಂವಿಧಾನಿಕ ಪ್ರಕ್ರಿಯೆಗಳನ್ನು ಪೂರೈಸುತ್ತಾರೆ. ವಾರಕ್ಕೊಮ್ಮೆ ಪ್ರಧಾನಿ ಜತೆ ಮೀಟಿಂಗ್ ಕೂಡ ಮಾಡುತ್ತಾರೆ.

ಹಂಸ, ಡಾಲ್ಫಿನ್, ಸ್ಟರ್ಜನ್ ಮೀನು…
ಹಂಸಗಳು ಮೇಲೂ ರಾಜಕುಟುಂಬಕ್ಕೆ ವಾರಸುದಾರಿಕೆ ಇದೆ. 12ನೇ ಶತಮಾನದಿಂದಲೂ ಇಂಗ್ಲೆಂಡ್‌ ಹಾಗೂ ವೇಲ್ಸ್‌ಗಳಲ್ಲಿರುವ ಹಂಸಗಳನ್ನು ರಾಜ ಮನೆತನದ ಆಸ್ತಿ ಎಂದು ಪರಿಗಣಿಸಲಾಗುತ್ತೆದ. ಪ್ರತಿ ವರ್ಷವೂ ಥೇಮ್ಸ್ ನದಿಯಲ್ಲಿರುವ ಹಂಸಗಳನ್ನು ಸಾಂಪ್ರದಾಯಿಕವಾಗಿ ಪದ್ಧತಿಯಡಿ ಎಣಿಕೆ ಮಾಡಲಾಗುತ್ತಿದೆ. ಈ ಪ್ರಕ್ರಿಯೆ ಈಗ ಹಂಸ ಸಂರಕ್ಷಣೆಯ ಕಾರ್ಯವಾಗಿಯೂ ಬದಲಾಗಿದೆ. ಬ್ರಿಟಷ್ ವ್ಯಾಪ್ತಿಯ ಜಲ ಪ್ರದೇಶಗಳಲ್ಲಿರುವ ಡಾಲ್ಫಿನ್ಸ್ ಮತ್ತು ಸ್ಟರ್ಜನ್ ಮೀನುಗಳಿಗೂ ರಾಜಮನೆತನದ ಆಶ್ರಯವಿದೆ.

ಇದನ್ನೂ ಓದಿ | Queen Elizabeth | ಪ್ರಗತಿಶೀಲ, ಪ್ರಯೋಗಶೀಲ ವ್ಯಕ್ತಿತ್ವದ ಬ್ರಿಟನ್ ರಾಣಿ ಕ್ವೀನ್ ಎಲಿಜಬೆತ್

Exit mobile version