Site icon Vistara News

Queen Elizabeth | ದೇಶವೇ ನನ್ನುಸಿರು; ದೊರೆಯ ಪಟ್ಟ ದೊರೆತ ನಂತರ ಚಾರ್ಲ್ಸ್‌ III ಚೊಚ್ಚಲ ಭಾಷಣ

elizabeth death

ಲಂಡನ್‌: ರಾಣಿ ೨ನೇ ಎಲಿಜಬೆತ್‌ ನಿಧನದ ಬಳಿಕ ರಾಜ ಪದವಿ ಪಡೆದ ಚಾರ್ಲ್ಸ್‌ III ಶುಕ್ರವಾರ ರಾತ್ರಿ (ಭಾರತೀಯ ಕಾಲಮಾನ) ದೇಶವನ್ನ ಉದ್ದೇಶಿಸಿ ಮೊದಲ ಭಾಷಣ ಮಾಡಿದರು. ಈ ವೇಳೆ ಅವರು ದೇಶಕ್ಕಾಗಿ ಉಸಿರು ಇರುವ ತನಕವೂ ಸೇವೆ ಸಲ್ಲಿಸಲು ಬದ್ಧನಾಗಿರುತ್ತೇನೆ ಎಂದು ಘೋಷಿಸಿದ್ದಾರೆ.

ರಾಣಿ ಹೇಗೆ ದೇಶಕ್ಕಾಗಿ ಸರ್ವಸ್ವವನ್ನೂ ಸಮರ್ಪಿಸಿಕೊಂಡಿದ್ದರೋ ನಾನು ಅದೇ ಹಾದಿಯಲ್ಲಿ ನಡೆಯುತ್ತೇನೆ. ದೇವರು ನನಗೆ ಎಷ್ಟು ಕಾಲ ಅನುಗ್ರಹ ಕೊಡುತ್ತಾನೊ ಅಷ್ಟು ಕಾಲ ದೇಶದ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯುತ್ತೇನೆ. ನೀವು ಯನೈಟೆಡ್‌ ಕಿಂಗ್‌ಡಮ್‌ನ ಎಲ್ಲೇ ವಾಸವಿದ್ದರೂ, ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ನಿಮ್ಮ ಹಿನ್ನೆಲೆ ಏನೇ ಆಗಿದ್ದರೂ, ಪ್ರೀತಿ, ಆದರದಿಂದ ನಿಮ್ಮ ಸೇವೆಗೈಯುತ್ತೇನೆ,” ಎಂದರು.

ಭಾಷಣದ ವೇಳೆ ಅಮ್ಮ ಎರಡನೇ ಎಲಿಜಬೆತ್‌ ಅವರನ್ನು ನೆನೆದು ಭಾವುಕರಾದರು.

ಇದೇ ವೇಳೆ ತಮ್ಮ ಪ್ರೀತಿಯ ಮಡದಿ ಕ್ಯಾಮಿಲಾ ಅವರ ಹೆಸರನ್ನೂ ಪ್ರಸ್ತಾಪಿಸಲು ಚಾರ್ಲ್ಸ್‌ ಮರೆಯಲಿಲ್ಲ. ಜತೆಗೆ ತಮ್ಮ ಮುಂದಿನ ಉತ್ತರಾಧಿಕಾರಿ, ಹಿರಿಯ ಪುತ್ರ ವಿಲಿಯಮ್ಸ್‌, ಸೊಸೆ ಕೇಟ್‌ ಮಿಡಲ್‌ಟನ್‌ ಅವರನ್ನೂ ಶ್ಲಾಘಿಸಿದರು. ಕಿರಿಯ ಪುತ್ರ ಪ್ರಿನ್ಸ್ ಹ್ಯಾರಿ ಹಾಗೂ ಮೇಘನ್‌ ಮರ್ಕೆಲ್ ದಂಪತಿಯೆಡೆಗಿನ ಪ್ರೀತಿಯನ್ನೂ ವ್ಯಕ್ತಪಡಿಸಿದರು.

ಇದನ್ನೂ ಓದಿ | Queen Elizabeth | ಬಂದಷ್ಟೇ ವೇಗವಾಗಿ ಖರ್ಚಾಗಿದ್ದ ರಾಣಿ ಎಲಿಜಬೆತ್‌ ಬಾರ್ಬಿ ಡಾಲ್!‌

Exit mobile version