Queen Elizabeth | ಬಂದಷ್ಟೇ ವೇಗವಾಗಿ ಖರ್ಚಾಗಿದ್ದ ರಾಣಿ ಎಲಿಜಬೆತ್‌ ಬಾರ್ಬಿ ಡಾಲ್!‌ - Vistara News

ರಾಣಿ ಎಲಿಜಬೆತ್​

Queen Elizabeth | ಬಂದಷ್ಟೇ ವೇಗವಾಗಿ ಖರ್ಚಾಗಿದ್ದ ರಾಣಿ ಎಲಿಜಬೆತ್‌ ಬಾರ್ಬಿ ಡಾಲ್!‌

ಈ ವರ್ಷವೇ ಬ್ರಿಟನ್‌ನ ರಾಣಿ ಎಲಿಜಬೆತ್‌2 ಅವರ ಗೌರವಾರ್ಥ ಬಾರ್ಬಿ ಗೊಂಬೆಯನ್ನು ಮಟೆಲ್‌ನ ಬಾರ್ಬಿ ಕಂಪನಿ ಹೊರತಂದಿತ್ತು. ಬಂದಷ್ಟೇ ಬೇಗನೆ ಅವು ಖರ್ಚಾಗಿದ್ದವು.

VISTARANEWS.COM


on

barbie doll
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ತನ್ನ ೯೬ನೇ ವಯಸ್ಸಿನಲ್ಲಿ ಮೃತ ಪಟ್ಟಿರುವ ಬ್ರಿಟನ್‌ನ ರಾಣಿ ಎಲಿಜಬೆತ್‌ರ ೭೦ ವರ್ಷಗಳ ಅಧಿಕಾರಾವಧಿಯ ನೆನಪಿನಲ್ಲಿ ಆಕೆಯ ಹುಟ್ಟುಹಬ್ಬದ ದಿನದಂದು ಅಂದರೆ, ೨೧ ಏಪ್ರಿಲ್‌ ೨೦೨೨ರಲ್ಲಿ ಈ ಬಾರ್ಬಿ ಡಾಲ್‌ ಬಿಡುಗಡೆಯಾಗಿತ್ತು. ಬಿಡುಗಡೆಯಾಗಿ ಕೆಲವೇ ದಿನಗಳಲ್ಲಿ ಬಂದಷ್ಟೇ ವೇಗದಲ್ಲಿ  ಸೋಲ್ಡ್‌ ಔಟ್‌ ಆಗಿದ್ದ ಈ ಬೊಂಬೆಗಳೀಗ ರಾಣಿಯ ಪ್ರೀತಿಪಾತ್ರರ ಮನೆಗಳಲ್ಲಿ, ಬಾರ್ಬಿ ಪ್ರಿಯ ಮನೆಗಳಲ್ಲಿ ರಾಣಿಯ ನೆನಪಿನಲ್ಲಿ ಇರಲಿವೆ. ಕಾಕತಾಳೀಯವೆಂಬಂತೆ ಬಾರ್ಬಿ ಬೊಂಬೆ ಬಿಡುಗಡೆಯಾದ ವರ್ಷವೇ ರಾಣಿ ಇಹಲೋಕ ತ್ಯಜಿಸಿದ್ದಾರೆ.

ಸದ್ಯಕ್ಕೆ ಔಟ್‌ ಆಫ್‌ ಸ್ಟಾಕ್‌ ತೋರಿಸುತ್ತಿರುವ ಖ್ಯಾತ ಆಟಿಕೆ ಕಂಪನಿ ಮಟೆಲ್‌ನ ಹೆಮ್ಮೆಯ ಉತ್ಪನ್ನವಾಗಿದ್ದ ಇದಕ್ಕೆ ಸುಮಾರು ೭೫.೯೯ ಡಾಲರ್‌ ಬೆಲೆ ನಮೂದಿಸಲಾಗಿತ್ತು. ಬಿಳಿಯ ಗೌನ್‌ನ ಮೇಲೆ ಬಿಳಿ ಹೂಗಳ ಲೇಸ್‌ ಪ್ರಿಂಟ್‌ನಲ್ಲಿ ಬೆಳ್ಳಿಯ ಆಭರಣಗಳನ್ನು ಧರಿಸಿರುವ ಹೊಳೆವ ಕಿರೀಟವಿದ್ದ ಈ ಬಾರ್ಬಿ ಬೊಂಬೆ ಖಂಡಿತವಾಗಿಯೂ ಬಾರ್ಬಿ ಪ್ರಿಯರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿತ್ತು.

ಬಾರ್ಬಿ ಬ್ರಾಂಡ್‌ ಖದರಿಗೆ, ರಾಣಿಯ ಗತ್ತಿಗೆ ಎರಡಕ್ಕೂ ಹೊಂದುವಂತೆ ಬಹಳ ಆಕರ್ಷಕವಾಗಿ ಇದನ್ನು ವಿನ್ಯಾಸ ಮಾಡಲಾಗಿದ್ದು, ಇದರ ಶ್ರೇಯಸ್ಸು ಮಟೆಲ್‌ನ ಬಾರ್ಬಿ ವಿನ್ಯಾಸ ವಿಭಾಗದ ಹಿರಿಯ ನಿರ್ದೇಶಕ ರಾಬರ್ಟ್‌ ಬೆಸ್ಟ್‌ ಅವರಿಗೆ ಸಲ್ಲಬೇಕು. ಇವರು ರಾಣಿಯದ್ದೇ ಮಾದರಿಯ ಲುಕ್‌ ಹಾಗೂ ಅಪರೂಪದ ಸ್ಟೈಲ್‌ ಇದರಲ್ಲಿ ತರಲು ಪ್ರಯತ್ನಿಸಿದ್ದರೂ, ರಾಣಿಯ ದಿರಿಸನ್ನು ಹೋಲುವಂತೆ ಗೌನ್‌ ಹಾಗೂ ಇತರ ಎಲ್ಲ ವಿಶೇಷತೆಗಳನ್ನು ಬೊಂಬೆಯಲ್ಲಿ ಅಳವಡಿಸಿಕೊಳ್ಳಲಾಗಿತ್ತು. ಆ ಮೂಲಕ ನೋಡಿದ ಕೂಡಲೇ ರಾಣಿ ಎಲಿಜಬೆತ್‌ ಜೀವತಳೆದು ಬಂದಂತೆ ಕಾಣುವಂತೆ ಈ ಬೊಂಬೆ ರೂಪಿಸಲಾಗಿತ್ತು.

ಇದನ್ನೂ ಓದಿ | Queen Elizabeth | ಪ್ರಗತಿಶೀಲ, ಪ್ರಯೋಗಶೀಲ ವ್ಯಕ್ತಿತ್ವದ ಬ್ರಿಟನ್ ರಾಣಿ ಕ್ವೀನ್ ಎಲಿಜಬೆತ್

ಈ ಬಾರ್ಬಿ ಬೊಂಬೆ ಹಾಕಿಕೊಂಡಿರುವ ಗೌನ್‌ ರಾಣಿ ಧರಿಸುವ ಯಾವುದೇ ಗೌನ್‌ನ ಕಾಪಿ ಮಾಡಿಲ್ಲವಾದರೂ, ಆಕೆಯ ವ್ಯಕ್ತಿತ್ವ, ಸ್ಟೈಲ್‌ ಹಾಗೂ ಧರಿಸುವ ಬಣ್ಣಗಳನ್ನು ನೋಡಿ ಅದರಿಂದ ಪ್ರೇರಿತರಾಗಿ ಬೇರೆಯದೇ ಆದ ವಿನ್ಯಾಸ ಮಾಡಲಾಗಿತ್ತು. ಆಕೆಯ ಕಳೆದ ಹಲವು ವರ್ಷಗಳ ಫೋಟೋಗಳನ್ನು ನೋಡಿ ಅಭ್ಯಾಸ ಮಾಡಿ ಅದರಂತೆ ಈ ಬೊಂಬೆ ರೂಪಿಸಲಾಗಿದೆ ಎಂದು ಅವರು ಬಿಡುಗಡೆಯ ಸಂದರ್ಭ ಹೇಳಿಕೊಂಡದ್ದನ್ನು ಇಲ್ಲಿ ಸ್ಮರಿಸಬಹುದು.

barbie doll

ತುಂಬ ಸಿಂಪಲ್‌ ಆಗಿರುವ ಆದರೆ ಅಷ್ಟೇ ಆಕರ್ಷಕವಾಗಿರುವ ಗೌನ್‌ ಧರಿಸುವ ರಾಣಿ ಅದಕ್ಕೊಪ್ಪುವ ಆಭರಣಗಳನ್ನು ಜತನದಿಂದ ಆಯ್ಕೆ ಮಾಡಿಕೊಳ್ಳುತ್ತಾರೆ. ಹೀಗಾಗಿ ಬಾರ್ಬಿಯಲ್ಲೂ ಇದನ್ನೇ ಮುಖ್ಯವಾಗಿ ಪರಿಗಣಿಸಲಾಗಿತ್ತು. ರಾಣಿಯ ಈ ಬಾರ್ಬಿಯ ಪ್ರಮುಖ ಆಕರ್ಷಣೆಯೆಂದರೆ ಅದು ಆಕೆಯ ಕಿರೀಟ. ಇದನ್ನು ೧೯೪೭ರಲ್ಲಿ ಪ್ರಿನ್ಸ್‌ ಫಿಲಿಪ್‌ ಅವರನ್ನು ಮದುವೆಯಾಗುವ ಸಂದರ್ಭ ಧರಿಸಿದ ಮಾದರಿಯದ್ದೇ ಇದಾಗಿದೆ.

ಈ ಡಾಲ್‌ ಹೊತ್ತು ಬರುವ ಪೆಟ್ಟಿಗೆಯನ್ನು ಕೂಡಾ ಆಕರ್ಷಕವಾಗಿ ವಿನ್ಯಾಸ ಮಾಡಲಾಗಿತ್ತು. ಬಕ್ಕಿಂಗ್‌ಹ್ಯಾಂ ಅರಮನೆಯ ಸಿಂಹಾಸನದ ಕೊಠಡಿಯನ್ನೇ ಹೋಲುವ ಪೆಟ್ಟಿಗೆ ಇದಾಗಿದ್ದು, ಸಿಂಹಾಸನ, ರೆಡ್‌ ಕಾರ್ಪೆಟ್‌, ಹಾಗೂ ಲಾಂಛನಗಳನ್ನು ಹೊಂದಿದ್ದ ಇದು ರಾಣಿಯ ಅಧಿಕಾರದ ಅಮೃತ ಮಹೋತ್ಸವದ ನೆನಪನ್ನು ಉಳಿಸುವಂತೆ ವಿನ್ಯಾಸ ಮಾಡಲಾಗಿತ್ತು. ಹಾಗಾಗಿ ಪೆಟ್ಟಿಗೆ ಸಮೇತ ರಾಣಿಯ ಡಾಲ್‌ ಮಾದರಿಯನ್ನು ಸಂಗ್ರಹಿಸಿಡಬಹುದಾಗಿದೆ.

ಮಟೆಲ್‌ ಆಟಿಕೆ ಕಂಪನಿಯ ಈವರೆಗಿನ ಬಾರ್ಬಿ ಡಾಲ್‌ಗಳಲ್ಲಿ ಸಾಕಷ್ಟು ಹಾಲಿವುಡ್‌ ಸೆಲೆಬ್ರಿಟಿಗಳ ಬಾರ್ಬಿ ರೂಪದಲ್ಲಿ ಬಂದಿದ್ದು ಪ್ರಿನ್ಸ್‌ ವಿಲಿಯಮ್ಸ್‌ ಹಾಗೂ ಕೇಟ್‌ ಮಿಡ್ಲ್‌ಟನ್‌ ಕೂಡಾ ಇವರಲ್ಲಿ ಪ್ರಮುಖರು.

ಇದನ್ನೂ ಓದಿ | ಮಹಾರಾಣಿಯ ನೋಟಕ್ಕಾಗಿ ಕಾತರಿಸುತ್ತಿದ್ದ ಜನ | ಭಾರತಕ್ಕೆ 3 ಬಾರಿ ಭೇಟಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Queen Elizabeth Death | ಅಣ್ಣ ಪ್ರಿನ್ಸ್ ಜಾರ್ಜ್‌ಗೆ ಶಿಷ್ಟಾಚಾರ ಹೇಳಿಕೊಟ್ಟ ಪ್ರಿನ್ಸೆಸ್ ಷಾರ್ಲಟ್!

ಎರಡನೇ ಕ್ವೀನ್ ಎಲಿಜಬೆತ್ (Queen Elizabeth Death) ಅಂತಿಮ ಮೆರವಣಿಗೆ ವೇಳೆ ಪ್ರಿನ್ಸೆಸ್ ಷಾರ್ಲಟ್, ಪ್ರಿನ್ಸ್ ಜಾರ್ಜ್‌ಗೆ ಸೂಚನೆ ನೀಡುವ ವಿಡಿಯೋ ವೈರಲ್ ಆಗಿದೆ.

VISTARANEWS.COM


on

Princess Charlotte
Koo

ಲಂಡನ್: ಅತಿ ದೀರ್ಘ ಅವಧಿಗೆ ಲಂಡನ್ ರಾಜ್ಯಾಡಳಿತದ ನೇತೃತ್ವವನ್ನು ವಹಿಸಿದ್ದ ಎರಡನೇ ಕ್ವೀನ್ ಎಲಿಜಬೆತ್ (Queen Elizabeth Death) ಅವರ ಅಂತಿಮ ಕ್ರಿಯೆ ನಡೆಯಿತು. ಜಗತ್ತಿನ ಪ್ರಮುಖ ನಾಯಕರೆಲ್ಲರೂ ಆಗಮಿಸಿ ತಮ್ಮ ಅಂತಿಮ ನಮನ ಸಲ್ಲಿಸಿದರು. ಇದೇ ವೇಳೆ, ಕಿರಿಯ ಪ್ರಿನ್ಸ್ ಜಾರ್ಜ್ ಮತ್ತು ಪ್ರಿನ್ಸೆಸ್ ಷಾರ್ಲಟ್ ನಡುವಿನ ಕೆಲವು ಸ್ವೀಟ್ ಮೊಮೆಂಟ್ಸ್ ಇಂಟರ್ನೆಟ್ ಜಗತ್ತಿನಲ್ಲಿ ವೈರಲ್ ಆಗುತ್ತಿವೆ.

ಎರಡನೇ ಕ್ವೀನ್ ಎಲಿಜಬೆತ್ ಅವರ ಅಂತಿಮ ಮೆರವಣಿಗೆಯ ವೇಳೆ, ಅವರ ಮರಿಮೊಮ್ಮಕ್ಕಳಾದ ಪ್ರಿನ್ಸ್ ಜಾರ್ಜ್ ಮತ್ತು ಪ್ರಿನ್ಸೆಸ್ ಷಾರ್ಲಟ್ ಅವರು ಒಬ್ಬರಿಗೊಬ್ಬರು ಪಿಸುಗುಟ್ಟುವುದು ಕ್ಯಾಮೆರಾ ಕಣ್ಣಗಳಲ್ಲಿ ಸೆರೆಯಾಗಿದೆ. ಅವರಿಬ್ಬರ ಮಾತುಕತೆ ಏನಾಗಿರಬಹುದು ಎಂಬ ಕುತೂಹಲ ಎಲ್ಲರನ್ನೂ ಕೆರಳಿಸಿದೆ.

ಅವರಿಬ್ಬರ ನಡುವಿಮ ಮಾತುಕತೆಯ ಧಾಟಿಯನ್ನು ಗಮನಿಸಿದರೆ, 7 ವರ್ಷದ ಪ್ರಿನ್ಸೆಸ್ ಷಾರ್ಲಟ್ ಈಗಾಗಲೇ ರಾಯಲ್ ಫ್ಯಾಮಿಲಿಯ ಶಿಷ್ಟಾಚಾರಗಳ ಕುರಿತು ಎಕ್ಸ್‌ಪರ್ಟ್ ಆಗಿರುವ ಹಾಗಿದೆ. ಕ್ವೀನ್ ಅವರ ಶವಪೆಟ್ಟಿಗೆ ತಮ್ಮ ಮುಂದೆ ಹೋಗುತ್ತಿದ್ದಂತೆ ನಡು ಬಗ್ಗಿಸಬೇಕು ಎಂಬ ಸೂಚನೆಯನ್ನು ಪ್ರಿನ್ಸೆಸ್ ಷಾರ್ಲಟ್, ಪ್ರಿನ್ಸ್ ಜಾರ್ಜ್‌ಗೆ ನೀಡುತ್ತಿರುವ ದೃಶ್ಯ ಸೆರೆಯಾಗಿದೆ. ಪ್ರಿನ್ಸ್ ಜಾರ್ಜ್‌ಗೆ 9 ವರ್ಷ. ಪ್ರಿನ್ಸೆಸ್ ಷಾರ್ಲಟ್ ಮತ್ತು ಪ್ರಿನ್ಸ್ ಜಾರ್ಜ್ ಅವರು, ಪ್ರಿನ್ಸ್ ವಿಲಿಯಮ್ ಮತ್ತು ಪ್ರಿನ್ಸೆಸ್ ಕ್ಯಾಥೇರಿನ್ ಅವರ ಹಿರಿಯ ಮಕ್ಕಳು.

ಇದನ್ನೂ ಓದಿ | Queen Elizabeth | ಪ್ರಗತಿಶೀಲ, ಪ್ರಯೋಗಶೀಲ ವ್ಯಕ್ತಿತ್ವದ ಬ್ರಿಟನ್ ರಾಣಿ ಕ್ವೀನ್ ಎಲಿಜಬೆತ್

Continue Reading

ದೇಶ

Queen Elizabeth Funeral | ಬ್ರಿಟನ್‌ ರಾಣಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಲಂಡನ್‌ ತಲುಪಿದ ರಾಷ್ಟ್ರಪತಿ ಮುರ್ಮು

ಬ್ರಿಟನ್‌ ರಾಣಿ ಎಲಿಜಬೆತ್‌ II ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಲಂಡನ್‌ಗೆ ಆಗಮಿಸಿದ್ದಾರೆ. ಭಾರತ ಸರ್ಕಾರದ ಪರ (Queen Elizabeth Funeral) ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ.

VISTARANEWS.COM


on

queen
Koo

ಲಂಡನ್:‌ ಬ್ರಿಟನ್‌ ರಾಣಿಯಾಗಿದ್ದ ಎಲಿಜಬೆತ್‌ II ಅವರ (Queen Elizabeth Funeral) ಅಂತ್ಯಕ್ರಿಯೆಯಲ್ಲಿ ಭಾಗವಹಿಸುವ ಸಲುವಾಗಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಲಂಡನ್‌ಗೆ ಆಗಮಿಸಿದ್ದಾರೆ.

ಲಂಡನ್‌ನ ಗೇಟ್‌ವಿಕ್‌ ಏರ್‌ಪೋರ್ಟ್‌ನಲ್ಲಿ ಬಂದಿಳಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಸೋಮವಾರ ನಡೆಯಲಿರುವ ಎಲಿಜಬೆತ್‌ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ. ಭಾರತ ಸರ್ಕಾರದ ಪರ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ.

ರಾಷ್ಟ್ರಪತಿಯವರ ಜತೆಗೆ ವಿದೇಶಾಂಗ ಕಾರ್ಯದರ್ಶಿ ವಿನಯ್‌ ಕ್ವಾತ್ರಾ ತೆರಳಿದ್ದಾರೆ. ವಿಮಾನ ನಿಲ್ದಾಣದಲ್ಲಿ ಬ್ರಿಟನ್‌ಗೆ ಭಾರತೀಯ ಹೈಕಮೀಶನರ್‌ ಬರ ಮಾಡಿಕೊಂಡರು. ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಸೇರಿದಂತೆ ವಿಶ್ವದ ಪ್ರಮುಖ ನಾಯಕರು ಎಲಿಜಬೆತ್‌ ಅಂತ್ಯಕ್ರಿಯೆಯ ಸಂದರ್ಭ ಹಾಜರಿರಲಿದ್ದಾರೆ.

ಇದನ್ನೂ ಓದಿ: Queen Elizabeth II | ಕ್ವೀನ್‌ ಎಲಿಜಬೆತ್‌ ಅಂತ್ಯಸಂಸ್ಕಾರ ನಡೆಯುವುದು ಯಾವಾಗ, ಎಲ್ಲಿ?

Continue Reading

ದೇಶ

Queen Elizabeth Funeral | ಸೆ.19ರಂದು ಬ್ರಿಟನ್‌ ರಾಣಿ ಅಂತ್ಯಕ್ರಿಯೆಯಲ್ಲಿ ದ್ರೌಪದಿ ಮುರ್ಮು ಭಾಗಿ

ಸೆಪ್ಟೆಂಬರ್‌ 19ರಂದು ಕ್ವೀನ್‌ ಎಲಿಜಬೆತ್‌ (Queen Elizabeth Funeral) ಅವರ ಅಂತ್ಯಕ್ರಿಯೆ ನಡೆಯಲಿದ್ದು, ದ್ರೌಪದಿ ಮುರ್ಮು ಅವರು ಭಾರತ ಸರ್ಕಾರದ ಪರವಾಗಿ ಭಾಗವಹಿಸಲಿದ್ದಾರೆ.

VISTARANEWS.COM


on

Queen
Koo

ನವದೆಹಲಿ: ಸುದೀರ್ಘ ಅವಧಿಗೆ ಬ್ರಿಟನ್‌ ರಾಣಿಯಾಗಿದ್ದ ಎಲಿಜಬೆತ್‌ II ಅವರ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ನಡೆಯುತ್ತಿದೆ. ಸೆಪ್ಟೆಂಬರ್‌ ೧೯ರಂದು ಅವರ ಅಂತ್ಯಸಂಸ್ಕಾರ ನೆರವೇರಲಿದ್ದು, ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಸೇರಿ ಜಗತ್ತಿನ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಅದೇ ರೀತಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೂ ಕ್ವೀನ್‌ ಎಲಿಜಬೆತ್‌ II (Queen Elizabeth Funeral) ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ.

ಭಾರತ ಸರ್ಕಾರದ ಪರವಾಗಿ ದ್ರೌಪದಿ ಮುರ್ಮು ಅವರು ಲಂಡನ್‌ಗೆ ಪ್ರಯಾಣ ಬೆಳೆಸಲಿದ್ದಾರೆ. ಸೆಪ್ಟೆಂಬರ್‌ ೧೭ರಿಂದ ೧೯ರವರೆಗೆ ದ್ರೌಪದಿ ಮುರ್ಮು ಅವರು ಲಂಡನ್‌ನಲ್ಲಿ ನಡೆಯುವ ಅಂತ್ಯಸಂಸ್ಕಾರ ಪ್ರಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ.

ಸುಮಾರು ೭೦ ವರ್ಷಗಳ ಕಾಲ ಬ್ರಿಟನ್‌ ರಾಣಿಯಾಗಿದ್ದ ಕ್ವೀನ್‌ ಎಲಿಜಬೆತ್‌ II ಅವರು ಸೆಪ್ಟೆಂಬರ್‌ ೮ರಂದು ನಿಧನರಾಗಿದ್ದಾರೆ. ಈಗ ಅವರ ಉತ್ತರಾಧಿಕಾರಿಯನ್ನಾಗಿ ಚಾರ್ಲ್ಸ್‌ III ಅವರನ್ನು ನೇಮಿಸಲಾಗಿದೆ. ಬ್ರಿಟನ್‌ ರಾಣಿಯ ನಿಧನಕ್ಕೆ ಜಗತ್ತೇ ಕಂಬನಿ ಮಿಡಿದಿದೆ.

ಇದನ್ನೂ ಓದಿ | Queens Royal Fashion | ಹೀಗಿತ್ತು ಕ್ವೀನ್‌ ಎಲಿಜಬೆತ್‌ ಯೂನಿಕ್‌ ಸಿಗ್ನೇಚರ್‌ ಸ್ಟೈಲ್‌

Continue Reading

EXPLAINER

Britain Royal Family | ಬ್ರಿಟನ್ ರಾಯಲ್ ಫ್ಯಾಮಿಲಿಯ ಸ್ಟೋರಿಗಳು ಸಖತ್ ಇಂಟರೆಸ್ಟಿಂಗ್‌!

ಬ್ರಿಟನ್ ರಾಯಲ್ ಫ್ಯಾಮಿಲಿ (Britain Royal Family) ಬಗ್ಗೆ ತಿಳಿದುಕೊಂಡಷ್ಟು ಕುತೂಹಲ ಕತೆಗಳು ತೆರೆದುಕೊಳ್ಳುತ್ತವೆ. ಫ್ಯಾಮಿಲಿಯದ್ದೇ ಒಂದು ಇತಿಹಾಸವಾದರೆ, ಸದಸ್ಯರ ಬಗೆಗಿನ ಮಾಹಿತಿಗಳು ರಣರೋಚಕ….

VISTARANEWS.COM


on

Britain Family
Koo

ಕ್ವೀನ್ ಎಲಿಜಬೆತ್ ನಿಧನದ ಬಳಿಕ ಬ್ರಿಟನ್ ರಾಜಮನೆತನ(Britain Royal Family)ವು ಮತ್ತೆ ಸುದ್ದಿಯಲ್ಲಿದೆ. ಪ್ರಾಚೀನ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಬ್ರಿಟನ್‌ನಲ್ಲಿ ಈಗಲೂ ರಾಯಲ್ ಫ್ಯಾಮಿಲಿಗೇ ಅಗ್ರ ಗೌರವ. ಆಧುನಿಕ ರಾಷ್ಟ್ರಗಳಲ್ಲಿ ಜನರೇ ಪ್ರಭುಗಳು. ಬ್ರಿಟನ್‌ ಕೂಡ ಇದಕ್ಕೆ ಹೊರತಾಗಿಲ್ಲ. ಆದರೂ, ಅವರು ತಮ್ಮ ಕಿಂಗ್/ಕ್ವೀನ್, ರಾಯಲ್ ಫ್ಯಾಮಿಲಿ, ಸಂಪ್ರದಾಯಗಳು, ಪದ್ಧತಿಗಳು, ಆಚಾರ-ವಿಚಾರಗಳಿಗೆ ಬಹಳ ಮಹತ್ವ ನೀಡುತ್ತಾರೆ. ಸಕಾರಾತ್ಮಕ ನೆಲೆಯಲ್ಲಿ ರಾಯಲ್ ಫ್ಯಾಮಿಲಿ ಹೇಗೆ ಆದರ್ಶವಾಗಿದೆಯೋ, ರಾಯಲ್ ಫ್ಯಾಮಿಲಿಯ ಸದಸ್ಯರ ಹರಾಕಿರಿಗಳಿಂದ ಅಗೌರವವೂ ಬಂದಿದೆ. ರಾಜ ಮನೆತನದೊಳಗಿನ ಜಗಳಗಳು, ಸಣ್ಣತನ, ಈರ್ಷೆ, ಹೊಟ್ಟೆಕಿಚ್ಚು, ಕೊಲೆ, ಲೈಂಗಿಕ ಸಂಬಂಧಗಳು ಇತ್ಯಾದಿ ವಿಷಯಗಳು ರಾಯಲ್ ಫ್ಯಾಮಿಲಿಯನ್ನು ಸದಾ ಸ್ಪಾಟ್‌ಲೈಟ್‌ನಲ್ಲಿ ಇಟ್ಟಿರುತ್ತವೆ.

ಬ್ರಿಟನ್‌ನಲ್ಲಿ ಜನರೇ ನೇರ ಅಧಿಕಾರದಲ್ಲಿದ್ದರೂ ಬ್ರಿಟನ್ ಕ್ವೀನ್ ಅಥವಾ ಕಿಂಗ್‌ ಕೆಲಸವಾದರೂ ಏನು, ಜವಾಬ್ದಾರಿಗಳೇನು, ರಾಯಲ್ ಫ್ಯಾಮಿಲಿ ಇತಿಹಾಸ, ರಾಜ/ರಾಣಿಯರ ಸಂಬಂಧಗಳು, ಅಫೇರ್ಸ್, ಒಳ ಜಗಳ, ದಾಯಾದಿ ಕಲಹ ಇತ್ಯಾದಿ ಮಾಹಿತಿ ಇಲ್ಲಿದೆ….

ಬ್ರಿಟನ್ ಕಿಂಗ್ ಮಾಡುವುದಾದರೂ ಏನು?
ನಾವು ಆಧುನಿಕ ಜಗತ್ತಿನಲ್ಲಿದ್ದೇವೆ; ಜನರೇ ಆಡಳಿತಗಾರರು; ಅವರೇ ರಾಜರು. ಎಲ್ಲ ದೇಶಗಳಲ್ಲೂ ಇದೇ ನೀತಿ ಇದೆ. ಹಾಗಿದ್ದೂ, ಬ್ರಿಟನ್‌ನಲ್ಲಿ ರಾಜಮನೆತನ ಇನ್ನೂ ಅಧಿಕೃತವಾಗಿದೆ. ರಾಯಲ್ ಫ್ಯಾಮಿಲಿಗೆ ಎಲ್ಲಿಲ್ಲದ ಮರ್ಯಾದೆ. ಅಲ್ಲೂ ಪ್ರಜಾಪ್ರಭುತ್ವವಿದೆ. ಹಾಗಿದ್ದೂ, ರಾಜನಿಗೆ ಏನು ಕೆಲಸ, ರಾಯಲ್ ಫ್ಯಾಮಿಲಿಯಿಂದ ಏನು ಲಾಭ?
ಉತ್ತರ ತುಂಬ ಸಿಂಪಲ್- ರಾಜ ಹೆಸರಿಗಷ್ಟೇ. ರಾಜನಿಗಿರುವ ಎಲ್ಲ ಅಧಿಕಾರ ಸಾಂಕೇತಿಕ. ರಾಜಕೀಯವಾಗಿ ರಾಜ ತಟಸ್ಥ. ಒಂದಿಷ್ಟು ಸಾಂವಿಧಾನಿಕ ಕರ್ತವ್ಯಗಳನ್ನು ನಿರ್ವಹಿಸುತ್ತಾರೆ. ಅರ್ಥಾತ್, ಬ್ರಿಟನ್‌ನಲ್ಲಿ ರಿಯಲ್‌ ಪವರ್ಸ್ ಪ್ರಧಾನಿ ಹಾಗೂ ಆತನ ಮಂತ್ರಿ ಮಂಡಳದಲ್ಲಿದೆ! ಮತ್ತೊಂದು ಅರ್ಥದಲ್ಲಿ ಜನರೇ ರಾಜರು!

ಬ್ರಿಟನ್ ರಾಜಮನೆತನದ ಇತಿಹಾಸ
ಬ್ರಿಟನ್ ರಾಜಮನೆತನಕ್ಕೆ ಸುದೀರ್ಘ ಇತಿಹಾಸವಿದೆ. 9ನೇ ಶತಮಾನದಲ್ಲಿ ಬ್ರಿಟನ್ ರಾಜಮನೆತನ ಇತಿಹಾಸದ ಬೇರುಗಳಿವೆ. ವೆಸ್ಸೆಕ್ಸ್‌ನ ಆಂಗ್ಲೋ-ಸ್ಯಾಕ್ಸೋನ್ ರಾಜ್ಯವೇ ಮುಂದೆ ಇಂಗ್ಲಿಷ್ ರಾಜ್ಯವಾಗಿ ಉದಯವಾಯಿತು. ಈಗಿರುವ ಬ್ರಿಟನ್ ರಾಜಮನೆತನದ ಇತಿಹಾಸವು 1707ರಿಂದ ಆರಂಭವಾಗುತ್ತದೆ. ಈ ರಾಯಲ್ ಫ್ಯಾಮಿಲಿಗೂ ಮೊದಲು ಇಂಗ್ಲೆಂಡ್, ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ಪ್ರತ್ಯೇಕ ರಾಜ್ಯಗಳಾಗಿದ್ದವು. ಆ ಬಳಿಕ ಮೂರು ರಾಜ್ಯಗಳು ಜತೆಯಾಗಿ ಬ್ರಿಟನ್ ರಾಜ್ಯವು ಸೃಷ್ಟಿಯಾಯಿತು. ಜತೆಗೇ ರಾಯಲ್ ಫ್ಯಾಮಿಲಿ ಕೂಡ.

ಐದನೇ ರಾಜ ಜಾರ್ಜ್ (1865-1936) ಮತ್ತು ಮೇರಿ ಆಪ್ ಟೆಕ್ ಅವರು ಎರಡನೇ ಎಲಿಜಬೆತ್ ಅವರ ಅಜ್ಜ ಮತ್ತು ಅಜ್ಜಿ. ಇವರಿಗೆ ಆರು ಮಕ್ಕಳು. ಈ ಪೈಕಿ ನಾಲ್ವರಿಗೆ ಮಕ್ಕಳಿದ್ದರೆ, ಇಬ್ಬರಿಗೆ ಇರಲಿಲ್ಲ. ಹಿರಿಯ ಮಗ 8ನೇ ಕಿಂಗ್ ಎಡ್ವರ್ಡ್ 1936ರಲ್ಲಿ ತಂದೆಯ ನಂತರ, ಬ್ರಿಟನ್ ರಾಜನಾದ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಮೊನ್ನೆ ನಿಧನರಾದ ಎರಡನೇ ಎಲಿಜಬೆತ್ ಅವರ ದೊಡ್ಡಪ್ಪ. ರಾಣಿ ಎಲಿಜಬೆತ್ ಅವರ ಅಪ್ಪ ಆರನೇ ಕಿಂಗ್ ಜಾರ್ಜ್ ಅವರು ಕಿಂಗ್ ಎಡ್ವರ್ಡ್ ಸಹೋದರ.

ವಿಚ್ಛೇದಿತಳಿಗಾಗಿ ಸಿಂಸಾಹನ ತೊರೆದ ಎಡ್ವರ್ಡ್!
ಎಂಟನೇ ಕಿಂಗ್ ಎಡ್ವರ್ಡ್ ಅಮೆರಿಕದ ವಿಚ್ಛೇದಿತ ವಾಲಿಸ್ ಸಿಂಪ್ಸನ್ ಅವರನ್ನು ಮದುವೆಯಾಗಲು ನಿರ್ಧರಿಸಿದರು. ಹಾಗಾಗಿ, ಅವರು ರಾಯಲ್ ಫ್ಯಾಮಿಲಿ ಕರ್ತವ್ಯಗಳಿಂದ ಮುಕ್ತರಾಗಬೇಕ್ದಾದರಿಂದ, ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳುವುದ್ಕಕಾಗಿ ಸಿಂಹಾಸನವನ್ನು ತೊರೆದರು.

ಎಲಿಜಬೆತ್ ಅಪ್ಪ ರಾಜನಾದ!
ರಾಜನಾಗಿದ್ದ ತನ್ನ ಪ್ರೀತಿಗಾಗಿ 8ನೇ ಎಡ್ವರ್ಡ್ ಕಿಂಗ್ ಸಿಂಹಾಸನ ತೊರೆದ ಬಳಿಕ, ಅವರ ಸಹೋದರ ಪ್ರಿನ್ಸ್‌ 6ನೇ ಜಾರ್ಜ್ ಬ್ರಿಟನ್ ರಾಜನಾದ. ಮುಂದೆ 15 ವರ್ಷಗಳ ಕಾಲ ಬ್ರಿಟನ್ ರಾಜಮನೆತನದ ಜವಾಬ್ದಾರಿಗಳನ್ನು ನಿರ್ವಹಿಸಿದ. 6ನೇ ಕಿಂಗ್ ಜಾರ್ಜ್ ಮತ್ತು ಪತ್ನಿ ಎಲಿಜಬೆತ್‌ ಅವರಿಗೆ ಇಬ್ಬರು ಹೆಣ್ಣುಮಕ್ಕಳು ಜನಿಸಿದರು. ಆ ಪೈಕಿ ಮೊದಲನೆಯವಳೇ ಎರಡನೇ ಎಲಿಜಬೆತ್(ಮೊನ್ನೆಯಷ್ಟೇ ನಿಧನರಾದರು) ಹಾಗೂ ಅವರ ಸಹೋದರಿ ಮಾರ್ಗರೇಟ್.

2ನೇ ಎಲಿಜಬೆತ್ ರಾಜ್ಯಭಾರ ಶುರು
ರಾಜರಾಗಿದ್ದ 6ನೇ ಕಿಂಗ್ ಜಾರ್ಜ್ ಅವರು 1952ರಲ್ಲಿ ನಿಧನರಾದರು. ಗಂಡುಮಕ್ಕಳು ಇಲ್ಲದ್ದರಿಂದ ಸಹಜವಾಗಿಯೇ ಎರಡನೇ ಎಲಿಜಬೆತ್ ಉತ್ತರಾಧಿಕಾರಿಯಾದರು. ಹೀಗಿದ್ದೂ ಉತ್ತರಾಧಿಕಾರಿಯಾಗುವ ಅನುಮಾನಗಳಿದ್ದವು. ಆದರೆ, ಬ್ರಿಟನ್ ಇತಿಹಾಸದಲ್ಲಿ ಸಹಜ ಉತ್ತರಾಧಿಕಾರಿಯೇ ರಾಜ ಅಥವಾ ರಾಣಿಯಾಗುವುದು ನಡೆದುಕೊಂಡು ಬಂದಿದ್ದರಿಂದ, ಅಂತಿಮವಾಗಿ 2ನೇ ಕ್ವೀನ್ ಎಲಿಜಬೆತ್ 1952 ಫೆಬ್ರವರಿ 6ರಂದು ಬ್ರಿಟನ್ ಸಿಂಹಾಸನವೇರಿದರು. ಎಡಿನ್‌ಬರ್ಗ್ ಡ್ಯೂಕ್ ಪ್ರಿನ್ಸ್ ಫಿಲಿಪ್ ಅವರನ್ನು ವಿವಾಹವಾದರು. ಇವರಿಗೆ ನಾಲ್ವರು ಮಕ್ಕಳು. ಮೂರನೇ ಪ್ರಿನ್ಸ್ ಚಾರ್ಲ್ಸ್(ಹಾಲಿ ಬ್ರಿಟನ್ ರಾಜ), ಪ್ರಿನ್ಸೆಸ್ ರಾಯಲ್ ಆ್ಯನಿ, ಪ್ರಿನ್ಸ್ ಆಂಡ್ರೋ ಮತ್ತು ಪ್ರಿನ್ಸ್ ಎಡ್ವರ್ಡ್.

ಈಗ ಮೂರನೇ ಚಾರ್ಲ್ಸ್ ರಾಜ
ತಮ್ಮ 73ನೇ ವಯಸ್ಸಿನಲ್ಲಿ ರಾಜನಾಗಿದ್ದಾರೆ ಮೂರನೇ ಚಾರ್ಲ್ಸ್. ಅಲ್ಲಿ ತನಕ ಅವರು ಬ್ರಿಟನ್‌ನ ಪ್ರಿನ್ಸ್ ಆಗಿದ್ದರು! ತಾಯಿ ಎರಡನೇ ಎಲಿಜಬೆತ್ ಅವರು ಬ್ರಿಟನ್ ರಾಜಮನೆತನದಲ್ಲಿ ಅತಿ ದೀರ್ಘಕಾಲದ ಆಡಳಿತ ನಡೆಸಿದ ಕೀರ್ತಿ ಪಾತ್ರರಾಗಿದ್ದಾರೆ. ಹಾಗಾಗಿ, ಚಾರ್ಲ್ಸ್ ತಮ್ಮ ಸರದಿಗಾಗಿ ದೀರ್ಘಸಮಯದವರೆಗೆ ಕಾಯಬೇಕಾಯಿತು!

ಮದ್ವೆ ಮುಂಚೆ ಚಾರ್ಲ್ಸ್‌ಗೆ ಅಫೇರ್
ಈಗ ರಾಜನಾಗಿರುವ ಮೂರನೇ ಕಿಂಗ್ ಚಾರ್ಲ್ಸ್ ಬಗ್ಗೆ ನಾನಾ ಕತೆಗಳಿವೆ. ಈ ಯಾರು ಚಾರ್ಲ್ಸ್ ಯಾರು ಎಂದರೆ, ಸುರಸುಂದರಿ ಡಯಾನಾಳ ಗಂಡ. ಮದುವೆ ಮುಂಚೆಯೇ ಚಾರ್ಲ್ಸ್‌, ವಿವಾಹಿತೆ ಕ್ಯಾಮಿಲ್ಲಾ ಪಾರ್ಕರ್ ಜತೆ ಅಫೇರ್ ಇಟ್ಟುಕೊಂಡಿದ್ದರು. ಈ ಬಗ್ಗೆ ತಾಯಿ ಎರಡನೇ ಎಲಿಜಬೆತ್ ಬುದ್ಧಿ ಹೇಳಿದ್ದಳು. ರಾಜಮನೆತನದಲ್ಲಿ ಈ ಬಗ್ಗೆ ಸಾಕಷ್ಟು ಕಿರಿಕಿರಿಯಾಗಿತ್ತು. ಆದರೆ, ಅವರೇನೂ ಈ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. 1981ರಲ್ಲಿ ಡಯಾನಾ ಅವರನ್ನು ಮದುವೆಯಾದರು. ಅಂತಿಮವಾಗಿ ಚಾರ್ಲ್ಸ್ ಮತ್ತು ಡಯಾನಾ 1996ರ ಡೈವೋರ್ಸ್ ಪಡೆದುಕೊಂಡರು. ಇದಾದ ವರ್ಷದಲ್ಲೇ 1997ರಲ್ಲಿ ಪ್ಯಾರಿಸ್‌ನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಡಯಾನಾ ನಿಧನರಾದರು. ಕಾರಿನಲ್ಲಿ ಆಕೆಯ ಗೆಳೆಯ ದೋದಿ ಅಲ್ ಫಯಾದ್ ಕೂಡ ಇದ್ದ. 2005ರಲ್ಲಿ ಚಾರ್ಲ್ಸ್, ಕ್ಯಾಮಿಲ್ಲಾ ಪಾರ್ಕರ್ ಅವರನ್ನು ವಿವಾಹವಾದರು.

ಡಯಾನಳದ್ದೇ ಬೇರೆಯ ಕತೆ
ಈಗ ಬ್ರಿಟನ್‌ ರಾಜನಾಗಿರುವ ಕಿಂಗ್ ಚಾರ್ಲ್ಸ್ ಅವರ ಮೊದಲ ಪತ್ನಿ ಡಯಾನಾ. ಬಹುಶಃ ಬ್ರಿಟನ್ ಕಂಡ ಅತ್ಯಂತ ವರ್ಣ ರಂಜಿತ ಪ್ರಿನ್ಸೆಸ್. ಮದುವೆ, ಅಫೇರ್, ಮಕ್ಕಳು, ಆಕ್ಟಿವಿಸಮ್, ನೇರ ನಿಷ್ಠುರ ನಡೆ ಮತ್ತಿತರ ಕಾರಣಗಳಿಂದಾಗಿ ಡಯಾನ ಜಗತ್ತಿನಾದ್ಯಂತ ಸದಾ ಸುದ್ದಿಯಲ್ಲಿರುತ್ತಿದ್ದರು. ರಾಜಮನೆತನದ ಹೊರಗಿನವರಾದ ಡಯಾನಾ, 1981ರಲ್ಲಿ ಪ್ರಿನ್ಸ್ ಚಾರ್ಲ್ಸ್ ಅವರನ್ನು ವಿವಾಹವಾದರು. ಕ್ವೀನ್ ಎಲೆಜಬೆತ್ ಪರವಾಗಿ ರಾಯಲ್ ಕರ್ತವ್ಯಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊತ್ತರು. ಸಾಮಾಜಿಕ ಕೆಲಸಗಳಿಂದಾಗಿ ಬಹಳ ಬೇಗ ಸುದ್ದಿಯಾಗತೊಡಗಿದರು. ರಾಜಮನೆತನ ಪಾಲಿಸಿಕೊಂಡ ಬಂದ ಅನೇಕ ಪದ್ಧತಿಗಳನ್ನು ಮುರಿದು ತಮ್ಮದೇ ಆದ ರೀತಿಯಲ್ಲಿ ಮುನ್ನುಗ್ಗುತ್ತಿದ್ದರು. ಆ ಕಾರಣಕ್ಕಾಗಿಯೇ ಅವರು ಎಲ್ಲರ ಅಚ್ಚುಮೆಚ್ಚಿನವರಾದರು. ಆದರೆ, ಡಯಾನಾ ಅವರು ಅನುಸರಿಸುತ್ತಿರುವ ರೀತಿ ನೀತಿ, ರಾಜಮನೆತನಕ್ಕೆ ಹೊಂದಾಣಿಕೆಯಾಗುತ್ತಿರಲಿಲ್ಲ. ದಿನಗಳೆದಂತೆ ಡಯಾನಾ ಮತ್ತು ರಾಯಲ್ ಫ್ಯಾಮಿಲಿಯ ನಡುವಿನ ಕಂದಕ ಹೆಚ್ಚುತ್ತಲೇ ಹೋಯಿತು.

ಚಾರ್ಲ್ಸ್ ಮತ್ತು ಡಯಾನಾ ದಂಪತಿಗೆ ಪ್ರಿನ್ಸ್ ವಿಲಿಯಂ ಮತ್ತು ಹ್ಯಾರಿ ಮಕ್ಕಳು. ಮೂರನೇ ಕಿಂಗ್ ಚಾರ್ಲ್ಸ್ ನಂತರ ಉತ್ತರಾಧಿಕಾರಿಯಾಗಿ ಪ್ರಿನ್ಸ್ ವಿಲಿಯಂ ಅವರನ್ನು ಈಗಾಗಲೇ ನೇಮಕ ಮಾಡಿಕೊಳ್ಳಲಾಗಿದೆ. ಸಹೋದರ ಪ್ರಿನ್ಸ್ ಹ್ಯಾರಿ, ಹಾಲಿವುಡ್ ನಟಿ ಮೇಘನ್ ಮಾರ್ಕೆಲ್ ಅವರನ್ನು ವಿವಾಹವಾಗಿ ರಾಯಲ್ ಫ್ಯಾಮಿಲಿಯಿಂದ ಹೊರ ಬಂದಿದ್ದಾರೆ.

ರಾಯಲ್ ಫ್ಯಾಮಿಲಿಯ ಮೇಲೆ ಡಯಾನಾ ಅವರ ಪ್ರಭಾವ ಗಾಢವಾಗಿತ್ತು. ಪ್ಯಾರಿಸ್‌ನಲ್ಲಿ ರಸ್ತೆ ಅಪಘಾತದಲ್ಲಿ ನಿಧನರಾದರು. ಇಡೀ ಜಗತ್ತೇ ಡಯಾನಾ ಸಾವಿಗೆ ಕಂಬನಿಗರೆಯಿತು. ಆಕೆಯ ನಿಧನದ ಬಳಿಕ, ಅಫೇರ್ಸ್ ಮತ್ತಿತರ ವಿಷಯಗಳು ಟ್ಯಾಬ್ಲಾಯ್ಡ್‌ಗಳಿಗೆ ಆಹಾರವಾಯಿತಾದರೂ, ಸಾಮಾಜಿಕ ಕಾರ್ಯಗಳು ತಮ್ಮ ಸ್ನಿಗ್ಧ ಸೌಂದರ್ಯದಿಂದಾಗಿ ಡಯಾನಾ ಇಂದಿಗೂ ಜಗತ್ತಿನ ಕಣ್ಮಣಿ.

ರಾಯಲ್ ಫ್ಯಾಮಿಲಿ ಕ್ರಿಟಿಕ್ ಡಯಾನಾಳ ಮಗ
ಪ್ರಿನ್ಸ್ ವಿಲಿಯಂ ಮತ್ತು ಪ್ರಿನ್ಸ್ ಹ್ಯಾರಿ ಡಯಾನಾಳ ಇಬ್ಬರು ಮಕ್ಕಳು. ಪ್ರಿನ್ಸ್ ವಿಲಿಯಂ, ಮೂರನೇ ಕಿಂಗ್ಸ್ ಚಾರ್ಲ್ಸ್ ನಂತರ ಬ್ರಿಟನ್ ರಾಜನಾಗಲಿದ್ದಾರೆ. ಆದರೆ, ಅವರ ಸಹೋದರ ಪ್ರಿನ್ಸ್ ಹ್ಯಾರಿ ಮಾತ್ರ ಥೇಟ್ ಅವರ ಅಮ್ಮನ ಹಾಗೆ. ಹ್ಯಾರಿ ಮದುವೆಯಾಗಿದ್ದು ರಾಜಮನೆತನದ ಹೊರಗಿನ ಹುಡುಗಿಯನ್ನು. ಹಾಲಿವುಡ್ ನಟಿ ಮೇಘನ್ ಮಾರ್ಕೆಲ್. ಇಬ್ಬರು ಲವ್ ಮಾಡಿ, ಪ್ರೀತಿಸಿ ಮದುವೆಯಾದರು. ಸಹಜವಾಗಿಯೇ ಮೇಘನ್ ರಾಜಮನೆತನದ ರೀತಿ ರಿವಾಜುಗಳಿಗೆ ಹೊಂದಿಕೊಳ್ಳುವುದು ಕಷ್ಟವಾಯಿತು. ರಾಯಲ್ ಫ್ಯಾಮಿಲಿಯೂ ಅಷ್ಟು ಸಲೀಸಾಗಿ ಮೇಘನ್ ಅವರನ್ನು ಬಿಟ್ಟುಕೊಳ್ಳಲಿಲ್ಲ. ಡಯಾನಾ ಎದುರಿಸಿದ ಸ್ಥಿತಿಯನ್ನೇ ಮೇಘನ್ ಕೂಡ ಎದುರಿಸಿದರು. ಮೊದಲೇ ರಾಯಲ್ ಫ್ಯಾಮಿಲಿಯ ಕಾರ್ಯವೈಖರಿ ಬಗ್ಗೆ ತುಸು ಕ್ರಿಟಿಕಲ್ ಆಗಿದ್ದ ಪ್ರಿನ್ಸ್ ಹ್ಯಾರಿ, ಹೆಂಡತಿ ಜತೆಗೂಡಿ ಅಮೆರಿಕದ ಕ್ಯಾಲಿಫೋರ್ನಿಯಾಗೆ ವಲಸೆ ಹೋದರು, ರಾಯಲ್ ಫ್ಯಾಮಿಲಿಯ ಎಲ್ಲ ಕರ್ತವ್ಯ, ಜವಾಬ್ದಾರಿಗಳಿಂದ ಕಳಚಿಕೊಂಡರು.

ಟಾಪ್‌ಲೆಸ್ ಆಗಿದ್ದ ವಿಲಿಯಂ ಪತ್ನಿ
ಪ್ರಿನ್ಸ್ ವಿಲಿಯಂ. ಡಯಾನಾ-ಚಾರ್ಲ್ಸ್ ಅವರ ಹಿರಿಯ ಪುತ್ರ. ಮುಂದಿನ ಉತ್ತರಾಧಿಕಾರಿಯೂ ಹೌದು. 2012ರಲ್ಲಿ ವಿಚಿತ್ರ ಕಾರಣಕ್ಕೆ ವಿಲಿಯಂ ಮತ್ತು ಪತ್ನಿ ಕೇಟ್ ಮಿಡ್ಲಟನ್ ಸುದ್ದಿಯಲ್ಲಿದ್ದರು. ಕೇಟ್ ಮಿಡ್ಲಟನ್ ಅವರ ಟಾಪ್‌ಲೆಸ್ ಫೋಟೊ ಫ್ರೆಂಚ್ ಮ್ಯಾಗ್‌ಜಿನ್‌ನಲ್ಲಿ ಪ್ರಕಟವಾಗಿತ್ತು. ರಾಯಲ್ ಫ್ಯಾಮಿಲಿಗೆ ಇದು ಇರಿಸುಮುರಿಸು ತಂದಿತು. ಪ್ರಿನ್ಸ್ ವಿಲಿಯಂ ಕೆಂಡಾಮಂಡಲವಾದರು. ಮ್ಯಾಗ್‌ಜಿನ್ ವಿರುದ್ಧ ದೂರು ಕೂಡ ದಾಖಲಿಸಲಾಯಿತು.

ಮೈದುನ ಹ್ಯಾರಿ ಮತ್ತು ಅವರ ಪತ್ನಿ ಮೇಘನ್ ಜತೆ ಕೇಟ್ ಮಿಡ್ಲಟನ್ ಅವರ ಸಂಬಂಧಗಳು ಚೆನ್ನಾಗಿಲ್ಲ ಎಂಬ ಗುಸು ಗುಸುಗಳಿದ್ದವು. ಆದರೆ, ಈ ಬಗ್ಗೆ ರಾಯಲ್ ಫ್ಯಾಮಿಲಿಯೇನೂ ಸ್ಪಷ್ಟನೆ ಕೊಡಲು ಹೋಗಲಿಲ್ಲ. ಕೇಟ್ ಮಿಡ್ಲಟನ್ ಚೊಚ್ಚಲು ಬಸುರಿಯಾಗಿದ್ದಾಗ ಅವರನ್ನು ನೋಡಿಕೊಳ್ಳಲು ನರ್ಸ್ ಒಬ್ಬರನ್ನು ನೇಮಿಸಲಾಗಿತ್ತು. ಆಕೆ ಆತ್ಮಹತ್ಯೆ ಮಾಡಿಕೊಂಡಳು. ಆ ಬಗ್ಗೆ ಸಾಕಷ್ಟು ಪುಕಾರುಗಳೆದ್ದವು.

ಬಾಲಕಿ ಮೇಲೆ ಪ್ರಿನ್ಸ್ ಆ್ಯಂಡ್ರೋ ರೇಪ್?
ಕ್ವೀನ್ ಎಲಿಜಬೆತ್ ಅವರ ಎರಡನೇ ಪುತ್ರ ಆ್ಯಂಡ್ರೋ ಅವರಿಂದಾಗಿ ಇಡೀ ರಾಜಮನೆತನವು ತಲೆ ತಗ್ಗಿಸುವಂತಾಯಿತು. ಪ್ರಿನ್ಸ್ ಆ್ಯಂಡ್ರೋ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪವು 2019ರಲ್ಲಿ ಕೇಳಿ ಬಂತು. ಇದರಿಂದಾಗಿ ಅವರಿಗೆ ನೀಡಲಾಗಿದ್ದ ಡ್ಯೂಕ್ ಆಫ್ ಯಾರ್ಕ್ ಪದವಿಯನ್ನು ಕಿತ್ತುಕೊಳ್ಳಲಾಯಿತು, ಜತೆಗೇ ರಾಯಲ್ ಹೈನೆಸ್ ಬಳಸುವುದನ್ನು ನಿರ್ಬಂಧಿಸಲಾಯಿತು. ಈ ಆರೋಪದಿಂದಾಗಿ ಅವರು ಸಿಂಹಾಸನಕ್ಕೇರುವ ಹಕ್ಕನ್ನು ಕಳೆದುಕೊಂಡರು.

ರಾಜ ಶುದ್ಧಾನುಶುದ್ಧನಾಗರಿಬೇಕು!
ಬ್ರಿಟನ್ ಮಾತ್ರವಲ್ಲ, ಬಹುತೇಕ ಪಶ್ಚಿಮ ರಾಷ್ಟ್ರಗಳು ಮುಕ್ತ ಸಮಾಜ, ಸಂಸ್ಕೃತಿಯನ್ನು ಹೊಂದಿವೆ. ಮದುವೆ, ಸೆಕ್ಸ್‌ಗೆ ಸಂಬಂಧಿಸಿದಂತೆ ಜನರು ಮುಕ್ತ ಮನಸ್ಸು ಹೊಂದಿರುತ್ತಾರೆ. ಆದರೆ, ಅದೇ ತಮ್ಮನ್ನಾಳುವ ರಾಜ ಅಥವಾ ಸರ್ಕಾರದ ಮುಖ್ಯಸ್ಥರು ಮಾತ್ರ ಈ ವಿಷಯದಲ್ಲಿ ಶುದ್ಧ ಚಾರಿತ್ರ್ಯವನ್ನು ಹೊಂದಿರಬೇಕು ಎಂದು ಬಯಸುತ್ತಾರೆ. ಇದಕ್ಕೆ ಬ್ರಿಟನ್ ರಾಜಮನೆತನವೂ ಹೊರತಲ್ಲ. ಸಂಪ್ರದಾಯಗಳು, ಪದ್ಧತಿಗಳ ಅಡಿಯಲ್ಲಿ ರಾಯಲ್ ಫ್ಯಾಮಿಲಿಯ ಸದಸ್ಯರು ಇರಬೇಕಾಗುತ್ತದೆ.

ಸಂಪ್ರದಾಯಬದ್ಧವಾಗಿ ನಡೆದುಕೊಳ್ಳದೇ ಹೋದರೆ ಜನರ ಬಾಯಿಗೆ ಆಹಾರವಾಗಬೇಕಾಗುತ್ತದೆ. ಬಹುಶಃ ಇದಕ್ಕೆ ಡಯಾನಾಗಿಂತಲೂ ದೊಡ್ಡ ಉದಾಹರಣೆ ಮತ್ತೊಬ್ಬರಿಲ್ಲ. ಚೆಂದುಳ್ಳ ಚೆಲುವೆ ಡಯನಾ ತಾನೆಷ್ಟು ಸುಂದರಿಯೋ ಅಷ್ಟೇ ಹೃದಯವಂತಳು ಹೌದು. ರಾಯಲ್ ಫ್ಯಾಮಿಲಿಯ ಪದ್ಧತಿಗಳನ್ನು ಮೀರಿ ಆಕೆ, ಜನರನ್ನು ತಲುಪಲು ಪ್ರಯತ್ನಿಸಿದಳು. ಅದೇ ಅವಳಿಗೆ ಮುಳುವಾಯಿತು. ಆಕೆಯ ಇಷ್ಟ, ಕಷ್ಟಗಳಿಗೆ ಬೆಲೆ ಇರಲಿಲ್ಲ. ಅಂತಿಮವಾಗಿ ಟ್ಯಾಬ್ಲಾಯ್ಡ್ ಪತ್ರಿಕೆಗಳಿಗೆ ಆಕೆಯ ಪ್ರತಿಯೊಂದು ಚಲನ ವಲನವು ಆಹಾರವಾಯಿತು.

ಅದೇ ರೀತಿಯ ಸ್ಥಿತಿಯು ಪ್ರಿನ್ಸ್ ಹ್ಯಾರಿ ಅವರ ಪತ್ನಿ ಮತ್ತು ನಟಿ ಮೇಘನ್ ಕೂಡ ಎದುರಿಸುವಂತಾಯಿತು. ಇವರೂ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ರಾಯಲ್ ಫ್ಯಾಮಿಲಿಗೆ ಎಂಟ್ರಿ ಕೊಟ್ಟ ಮೇಲೆ ಅಲ್ಲಿನ ರೀತಿ ರಿವಾಜುಗಳಂತೆಯೇ ಎಲ್ಲವನ್ನು ಮಾಡಬೇಕಿತ್ತು. ಅಂತಿಮವಾಗಿ ತನ್ನ ತಾಯಿಗೆ ಬಂದ ಸ್ಥಿತಿ ತನ್ನ ಹೆಂಡತಿಗೂ ಬರಬಾರದು ಎಂದು ನಿರ್ಧರಿಸಿದ ಪ್ರಿನ್ಸ್ ಹ್ಯಾರಿ ಹೆಂಡತಿಯೊಂದಿಗೆ ಲಂಡನ್ ತೊರೆದು ಅಮೆರಿಕಕ್ಕೆ ಹೋಗಿ ನೆಲೆಸಿದರು.

ನೆಕ್ಸ್ಟ್ ಕಿಂಗ್/ಕ್ವೀನ್ ಆಗುವ ಸಾಲಿನಲ್ಲಿ ಯಾರು?
73 ವರ್ಷದ ಮೂರನೇ ಕಿಂಗ್ ಚಾರ್ಲ್ಸ್ ರಾಜನಾಗಿದ್ದಾರೆ. ಅವರ ನಂತರ ಅವರ ಹಿರಿಯ ಪುತ್ರ ಪ್ರಿನ್ಸ್ ವಿಲಿಯಂ ರಾಜನಾಗುತ್ತಾರೆ. ಒಂದೊಮ್ಮೆ ಅವರು ಸಿಂಹಾಸನ ಏರದಿದ್ದರೆ ಅವರ ಮೂವರ ಮಕ್ಕಳ ಪೈಕಿ ಹಿರಿಯ ಮಗ ಪ್ರಿನ್ಸ್ ಜಾರ್ಜ್(9 ವರ್ಷ) ಆಗಬಹುದು. ಮುಂದಿನ ತಲೆಮಾರಿನ ಪಟ್ಟಿಯಲ್ಲಿ ಪ್ರಿನ್ಸೆಸ್ ಷಾರ್ಲೆಟ್(7 ವರ್ಷ), ಪ್ರಿನ್ಸ್ ಲೂಯಿಸ್(4 ವರ್ಷ) ಹಾಗೂ ಪ್ರಿನ್ಸ್ ಹ್ಯಾರಿ ಮತ್ತು ಪ್ರಿನ್ಸೆಸ್ ಮೇಘನ್ ಅವರ ಮಕ್ಕಳಾದ ಆರ್ಚಿ ಹ್ಯಾರಿಸನ್ ಮೌಂಟ್‌ಬ್ಯಾಟನ್ (3 ವರ್ಷ) ಮತ್ತು ಲಿಲೆಬೆಟ್ ‘ಲಿಲ್’ ಡಯಾನಾ(1 ವರ್ಷ) ಇದ್ದಾರೆ.

ಇದನ್ನೂ ಓದಿ | Queen Elizabeth Death | ಬ್ರಿಟನ್ ರಾಣಿ ಎಲಿಜಬೆತ್ ಬಗ್ಗೆ ತೆರೆಕಂಡ ಸಿನಿಮಾಗಳಿವು!

Continue Reading
Advertisement
Jain Diksha
ಕರ್ನಾಟಕ6 mins ago

Jain Diksha: ಕೋಟ್ಯಂತರ ರೂ. ಆಸ್ತಿ ತ್ಯಜಿಸಿ ಜೈನ ಸನ್ಯಾಸ ದೀಕ್ಷೆ ಪಡೆದ ಬೆಂಗಳೂರಿನ ಉದ್ಯಮಿಯ ಪತ್ನಿ, 11 ವರ್ಷದ ಮಗ!

Goldy Brar
ದೇಶ10 mins ago

Goldy Brar: ಸಿಧು ಮೂಸೆವಾಲಾ ಹತ್ಯೆ ರೂವಾರಿ ಗೋಲ್ಡಿ ಬ್ರಾರ್‌ ಅಮೆರಿಕದಲ್ಲಿ ಕೊಲೆ; ಕೊಂದಿದ್ದು ಯಾರು?

Hassan Pen Drive case Siddaramaiah writes to PM Modi seeking cancellation of Prajwal Revanna diplomatic passport
ಹಾಸನ19 mins ago

Hassan Pen Drive Case: ಪ್ರಜ್ವಲ್‌ ರೇವಣ್ಣರ ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌ ರದ್ದು ಕೋರಿ ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಪತ್ರ!

Prajwal Revanna related post By Rashmi Goutham
ಕ್ರೈಂ20 mins ago

Prajwal Revanna: ಮಹಿಳೆ ಹಸಿದಾಗ ಬಾಯಿಗೆ ಆಹಾರ ಹಾಕಿ…ʻಅದಲ್ಲʼ! ನಟಿಯ ಪೋಸ್ಟ್‌ ವೈರಲ್‌!

Diabetic Chutney
ಲೈಫ್‌ಸ್ಟೈಲ್23 mins ago

Diabetic Chutney: ಡಯಬಿಟಿಕ್‌ ಚಟ್ನಿ ನಿಮಗೆ ಗೊತ್ತೆ? ಇದು ಮಧುಮೇಹಿಗಳಿಗೆ ಉಪಯುಕ್ತ

Bathroom Cleaning Tips
ಲೈಫ್‌ಸ್ಟೈಲ್28 mins ago

Bathroom Cleaning Tips: ಬಾತ್‌ರೂಮ್‌ ಕನ್ನಡಿ ಕೊಳಕಾಗಿದೆಯೇ? ಚಿಂತೆ ಬಿಡಿ, ಈ ಟಿಪ್ಸ್ ಬಳಸಿ

Kalamma Devi Pooja Mahotsava in Kampli
ಧಾರ್ಮಿಕ32 mins ago

Ballari News: ಬಾಯಿಯೊಳಗೆ ತ್ರಿಶೂಲ; ಬೆನ್ನಿಗೆ ಕೊಕ್ಕೆ ಕಟ್ಟಿಕೊಂಡು ಕಾರು, ರಿಕ್ಷಾ ಎಳೆದ ಭಕ್ತರು!

Union Minister Pralhad Joshi election campaign in Sattur
ಕರ್ನಾಟಕ43 mins ago

Lok Sabha Election: 60 ವರ್ಷ ದೇಶವಾಳಿದ ನಕಲಿ ಗಾಂಧಿ ಕಂಪನಿಯಲ್ಲಿ ಪ್ರಧಾನಿ ಅಭ್ಯರ್ಥಿಗೆ ಬರ: ಜೋಶಿ ಲೇವಡಿ

IPL 2024
ಕ್ರೀಡೆ46 mins ago

IPL 2024: ನಾಯಕ ಹಾರ್ದಿಕ್​ ಪಾಂಡ್ಯ ಸೇರಿ ಮುಂಬೈ ತಂಡದ ಆಟಗಾರರಿಗೆ ಬಿತ್ತು ಭಾರೀ ದಂಡ

Salman Khan
ಸಿನಿಮಾ55 mins ago

Salman Khan: ಸಲ್ಮಾನ್‌ ಖಾನ್‌ ಮನೆ ಮೇಲೆ ಫೈರಿಂಗ್‌ ಕೇಸ್‌; ಪೊಲೀಸ್‌ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for April 30 2024
ಭವಿಷ್ಯ1 day ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20242 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20242 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20243 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20243 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20243 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20243 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest3 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

ಟ್ರೆಂಡಿಂಗ್‌