Site icon Vistara News

Lalit Modi: ಸಿದ್ಧಾರ್ಥ್‌ ಮಲ್ಯ ವಿವಾಹ ಸಮಾರಂಭದಲ್ಲಿ ಕಾಣಿಸಿಕೊಂಡ ಐಪಿಎಲ್​ನ ಮಾಜಿ ಅಧ್ಯಕ್ಷ ಲಲಿತ್ ಮೋದಿ

Lalit Modi

Lalit Modi

ಲಂಡನ್‌: ಮದ್ಯದ ದೊರೆ, ಆರ್​ಸಿಬಿ ಫ್ರಾಂಚೈಸಿಯ ಮಾಜಿ ಮಾಲಿಕ ವಿಜಯ್‌ ಮಲ್ಯ (Vijay Mallya) ಅವರ ಪುತ್ರ ಸಿದ್ಧಾರ್ಥ್‌ ಮಲ್ಯ (Siddharth Mallya) ತಮ್ಮ ಬಹುಕಾಲದ ಗೆಳತಿ ಜಾಸ್ಮಿನ್ (Jasmine) ಜತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಂಗ್ಲೆಂಡ್‌ನಲ್ಲಿ ನಡೆದ ಈ ಮದುವೆ ಸಮಾರಂಭದಲ್ಲಿ ಹಣಕಾಸು ಅಕ್ರಮದ ಆರೋಪದಲ್ಲಿ ಸಿಲುಕಿ ಭಾರತ ಬಿಟ್ಟು ಪರಾರಿಯಾಗಿರುವ ಐಪಿಎಲ್​ನ ಮಾಜಿ ಅಧ್ಯಕ್ಷ ಲಲಿತ್ ಮೋದಿ (Lalit Modi) ಭಾಗಿಯಾಗಿ ಅಚ್ಚರಿ ಮೂಡಿಸಿದ್ದಾರೆ.

ಸಿದ್ಧಾರ್ಥ್ ಮಲ್ಯ ಮತ್ತು ಜಾಸ್ಮಿನ್ ಹರ್ಟ್ಫೋರ್ಡ್ಶೈರ್‌ನಲ್ಲಿರುವ ವಿಜಯ್ ಮಲ್ಯ ಅವರ ಐಷಾರಾಮಿ ಎಸ್ಟೇಟ್‌ನಲ್ಲಿ ಆಪ್ತರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಆರಂಭದಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ, ಬಳಿಕ ಹಿಂದೂ ಪದ್ಧತಿಯಂತೆ ವಿವಾಹ ಸಮಾರಂಭ ನಡೆಯಿತು.

ವಿಜಯ್ ಮಲ್ಯ 900 ಕೋಟಿ ರೂ.ಗಳ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿದ್ದರೆ ಲಲಿತ್ ಮೋದಿ ವಿರುದ್ಧ ತೆರಿಗೆ ವಂಚನೆ, ಹಣ ಅಕ್ರಮ ವರ್ಗಾವಣೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ. ಇಬ್ಬರೂ ಭಾರತಕ್ಕೆ ಬೇಕಾದ ಆರೋಪಿಗಳು. ಅವರನ್ನು ಕರೆ ತರಲು ಭಾರತ ಪ್ರಯತ್ನಿಸುತ್ತಲೇ ಇದೆ.

2010ರ ಐಪಿಎಲ್ ಬಳಿಕ ಲಲಿತ್ ಮೋದಿ ಅವರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI)ಯಿಂದ ಅಮಾನತುಗೊಳಿಸಲಾಗಿತ್ತು. ದುರ್ನಡತೆ ಮತ್ತು ವ್ಯವಹಾರಗಳಲ್ಲಿ ಹಣಕಾಸು ಅಕ್ರಮಗಳ ಆರೋಪದ ನಂತರ ಈ ಕ್ರಮ ಕೈಗೊಳ್ಳಲಾಗಿತ್ತು. ಐಪಿಎಲ್ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು ವಿಶ್ವ ಕ್ರೀಡಾ ಗುಂಪಿನ (World Sports Group) ಅಧಿಕಾರಿಗಳೊಂದಿಗೆ ಶಾಮೀಲಾಗಿ 753 ಕೋಟಿ ರೂ.ಗಳನ್ನು ವಂಚಿಸಿದ್ದಾರೆ ಎಂದು ಬಿಸಿಸಿಐ ಆರೋಪಿಸಿದೆ.

ಕಿಂಗ್‌ಫಿಶರ್‌ ಏರ್‌ಲೈನ್ಸ್‌ನ 9,೦೦೦ ಕೋಟಿ ರೂ. ಸುಸ್ತಿ ಸಾಲದ ಮರು ವಸೂಲು ಪ್ರಕರಣದಲ್ಲಿ ವಿಜಯ್‌ ಮಲ್ಯ ಪ್ರಮುಖ ಆರೋಪಿ. ಎಸ್‌ಬಿಐ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟ ಮಲ್ಯ ವಿರುದ್ಧ ಕಾನೂನು ಕ್ರಮ ಕೈಗೊಂಡಿದೆ. ಈ ಕೇಸ್‌ನಲ್ಲಿ ಮಲ್ಯ ನ್ಯಾಯಾಂಗ ನಿಂದನೆಯನ್ನೂ ಎದುರಿಸುತ್ತಿದ್ದಾರೆ.

ವರ್ಷದ ಹಿಂದೆಯೇ ಪ್ರಪೋಸ್

ಬಹುಕಾಲದ ಗೆಳತಿ ಜಾಸ್ಮಿನ್‌ಗೆ(Siddharth Mallya Marries GF Jasmine) 2023ರ ಆರಂಭದಲ್ಲಿ ಸಿದ್ಧಾರ್ಥ್ ಪ್ರಪೋಸ್ ಮಾಡಿದ್ದರು. ಕ್ಯಾಲಿಫೋರ್ನಿಯಾದಲ್ಲಿನ ಹ್ಯಾಲೋವಿನ್ ಪಾರ್ಟಿಯಲ್ಲಿ ಸಿದ್ದಾರ್ಥ್ ಹಾಗೂ ಜಾಸ್ಮಿನ್ ಇಬ್ಬರು ಜತೆಯಾಗಿ ಪಾಲ್ಗೊಂಡಿದ್ದರು. ಈ ವೇಳೆ ಸಿದ್ದಾರ್ಥ್ ತಮ್ಮ ಪ್ರೀತಿಯನ್ನು ಹೇಳಿಕೊಂಡಿದ್ದರು. ಇದಕ್ಕೆ ಜಾಸ್ಮಿನ್ ಗ್ರೀನ್ ಸಿಗ್ನಲ್ ನೀಡಿದ್ದರು. ಬಳಿಕ ಈ ಜೋಡಿ ಕಳೆದ ವರ್ಷವೇ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಇದೀಗ ಜಾಸ್ಮಿನ್ ರಿಂಗ್​ ತೊಟ್ಟ ಫೋಟೊವನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳುವ ಮೂಲಕ ಮದುವೆಯಾದ ವಿಚಾರವನ್ನು ಖಚಿತಪಡಿಸಿದ್ದಾರೆ.

ಇದನ್ನೂ ಓದಿ: Sidhartha Mallya: ಹಸೆಮಣೆಗೇರಲು ಸಜ್ಜಾದ ದೀಪಿಕಾ ಪಡುಕೋಣೆ ಮಾಜಿ ಪ್ರೇಮಿ ಸಿದ್ಧಾರ್ಥ್‌ ಮಲ್ಯ

ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನಲ್ಲಿ ಜನಿಸಿದ ಸಿದ್ಧಾರ್ಥ್‌ ಮಲ್ಯ ಲಂಡನ್‌ನಲ್ಲಿ ಶಿಕ್ಷಣ ಪೂರೈಸಿದರು. ಪದವಿ ಪಡೆದ ನಂತರ ಅವರು ಮಾಡೆಲ್‌ ಮತ್ತು ನಟನಾಗಿ ವೃತ್ತಿ ಜೀವನ ಆರಂಭಿಸಿದರು. ಆರಂಭದಲ್ಲಿ ಅವರು ʼಬ್ರಾಹ್ಮಣ ನಮನ್ʼ (Brahman Naman), ʼಬೆಸ್ಟ್‌ ಫೇಕ್‌ ಫ್ರೆಂಡ್ಸ್‌ʼ (Best Fake Friends) ಮುಂತಾದ ಚಿತ್ರಗಳಲ್ಲಿ ನಟಿಸಿದರು. ಬಳಿಕ ಅಭಿನಯದಿಂದ ದೂರ ಸರಿದಿದ್ದರು.

Exit mobile version