Site icon Vistara News

Matthew Perry Death Case: ಅಮೆರಿಕನ್ ನಟನ ಸಾವಿಗೆ ಕಾರಣವಾಗಿದ್ದು ಲಾಸ್‌ ಏಂಜಲೀಸ್‌ನ ಈ ʼಮಾದಕದ್ರವ್ಯಗಳ ರಾಣಿʼ!

Matthew Perry Death Case

ಕಳೆದ ವರ್ಷ ಮೃತಪಟ್ಟಿದ್ದ ಅಮೆರಿಕನ್ ನಟ (American actor) ಮ್ಯಾಥ್ಯೂ ಪೆರ್ರಿ (Matthew Perry Death case) ಸಾವಿನ ಹಿಂದೆ “ಕೆಟಮೈನ್ ಕ್ವೀನ್ ಆಫ್ ಲಾಸ್ ಏಂಜಲೀಸ್” (Ketamine Queen of Los Angeles) ಎಂದು ಕರೆಯಲ್ಪಡುವ ಜಸ್ವೀನ್ ಸಂಘಾ ಅವರ ಕೈವಾಡ ಇರುವುದಾಗಿ ತನಿಖೆಯಿಂದ ತಿಳಿದು ಬಂದಿದೆ. ಮ್ಯಾಥ್ಯೂ ಪೆರ್ರಿ ಸಾವಿಗೆ ಕಾರಣವಾದ ಡ್ರಗ್ಸ್ ಅನ್ನು ಜಸ್ವೀನ್ ಸಂಘಾ ಪೂರೈಸಿರುವ ಆರೋಪವಿದೆ. 41 ವರ್ಷದ ಜಸ್ವೀನ್ ಸಂಘಾ ಎಂಬ ಮಹಿಳೆ ಸ್ನೇಹಿತನಾಗಿದ್ದ ನಟ ಮ್ಯಾಥ್ಯೂ ಪೆರ್ರಿ ಸಾವಿನ ಆರೋಪದಲ್ಲಿ ಬಂಧಿಸಲ್ಪಟ್ಟಿದ್ದಾರೆ. ವಿಚಾರಣೆಯನ್ನು ನಡೆಸಲಾಗುತ್ತಿದೆ.

“ಕೆಟಮೈನ್ ಕ್ವೀನ್ ಆಫ್ ಲಾಸ್ ಏಂಜಲೀಸ್” ಎಂದು ಕರೆಯಲ್ಪಡುವ ಉಭಯ ಬ್ರಿಟಿಷ್ ಮತ್ತು ಅಮೆರಿಕನ್ ಪ್ರಜೆ ಜಸ್ವೀನ್ ಕಳೆದ ವರ್ಷ ಮೃತಪಟ್ಟಿದ್ದ 54 ವರ್ಷದ ಅಮೆರಿಕನ್ ನಟ ಮ್ಯಾಥ್ಯೂ ಪೆರ್ರಿ ಸಾವಿಗೆ ಕಾರಣವಾಗುವ ಕೆಟಮೈನ್‌ನ ಮಾರಕ ಡೋಸ್ ಅನ್ನು ಪೂರೈಸಿದ್ದಳು ಎಂದು ಆರೋಪಿಸಲಾಗಿದೆ.

Matthew Perry Death Case


ಸಂಘಾ ತನ್ನ ಮನೆಯಿಂದಲೇ ಡ್ರಗ್ ಸಾಮ್ರಾಜ್ಯವನ್ನು ನಡೆಸುತ್ತಿದ್ದಳು. ಅಲ್ಲಿ ಅವಳು ಮೆಥಾಂಫೆಟಮೈನ್‌, ಕೊಕೇನ್ ಮತ್ತು ಪ್ರಿಸ್ಕ್ರಿಪ್ಷನ್ ಡ್ರಗ್ಸ್ ಅನ್ನು ಸಂಗ್ರಹಿಸಿ, ಪ್ಯಾಕ್ ಮಾಡಿ ಮತ್ತು ಮಾರಾಟ ಮಾಡುತ್ತಿದ್ದಳು ಎನ್ನಲಾಗಿದೆ. ಆಕೆಯ ಮನೆಯ ಮೇಲೆ ದಾಳಿ ನಡೆಸಿದ ಫೆಡರಲ್ ಏಜೆಂಟ್‌ ಗಳಿಗೆ 79 ಬಾಟಲಿಗಳ ದ್ರವ ಕೆಟಮೈನ್ ಮತ್ತು ಸುಮಾರು 2,000 ಮೆಥ್ ಮಾತ್ರೆಗಳು ಸಿಕ್ಕಿವೆ. ಸಂಘಾ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಎರಡು ಬೇರೆಬೇರೆ ಸಂದರ್ಭಗಳಲ್ಲಿ ಪೆರ್ರಿಗಾಗಿ ಕೆಟಮೈನ್‌ನ 50 ಬಾಟಲುಗಳನ್ನು ತನ್ನ ಸಹಾಯಕನ ಮೂಲಕ ನೀಡಿದ್ದಳು ಎಂದು ಆರೋಪಿಸಲಾಗಿದೆ.

ಅಕ್ಟೋಬರ್ 13ರಂದು ಪೆರ್ರಿಗೆ ಮೊದಲು ಕೆಟಮೈನ್ ಅನ್ನು ಪೂರೈಸಲಾಗಿತ್ತು. ಒಂದು ವಾರದ ಅನಂತರ ಮತ್ತೆ 25 ಬಾಟಲಿಗಳನ್ನು ಪೂರೈಕೆ ಮಾಡಲಾಗಿತ್ತು. ಪೆರ್ರಿ ಮೂರು ದಿನಗಳಲ್ಲಿ ಆರು ಡೋಸ್‌ ಪಡೆದಿದ್ದು, ಬಳಿಕ ಮೃತಪಟ್ಟಿದ್ದ. ಆತನ ಶವ ಒಳಾಂಗಣ ಪೂಲ್‌ನಲ್ಲಿ ಪತ್ತೆಯಾಗಿತ್ತು.

ಇದನ್ನೂ ಓದಿ: Techie Missing: ಕಾಣೆಯಾದ ಟೆಕ್ಕಿ ಪತ್ತೆ, ಪ್ರಕರಣಕ್ಕೆ ಟ್ವಿಸ್ಟ್‌; ಜೈಲಿಗಾದ್ರೂ ಹಾಕಿ, ಆದ್ರೆ ಹೆಂಡತಿ ಹತ್ರ ಹೋಗಲ್ಲ ಎಂದು ರೋದನ!

ಪೆರ್ರಿಯ ಮರಣದ ಬಳಿಕ ಈಕೆ ತನ್ನ ಸಹಾಯಕನಿಗೆ ಪೆರ್ರಿಯ ನಡುವಿನ ಸಂದೇಶಗಳನ್ನು ಅಳಿಸಲು ಹೇಳಿದ್ದಳು. ಆದರೆ ಅದು ಆನ್‌ಲೈನ್ ಪಾವತಿಗಳನ್ನು ಕೇಳುತ್ತಿರುವುದನ್ನು ತೋರಿಸಿತ್ತು. ಕೆಲವು ದಿನಗಳ ಬಳಿಕ ಪೆರ್ರಿ ಸಾವಿಗೆ ಕೆಟಮೈನ್ ಕಾರಣ ಎನ್ನುವುದು ದೃಢ ಪಟ್ಟ ಹಿನ್ನೆಲೆಯಲ್ಲಿ ಆಕೆಯ ವಿರುದ್ಧ ಪ್ರಕರಣ ದಾಖಲಿಸಲಾಯಿತು. ಆಕೆ ಒಂದು ವೇಳೆ ತಪ್ಪಿತಸ್ಥಳೆಂದು ದೃಢಪಟ್ಟರೆ ಕನಿಷ್ಠ 10 ವರ್ಷಗಳ ಗರಿಷ್ಠ ಜೀವಾವಧಿ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎನ್ನಲಾಗಿದೆ. ಹಿಟ್ ಟಿವಿ ಸಿಟ್‌ಕಾಮ್ ಫ್ರೆಂಡ್ಸ್‌ನಲ್ಲಿ ವ್ಯಂಗ್ಯಾತ್ಮಕ ಚಾಂಡ್ಲರ್ ಬಿಂಗ್ ಪಾತ್ರದಲ್ಲಿ ವಿಶ್ವಾದ್ಯಂತ ಖ್ಯಾತಿಯನ್ನು ಗಳಿಸಿದ ಪೆರ್ರಿ ಮಾದಕ ವ್ಯಸನ ಮತ್ತು ಖಿನ್ನತೆಗೆ ಒಳಗಾಗಿದ್ದರು.

Exit mobile version